‘ಹಿಂದಿನ ದಿನದ ಆಹಾರ ಪೂರ್ಣ ಜೀರ್ಣವಾಗದಿರುವಾಗ ಬೆಳಗ್ಗೆ ಎದ್ದು ಏನಾದರು ತಿನ್ನುವುದು, ಇದು ಎಲ್ಲ ರೋಗಗಳಿಗೆ ಒಂದು ಮಹತ್ವದ ಕಾರಣವಾಗಿದೆ!
ರಾತ್ರಿ ಮಂಜಿನಿಂದ(ಇಬ್ಬನಿ) ಒದ್ದೆಯಾದ ಸೌದೆಗಳು (ಕಟ್ಟಿಗೆಗಳು) ಸರಿಯಾಗಿ ಉರಿಯುವುದಿಲ್ಲ, ಅದೇ ರೀತಿ ರಾತ್ರಿ ಶರೀರದಲ್ಲಿ ಉತ್ಪನ್ನವಾದ ಆರ್ದ್ರತೆಯು (ಶರೀರದಲ್ಲಿರುವ ಹೆಚ್ಚುವರಿ ಆರ್ದ್ರತೆ (ಸಂಪೂರ್ಣ ಜೀರ್ಣವಾಗದಿರುವಾಗ ಯಾವುದೇ ಆಹಾರ, ಉದಾ. ಚಹಾ, ಅಲ್ಪಾಹಾರ, ಔಷಧಗಳನ್ನು ತೆಗೆದುಕೊಂಡರೆ ಅವು ಜೀರ್ಣವಾಗುವುದಿಲ್ಲ. ಕೆಡುತ್ತಿರುವ ಹಾಲಿನಲ್ಲಿ ಒಳ್ಳೆಯ ಹಾಲನ್ನು ಹಾಕಿದರೆ ಎಲ್ಲ ಹಾಲು ಕೆಡುತ್ತದೆ. ರಾತ್ರಿ ಶರೀರದಲ್ಲಿ ಉತ್ಪನ್ನವಾದ ಆರ್ದ್ರತೆಯ ಸ್ವರೂಪವೂ ಕೆಡುತ್ತಿರುವ ಹಾಲಿನಂತೆ ಇರುತ್ತದೆ. ಇಂತಹ ಆರ್ದ್ರತೆ ಶರೀರದಲ್ಲಿರುವಾಗ ಆಹಾರವನ್ನು ಸೇವಿಸಿದರೆ ಅದರಿಂದ ಉತ್ಪನ್ನವಾಗುವ ಆಹಾರರಸವು(ಅನ್ನರಸ) ಕಲುಷಿತ ವಾಗುತ್ತದೆ. ಇಂತಹ ಕಲುಷಿತ ಆಹಾರರಸದಿಂದಲೇ ದಿನವಿಡಿ ದೇಹದ ಪೋಷಣೆಯಾಗುತ್ತದೆ. ಹೀಗೆ ಒಂದು ದಿನವಲ್ಲ, ಅನೇಕ ವರ್ಷಗಳ ವರೆಗೆ ಪ್ರತಿದಿನ ನಡೆದಿರುತ್ತದೆ. ಆದ್ದರಿಂದ ಯಾವಾಗಲೂ ದೇಹದ ಪೋಷಣೆಯು ಒಳ್ಳೆಯ ಹಾಲಿನಂತೆ ಅನ್ನರಸದಿಂದ ಆಗದೇ ಕೆಟ್ಟಿರುವ ಹಾಲಿನಂತೆ ಕಲುಷಿತ ಆಹಾರರಸದಿಂದಾಗುತ್ತದೆ. ಅನೇಕ ಬಾರಿ ರೋಗಗಳ ಮೇಲೆ ಅನೇಕ ಔಷಧಗಳನ್ನು ತೆಗೆದುಕೊಂಡರೂ ರೋಗಗಳು ಗುಣವಾಗದಿರುವುದು, ಔಷಧಗಳನ್ನು ತೆಗೆದುಕೊಳ್ಳುವತನಕ ಕಾಯಿಲೆಗಳು ಕಡಿಮೆ ಆಗುವುದು ಮತ್ತು ಔಷಧಗಳನ್ನು ನಿಲ್ಲಿಸಿದನಂತರ ಕಾಯಿಲೆಗಳು ಪುನಃ ಪ್ರಾರಂಭವಾಗುವುದು, ಒಂದು ಕಾಯಿಲೆ ವಾಸಿಯಾಗುವಷ್ಟರಲ್ಲಿ ಇನ್ನೊಂದು ಕಾಯಿಲೆ ಆಗುವುದು ಇವೆಲ್ಲವುಗಳ ಮೂಲ ಕಾರಣವೆಂದರೆ ಆರ್ದ್ರತೆಯಿಂದ ಕಲುಷಿತವಾಗಿರುವ ಅನ್ನ (ಆಹಾರ)ರಸದಿಂದ ಶರೀರಕ್ಕೆ ಆಗುವ (ಕು)ಪೋಷಣೆಯೇ ಆಗಿರುತ್ತದೆ !
ವ್ಯಾಯಾಮದಿಂದ ಶರೀರದಲ್ಲಿನ ‘ಆರ್ದ್ರತೆ ಜೀರ್ಣವಾಗಲು ಸಹಾಯವಾಗುತ್ತದೆ !
ವ್ಯಾಯಾಮದಿಂದ ಹೃದಯದ ಬಡಿತ ಹೆಚ್ಚಾಗುತ್ತದೆ. ಇದರಿಂದ ಶರೀರದಲ್ಲಿ ನಿರ್ಮಾಣವಾದ ಆರ್ದ್ರತೆ ಜೀರ್ಣವಾಗಲು ಸಹಾಯವಾಗುತ್ತದೆ. ವ್ಯಾಯಾಮದಿಂದ ಆಲಸ್ಯ ಮತ್ತು ಜಡತ್ವವು ದೂರವಾಗಿ ಉತ್ಸಾಹ ಹಾಗೂ ಹಗುರುತನ ಬರುತ್ತದೆ. ಬೆಳಗ್ಗೆ ವ್ಯಾಯಾಮ ಮಾಡುವುದು ಸಾಧ್ಯವಿಲ್ಲದಿದ್ದರೆ ಶರೀರಕ್ಕೆ ವ್ಯಾಯಾಮ ಆಗುವಹಾಗೆ, ಉದಾ. ನೆಲ ಒರೆಸುವುದು, ಕೈಯಿಂದ ಬಟ್ಟೆಗಳನ್ನು ಒಗೆಯುವುದು ಮೊದಲಾದ ಮನೆ ಕೆಲಸಗಳನ್ನು ಮಾಡಬೇಕು.