೧. ರಾತ್ರಿ ಜಾಗರಣೆ ಮಾಡಿದರೆ ಶರೀರದಲ್ಲಿನ ಧಾತುಗಳಲ್ಲಿ ಒಣ ಗುಣ, ಅಂದರೆ ಶುಷ್ಕತನ ಹೆಚ್ಚಾಗುತ್ತದೆ. ಇದರಿಂದ ಶರೀರದಲ್ಲಿನ ನೀರಿನ, ಅಂದರೆ ಆಪಮಹಾಭೂತದ (ನೀರಿನ) ಅಂಶವು ಕಡಿಮೆಯಾಗುತ್ತದೆ.
೨. ಶರೀರದಲ್ಲಿನ ಆಪಮಹಾಭೂತವು ಅಗ್ನಿಯನ್ನು (ಜೀರ್ಣಶಕ್ತಿಯನ್ನು) ನಿಯಂತ್ರಿಸುತ್ತಿರುತ್ತದೆ. ಆಪಮಹಾಭೂತ ಕಡಿಮೆ ಆಗುವುದರಿಂದ ಅಗ್ನಿಯು ಒಮ್ಮೆಲೇ ಪ್ರಜಲ್ವಿಸುತ್ತದೆ ಮತ್ತು ಜೀರ್ಣಕ್ರಿಯೆಯ ಸಮಯದಲ್ಲಿ ತನ್ನ ಹಿಡಿತದಲ್ಲಿನ ಆಹಾರವನ್ನು ಕರಟಿಸಿ ಬಿಡುತ್ತದೆ. ಇದರಿಂದ ಕರಟಿದ (ಕಮಟು) ತೇಗುಗಳು ಬರುತ್ತವೆ. ಜೀರ್ಣಕ್ರಿಯೆ ಹಾಳಾದುದರಿಂದ ಅಗ್ನಿಗೆ ಸಿಗುವ ಪೋಷಣೆ ಕಡಿಮೆಯಾಗುತ್ತದೆ. ಇದರಿಂದ ಅಗ್ನಿ ಮಂದವಾಗುತ್ತದೆ. ಇದರ ಪರಿಣಾಮವೆಂದು ಜೀರ್ಣಕ್ರಿಯೆಯು ಪುನಃ ಹಾಳಾಗುತ್ತದೆ. ಆಗ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೇ ಹುಳಿಯಾಗತೊಡಗುತ್ತದೆ. ಹುಳಿ ತೇಗುಗಳು ಬರತೊಡಗುತ್ತವೆ. ಇದಕ್ಕೆ ‘ಪಿತ್ತ ಆಗುವುದು ಅಥವಾ ‘ಆಮ್ಲಪಿತ್ತ ಎನ್ನುತ್ತಾರೆ. ಹೀಗೆ ಸತತವಾಗಿ ಆಗುತ್ತಿದ್ದರೆ. ಅನ್ನರಸವು (ಸೇವಿಸಿದ ಆಹಾರವು ಜೀರ್ಣವಾದ ನಂತರ ಶರೀರದಲ್ಲಿ ಹೀರಿಕೊಳ್ಳುವ ರಸ) ಹುಳಿಯಾಗುತ್ತದೆ ಇಂತಹ ಅನ್ನರಸದಿಂದ ಶರೀರದ ಪೋಷಣೆ ಆಗುವುದರಿಂದ ಶರೀರದಲ್ಲಿನ ಎಲ್ಲ ಧಾತುಗಳಿಗೆ ಆಮ್ಲತೆ ಪ್ರಾಪ್ತವಾಗುತ್ತದೆ. ಇದರಿಂದ ಶರೀರದಲ್ಲಿ ಉಷ್ಣತೆಯ ಅರಿವಾಗುವುದು, ಶರೀರ ಶಿಥಿಲವಾಗುವುದು, ಕಣ್ಣುಕತ್ತಲೆ ಬರುವುದು, ತಲೆ ಸುತ್ತುವುದು, ಮೈ ತುರಿಸುವುದು, ತ್ವಚೆಯ ಮೇಲೆ ಪಿತ್ತದ ದದ್ದುಗಳು (ಪಿತ್ತುಗಳು) ಏಳುವುದು, ರಕ್ತದಲ್ಲಿನ ಹಿಮೊಗ್ಲೊಬಿನ್ (ಆಮ್ಲಜನಕ) ಕಡಿಮೆಯಾಗುವುದು, ಶರೀರದ ಮೇಲೆ ಅಲ್ಲಲ್ಲಿ ಗುಳ್ಳೆಗಳು ಏಳುವುದು, ಬಾವು ಬರುವುದು, ಮೂಳೆಗಳು ಸವೆಯುವುದು, ದಣಿವಾಗುವುದು ಮುಂತಾದ ತೊಂದರೆಗಳಾಗುತ್ತವೆ.
೩. ಶರೀರದಲ್ಲಿನ ಆಪ ಮಹಾಭೂತ ಕಡಿಮೆಯಾಗಿದ್ದರಿಂದ ಮಲದಲ್ಲಿನ ನೀರಿನ ಅಂಶವೂ ಕಡಿಮೆಯಾಗುತ್ತದೆ.ಇದರಿಂದ ಅದು ಮುಂದೆ ಸರಿಯುವಿಕೆ ಮಂದವಾಗುತ್ತದೆ. ಮಲವು ಒಣಗಿದರೆ, ಅದು ಅಲ್ಲಿಯೇ ಉಳಿದುಕೊಂಡು ಮಲಬದ್ಧತೆಗೆ ಕಾರಣವಾಗುತ್ತದೆ. ಶರೀರದಲ್ಲಿ ತಲೆಯಿಂದ ಹಿಡಿದು ಕಾಲುಗಳವರೆಗೆ ಸತತವಾಗಿ ವಾತ ಹರಿಯುತ್ತಿರುತ್ತದೆ. ಮಲವು ಒಂದೇ ಜಾಗದಲ್ಲಿ ಉಳಿಯುವುದರಿಂದ ವಾತದ ಮಾರ್ಗದಲ್ಲಿ ಅಡಚಣೆ ಬರುತ್ತವೆ ಮತ್ತು ಅದು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ. ಈ ರೀತಿ ವಿರುದ್ಧ ತಿರುಗಿದ ವಾಯು ಹೊಟ್ಟೆಯಲ್ಲಿ ಹೋದರೆ, ಅಲ್ಲಿ ಜೀರ್ಣವಾಗುತ್ತಿರುವ, ಅಂದರೆ ಅಗ್ನಿಯುಕ್ತ ಆಹಾರವು ಮೇಲಕ್ಕೆ ಹೋಗಲು ಪ್ರಾರಂಭಿಸುತ್ತದೆ. ಇದರಿಂದ ಎದೆಯಲ್ಲಿ ಅಥವಾ ಗಂಟಲಿನಲ್ಲಿ ಉರಿಉರಿ ಆಗುತ್ತದೆ. ವಾಯು ಹೊಟ್ಟೆಯಲ್ಲಿ ಸುತ್ತಾಡುತ್ತಿದ್ದರೆ, ಹೊಟ್ಟೆ ನೋಯುತ್ತದೆ. ಇದಕ್ಕೆ ವಾಯುವಿನ ಗೋಲ ಅಥವಾ ‘ಹೊಟ್ಟೆಯಲ್ಲಿನ ಗೆಡ್ಡೆ ಎನ್ನುತ್ತಾರೆ.
‘ಬೆಳಗ್ಗೆ ಶೌಚವಾಗದ ಹೊರತು ಮತ್ತು ಚೆನ್ನಾಗಿ ಹಸಿವಾಗದೇ ಆಹಾರ ಸೇವಿಸುವುದು, ಇದು ಎಲ್ಲ ರೋಗಗಳಿಗೆ ಒಂದು ಮಹತ್ವದ ಕಾರಣವಾಗಿದೆ. ‘ಶೌಚವಾದ ನಂತರ ತೀವ್ರ ಹಸಿವಾದ ನಂತರವೇ ಆಹಾರವನ್ನು ಸೇವಿಸುವುದು, ಆರೋಗ್ಯಕರ ಜೀವನದ ಕೀಲಿಕೈ ಆಗಿದೆ. |
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮಹತ್ವ !
ಆಯುರ್ವೇದವನ್ನು ಐದನೇಯ ವೇದವೆಂದು ಪರಿಗಣಿಸ ಲಾಗಿದೆ. ‘ಚರಕಸಂಹಿತೆ ಇದು ಆಯುರ್ವೇದದ ಮೂಲಭೂತ ಗ್ರಂಥವಾಗಿದೆ. ಈ ಗ್ರಂಥದಲ್ಲಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದರ ಮಹತ್ವವನ್ನು ಮುಂದಿನಂತೆ ಹೇಳಲಾಗಿದೆ.
ಧರ್ಮಾರ್ಥಕಾಮೋಕ್ಷಣಂ ಆರೋಗ್ಯ ಮುಲುತ್ತಮಮ್ |
– ಚರಕಸಂಹಿತೆ, ಸೂತ್ರಸ್ಥಾನ, ಅಧ್ಯಾಯ ೧, ಶ್ಲೋಕ ೧೫
ಅರ್ಥ : ಧರ್ಮ, ಅರ್ಥ, ಕಾಮ, ಮೋಕ್ಷ ಈ ನಾಲ್ಕು ಪುರುಷಾರ್ಥಗಳನ್ನು ಸಾಧಿಸಲು ‘ಉತ್ತಮ ಆರೋಗ್ಯವೇ ಅಡಿಪಾಯವಾಗಿದೆ.