ಉತ್ತರ ಪ್ರದೇಶದಲ್ಲಿ ಕುಖ್ಯಾತ ರೌಡಿ ಮುಕ್ತಾರ್ ಅನ್ಸಾರಿ ಇವನಿಗೆ ಜೀವಾವಧಿ ಶಿಕ್ಷೆ !

೧೯೯೧ ರಲ್ಲಿ ನಡೆದ ಕಾಂಗ್ರೆಸ್ ನ ನಾಯಕ ಅವಧೇಶ ರಾಯ ಇವರ ಕೊಲೆ ಪ್ರಕರಣ

ವಾರಾಣಸಿ (ಉತ್ತರಪ್ರದೇಶ) – ಕಾಂಗ್ರೆಸ್ ನ ನಾಯಕ ಅವಧೇಶ ರಾಯ ಇವರ ಹತ್ಯೆಯ ಪ್ರಕಾರಣದಲ್ಲಿ ಕುಖ್ಯಾತ ರೌಡಿ ಮುಕ್ತಾರ್ ಅನ್ಸಾರಿ ಇವನಿಗೆ ಇಲ್ಲಿಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಹತ್ಯೆ ೩೨ ವರ್ಷಗಳ ಹಿಂದೆ ಎಂದರೆ ಆಗಸ್ಟ್ ೩, ೧೯೯೧ ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದರಲ್ಲಿ ಮುಕ್ತಾರ್ ಅನ್ಸಾರಿ, ಭೀಮ ಸಿಂಹ, ಕಮಲೇಶ ಸಿಂಹ, ರಾಕೇಶ, ಮಾಜಿ ಶಾಸಕ ಅಬ್ದುಲ್ ಕಲಾಂ ಇವರ ವಿರುದ್ಧ ದೂರು ದಾಖಲಿಸಲಾಗಿತ್ತು. ಇದರಲ್ಲಿ ಅಬ್ದುಲ ಮತ್ತು ಕಮಲೇಶ ಇವರು ಮೃತರಾಗಿದ್ದಾರೆ.

ಮುಕ್ತಾರ್ ಅನ್ಸಾರಿ ಇವನಿಗೆ ಗಾಜಿಪುರ ಇಲ್ಲಿಯ ಪೊಲೀಸ್ ಅಧಿಕಾರಿ, ಪೋಲಿಸ ಪೇದೆ ಮತ್ತು ಅನೇಕರ ಕೊಲೆ ಪ್ರಕರಣದಲ್ಲಿ ೨೦೨೨ ರಲ್ಲಿ ೧೦ ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಇದರ ಜೊತೆಗೆ ಜೈಲಿನ ಅಧಿಕಾರಿಗಳಿಗೆ ಬಂದೂಕಿನ ಮೂಲಕ ಬೆದರಿಸುವ ಪ್ರಕರಣದಲ್ಲಿ ಅನ್ಸಾರಿ ಇವನಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ಏಳು ವರ್ಷದ ಘಟನೆ ಶಿಕ್ಷೆ ವಿಧಿಸಿದೆ. (ಇಂತಹ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಸರಕಾರ ಪ್ರಯತ್ನಿಸುವುದು ಅವಶ್ಯಕವಾಗಿದೆ, ಎಂದು ಜನರಿಗೆ ಅನಿಸುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

೩೨ ವರ್ಷಗಳ ನಂತರ ಸಿಕ್ಕಿರುವ ನ್ಯಾಯ ಇದು ಅನ್ಯಾಯವೇ ಆಗಿದೆ ! ಇದು ಇಲ್ಲಿಯವರೆಗೆ ಎಲ್ಲಾ ಪಕ್ಷದ ಸರಕಾರಕ್ಕೆ ಲಚ್ಚಾಸ್ಪದ !