
ನಾಗೋಠಣೆ (ರಾಯಗಡ ಜಿಲ್ಲೆ) – ‘ಇಡೀ ಜಗತ್ತಿನಲ್ಲಿ ಸನಾತನ ಧರ್ಮದ ಪ್ರಚಾರ ಮಾಡುವ ಮತ್ತು ವಿಶ್ವಕಲ್ಯಾಣಕ್ಕಾಗಿ ನಿರಂತರ ಶ್ರಮಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ನಾಗೊಠಣೆ (ರಾಯಗಡ, ಮಹಾರಾಷ್ಟ್ರ) ಇಲ್ಲಿಯ ಜನ್ಮಸ್ಥಾನಕ್ಕೆ ಹೋಗುವ ಮಾರ್ಗಕ್ಕೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮಾರ್ಗ ಎಂದು ನಾಮಕರಣ ಮಾಡಿ ಗ್ರಾಮಸ್ಥರು ಅವರ ಕಾರ್ಯಕ್ಕೆ ಗೌರವ ನೀಡಿದ್ದಾರೆ. ಸನಾತನದ ಧರ್ಮಪ್ರಚಾರಕರಾದ ಸದ್ಗುರು ಅನುರಾಧಾ ವಾಡೇಕರ ಮತ್ತು ಗಣ್ಯರ ಹಸ್ತದಿಂದ ಮೇ ೧೨ ರಂದು ಈ ಮಾರ್ಗದ ನಾಮಫಲಕದ ಅನಾವರಣ ಮಾಡಲಾಯಿತು. ಶಿವಸೇನೆಯ ರಾಯಗಡ ಜಿಲ್ಲೆಯ ಸಹಸಂಘಟಕ ಸಂಪರ್ಕ ಪ್ರಮುಖ ಶ್ರೀ. ಕಿಶೋರಶೇಠ ಜೈನ, ನಾಗೋಠಣೆ ಇಲ್ಲಿಯ ಸರಪಂಚ ಡಾ. ಮಿಲಿಂದ ಧಾತ್ರಕ, ಉಪಸರಪಂಚ ಸೌ. ರಂಜನ ರವೀಂದ್ರ ರಾವುತ್, ಸನಾತನದ ಸಾಧಕಿ ಸೌ. ವರ್ಷ ರಾವಕರ ಇವರ ಜೊತೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಸೋದರ ಸಂಬಂಧಿ ಶ್ರೀಮತಿ ಶಕುಂತಲಾ ಓಕ್, ಗ್ರಾಮಸ್ಥರು ಮತ್ತು ಸನಾತನದ ಸಾಧಕರು ಈ ಮಂಗಳ ಸಮಾರಂಭದ ಲಾಭ ಪಡೆದರು. ಈ ಸಮಾರಂಭಕ್ಕೆ ಪೂ. (ಸೌ.) ಸಂಗೀತಾ ಜಾಧವ ಮತ್ತು ಹ.ಭ.ಪ. ಬಾಪು ರಾವಕರ ಇವರು ಉಪಸ್ಥಿತರಿದ್ದರು.
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ೮೧ ನೇ ಜನ್ಮದಿನದ ಅಂಗವಾಗಿ ಸಮಾರಂಭ ನಡೆಯಿತು. ೧೨ ಮೇ ೧೯೪೨ ರಂದು (ವೈಶಾಖ ಕೃಷ್ಣ ಸಪ್ತಮಿ) ರಾಯಗಡ ಜಿಲ್ಲೆಯಲ್ಲಿನ ನಾಗೋಠಣೆ ಇಲ್ಲಿ ‘ಬ್ರಾಹ್ಮಣ ಗಲ್ಲಿಯಲ್ಲಿ ‘ವರ್ತಕವಾಡ ಈ ವಾಸ್ತುವಿನಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಜನನವಾಯಿತು. ಈ ವಾಸ್ತುವಿನ ಕಡೆಗೆ ಹೋಗುವ ಮಾರ್ಗಕ್ಕೆ ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮಾರ್ಗ ಎಂದು ನಾಮಕರಣ ಮಾಡುವಂತೆ ನಾಗೋಠಣೆ ಗ್ರಾಮ ಪಂಚಾಯತಿಯಲ್ಲಿ ಒಮ್ಮತದಿಂದ ಠರಾವನ್ನು ಅಂಗೀಕರಿಸಲಾಯಿತು.
‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮಾರ್ಗದ ಅನಾವರಣ ಸಮಾರಂಭ ಹೀಗೆ ನಡೆಯಿತು !
ಧರ್ಮಸಂಸ್ಥಾಪಕ ಭಗವಾನ ಶ್ರೀಕೃಷ್ಣ, ನಾಗೋಠಣೆಯ ಗ್ರಾಮದೇವತೆ ಶ್ರೀ ಜೋಗೇಶ್ವರಿದೇವಿ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಹಾಗೂ ಉಪಸ್ಥಿತ ಸಂತರ ಪಾದಕ್ಕೆ ವಂದನೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬಳಿಕ ಸದ್ಗುರು ಅನುರಾಧಾ ವಾಡೇಕರ್ ಇವರು ನಾಮಫಲಕ ಅನಾವರಣಗೊಳಿಸಿದರು. ನಂತರ ಗಣ್ಯರು ಮನೋಗತ ವ್ಯಕ್ತಪಡಿಸಿದರು. ಕೃತಜ್ಞತೆಯೊಂದಿಗೆ ಸಮಾರಂಭ ಮುಕ್ತಾಯವಾಯಿತು.
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಾಧಕರೇ, ಶಬ್ದಶಕ್ತಿಯ ಮೂಲಕ ವಿಕಲ್ಪಗಳನ್ನು ಹರಡಲು ಕಾರ್ಯನಿರತವಾಗಿರುವ ಏಳನೇ ಪಾತಾಳದ ಬಲಿಷ್ಠ ಕೆಟ್ಟ ಶಕ್ತಿಗಳ ಸಂಚನ್ನು ಗುರುತಿಸಿ ಸಾಧನೆಯನ್ನು ಹೆಚ್ಚಿಸಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ