ರಾಹುಲ್ ಗಾಂಧಿಯವರಿಂದ ಅಮೆರಿಕಾದಲ್ಲಿ ಭಾರತದ ಘನತೆಗೆ ಧಕ್ಕೆ ತರುವ ಹೇಳಿಕೆ !
ವಾಷಿಂಗ್ಟನ್ – ಭಾರತದಲ್ಲಿ ಸರಕಾರದ ವಿರುದ್ಧ ಮಾತನಾಡಿದರೆ ಅಸ್ತಿತ್ವವೇ ನಾಶ ಮಾಡಲಾಗುತ್ತದೆ, ಎಂದು ಕಾಂಗ್ರೆಸ್ಸಿನ ನಾಯಕ ರಾಹುಲ್ ಗಾಂಧಿ ಇವರು ಭಾರತ ವಿರೋಧಿ ಹೇಳಿಕೆ ನೀಡಿದ್ದಾರೆ. ಅವರು ಅಮೆರಿಕದಲ್ಲಿನ ಸ್ಟ್ಯಾನ ಫೋರ್ಡ್ ವಿದ್ಯಾಪೀಠದಲ್ಲಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಗಾಂಧಿಯವರ ಸಂಸತ್ತಿನ ಸದಸ್ಯತ್ವ ರದ್ದಾದ ನಂತರ ಅವರು ಮೊದಲ ಬಾರಿಗೆ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ಅವರು ಮಾತು ಮುಂದುವರಿಸಿ, ”ಅವಮಾನದ ಪ್ರಕರಣದಲ್ಲಿ ಲೋಕಸಭೆ ಸದಸ್ಯಸತ್ವ ಕಳೆದುಕೊಳ್ಳುವವರಲ್ಲಿ ನಾನು ಮೊದಲ ವ್ಯಕ್ತಿ, ಎಂದು ನನಗೆ ಎಂದು ಅನಿಸಿಲ್ಲ; ಆದರೇ ರಾಜಕೀಯ ದೃಷ್ಟಿಯಿಂದ ನನಗೆ ದೊಡ್ಡ ಅವಕಾಶವೇ ಸಿಕ್ಕಿದೆ. ಬಹುತೇಕ ಸಂಸತ್ತಿನಲ್ಲಿ ಕುಳಿತುಕೊಳ್ಳುವ ಅವಕಾಶಕ್ಕಿಂತಲೂ ಇದು ದೊಡ್ಡ ಅವಕಾಶವಿದೆ. ಈ ರೀತಿಯಲ್ಲಿ ರಾಜಕೀಯ ನಡೆಯುತ್ತದೆ. ಭಾರತದಲ್ಲಿ ವಿರೋಧಕರು ಸಂಘರ್ಷ ಮಾಡುತ್ತಿದ್ದಾರೆ. ವಿರೋಧಕರಿಗೆ ಅನೇಕ ಅಡಚಣೆಗಳು ಎದುರಿಸಬೇಕಾಗುತ್ತದೆ. ಕೇವಲ ಕಾಂಗ್ರೆಸ್ ಅನ್ನೇ ಗುರಿ ಮಾಡಲಾಗುತ್ತಿದೆ ಹಾಗಲ್ಲ, ಸರ್ವಾಧಿಕಾರದಿಂದ ಎಲ್ಲಾ ವಿರೋಧಿ ಪಕ್ಷಗಳು ಸಂತ್ರಸ್ತರಾಗಿದ್ದಾರೆ. ಯಾರೆಲ್ಲಾ ಸರಕಾರದ ವಿರುದ್ಧ ಮಾತನಾಡುತ್ತಾರೆ, ಅವರ ಸಂಸ್ಥೆಗಳು ವಶಕ್ಕೆ ಪಡೆಯಲಾಗುತ್ತದೆ ಅಥವಾ ಅವುಗಳ ಅಸ್ತಿತ್ವ ಕೂಡ ನಾಶ ಮಾಡಲಾಗುತ್ತದೆ ಎಂದು ಹೇಳಿದರು.
‘Never imagined I would get maximum punishment’, says Rahul Gandhi during Stanford lecture https://t.co/iZZ5cOP1mg
— TheNewsMinute (@thenewsminute) June 1, 2023
ಸಂಪಾದಕೀಯ ನಿಲುವುವಿದೇಶದಲ್ಲಿ ಉದ್ದೇಶಪೂರ್ವಕವಾಗಿ ಭಾರತದ ಘನತೆಗೆ ಧಕ್ಕೆ ತರುವವರ ಮೇಲೆ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು ! |