ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ೧೨೪ ಅಲ್ಪಸಂಖ್ಯಾತ ಹುಡುಗಿಯರ ಮೇಲೆ ದೌರ್ಜನ್ಯ !
ಇಸ್ಲಾಮಾಬಾದ್ (ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಹಿಂದೂಗಳನ್ನು ಬಲವಂತವಾಗಿ ಮತಾಂತರಿಸುವುದು ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಪ್ರಕರಣಗಳು ನಿರಂತರ ಹೆಚ್ಚುತ್ತಿವೆ. ಮೇ ತಿಂಗಳ ಆರಂಭದಲ್ಲಿ, ಸಿಂಧ್ ಪ್ರಾಂತ್ಯದ ೫೫ ವರ್ಷದ ಮುಸಲ್ಮಾನ ವ್ಯಕ್ತಿಯೊಬ್ಬ ಒಂದು ೯ ವರ್ಷದ ಹಿಂದೂ ಹುಡುಗಿಯನ್ನು ಅಪಹರಿಸಿ ಬಲವಂತವಾಗಿ ಮತಾಂತರಿಸಿ ಮದುವೆಯಾಗಿದ್ದಾನೆ. ಈ ಘಟನೆಯ ನಂತರ, ಭಾರತವು ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಸಮುದಾಯಗಳನ್ನು ರಕ್ಷಿಸಲು ಮತ್ತು ಅವರ ಹಕ್ಕುಗಳನ್ನು ರಕ್ಷಿಸಲು ಕರೆ ನೀಡಿದೆ. (ಅಂತಹ ಹೇಳಿಕೆಯಿಂದ ಪಾಕಿಸ್ತಾನದ ಮೇಲೆ ಎಂದಾದರೂ ಪರಿಣಾಮ ಬೀರುವುದೇ ? ಹಾಗಾಗಿ ಈಗ ಸರಕಾರವು ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ಹೇಳಬೇಕು ! – ಸಂಪಾದಕರು)
55 साल के शख्स ने 9 साल की बच्ची का किया अपहरण, इस्लामी धर्मांतरण करा के कर लिया निकाह: पाकिस्तान में 1 साल में 124 अल्पसंख्यक लड़कियों पर जुल्म#Pakistan #Nikah #Conversionhttps://t.co/nWM2qQXkoS
— ऑपइंडिया (@OpIndia_in) May 30, 2023
ಭಾರತೀಯ ಅಧಿಕಾರಿಗಳು ನೀಡಿದ ಮಾಹಿತಿಯ ಪ್ರಕಾರ, ಕಳೆದ ವರ್ಷದಲ್ಲಿ ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯದ ಹುಡುಗಿಯರು ಮತ್ತು ಮಹಿಳೆಯರ ಬಲವಂತದ ಮತಾಂತರ ಮತ್ತು ವಿವಾಹದ ೧೨೪ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ವರ್ಷ ಸಿಂಧ್‌ನಲ್ಲಿ ೪೪ ವರ್ಷದ ಹಿಂದೂ ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು. ಆಕೆಯ ದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಪಹರಣಕಾರರನ್ನು ವಿರೋಧಿಸಿದ ೧೮ ವರ್ಷದ ಹುಡುಗಿಯನ್ನು ಪಾಕಿಸ್ತಾನದ ಸುಕ್ಕೂರ್‌ನಲ್ಲಿ ಕೊಲ್ಲಲಾಗಿತ್ತು.
ಸಂಪಾದಕೀಯ ನಿಲುವುಹಿಂದೂಗಳು ಬಹುಸಂಖ್ಯಾತರಾಗಿರಲಿ ಅಥವಾ ಅಲ್ಪಸಂಖ್ಯಾತರಾಗಿರಲಿ, ಅವರ ಮಹಿಳೆಯರು ಮತ್ತು ಹುಡುಗಿಯರು ಮತಾಂಧ ಮುಸಲ್ಮಾನರಿಗೆ ಬಲಿಯಾಗುತ್ತಾರೆ. ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡು ! |