ರಾಮನಾಥಿ, ಗೋವಾದಲ್ಲಿನ ಸನಾತನ ಆಶ್ರಮದ ದೇವಸ್ಥಾನದಲ್ಲಿ ಶ್ರೀ ಭವಾನಿ ಮಾತೆಯ ಪಾದುಕೆಗಳ ಪ್ರತಿಷ್ಠಾಪನೆ !

ಶ್ರೀ ಭವಾನಿ ದೇವಿಯ ಮಂದಿರದಲ್ಲಿ ಸ್ಥಾಪಿಸಲಾದ ಪಾದುಕೆಗಳು
ದೇವಿಯ ಪಾದುಕೆಗಳಿಗೆ ನಮಸ್ಕರಿಸುತ್ತಿರುವ ಎಡಗಡೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ರಾಮನಾಥಿ (ಫೋಂಡಾ) – ಸಪ್ತರ್ಷಿಗಳ ಆಜ್ಞೆಯಂತೆ ಇಲ್ಲಿನ ಸನಾತನ ಆಶ್ರಮದ ದೇವಿಯ ದೇವಸ್ಥಾನದಲ್ಲಿ ೧೨ ಮೇ ೨೦೨೩ ರಂದು ಶ್ರೀ ಭವಾನಿ ದೇವಿಯ ಪಾದುಕೆಗಳನ್ನು ಭಾವಪೂರ್ಣ ವಾತಾವರಣದಲ್ಲಿ ಪ್ರತಿಷ್ಠಾಪಿಸಲಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಅಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಕಲ್ಲಿನಲ್ಲಿ ಕೆತ್ತಲಾದ ದೇವಿಯ ಪಾದುಕೆಗಳನ್ನು ಪ್ರತಿಷ್ಠಾಪಿಸಿದರು. ಈ ಸಮಯದಲ್ಲಿ ಸಂತರು ಮತ್ತು ಸಾಧಕರು ಉಪಸ್ಥಿತರಿದ್ದರು.

ಶ್ರೀ ಭವಾನಿ ದೇವಿಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ದೇವಿಯ ಪಾದುಕೆಗಳ ಬಗ್ಗೆ ಸಪ್ತರ್ಷಿಗಳು, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಬ್ರಹ್ಮೋತ್ಸವವನ್ನು ಗೋವಾದಲ್ಲಿ ಆಚರಿಸಲಾಗುವ ಮರುದಿನ ರಾಮನಾಥಿ, ಗೋವಾದ ಸನಾತನದ ಆಶ್ರಮದಲ್ಲಿ ದೇವಿಯ ಪಾದುಕೆಗಳನ್ನು ಪ್ರತಿಷ್ಠಾಪಿಸಬೇಕು ಎಂದು ಹೇಳಿದ್ದರು. ಸಪ್ತರ್ಷಿಗಳ ಆಜ್ಞೆಯಂತೆ ಮೇ ೧೧ ರಂದು ಗೋವಾದಲ್ಲಿ ಗುರುದೇವರ ಬ್ರಹ್ಮೋತ್ಸವವು ಅತ್ಯಂತ ಆನಂದಮಯ ಹಾಗೂ ಭಾವಪೂರ್ಣ ವಾತಾವರಣದಲ್ಲಿ ಸಂಪನ್ನವಾಯಿತು. ನಂತರ ಮರುದಿನ ಅಂದರೆ ಮೇ ೧೨ ರಂದು ದೇವಿಯ ಪಾದುಕೆಗಳನ್ನು ಪ್ರತಿಷ್ಠಾಪಿಸಲಾಯಿತು. ಸನಾತನ ಪುರೋಹಿತ ಪಾಠಶಾಲೆಯ ಪುರೋಹಿತ ಸಾಧಕರು ಮಂತ್ರಘೋಷಗಳಿಂದ ಪ್ರತಿಷ್ಠಾಪನೆಯ ಎಲ್ಲಾ ಪೂಜಾವಿಧಿಗಳನ್ನು  ನೆರವೇರಿಸಿದರು.

ಪಾದುಕೆಯ ಪ್ರತಿಷ್ಠಾಪನೆಯ ಸಮಯದಲ್ಲಿ ಶ್ರೀ ಭವಾನಿ ದೇವಿಯ ಪೀಠದ ಮೇಲೆ ಅರ್ಪಿಸಿದ ಕಮಲ ಕೆಳಗೆ ಬೀಳುವುದು, ಇದು ಬಹುದೊಡ್ಡ  ದೈವೀ ಸಾಕ್ಷಿಯಾಗಿದೆ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

(ಪೀಠ ಎಂದರೆ ಮೂರ್ತಿಯ ಕೆಳಗೆ ಆಸನ ಎಂದು ಶಿವ ಲಿಂಗದ ಹರಿನಾಳದ ಆಕಾರದಂತೆ ಸ್ಥಾಪಿಸಲಾದ ಶಿಲೆ)

‘ದೇವಿಯ ಪಾದುಕೆಗಳ ಪ್ರತಿಷ್ಠಾಪನೆಯ ವಿಧಿ ನಡೆಯುತ್ತಿರುವಾಗ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಪಾದುಕೆಗಳಿಗೆ ಅಕ್ಷತೆಯನ್ನು ಹಾಕಿದರು. ನಂತರ ಕೆಲವೇ ಕ್ಷಣಗಳಲ್ಲಿ ಶ್ರೀ ಭವಾನಿ ದೇವಿಯ ಪೀಠದ ಮೇಲೆ ಬಲಭಾಗದಲ್ಲಿದ್ದ ಕಮಲವು ತನ್ನಷ್ಟಕ್ಕೆ ದೇವಿಯ ಪಾದುಕೆಗಳ ಬಳಿ ಬಿತ್ತು ಆ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು, “ನಾನು ಅಕ್ಟೋಬರ್ ೨೦೨೨ ರಲ್ಲಿ ಅಂಬೆಜೋಗಾಯಿಯ ಶ್ರೀ ಯೋಗೇಶ್ವರಿ ದೇವಿಯ ದರ್ಶನ ಪಡೆಯಲು ಹೋಗಿದ್ದೆ. ಆಗ ಇದೇ ರೀತಿಯಲ್ಲಿ ದೇವಿಯ ಬಲಭಾಗದ ನೀಲಿ ಬಣ್ಣದ ಕಮಲವು ಕೆಳಗೆ ಬಿದ್ದಿತ್ತು ಎಂದು ಹೇಳಿದರು. ‘ರಾಮನಾಥಿ ಆಶ್ರಮದಲ್ಲಿ ಶ್ರೀ ಭವಾನಿದೇವಿಯ ಮೂರ್ತಿಯ ಮೇಲಿನ ಕಮಲವು ಕೆಳಗೆ ಬೀಳುವುದು ಬಹುದೊಡ್ಡ ದೈವೀ ಸಾಕ್ಷಿಯಾಗಿದೆ, ಎಂದು ಸಹ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೇಳಿದರು.

– ಶ್ರೀ. ಸಿದ್ಧೇಶ ಕರಂದಿಕರ, ಸನಾತನ ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೫.೨೦೨೩)