ಪಾಕಿಸ್ತಾನವನ್ನೂ ಸಹ ಹಿಂದೂ ರಾಷ್ಟ್ರ ಮಾಡಲಾಗುವುದು ! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ

ಸೂರತ್ (ಗುಜರಾತ) – ಯಾವಾಗ ಹಿಂದೂಗಳು ಹಣೆಯ ಮೇಲೆ ತಿಲಕ ಇಟ್ಟು ಹೊರಬರುವರೋ, ಆ ದಿನದಂದು ಭಾರತ ಹಿಂದೂ ರಾಷ್ಟ್ರವಾಗುವುದು. ಭಾರತ ಅಷ್ಟೇ ಅಲ್ಲದೆ ಪಾಕಿಸ್ತಾನವನ್ನೂ ಸಹ ಹಿಂದೂ ರಾಷ್ಟ್ರ ಮಾಡಲಾಗುವುದು. ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಈಗ ಭಗವಾನ್ ಶ್ರೀರಾಮ ಮತ್ತು ಭಾರತದ ಅವಶ್ಯಕತೆ ಇದೆ; ಕಾರಣ ಪಾಕಿಸ್ತಾನಕ್ಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕಾಪಾಡಲು ಬರುವುದಿಲ್ಲ, ಎಂದು ಬಾಗೇಶ್ವರಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಇವರು ಅವರ ರಾಮಕಥೆಯಲ್ಲಿ ಹೇಳಿದರು. ಧೀರೇಂದ್ರಕೃಷ್ಣ ಶಾಸ್ತ್ರಿ ಪ್ರಸ್ತುತ ಗುಜರಾತ್ ನ ೧೦ ದಿನದ ಪ್ರವಾಸದಲ್ಲಿದ್ದಾರೆ.

ನನ್ನ ಒಂದೇ ಪಕ್ಷ ಭಜರಂಗಬಲಿ !

ಧೀರೇಂದ್ರಕೃಷ್ಣ ಶಾಸ್ತ್ರಿ ತಮ್ಮ ಮಾತನ್ನು ಮುಂದುವರೆಸುತ್ತಾ, ನನ್ನದು ಯಾವುದೇ ರಾಜಕೀಯ ಪಕ್ಷದ ಜೊತೆಗೆ ಸಂಬಂಧವಿಲ್ಲ. ನನ್ನ ಒಂದೇ ಪಕ್ಷ ಅದೆಂದರೇ ಭಜರಂಗಬಲಿ !
ಧೀರೇಂದ್ರಕೃಷ್ಣ ಶಾಸ್ತ್ರಿ ಇವರಿಗೆ ಮಧ್ಯಪ್ರದೇಶ ಸರಕಾರದಿಂದ ‘ವೈ’ ದರ್ಜೆಯ ಭದ್ರತಾ ವ್ಯವಸ್ಥೆ ಪೂರೈಸಲಾಗಿದೆ. ಅದರ ಬಗ್ಗೆ ಅವರು, ನಾನು ಆದಿವಾಸಿ ಪ್ರದೇಶದ ಕಾಡಿನಲ್ಲಿ ಹೋಗಿ ಕಥೆ ಕೀರ್ತನೆ ಮಾಡುತ್ತೇನೆ ಆದ್ದರಿಂದ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತದೆ. ಸನಾತನ ವಿರೋಧಿ ಶಕ್ತಿ ಕಾರ್ಯನಿರತವಾಗಿರುವುದರಿಂದ ನನಗೆ ಸಂರಕ್ಷಣೆ ನೀಡಲಾಗಿದೆ ಎಂದು ಹೇಳಿದರು.

ಅಯೋಧ್ಯೆಯ ನಂತರ ಈಗ ಮಥುರಾದ ಸಮಯ !

ಧೀರೇಂದ್ರಕೃಷ್ಣ ಶಾಸ್ತ್ರಿ ಇವರು, ಅಯೋಧ್ಯೆಯ ನಂತರ ಈಗ ಮಥುರಾದ (ಶ್ರೀಕೃಷ್ಣ ಜನ್ಮ ಭೂಮಿ ಇಸ್ಲಾಮಿ ಆಕ್ರಮಣಕಾರ ಕೈಯಿಂದ ಮುಕ್ತಗೊಳಿಸುವ) ಸಮಯ ಬಂದಿದೆ. ಅದಕ್ಕಾಗಿ ಈಗ ಸನಾತನಿಯರು ಜಾಗೃತರಾಗುವ ಸಮಯ ಬಂದಿದೆ. ಈಗ ಪಲಾಯನ ಮಾಡಬಾರದು. ಸನಾತನ, ಹಿಂದುತ್ವ, ಭಗವಾನ್ ಶ್ರೀ ಕೃಷ್ಣ ಇವರಿಗಾಗಿ ಎಚ್ಚರವಾಗುವ ಸಮಯ ಬಂದಿದೆ. ನೀವು ಸನಾತನಿ ಆಗಿದ್ದೀರಿ. ಯಾರಾದರೂ ಹೆಸರು ಕೇಳಿದರೆ, ಜಾತಿ ಮತ ಬಿಟ್ಟು ‘ನಾನು ಹಿಂದೂ’ ಎಂದೇ ಹೇಳಬೇಕು ಎಂದು ಹೇಳಿದರು.