ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಪ್ರಧಾನಮಂತ್ರಿ ಮೋದಿ ಇವರ ವಿರೋಧದಲ್ಲಿನ ವಿವಾದಿತ ಸಾಕ್ಷ್ಯಚಿತ್ರ ಪ್ರಸಾರ !

ಆಸ್ಟ್ರೇಲಿಯನ್ ನಾಗರಿಕರ ಹಿಂದೂದ್ವೇಷ !

ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ

ಮೇಲಬರ್ನ್ (ಆಸ್ಟ್ರೇಲಿಯಾ) – ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಆಸ್ಟ್ರೇಲಿಯಾದ ಪ್ರವಾಸ ಮುಗಿದ ನಂತರ ಸ್ಥಳೀಯ ಸಂಘಟನೆಗಳು ಗುಜರಾತ್ ನಲ್ಲಿನ ಗಲಭೆಯ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರ ವಿರೋಧದಲ್ಲಿ ನಿರ್ಮಿಸಲಾದ ಸಾಕ್ಷ್ಯಚಿತ್ರ ‘ಇಂಡಿಯಾ : ದ ಮೋದಿ ಕನ್ವೆಶ್ಚನ್’ ಇದನ್ನು ಸಂಸತ್ತಿನಲ್ಲಿ ತೋರಿಸಲಾಯಿತು. ಬಿಬಿಸಿಯು ಈ ಸಾಕ್ಷ್ಯಚಿತ್ರ ನಿರ್ಮಿಸಿದೆ. ಚಲನಚಿತ್ರ ತೋರಿಸುವ ಸಮಯದಲ್ಲಿ ಬೆರಳಣಿಕೆಯಷ್ಟು ಜನರು ಉಪಸ್ಥಿತರಿದ್ದರು. ಪ್ರಧಾನ ಮಂತ್ರಿ ಅಲ್ಬಾನಿಜ್ ಇವರು ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿ ಮಾಧ್ಯಮಗಳ ಸ್ವಾತಂತ್ರ್ಯ ಕಡೆಗಣಿಸಿರುವ ಬಗ್ಗೆ ಪ್ರಧಾನಮಂತ್ರಿ ಮೋದಿ ಇವರ ಜೊತೆ ಚರ್ಚಿಸಬೇಕೆಂದು ಸಂಸತ್ತಿನಲ್ಲಿ ಒತ್ತಾಯಿಸಲಾಯಿತು. ಭಾರತ ಸರಕಾರವು ದೇಶದಲ್ಲಿ ಈ ಸಾಕ್ಷ್ಯಚಿತ್ರದ ಮೇಲೆ ನಿಷೇಧ ಹೇರಿದೆ.