|
ಕೊಲಕಾತಾ (ಬಂಗಾಳ) – ‘ದಿ ಡೈರಿ ಆಫ್ ವೇಸ್ಟ್ ಬಂಗಾಳ’ ಈ ಚಲನಚಿತ್ರದ ಟ್ರೈಲರ್ (ಜಾಹೀರಾತು) ಪ್ರದರ್ಶನಗೊಳಿಸಿದ ನಂತರ ಬಂಗಾಳ ಪೊಲೀಸರು ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಇವರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಚಲನಚಿತ್ರದಲ್ಲಿ ಬಂಗಾಳದಲ್ಲಿನ ಮತಾಂಧ ರೋಹಿಂಗ್ಯ ಮುಸಲ್ಮಾನರ ಬಗ್ಗೆ ಕಥೆ ತೋರಿಸಲಾಗಿದೆ. ಬರುವ ಆಗಸ್ಟ್ ತಿಂಗಳಿನಲ್ಲಿ ಈ ಚಲನಚಿತ್ರ ಪ್ರದರ್ಶಿತವಾಗಲಿದೆ. ಈ ಚಲನಚಿತ್ರದ ಮೂಲಕ ಬಂಗಾಳವನ್ನು ಕಳಂಕಿತಗೊಳಿಸುವುದಕ್ಕಾಗಿ ನಿರ್ಮಿಸಿರುವ ಚಲನಚಿತ್ರ ಎಂದು ಆರೋಪಿಸಲಾಗಿದೆ, ಈ ಚಲನಚಿತ್ರದ ನಿರ್ಮಾಪಕ ಮತ್ತು ಉತ್ತರ ಪ್ರದೇಶದ ಶಿಯಾ ಸೆಂಟ್ರಲ್ ವಕ್ಸ್ ಬೋರ್ಡಿನ ಮಾಜಿ ಅಧ್ಯಕ್ಷ ವಸಿಮ ರಿಝವಿ ಎಂದರೆ ಈಗಿನ ಜಿತೇಂದ್ರ ನಾರಾಯಣ ಸಿಂಹ ಆಗಿದ್ದಾರೆ. ಪೊಲೀಸರು ಸನೋಜ್ ಮಿಶ್ರ ಇವರಿಗೆ ಮೇ ೩೦ ರಂದು ವಿಚಾರಣೆಗಾಗಿ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದೆ. ಮಿಶ್ರ ಇವರ ನ್ಯಾಯವಾದಿ ನಾಗೇಶ ಮಿಶ್ರ ಇವರು, ನಾವು ಕಾನೂನ ರೀತಿ ಹೋರಾಟ ನಡೆಸುವೆವು ಎಂದು ಹೇಳಿದರು.
Sanoj Mishra, director of ‘The Diary of West Bengal’, has been called for questioning by the Kolkata Police for allegedly defaming the state in his film. (By @saurabhv99 & @Journo_Rajesh)https://t.co/EmCSQwoztp
— IndiaToday (@IndiaToday) May 26, 2023
ತೃಣಮೂಲ ಕಾಂಗ್ರೆಸ್ ಸರಕಾರ ವಿದೇಶಿ ಭಯೋತ್ಪಾದಕ ಸಂಘಟನೆಯ ಉದ್ದೇಶ ಪೂರ್ಣಗೊಳಿಸುತ್ತಿದೆ ! – ಜಿತೇಂದ್ರ ನಾರಾಯಣ ಸಿಂಹ
ಜಿತೇಂದ್ರ ನಾರಾಯಣ ಸಿಂಹ ಇವರು ಟ್ರೈಲರ್ ಪ್ರದರ್ಶನ ಸಮಯದಲ್ಲಿ, ಕಳೆದ ಕೆಲವು ವರ್ಷಗಳಿಂದ ಬಂಗಾಳದ ಸ್ಥಿತಿ ಅತ್ಯಂತ ಅಪಾಯಕಾರಿಯಾಗುತ್ತಿದೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಟ್ಟರವಟದಿ ರೋಹಿಂಗ್ಯ ಮುಸಲ್ಮಾನರನ್ನು ವಾಸಿಸಲು ಸಹಾಯ ಮಾಡಲಾಗುತ್ತಿದೆ. ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರ ಅವರನ್ನು ಮತ ಪೆಟ್ಟಿಗೆಗೊಳಿಸುವುದಕ್ಕಾಗಿ ಆಧಾರ ಕಾರ್ಡ್ ತಯಾರಿಸಿಕೊಡುತ್ತಿದೆ. ಈ ಮೂಲಕ ಮತದಾನದ ಪಟ್ಟಿಯಲ್ಲಿ ಹೆಸರು ಸೇರಿಸಲಾಗುತ್ತಿದೆ. ಇದರಿಂದ ಬಾಂಗ್ಲಾದೇಶದ ಗಡಿಯಲ್ಲಿ ರೋಹಿಂಗ್ಯ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದೆ. ಈ ರೋಹಿಂಗ್ಯಾ ಬಂಗಾಳದಲ್ಲಿ ಗುರುತಿನ ಚೀಟಿ ತಯಾರಿಸಿ ದೇಶಾದ್ಯಂತ ಹರಡುತ್ತಿದ್ದಾರೆ. ವಿದೇಶಿ ಭಯೋತ್ಪಾದಕ ಸಂಘಟನೆಯ ಉದ್ದೇಶವನ್ನು ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರ ಪೂರ್ಣಗೊಳಿಸುತ್ತಿದೆ. ಬಂಗಾಳದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದರಿಂದ ಅವರಿಗೆ ಪಲಾಯನ ಮಾಡಬೇಕಾಗುತ್ತೆ. ಬಂಗಾಳದ ಇದೇ ಸ್ಥಿತಿ ಚಲನಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ.
ಸಂಪಾದಕರ ನಿಲುವು* ಬಂಗಾಳದಲ್ಲಿ ಪ್ರಜಾಪ್ರಭುತ್ವ ಅಲ್ಲ ಬದಲಾಗಿ ಸರ್ವಾಧಿಕಾರಿಯಾಗಿದೆ, ಇದು ಅದರ ಇನ್ನೊಂದು ಉದಾಹರಣೆ ! ‘ದ ಕೇರಳ ಸ್ಟೋರಿ’ ಚಲನಚಿತ್ರ ನಿಷೇಧಿಸಿರುವುದರ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಕಪಾಳಮೋಕ್ಷ ಮಾಡಿದರೂ ಕೂಡ ತೃಣಮೂಲ ಕಾಂಗ್ರೆಸ್ ಸರಕಾರದ ಮೇಲೆ ಯಾವುದೇ ಪರಿಣಾಮವಾಗಿಲ್ಲ, ಇಂತಹ ಸರಕಾರ ವಿಸರ್ಜನೆ ಮಾಡುವುದರಲ್ಲಿ ಬಂಗಾಳದಲ್ಲಿನ ಹಿಂದೂಗಳ ಮತ್ತು ದೇಶದ ಹಿತ ಅಡಗಿದೆ ! |