ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬೈಡನ್ ಇವರನ್ನು ಹತ್ಯೆ ಮಾಡುವ ಉದ್ದೇಶದಿಂದ ಬೆದರಿಕೆ ಹಾಕಿದ ಭಾರತೀಯ ಮೂಲದ ಯುವಕನ ಬಂಧನ

ನೇರವಾಗಿ `ವೈಟ್ ಹೌಸ್’ನ ಸೆಕ್ಯುರಿಟಿ ಬ್ಯಾರಿಯರ್ಸ ಮೇಲೆಯೇ ಟ್ರಕ್ ಹತ್ತಿಸಿದ !

ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬೈಡನ್ ಇವರನ್ನು ಒಬ್ಬ ಭಾರತೀಯ ಮೂಲದ ಅಮೇರಿಕಾದ ಯುವಕನು ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ. ಸಾಯಿ ವರ್ಷಿತ ಕಂದುಲಾ ಹೆಸರಿನ 19 ವರ್ಷದ ಯುವಕನು ನೇರವಾಗಿ ಒಂದು ಟ್ರಕ್ ಚಲಾಯಿಸಿಕೊಂಡು ವೈಟ್ ಹೌಸ್ ನ ಸೆಕ್ಯುರಿಟಿ ಬ್ಯಾರಿಯರ್ಸ ಮೇಲೆ ಹತ್ತಿಸಿದನು. ಯುವಕನನ್ನು ವೈಟ್ ಹೌಸ ಪೊಲೀಸರು ಬಂಧಿಸಿದ್ದು, ಅವನ ಟ್ರಕ್ ನಿಂದ ನಾಝಿ ಧ್ವಜವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಯುವಕನ ಆಳವಾಗಿ ವಿಚಾರಣೆ ಪ್ರಾರಂಭಿಸಲಾಗಿದೆ. ಈ ಯುವಕನಿಗೆ ಯಾವ ಸಂಘಟನೆಯೊಂದಿಗೆ ಸಂಬಂಧವಿದೆ ಎಂದು ತಪಾಸಣೆ ನಡೆಸಲಾಗುತ್ತಿದೆ. ಈ ಘಟನೆಯು ಮೇ 22 ರಂದು ರಾತ್ರಿ 10.00 ಗಂಟೆಗೆ ನಡೆದಿದೆಯೆಂದು ಒಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದು, ಅವನು ಈ ಘಟನೆಯ ಚಿತ್ರೀಕರಣವನ್ನು ಕೂಡ ಮಾಡಿದ್ದನು.