ಅಮೇರಿಕಾದಲ್ಲಿ ಹಿಂದೂ ರೋಗಿಗಳ ಶ್ರದ್ಧೆಯನ್ನು ತಿಳಿದುಕೊಳ್ಳಲು ಡಾಕ್ಟರರಿಗೆ `ಕ್ರ್ಯಾಶ್ ಕೋರ್ಸ’ ಮಾಡುವ ಆವಶ್ಯಕತೆ !

(ಕ್ರ್ಯಾಶ್ ಕೋರ್ಸ ಎಂದರೆ ಕಡಿಮೆ ಕಾಲಾವಧಿಯ ಅಭ್ಯಾಸಕ್ರಮ)

ನ್ಯೂಯಾರ್ಕ (ಅಮೇರಿಕಾ) – ಅಮೇರಿಕಾದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಹಿಂದೂ ರೋಗಿಗಳು ಆಸ್ಪತ್ರೆಯ ಮಂಚದ ಮೇಲೆ ಪ್ರಾರ್ಥನೆಯನ್ನು ಮಾಡಬಹುದು. ತಮ್ಮ ಇಷ್ಟ ದೇವತೆಯ ಮೂರ್ತಿಯನ್ನು ತಮ್ಮೊಂದಿಗೆ ಇಟ್ಟುಕೊಳ್ಳಬಹುದು. ಅಮೇರಿಕಾದಲ್ಲಿ ಇದೇ ಮೊದಲಬಾರಿಗೆ ಈ ರೀತಿ ಅನುಮತಿ ನೀಡಲಾಗಿದೆ. ಇದರೊಂದಿಗೆ ಅಮೇರಿಕಾದಲ್ಲಿ ವಾಸಿಸುತ್ತಿರುವ ಹಿಂದೂಗಳ ಶ್ರದ್ಧೆ ಚೆನ್ನಾಗಿ ತಿಳಿದುಕೊಳ್ಳಲು ಡಾಕ್ಟರರಿಗೆ `ಕ್ರ್ಯಾಶ್ ಕೋರ್ಸ’ ಮಾಡಿಕೊಳ್ಳಬೇಕಾಗಿದೆ. ಅದಕ್ಕಾಗಿ ಬೈಡನ್ ಸರಕಾರವು ಎಲ್ಲ ಆಸ್ಪತ್ರೆಗಳಿಗೆ ಪುಸ್ತಕವನ್ನು ಸಿದ್ಧಪಡಿಸಿದೆ.

1. ಹಿಂದೂ ತಂದೆ-ತಾಯಿಗಳಿಗೆ ಮಗುವಿನ ಜನನದ ಬಳಿಕದ ಸಂಸ್ಕಾರ ಮಾಡಲು ಕೈಮೇಲೆ ಓಂಕಾರ ಬರೆಯುವುದು. ಆರನೇಯ ದಿನದ ಹೊಸದಾಗಿ ಜನಿಸಿದ ಮಗುವಿನ ನಾಳವನ್ನು ಹುಗಿಯುವುದು, ಉಪವಾಸ ಮತ್ತು ಸಸ್ಯಹಾರಿ ಪದ್ಧತಿಯನ್ನು ಪಾಲಿಸಲು ಅನುಮತಿ ನೀಡುವುದು ಮುಂತಾದ ನಿರ್ದೇಶನಗಳನ್ನು ಬೈಡನ್ ಸರಕಾರವು ಆಸ್ಪತ್ರೆಗಳಿಗೆ ನೀಡಿದೆ.

2. ಆಸ್ಪತ್ರೆಯಲ್ಲಿ ಹಿಂದೂ ಮಹಿಳಾ ರೋಗಿ ಪವಿತ್ರ ದಾರ, ಕಿವಿಯೋಲೆ ಮತ್ತು ಮಂಗಳಸೂತ್ರ ಈ ಸೌಭಾಗ್ಯಲಂಕಾರವನ್ನು ಧರಿಸಬಹುದಾಗಿದೆ. ಪುರುಷ ರೋಗಿಗಳಿಗೂ ಧಾರ್ಮಿಕದೃಷ್ಟಿಯಿಂದ ಆವಶ್ಯಕವಿರುವ ವಿಷಯಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಅನುಮತಿಯನ್ನು ನೀಡಲಾಗಿದೆ. ಅಲೋಪಥಿಕ್ ಔಷಧಿಗಳೊಂದಿಗೆ ಹಿಂದೂ ರೋಗಿಗಳು ಆಯುರ್ವೇದದ ಔಷಧಿಗಳನ್ನು ತೆಗೆದುಕೊಳ್ಳಬಹುದಾಗಿದೆ. ಆಯುರ್ವೇದ ಭಾರತೀಯ ಜೀವನಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಅದಕ್ಕಾಗಿ ಡಾಕ್ಟರರು ಹಿಂದೂ ರೋಗಿಗಳ ಆಯುರ್ವೇದ ವಿಷಯದ ಭಾವನೆಗಳನ್ನು ಒಳ್ಳೆಯ ರೀತಿಯಿಂದ ಅರಿತುಕೊಳ್ಳಬೇಕು ಎಂದು ಬೈಡನ್ ಸರಕಾರದಿಂದ ಹೇಳಲಾಗಿದೆ.

ಡಾಕ್ಟರರಿಗೆ `ಕರ್ಮ ಸಿದ್ಧಾಂತ’ ತಿಳಿದಿರಬೇಕು ! – ಅಮೇರಿಕಾದ ಮೆರಿಲ್ಯಾಂಡ ರಾಜ್ಯದ ಗವರ್ನರ ವಾಸ್ ಮೂರ

ಅಮೇರಿಕಾದ ಮೆರಿಲ್ಯಾಂಡ ರಾಜ್ಯದ ಗವರ್ನರ ವಾಸ್ ಮೂರ ಇವರು, ಕರ್ಮ ಸಿದ್ಧಾಂತದ ವಿಷಯದಲ್ಲಿ ಹಿಂದೂ ರೋಗಿಯ ಶ್ರದ್ಧೆಯ ವಿಷಯದಲ್ಲಿ ಡಾಕ್ಟರರಿಗೆ ತಿಳಿದಿರಬೇಕು. ಇದರಿಂದ ಡಾಕ್ಟರ ಮತ್ತು ರೋಗಿ ಯಾವುದೇ ನಿರ್ಣಯವನ್ನು ಬಹಳ ಚೆನ್ನಾಗಿ ತೆಗೆದುಕೊಳ್ಳಬಹುದು ಎಂದು ಹೇಳಿದರು. ಮೇರಿಲ್ಯಾಂಡ ವಿಧಾನಸಭೆಯ ಸದಸ್ಯ ಕುಮಾರ ಬರ್ವೆ ಇವರು, ಪುಸ್ತಕಗಳಿಂದ ಹಿಂದೂ ಧರ್ಮದ ಮೌಲ್ಯಗಳ ಕುರಿತು ಒಳ್ಳೆಯ ಅರಿವು ಮೂಡಬಹುದು ಎಂದು ಹೇಳಿದರು.