ಮೂಲಸ್ಥಿತಿಯನ್ನು ಬಲವಂತವಾಗಿ ಬದಲಾಯಿಸಲು ಪ್ರಯತ್ನಿಸುವ ಏಕಪಕ್ಷೀಯ ಕೃತಿಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ!

ಕ್ವಾಡ್ ದೇಶಗಳಿಂದ ಚೀನಾದ ಮೇಲೆ ಟೀಕೆ !

(‘ಕ್ವಾಡ್’ ಎಂದರೆ ಭಾರತ, ಜಪಾನ, ಅಮೇರಿಕಾ ಮತ್ತು ಆಸ್ಟ್ರೇಲಿಯಾ ದೇಶಗಳ ಸಂಘಟನೆ)

ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ, ಜಪಾನಿನ ಪ್ರಧಾನಿ ಫೂಮಿಯೊ ಕಿಶಿದಾ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಎಂಥನಿ ಅಲ್ಬನೀಜರವರು ಪರಿಷತ್ತಿನಲ್ಲಿ ಭಾಗವಹಿಸಿದ್ದರು.

ಹಿರೋಶಿಮಾ (ಜಪಾನ) – ಇಲ್ಲಿ ಭಾರತ, ಜಪಾನ, ಅಮೇರಿಕಾ ಮತ್ತು ಆಸ್ಟ್ರೇಲಿಯಾ ಈ ೪ ದೇಶಗಳ ಸಹಭಾಗವಿರುವ ‘ಕ್ವಾಡ್’ ಸಂಘಟನೆಯ ಪರಿಷತ್ತನ್ನು ನಡೆಸಲಾಯಿತು, ಈ ಪರಿಷತ್ತಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ, ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ, ಜಪಾನಿನ ಪ್ರಧಾನಿ ಫೂಮಿಯೊ ಕಿಶಿದಾ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಎಂಥನಿ ಅಲ್ಬನೀಜರವರು ಭಾಗವಹಿಸಿದ್ದರು. ಭಾಗವಹಿಸಿದ ದೇಶಗಳು ಚೀನಾದ ಕುತಂತ್ರಗಳನ್ನು ಟೀಕಿಸಿವೆ. ಈ ದೇಶಗಳು ಜಂಟಿಯಾಗಿ ಪ್ರಸಾರ ಮಾಡಿರುವ ನಿವೇದನೆಯಲ್ಲಿ ‘ನಮ್ಮ ಮೂಲ ಸ್ಥಿತಿಯನ್ನು ಬಲವಂತವಾಗಿ ಬದಲಾಯಿಸಲು ಪ್ರಯತ್ನಿಸುವ ಅಸ್ಥಿರ ಅಥವಾ ಏಕಪಕ್ಷೀಯ ಕೃತಿಗಳನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ’ ಎಂದು ಹೇಳಲಾಗಿದೆ.

ಈ ನಿವೇದನೆಯಲ್ಲಿ `ವಿವಾದಿತ ಭಾಗಗಳಲ್ಲಿನ ಮಿಲಿಟರೀಕರಣ, ಕೋಸ್ಟಗಾರ್ಡ ಮತ್ತು ಸಮುದ್ರ ನೌಕೆಗಳ ಅಪಾಯಕಾರಿ ಬಳಕೆ ಮತ್ತು ಇತರ ದೇಶಗಳ ಕರ್ತವ್ಯಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನಗಳ ಬಗ್ಗೆ ನಾವು ಗಂಭೀರವಾದ ಚಿಂತೆಯನ್ನು ವ್ಯಕ್ತಪಡಿಸುತ್ತೇವೆ ಎಂದು ಹೇಳಲಾಗಿದೆ.