ಸಾಧನೆಯ ಪ್ರಸಾರ ಮಾಡಲು ಕಠೋರ ಪರಿಶ್ರಮ ಪಡುವ ಹಾಗೂ ಅದ್ವಿತೀಯ ಸಂಶೋಧನೆಯ ಕಾರ್ಯ ಮಾಡುವ ಪ.ಪೂ. ಡಾ. ಆಠವಲೆ !

ಪ.ಪೂ. ಡಾ. ಆಠವಲೆಯವರಿಗೆ ೮೧ ನೇ ಬ್ರಹ್ಮೋತ್ಸವದ ಹಾರ್ದಿಕ ಶುಭಾಶಯಗಳು !

ಪ.ಪೂ. ದೇವಬಾಬಾ (ಬಲಬದಿಯಲ್ಲಿ) ಇವರೊಂದಿಗೆ ಆತ್ಮೀಯತೆಯಿಂದ ಸಂಭಾಷಣೆ ಮಾಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಪ.ಪೂ. ಡಾ. ಆಠವಲೆ ಇವರ ಕಾರ್ಯವು ಇಡೀ ಜಗತ್ತಿನಲ್ಲಿ ಹರಡಿದೆ

‘ಗೋವಾದಲ್ಲಿರುವ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪ.ಪೂ. ಡಾ. ಜಯಂತ ಆಠವಲೆಯವರು ಮಾನವ ರೂಪದಲ್ಲಿನ ದೈವೀ ಅವತಾರವಾಗಿದ್ದಾರೆ. ಅವರಿಗೆ ತಮ್ಮ ಮಾತೃಭೂಮಿಯ ಬಗ್ಗೆ ಅಂದರೆ ಭಾರತ ದೇಶದ ಬಗ್ಗೆ ಅಸೀಮ ಪ್ರೇಮವಿದೆ. ಸನಾತನ ಸಂಸ್ಥೆಯ ಮುಖ್ಯಾಲಯ ಗೋವಾದಲ್ಲಿದ್ದರೂ ಪ.ಪೂ. ಡಾ. ಆಠವಲೆಯವರ ಅಧ್ಯಾತ್ಮಪ್ರಸಾರ ಹಾಗೂ ಧರ್ಮರಕ್ಷಣೆಯ ಕಾರ್ಯ ಸಂಪೂರ್ಣ ಜಗತ್ತಿನಾದ್ಯಂತ ಹರಡಿದೆ.

ಪ.ಪೂ. ದೇವಬಾಬಾ

೨. ‘ಸಾಧಕರ ಸಾಧನೆ ಆಗುತ್ತಿದೆಯೆ ? ಎಂಬುದರ ಕಡೆಗೆ ಪ.ಪೂ. ಆಠವಲೆಯವರ ಗಮನವಿರುತ್ತದೆ

ಸನಾತನ ಸಂಸ್ಥೆಯ ಮುಖ್ಯ ಸಾಧನಾಮಾರ್ಗವೆಂದರೆ ನಾಮ ಜಪ ಸಾಧನೆ. ಸನಾತನದ ಸಾಧಕರು ಪ್ರತಿದಿನ ನಾಮಜಪ ಸಾಧನೆ ಮಾಡುತ್ತಾರೆ ಹಾಗೂ ಆಗಾಗ ಅದರ ವರದಿಯನ್ನು ಜವಾಬ್ದಾರ ಸಾಧಕರಿಗೆ ಕೊಡುತ್ತಾರೆ. ‘ಸಾಧಕರ ನಾಮಜಪ ಆಗುತ್ತಿದೆಯೇ?, ಎಂಬುದನ್ನು ಪ.ಪೂ. ಡಾ. ಆಠವಲೆಯವರು ಸ್ವತಃ ಗಮನಿಸುತ್ತಾರೆ.
‘ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುವ ಪ್ರತಿಯೊಬ್ಬ ಸಾಧಕನ ಮುಂದಿನ ಹಂತದ ನಾಮಜಪ ಆಗುತ್ತದೆಯೇ ?, ಅವನ ಆಧ್ಯಾತ್ಮಿಕ ಉನ್ನತಿಯಾಗಿ ಅವನ ಆಧ್ಯಾತ್ಮಿಕ ಪ್ರಯಾಣ ಉಚ್ಚ ಲೋಕಗಳ ದಿಕ್ಕಿಗೆ ಆಗುತ್ತಿದೆಯೇ ?, ಎಂಬ ದೃಷ್ಟಿಯಿಂದ ಸಾಧಕರನ್ನು ಸಿದ್ಧಪಡಿಸಲಾಗುತ್ತದೆ.

೩. ಆಧ್ಯಾತ್ಮಿಕ ಕ್ಷೇತ್ರದಲ್ಲಿನ ಪ್ರತಿಯೊಂದು ವಿಷಯದ ಸಂಶೋಧನೆ, ಇದು ಸನಾತನದ ವೈಶಿಷ್ಟ್ಯವಾಗಿದೆ

ಸನಾತನ ಸಂಸ್ಥೆಯ ಇನ್ನೊಂದು ಅಂಗವೆಂದರೆ, ಅದು ಮಾಡುತ್ತಿರುವ ಅಧ್ಯಾತ್ಮಿಕ ಕ್ಷೇತ್ರದಲ್ಲಿನ ಪ್ರತಿಯೊಂದು ವಿಷಯದ ಸಂಶೋಧನೆ ! ಸಂಸ್ಥೆ ತನ್ನದೇ ಆಧ್ಯಾತ್ಮಿಕ ಮಾರ್ಗದರ್ಶಕರು ಮತ್ತು
ಸಂಶೋಧಕರನ್ನು ಸಿದ್ಧಪಡಿಸಿದೆ. ಅವರು ಪ್ರಾಚೀನ ಸನಾತನ ಧರ್ಮದ ಪುನರ್ಸ್ಥಾಪನೆ ಮತ್ತು ಅದ್ವಿತೀಯ ಹಿಂದೂ ರಾಷ್ಟ್ರ ಸ್ಥಾಪನೆಯ ದೃಷ್ಟಿಯಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ.

೪. ಸನಾತನದಲ್ಲಿ ಸಾಧಕರಿಗೆ ಧರ್ಮಾಚರಣೆಯ ಮಹತ್ವವನ್ನು ಹೇಳಲಾಗುತ್ತದೆ

ಸನಾತನ ಸಂಸ್ಥೆ ಸಾಧಕರಿಗೆ ಧರ್ಮಾಚರಣೆಯ ಮಹತ್ವವನ್ನು ಹೇಳಿ ಅದನ್ನು ಮಾಡಲು ಉತ್ತೇಜಿಸುತ್ತದೆ. ಇಲ್ಲಿ ಸಾಧಕರಿಗೆ ಆಪತ್ಕಾಲವನ್ನು ಎದುರಿಸುವ ದೃಷ್ಟಿಯಲ್ಲಿ ಹಾಗೂ ಸಂಕಟಕಾಲದಲ್ಲಿ ರಕ್ಷಿಸಿಕೊಳ್ಳುವ ದೃಷ್ಟಿಯಲ್ಲಿ ತರಬೇತಿ ನೀಡಲಾಗುತ್ತದೆ. ಸಂಸ್ಥೆಯು ‘ಆಪತ್ಕಾಲದಲ್ಲಿ ಬದುಕುಳಿಯಲು ಮಾಡಬೇಕಾದ ಸಿದ್ಧತೆ, ಎಂಬ ವಿಷಯ ದಲ್ಲಿ ಕೆಲವು ಮಾರ್ಗದರ್ಶಕ ಗ್ರಂಥಗಳನ್ನೂ ಪ್ರಕಾಶನ ಮಾಡಿದೆ.

೫. ಪ.ಪೂ. ಡಾ. ಆಠವಲೆಯವರ ಸಂಶೋಧನೆಯ ಕಾರ್ಯ ಹಾಗೂ ಕಠೋರ ಪರಿಶ್ರಮವು ಅದ್ವಿತೀಯವಾಗಿದೆ

ಪ.ಪೂ. ಡಾ. ಆಠವಲೆಯವರು ಮಧ್ಯಪ್ರದೇಶದ ಇಂದೂರಿನ ಸಂತ ಪ.ಪೂ. ಭಕ್ತರಾಜ ಮಹಾರಾಜರ ಶಿಷ್ಯರಾಗಿದ್ದಾರೆ. ಪ.ಪೂ. ಭಕ್ತರಾಜ ಮಹಾರಾಜರು ನೀಡಿದ ಆಧ್ಯಾತ್ಮಿಕ ಮಾರ್ಗದರ್ಶನದಿಂದ ಪ.ಪೂ. ಡಾಕ್ಟರರು ವಿವಿಧ ಆಧ್ಯಾತ್ಮಿಕ ಸಂಸ್ಥೆಗಳನ್ನು ಸ್ಥಾಪಿಸಿದರು. ಪ.ಪೂ. ಡಾ. ಆಠವಲೆಯವರ ಸಂಶೋಧನೆಯ ಕಾರ್ಯ ಮತ್ತು ಕಠೋರ ಪರಿಶ್ರಮವು ಅದ್ವಿತೀಯವಾಗಿದೆ.

೬. ಭಾರತವನ್ನು ‘ಹಿಂದೂ ರಾಷ್ಟ್ರವನ್ನಾಗಿ ಮಾಡುವ ಸಲುವಾಗಿ ಪ.ಪೂ. ಡಾ. ಆಠವಲೆಯವರು ಅಪಾರ ಕಷ್ಟ ಸಹಿಸುತ್ತಿರುವುದು

ಭಾರತವನ್ನು ‘ಹಿಂದೂ ರಾಷ್ಟ್ರವನ್ನಾಗಿಸುವ ದೃಷ್ಟಿಯಿಂದ ಪ.ಪೂ. ಡಾ. ಆಠವಲೆಯವರು ತೆಗೆದುಕೊಂಡ ಅಪಾರ ಕಷ್ಟಗಳಿಂದ ಸನಾತನ ಸಂಸ್ಥೆಯ ಹೆಸರು ದೇಶ-ವಿದೇಶಗಳಲ್ಲಿ ಪ್ರಸಿದ್ಧವಾಗಿದೆ. ನಾನು, ನಮ್ಮ ‘ಶ್ರೀ ಶಕ್ತಿದರ್ಶನ ಯೋಗಾಶ್ರಮ ಮತ್ತು ಶಿಷ್ಯಪರಿವಾರ ಸಹಿತ ‘ಪರಾತ್ಪರ ಗುರು ಡಾ. ಆಠವಲೆಯವರಿಗೆ ಆನಂದಮಯ ಹಾಗೂ ಆರೋಗ್ಯವಂತ ಜೀವನ ಲಭಿಸಲಿ ಹಾಗೂ ಅವರು ಜೀವನದ ಧ್ಯೇಯವನ್ನು ತಲುಪಿ ಅವರ ಪ್ರಯತ್ನಗಳು ಯಶಸ್ವಿಯಾಗಲಿ, ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥಿಸುತ್ತೇವೆ. ಇದರೊಂದಿಗೆ ಭಾರತವನ್ನು ವಿಶ್ವದ ಪ್ರಥಮ ಕ್ರಮಾಂಕದ ವಿಕಸಿತ ದೇಶವನ್ನಾಗಿ ಮಾಡುವ ಅವರ ಕನಸು ಸಾಕಾರವಾಗಲಿ, ಎಂದು ನಾನು ಶುಭ ಕೋರುತ್ತೇನೆ. – ಪ.ಪೂ. ದೇವಬಾಬಾ, ಕಿನ್ನಿಗೋಳಿ, ಕರ್ನಾಟಕ. (ಎಪ್ರಿಲ್ ೨೦೨೩)