‘ದಿ ಕೇರಳ ಸ್ಟೋರಿ’ ಚಿತ್ರದ ತಂಡದಿಂದ ಮುಂಬಯಿನಲ್ಲಿ ಪತ್ರಿಕಾಗೋಷ್ಠಿ!
ಸಂಪಾದಕರ ನಿಲುವು
|
ಮುಂಬಯಿ – ‘ದಿ ಕೇರಳ ಸ್ಟೋರಿ’ ಚಿತ್ರದ ಮೂಲಕ ಪ್ರಸಿದ್ಧಿ ಪಡೆಯುತ್ತಿದ್ದಾರೆ ಎಂದು ನಮ್ಮ ಮೇಲೆ ಆರೋಪಿಸಲಾಗಿದೆ; ಆದರೆ ವೀಕ್ಷಕರು ಈ ಚಿತ್ರಕ್ಕೆ ಉತ್ಸಾಹದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಇಂದು ನಾವು ನಿಜವಾಗಿಯೂ ಮತಾಂತರಕ್ಕೆ ಬಲಿಯಾದ ಮಹಿಳೆಯರ ಪೈಕಿ 26 ಮಹಿಳೆಯರನ್ನು ಪರಿಚಯಿಸುತ್ತಿದ್ದೇವೆ. ಇದು ಕೇರಳದ ಕಥೆ ಮಾತ್ರವಲ್ಲ, ಭಾರತದಾದ್ಯಂತ ನಡೆಯುತ್ತಿದೆ. ‘ದಿ ಕೇರಳ ಸ್ಟೋರಿ’ ಚಿತ್ರದಲ್ಲಿ 3 ಹುಡುಗಿಯರ ಮೂಲಕ ಸಾವಿರಾರು ಹುಡುಗಿಯರ ಕಥೆಯನ್ನು ಮುನ್ನೆಲೆಗೆ ತಂದಿದ್ದೇವೆ ಎಂದು ನಿರ್ಮಾಪಕ ವಿಪುಲ ಶಾಹ ಇವರು ಪ್ರತಿಪಾದಿಸಿದರು. ಇಲ್ಲಿ ‘ದಿ ಕೇರಳ ಸ್ಟೋರಿ’ ತಂಡ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅವರು ಕೇರಳದಿಂದ ಬಂದು ಮತಾಂತರಕ್ಕೆ ಬಲಿಯಾದ 26 ಹುಡುಗಿಯರನ್ನು ಎಲ್ಲರ ಮುಂದೆ ತಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರ ಅನುಭವಗಳು!
1. ಸಂತ್ರಸ್ತರಲ್ಲಿ ಒಬ್ಬರಾದ ಅನಘಾ ಜಯಗೋಪಾಲ್ ಇವರು ಮಾತನಾಡಿ, ‘‘ನಾನು ಎರಡು ವರ್ಷಗಳ ಹಿಂದೆ ಮತಾಂತರಗೊಂಡಿದ್ದೆ. ಸಿನಿಮಾದಲ್ಲಿ ನಾನು ಶಾಲಿನಿಯಂತೆ ಇದ್ದೆ. ನಮ್ಮ ಹಾಸ್ಟೆಲ್‌ನಲ್ಲಿ ಸಿನಿಮಾದಲ್ಲಿ ತೋರಿಸಿದಂತೆ ಆಸಿಫಾಳಂತಹ ಅನೇಕ ಹುಡುಗಿಯರು ಇದ್ದರು. ಪ್ರತಿಯೊಂದು ಸಂಭಾಷಣೆಯಲ್ಲಿ ಧರ್ಮವನ್ನು ತಂದು ನಮ್ಮನ್ನು ಗೊಂದಲಗೊಳಿಸುತ್ತಿದ್ದರು. ನನಗೆ ಧರ್ಮದ ಬಗ್ಗೆ ಜ್ಞಾನವಿಲ್ಲದ ಕಾರಣ ನನ್ನ ವಾದವನ್ನು ಮಂಡಿಸಲು ಸಾಧ್ಯವಾಗಲಿಲ್ಲ. ಅವಳು, “ದೇವರು ಒಬ್ಬನೇ. ಅವನೇ ಅಲ್ಲಾ.” ಎಂದು ಹೇಳುತ್ತಿದ್ದಳು. ಆಕೆ ನನಗೆ ಕುರಾನ್ ನ ಹಿಂದಿ ಆವೃತ್ತಿಯನ್ನು ಕೊಟ್ಟಳು. ನಾನು ಅದನ್ನು ಓದಿದ ಮೇಲೆ ಅವರ ಮಾತಿಗೆ ಮರುಳಾದೆ. ನಾನು ಹಿಂದೂ ವಿರೋಧಿಯಾದೆ. ನಾನು ನನ್ನ ಕುಟುಂಬವನ್ನು ತೊರೆದು ಇಸ್ಲಾಂ ಧರ್ಮವನ್ನು ಸಂಪೂರ್ಣವಾಗಿ ಸ್ವೀಕರಿಸಿದೆ. ಮನೆಯಲ್ಲಿ ಪೂಜೆ ಇದ್ದಾಗ ಟೆರೇಸ್ ಮೇಲೆ ನಮಾಜ್ ಮಾಡುತ್ತಿದ್ದೆ. ನನ್ನ ಕೋಪವನ್ನು ನನ್ನ ಅಕ್ಕನ ಮಗಳ ಮೇಲೆ ತೀರಿಸುತ್ತಿದ್ದೆ; ಏಕೆಂದರೆ ಅವಳು ನನಗೆ ನಮಾಜ್ ಮಾಡಲು ಬಿಡುತ್ತಿರಲಿಲ್ಲ.”
2. ಮತ್ತೋರ್ವ ಬಾಲಕಿ ಚಿತ್ರಾ ಇವರು, ”ಹುಡುಗಿಯರಷ್ಟೇ ಅಲ್ಲ, ಹುಡುಗರೂ ಮತಾಂತರಕ್ಕೆ ಬಲಿಯಾಗಿದ್ದಾರೆ. ಮತಾಂತರಗೊಂಡವರು ತಮ್ಮ ಹಿಂದೂ ಕುಟುಂಬವನ್ನು ಸಂಪೂರ್ಣವಾಗಿ ತೊರೆದರು. ಅವನಲ್ಲಿನ ಬದಲಾವಣೆಯನ್ನು ಗಮನಿಸಿದ ಮನೆಯವರು ಅವನನ್ನು ಆಶ್ರಮಕ್ಕೆ ಕರೆತಂದರು. ಈಗ ಅವರು ತಮ್ಮ ಗುರುತನ್ನು ಮರೆಮಾಡಲು ಬಯಸುತ್ತಾರೆ.” ಎಂದು ಹೇಳಿದಳು.
3. ಸಂತ್ರಸ್ತೆ ಶ್ರುತಿ ಮಾತನಾಡಿ, ”ಆರ್ಷ ವಿದ್ಯಾ ಸಮಾಜದ ಅಡಿಯಲ್ಲಿ ಮತಾಂತರಗೊಂಡ ಹೆಣ್ಣು ಮಕ್ಕಳಿಗೆ ಸಹಾಯ ಮಾಡಲಾಗುತ್ತಿದೆ. 1999 ರಿಂದ 2023 ರವರೆಗೆ ಅಂದಾಜು 7 ಸಾವಿರ ಜನರನ್ನು ಸ್ವದೇಶಕ್ಕೆ ಕಳುಹಿಸಲಾಗಿದೆ. ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. 300 ಮತಾಂತರಗೊಂಡ ಹೆಣ್ಣುಮಕ್ಕಳಿಗೆ ಆರ್ಷ ವಿದ್ಯಾ ಆಶ್ರಮದಲ್ಲಿ ಸೌಲಭ್ಯ ನೀಡಲಾಗುವುದು.” ಈ ಆಶ್ರಮಕ್ಕೆ ವಿಪುಲ್ ಶಾ 51 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಹೇಗಾದರೂ ಮಾಡಿ ಹೆಣ್ಣುಮಕ್ಕಳನ್ನು ಉಳಿಸುವುದೇ ಈ ಸಿನಿಮಾದ ಉದ್ದೇಶ ಎಂದು ವಿಪುಲ್ ಅವರು ಹೇಳಿದರು.
26 ಹುಡುಗಿಯರಲ್ಲಿ ಎರಡು-ಮೂರು ಹುಡುಗಿಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೆಲವು ಹುಡುಗಿಯರು ತಮ್ಮ ಗುರುತು ಮರೆಮಾಚಲು ತಮ್ಮ ಮುಖವನ್ನು ಮುಚ್ಚಿಕೊಂಡರು.
ಯಾವುದೇ ಧರ್ಮದ ಭಾವನೆಗಳಿಗೆ ಧಕ್ಕೆ ತರುವುದು ಚಿತ್ರದ ಉದ್ದೇಶವಲ್ಲ ! – ನಿರ್ದೇಶಕ ಸುದೀಪ್ತೋ ಸೇನ್
Real-Life ‘The Kerala Story’ Victims Narrate Ordeal, Show Mirror To Liberal Lobby #TNDigitalVideos #TheKeralaStory pic.twitter.com/8iH8tnRrgU
— TIMES NOW (@TimesNow) May 18, 2023
ಈ ಸಿನಿಮಾ ಯಾವುದೇ ಧರ್ಮದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ಹೊಂದಿಲ್ಲ. ಪ್ರತಿಯೊಂದು ಸಂಭಾಷಣೆ ಮತ್ತು ದೃಶ್ಯವು ವಾಸ್ತವವನ್ನು ಆಧರಿಸಿದೆ. ಭಾರತವಲ್ಲದೆ ಹಲವು ದೇಶಗಳಲ್ಲಿ ಲವ್ ಜಿಹಾದ್ ಗೆ ಸಂಚು ರೂಪಿಸಲಾಗುತ್ತಿದೆ. ಭಯೋತ್ಪಾದನೆ ಇಸ್ಲಾಂ ಧರ್ಮವನ್ನು ಅವಮಾನಿಸುತ್ತದೆ. ಇಸ್ಲಾಂ ಧರ್ಮದ ಹೆಸರು ಹೇಗೆ ದುರ್ಬಳಕೆಯಾಗುತ್ತಿದೆ ?, ಎಂಬುದನ್ನು ಈ ಚಿತ್ರದ ಮೂಲಕ ಹೇಳಿದ್ದೇವೆ ಎಂದು ಹೇಳಿದರು.