ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಹಿಂದೂ ರಾಷ್ಟ್ರದಲ್ಲಿನ ಕಾನೂನುಗಳ ಪಾಲನೆಯಿಂದ ಜನರ ಸಾಧನೆಯೂ ಆಗುವುದು !

ಹಿಂದೂ ರಾಷ್ಟ್ರದಲ್ಲಿ ಎಲ್ಲಾ ಕಾನೂನುಗಳು ಧರ್ಮಾಧಿಷ್ಠಿತವಾಗಿರುವವು. ಆದ್ದರಿಂದ ಅವುಗಳನ್ನು ಬದಲಾಯಿಸಬೇಕಾಗುವುದಿಲ್ಲ ಮತ್ತು ಅದರ ಪಾಲನೆಯಿಂದ ಅಪರಾಧಗಳಾಗದೇ ಸಾಧನೆಯೇ ಆಗುವುದು.

ಹಾಸ್ಯಾಸ್ಪದ ಸಾಮ್ಯವಾದ !

‘ವನಸ್ಪತಿ, ಪ್ರಾಣಿ, ಮಾನವ ಇತ್ಯಾದಿ ಗಳಲ್ಲಿ ಸಮಾನತೆ ಇಲ್ಲ. ಅಷ್ಟೇ ಅಲ್ಲದೇ, ಪೃಥ್ವಿಯ ೭೦೦ ಕೋಟಿಗೂ ಅಧಿಕ ಮಾನವರಲ್ಲಿ ಯಾವುದೇ ಇಬ್ಬರು ಮನುಷ್ಯರ ಧನ, ಶಿಕ್ಷಣ, ಶರೀರ, ಮನಸ್ಸು, ಬುದ್ಧಿ ಮತ್ತು ಚಿತ್ತಗಳಲ್ಲಿ ಸಮಾನತೆ ಇಲ್ಲ. ಹೀಗಿದ್ದರೂ ಸಾಮ್ಯವಾದ ಎಂದು ಹೇಳುವುದು ಹಾಸ್ಯಾಸ್ಪದವಲ್ಲವೇ ?

ಸಾಧಕ-ಭಕ್ತರ ಶ್ರೇಷ್ಠತೆ !

‘ವಿವಿಧ ರಾಜಕೀಯ ಪಕ್ಷಗಳು ತಮ್ಮ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಹಣ ಹಂಚುವುದು ಇತ್ಯಾದಿ ತಪ್ಪು ಮಾರ್ಗಗಳನ್ನು ಅನುಸರಿಸುತ್ತವೆ. ತದ್ವಿರುದ್ಧ ಸಾಧಕರು ಮತ್ತು ಭಕ್ತರು ಭಗವಂತನ ರಾಜ್ಯ ಸ್ಥಾಪನೆಯಾಗ ಬೇಕೆಂದು ಪ್ರಯತ್ನಶೀಲರಾಗಿರುತ್ತಾರೆ.

ಅಧೋಗಾಮಿ ಬುದ್ಧಿಪ್ರಾಮಾಣ್ಯವಾದಿಗಳು !

‘ಬುದ್ಧಿಜೀವಿಗಳು ಆಧುನಿಕತಾವಾದಿಗಳಲ್ಲ, ಅಧೋಗಾಮಿಗಳಾಗಿರುತ್ತಾರೆ. ಹಾಗಾಗಿ ಅವರು ಅಧೋಗತಿ ಪ್ರಾಪ್ತಮಾಡಿಕೊಳ್ಳುತ್ತಾರೆ !

ಹಿಂದೂಗಳ ಜ್ಯೋತಿಷ್ಯಶಾಸ್ತ್ರದ ಮಹಿಮೆ !

‘ಎಲ್ಲಿ ಮುಂಬರುವ ಕೆಲವು ವರ್ಷಗಳಲ್ಲಿ ಏನಾಗಲಿದೆ ಎಂದು ಬುದ್ದಿಯ ಉಪಯೋಗ ಮಾಡಿ ಅನುಮಾನ ವ್ಯಕ್ತಪಡಿಸುವ ಪಾಶ್ಚಿಮಾತ್ಯರು; ಮತ್ತು ಎಲ್ಲಿ ಯುಗ-ಯುಗಗಳ ವಿಷಯಗಳನ್ನು ತಿಳಿಸುವ ಜ್ಯೋತಿಷ್ಯಶಾಸ್ತ್ರ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ