ಪೃಥ್ವಿಯಲ್ಲಿ ಬಹುಸಂಖ್ಯಾತ ಮನುಷ್ಯರು ಅಧ್ಯಾತ್ಮವನ್ನು ಬಿಟ್ಟು ಇತರ ವಿಷಯಗಳ ಅಧ್ಯಯನ ಮಾಡುತ್ತಾರೆ, ಇದು ಆಶ್ಚರ್ಯವೇ ಆಗಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಪೃಥ್ವಿಯ ಮೇಲೆ ಕಲಿಸಲಾಗುವ ಎಲ್ಲ ವಿಷಯಗಳು ಅಪೂರ್ಣವಾಗಿರುವುದರಿಂದ ಹೊಸ ಸಂಶೋಧನೆಯಿಂದ ಅವು ಬದಲಾಗುತ್ತಿರುತ್ತದೆ. ಹೀಗೆ ಬದಲಾಗುತ್ತಿರುವುದರಿಂದ ಆ ವಿಷಯದ ಕುರಿತು ಪದೇ ಪದೇ ಅಭ್ಯಾಸ ಮಾಡಬೇಕಾಗುತ್ತದೆ. ವೈದ್ಯರಿಗೆ ಹೊಸದಾದ ಚಿಕಿತ್ಸಾ ಪದ್ದತಿ, ವಕೀಲರಿಗೆ ಹೊಸ ಕಾನೂನುಗಳು, ಗಣಕಯಂತ್ರದವರಿಗೆ ಅದರಲ್ಲಿನ ಹೊಸ ಗಣಕೀಯ ತಂತ್ರಾಂಶ ಇತ್ಯಾದಿಗಳ ಅಭ್ಯಾಸ ಮಾಡಬೇಕಾಗುತ್ತದೆ. ಅದೇ ರೀತಿ ಈ ವಿಷಯಗಳಿಂದಾಗಿ ಚಿರಂತನ ಆನಂದ ಸಿಗುವುದಿಲ್ಲ.

ತದ್ವಿರುದ್ಧ ಅಧ್ಯಾತ್ಮವು ಪರಿಪೂರ್ಣ ಶಾಸ್ತ್ರವಾಗಿದ್ದರಿಂದ ಅದರಲ್ಲಿ ಹೊಸ ಸಂಶೋಧನೆ ಆಗಲು ಸಾಧ್ಯವಿಲ್ಲ. ಆದ್ದರಿಂದ ಪದೇ ಪದೇ ಅಭ್ಯಾಸ ಮಾಡಬೇಕಾಗುವುದಿಲ್ಲ. ಅದೇ ರೀತಿ ಅಧ್ಯಾತ್ಮದ ವಿಷಯದ ಅಭ್ಯಾಸದಿಂದಾಗಿ ಚಿರಂತನ ಆನಂದ ಸಿಗುತ್ತದೆ. ಹೀಗಿದ್ದರೂ ಪೃಥ್ವಿಯ ಮೇಲಿನ ಹೆಚ್ಚಿನ ಮನುಷ್ಯರು ಅಧ್ಯಾತ್ಮವನ್ನು ಬಿಟ್ಟು ಇತರ ವಿಷಯಗಳ ಅಭ್ಯಾಸ ಮಾಡುತ್ತಾರೆ, ಇದು ಆಶ್ಚರ್ಯವೇ ಆಗಿದೆ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ