ಸಾಧಕರೆ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡಿದರೆ ಆಧ್ಯಾತ್ಮಿಕ ಪ್ರಗತಿ ಆಗಲಿಕ್ಕೆ ಇದೆ !

ಎಲ್ಲ ಸಾಧಕರಿಗೆ ಆಧಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
(ಪೂ.) ಶ್ರೀ. ಸಂದೀಪ ಆಳಶಿ,

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಎಂದರೆ ಚೈತನ್ಯದ ಸಾಕಾರ ರೂಪ ! ಅವರಲ್ಲಿನ ಚೈತನ್ಯದ ಅನುಭೂತಿಯನ್ನು ಸಂತರು, ಸಾಧಕರು, ರಾಷ್ಟ್ರಪ್ರೇಮಿಗಳು ಮತ್ತು ಧರ್ಮಪ್ರೇಮಿಗಳು ಮತ್ತು ಅಷ್ಟೇ ಅಲ್ಲದೆ, ನಿರ್ಜೀವ ವಸ್ತು ಕೂಡ ಪಡೆಯುತ್ತವೆ ! ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಚೈತನ್ಯಮಯ ಪಾದಸ್ಪರ್ಶದಿಂದ ಅವರ ಕೋಣೆಯಲ್ಲಿನ ನೆಲ (ಟೈಲ್ಸ್) ಕೂಡ ನುಣುಪಾಗಿವೆ. ಮತ್ತು ನೆಲದ ನುಣುಪು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಹೀಗಿರುವಾಗ, ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಚೈತನ್ಯದಾಯಕ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುವ ಸಾಧಕರಲ್ಲಿ ಬದಲಾವಣೆ ಆಗುವುದಿಲ್ಲವೇ ? ನಿಶ್ಚಯವಾಗಿ ಆಗುವುದು ! ಅಥವಾ ಆಗುತ್ತಿರಬಹುದು, ಅಂದರೆ ಸಾಧಕರ ಆಧ್ಯಾತ್ಮಿಕ ಪ್ರಗತಿ ಆಗುತ್ತಲೆ ಇದೆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮಾರ್ಗದರ್ಶನಕ್ಕನುಸಾರ ಗುರುಕೃಪಾಯೋಗಾನುಸಾರ ಸಾಧನೆ ಮಾಡಿದ ನಂತರ ಇಲ್ಲಿಯವರೆಗೆ (೨೫ ಮಾರ್ಚ್ ೨೦೨೩ ರ ವರೆಗೆ) ಸನಾತನದ ೧೦೮೭ ಸಾಧಕರು ಶೇಕಡಾ ೬೦ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿ ಜನನ ಮರಣದ ಚಕ್ರದಿಂದ ಮುಕ್ತರಾಗಿದ್ದಾರೆ ಮತ್ತು ೧೨೩ ಸಾಧಕರು ಸಂತರಾಗಿದ್ದಾರೆ. ಇದಕ್ಕಾಗಿ ಸಾಧಕರೇ, ‘ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬೋಧನೆಯಲ್ಲಿ ಪೂರ್ಣ ವಿಶ್ವಾಸವಿಟ್ಟು ತಳಮಳದಿಂದ ಮತ್ತು ನಿಷ್ಕಾಮ ಭಾವದಿಂದ ಸಾಧನೆ ಮಾಡುತ್ತಲಿರಿ !

– ಪೂ. ಸಂದೀಪ  ಆಳಶಿ (೧೪.೩.೨೦೨೩)

ಊಟದಲ್ಲಿ ಇಷ್ಟವಾದ ಆಹಾರ ಸೇವಿಸುವಾಗ ಸ್ವಲ್ಪ ಸಮಯ ಸುಖ ಸಿಗುತ್ತದೆ. ವಾಸನೆಯ ಸುಖ ಸಹ ಕೆಲವು ತಾಸಿನಷ್ಟು ಉಳಿಯುತ್ತದೆ. ತದ್ವಿರುದ್ಧ ಸಾಧನೆ ಮಾಡುವವರಿಗೆ ಜೀವಮಾನವಿಡಿ ಆನಂದ ಸಿಗುತ್ತದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ