ಕೇರಳದ ಕ್ರೈಸ್ತ ಮತ್ತು ಮುಸ್ಲಿಂ ಶಾಲೆಗಳಿಂದ `ಡಾರ್ವಿನ ಸಿದ್ಧಾಂತ’ದ ಪಠ್ಯಕ್ರಮವನ್ನು ಕಡ್ಡಾಯಗೊಳಿಸಿದಕ್ಕೆ ವಿರೋಧ !

  • ಕೇಂದ್ರಸರಕಾರವು ಪಠ್ಯಪುಸ್ತಕದಿಂದ ಡಾರ್ವಿನ ಸಿದ್ಧಾಂತವನ್ನು ತೆಗೆದುಹಾಕಿರುವ ಬಳಿಕವೂ ಅದನ್ನು ಕಲಿಸಲು ರಾಜ್ಯ ಸರಕಾರದ ನಿರ್ಣಯ !

  • ಅಲ್ಪಸಂಖ್ಯಾತರ ಮತವನ್ನು ಪರಿಗಣಿಸಿ ಕೇರಳ ಸರಕಾರದಿಂದ ಪುನರ್ವಿಚಾರ

ತಿರುವನಂತಪುರಮ್ (ಕೇರಳ) – ಕೇರಳದ ಖಾಸಗಿ ಕ್ರೈಸ್ತ ಮತ್ತು ಮುಸ್ಲಿಂ ಶಾಲೆಗಳು ಪಠ್ಯಕ್ರಮವನ್ನು ವಿರೋಧಿಸಲು ಸಿದ್ಧರಾಗುತ್ತಿವೆ. ರಾಜ್ಯ ಸರಕಾರ ಕಡ್ಡಾಯಗೊಳಿಸಲು ಪ್ರಯತ್ನಿಸುತ್ತಿರುವ ಹೆಚ್ಚುವರಿ ಪುಸ್ತಕದಲ್ಲಿ ಡಾರ್ವಿನ ಸಿದ್ಧಾಂತದ ಮಾಹಿತಿಯನ್ನು ನೀಡಲಾಗಿದೆ ಎಂದು ಅದನ್ನು ಬಲವಾಗಿ ವಿರೋಧಿಸುತ್ತಿವೆ. ಕೇಂದ್ರ ಸರಕಾರವು ಕೆಲವು ದಿನಗಳ ಹಿಂದೆ `ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ತು’ (ಎನ್.ಸಿ.ಇ.ಆರ್.ಟಿ.) ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿದ ಬಳಿಕ ಕೇರಳ ಸರಕಾರವು ಹೆಚ್ಚುವರಿ ಪುಸ್ತಕವನ್ನು ಪ್ರಕಟಿಸಲಿದೆಯೆಂದು ತಿಳಿಸಿ ಕೇಂದ್ರ ಸರಕಾರ ಕೈಬಿಟ್ಟಿರುವ ವಿಷಯವನ್ನು ಕಲಿಸಲು ಘೋಷಿಸಿದೆ.

1. ಕೇಂದ್ರಸರಕಾರವು ಪಠ್ಯಕ್ರಮದಿಂದ ಮೊಗಲರ ಇತಿಹಾಸ, 2002 ರ ಗುಜರಾತ ಗಲಭೆ ಮತ್ತು `ಡಾರ್ವಿನ ಸಿದ್ಧಾಂತ’ ಈ ವಿಷಯಗಳನ್ನು ಕೈಬಿಟ್ಟಿತ್ತು.

2. ಇದಕ್ಕೆ ಕೇರಳದ ಶಾಳೆಯ ಶಿಕ್ಷಣ ಸಚಿವ ವಿ. ಶಿವನಕುಟ್ಟಿ ಇವರು, ಕೇರಳದಲ್ಲಿ ಹೆಚ್ಚುವರಿ ಪುಸ್ತಕದ ಮಾಧ್ಯಮದಿಂದ ಮೇಲಿನ ವಿಷಯವನ್ನು ಕಲಿಸಲಾಗುವುದು ಎಂದು ಘೋಷಿಸಿದ್ದಾರೆ. ಇದು ರಾಜ್ಯದ ಪಠ್ಯಕ್ರಮದ ಭಾಗವಾಗಿರಲಿದೆ ಮತ್ತು ವಿದ್ಯಾರ್ಥಿಗಳಿಗೆ ಅದರ ಅಭ್ಯಾಸ ಮಾಡುವುದು ಕಡ್ಡಾಯವಾಗಿರಲಿದೆಯೆಂದು ಹೇಳಿದ್ದಾರೆ.

3. ಕಮ್ಯುನಿಸ್ಟ ಸರಕಾರದ ಈ ನಿರ್ಣಯಕ್ಕೆ ಕ್ರೈಸ್ತ ಮತ್ತು ಮುಸಲ್ಮಾನರು ವಿರೋಧಿಸಿದ್ದಾರೆ. ಅಲ್ಪಸಂಖ್ಯಾತರ ಮತಗಳನ್ನು ಪರಿಗಣಿಸಿ ರಾಜ್ಯ ಸರಕಾರ ಹೆಚ್ಚುವರಿ ಪುಸ್ತಕವನ್ನು ಜಾರಿಗೊಳಿಸುವ ಬಗ್ಗೆ ಪುನರ್ವಿಚಾರ ಮಾಡುತ್ತಿರುವ ಮಾಹಿತಿ ದೊರಕಿದೆ.

4. ಕೇರಳದಲ್ಲಿ ಹೆಚ್ಚಿನ ಶಾಲೆಗಳು ಕ್ರೈಸ್ತ ಮತ್ತು ಮುಸಲ್ಮಾನ ಸಂಸ್ಥೆಗಳು ನಡೆಸುತ್ತಿದೆ. ಮೊಗಲರ ಇತಿಹಾಸ ಮತ್ತು ಗುಜರಾತ ಗಲಭೆಗೆ ಸಂಬಂಧಿಸಿರುವ ಪಾಠವನ್ನು ಕಲಿಸುವ ಬಗ್ಗೆ ಅವರಿಗೆ ಆಕ್ಷೇಪಣೆಯಿಲ್ಲ; `ಡಾರ್ವಿನ ಸಿದ್ಧಾಂತ’ಗಳ ಮೇಲೆ ಅವರು ಗಂಭೀರವಾಗಿ ಆಕ್ಷೇಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸಿದ್ಧಾಂತ ಬೈಬಲ್ ಮತ್ತು ಕುರಾನಗಳಲ್ಲಿ ವರ್ಣಿಸಿರುವ ಮನುಷ್ಯನ ಉತ್ಪತ್ತಿಯ ವಿರುದ್ಧವಿದೆಯೆಂದು ತಿಳಿಯಲಾಗುತ್ತಿದೆ. ಇದರಲ್ಲಿ ಪೃಥ್ವಿಯ ಮೇಲೆ ಈಶ್ವರನ ಅಸ್ತಿತ್ವವನ್ನು ನಿರಾಕರಿಸಲಾಗಿದೆ. ಇದರಿಂದಲೇ ಕ್ರೈಸ್ತ ಮತ್ತು ಮುಸಲ್ಮಾನರು ಇದನ್ನು ವಿರೋಧಿಸಿದ್ದಾರೆ.

5. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರು ಈ ಪ್ರಕರಣದ ಹೆಚ್ಚುತ್ತಿರುವ ವಿರೋಧದಿಂದಾಗಿ ಮೌನ ವಹಿಸಿದ್ದಾರೆ. (ಕಮ್ಯುನಿಸ್ಟ ಮುಖ್ಯಮಂತ್ರಿಗಳ ಮುಸಲ್ಮಾನರು ಮತ್ತು ಕ್ರೈಸ್ತರ ಬಗೆಗಿನ ಪ್ರೀತಿಯ ಮುಖವಾಡ ಬಹಿರಂಗ ! – ಸಂಪಾದಕರು)

`ಡಾರ್ವಿನ ಸಿದ್ಧಾಂತ’ ಏನಿದೆ ?

ಚಾರ್ಲ್ಸ ಡಾರ್ವಿನ ಹೆಸರಿನ ವಿಜ್ಞಾನಿ ಮಂಡಿಸಿರುವ ಸಿದ್ಧಾಂತವು ಜೈವಿಕ ವಿಕಾಸದ ಸಂದರ್ಭದ್ದಾಗಿದೆ. ಈ ಸಿದ್ಧಾಂತಕ್ಕೆ ಅನುಗುಣವಾಗಿ ಮನುಷ್ಯ ಮತ್ತು ಜೀವ-ಜಂತುಗಳ ಪೂರ್ವಜರು ಒಬ್ಬರೇ ಆಗಿದ್ದಾರೆ. ಪ್ರಕೃತಿಯ ಕ್ರಮೇಣ ಬದಲಾವಣೆಯ ಮಾಧ್ಯಮದಿಂದ ವಿಕಾಸವಾಗುತ್ತದೆಯೆಂದು ಡಾರ್ವಿನ ಹೇಳುತ್ತಾನೆ. ಇದರಲ್ಲಿ ಈಶ್ವರನ ಸಂಕಲ್ಪವು ಜೀವಸೃಷ್ಟಿಯ ನಿರ್ಮಾಣವಾಗಿದೆಯೆಂದು ಎಲ್ಲಿಯೂ ಉಲ್ಲೇಖಿಸಿರುವುದಿಲ್ಲ.

ಸಂಪಾದಕರ ನಿಲುವು

ಕಮ್ಯುನಿಸ್ಟ ಸರಕಾರಕ್ಕೆ ಹಿಂದೂಗಳ ಮತಗಳ ಬೆಲೆಯಿಲ್ಲ, ಎನ್ನುವದೇ ಇದರಿಂದ ಸಿದ್ಧವಾಗುತ್ತದೆ. ಈಗ `ಮೊಗಲರ ಇತಿಹಾಸವನ್ನು ಮರಳಿ ಕಲಿಸುವ ಅವಶ್ಯಕತೆಯಿಲ್ಲ’ ಇದಕ್ಕಾಗಿ ಅಲ್ಲಿಯ ಹಿಂದೂಗಳು ಸಂಘಟಿತರಾಗಿ ಕಮ್ಯುನಿಸ್ಟಗಳ ಮೇಲೆ ಒತ್ತಡ ಹೇರಬೇಕು !