`ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ವಿವಿಧ ವೈಶಿಷ್ಟ್ಯಗಳು ಅವರ ಛಾಯಾಚಿತ್ರಗಳಿಂದ ಕಂಡುಬರುತ್ತಿರುತ್ತವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿನ ಹೆಚ್ಚುತ್ತಿರುವ ನಿರ್ಗುಣ ತತ್ತ್ವದಿಂದ ಅವರ ದೇಹದಲ್ಲಿ ಆಗುತ್ತಿರುವ ಬುದ್ಧಿಗೆ ಮೀರಿದ ಬದಲಾವಣೆಗಳು ಅವರ ಛಾಯಾಚಿತ್ರಗಳ ಮಾಧ್ಯಮದಿಂದ ಕಳೆದ ಕೆಲವು ವರ್ಷಗಳಿಂದ ಕಂಡುಬಂದವು. ಸುಮಾರು ೨೦೧೬ ರಲ್ಲಿ ಛಾಯಾಚಿತ್ರಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಕೃತಿಯು ಇತರರ ತುಲನೆಯಲ್ಲಿ ಅಸ್ಪಷ್ಟ ಮತ್ತು ಮಸುಕಾಗಿ ಕಾಣಿಸುತ್ತದೆ ಎಂಬುದು ಸಾಧಕರ ಗಮನಕ್ಕೆ ಬಂದಿತು. ವಾಸ್ತವದಲ್ಲಿ ಅವರ ಛಾಯಾಚಿತ್ರಗಳನ್ನು ಯಾವ ಛಾಯಾಚಿತ್ರಕದಿಂದ (ಕ್ಯಾಮೆರಾದಿಂದ) ತೆಗೆಯಲಾಗುತ್ತದೆಯೋ, ಅವು ಉಚ್ಚಗುಣಮಟ್ಟದ್ದಾಗಿವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿರುವ ಛಾಯಾಚಿತ್ರಗಳಲ್ಲಿನ ಇತರ ವ್ಯಕ್ತಿಗಳು, ಸಾಧಕರು ಮತ್ತು ಸಂತರು ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಾರೆ; ಕೇವಲ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮಾತ್ರ ಮಸುಕಾಗಿ ಅಥವಾ ಅಸ್ಪಷ್ಟ ಕಾಣಿಸುತ್ತಾರೆ ಇದರ ಅಧ್ಯಯನವನ್ನು ಮಾಡಲು ನಾವು ಛಾಯಾಚಿತ್ರವನ್ನು ತೆಗೆಯುವ ಸಂದರ್ಭದಲ್ಲಿನ ತಾಂತ್ರಿಕ ಕಾರಣಗಳ ಅಧ್ಯಯನವನ್ನೂ ಮಾಡಿದೆವು; ಆದರೆ ಬೆಳಕಿನ ವ್ಯವಸ್ಥೆ, ಛಾಯಾಚಿತ್ರಕ (ಕ್ಯಾಮೆರಾ), ಅದರ `ಲೆನ್ಸ್’, ಛಾಯಾಚಿತ್ರಕಾರನು ಛಾಯಾಚಿತ್ರಗಳನ್ನು ತೆಗೆಯುವಾಗ ತೆಗೆದುಕೊಳ್ಳಬೇಕಾದ ಕಾಳಜಿ ಹೀಗೆ ಎಲ್ಲ ಸ್ತರಗಳಲ್ಲಿ ಯಾವುದೇ ತಪ್ಪುಗಳು ಕಂಡುಬರಲಿಲ್ಲ. ಯಾವುದೇ ತಾಂತ್ರಿಕ ಅಡಚಣೆಗಳು ಇಲ್ಲದಿರುವಾಗಲೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಛಾಯಾಚಿತ್ರವು ಅಸ್ಪಷ್ಟವಾಗಿ ಕಾಣಲು ಮುಂದಿನ ಬುದ್ಧಿಗೆ ಮೀರಿದ ಅಂಶಗಳು ಕಾರಣವಾಗಿವೆ ಎಂಬುದು ನಮ್ಮ ಗಮನಕ್ಕೆ ಬಂದವು. ಮೊದಲು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರೇ ಈ ಕುರಿತು ನಮಗೆ ಅರಿವು ಮಾಡಿಕೊಟ್ಟರು.
೧. ಸ್ವತಃದ ಛಾಯಾಚಿತ್ರಗಳು ಅಸ್ಪಷ್ಟವಾಗಿ ಕಾಣಿಸುವ ಸಂದರ್ಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು, ಅವರು ಪ್ರತ್ಯಕ್ಷದಲ್ಲಿಯೂ ಹಾಗೆಯೇ ಕಾಣಿಸುತ್ತಿರುವ ಬಗ್ಗೆ ಸಾಧಕರಿಂದ ಮಾಡಿಸಿಕೊಂಡ ಪ್ರಯೋಗ !
೧ ಅ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಗ್ರಂಥಗಳಿಗಾಗಿ ಛಾಯಾಚಿತ್ರಗಳಲ್ಲಿ ಸುಧಾರಣೆ ಮಾಡುವಾಗ ಇತರರ ತುಲನೆಯಲ್ಲಿ ಅವರ ಸ್ವತಃದ ಛಾಯಾಚಿತ್ರಗಳು ಅಸ್ಪಷ್ಟವಾಗಿ ಕಾಣಿಸುತ್ತಿರುವುದರ ಬಗ್ಗೆ ಅರಿವು ಮಾಡಿಕೊಡುವುದು : `೨೦೧೮-೨೦೧೯ ರಲ್ಲಿ `ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಛಾಯಾಚಿತ್ರಮಯ ಜೀವನದರ್ಶನ’ ಎಂಬ ಗ್ರಂಥಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವಿವಿಧ ಛಾಯಾಚಿತ್ರಗಳ ಸಂದರ್ಭದಲ್ಲಿನ ಸೇವೆ ನಡೆದಿತ್ತು. ಆಗ ಕೆಲವು ಛಾಯಾಚಿತ್ರಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅಸ್ಪಷ್ಟ ಕಾಣಿಸುತ್ತಿದ್ದರು. ಆದುದರಿಂದ ಅವರು ನಮಗೆ ಛಾಯಾಚಿತ್ರಗಳಲ್ಲಿ ಸುಧಾರಣೆಯನ್ನು ಮಾಡಲು ಹೇಳುತ್ತಿದ್ದರು. ಛಾಯಾಚಿತ್ರಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಸುಸ್ಪಷ್ಟವಾಗಿ ಕಾಣಿಸಬೇಕೆಂದು ನಮಗೆ ಗಣಕಯಂತ್ರದಲ್ಲಿ ಅವುಗಳ ಮೇಲೆ ಸುಧಾರಣೆಯನ್ನು ಮಾಡಬೇಕಾಗುತ್ತಿತ್ತು. ಆ ಕಾಲದಲ್ಲಿ ಛಾಯಾಚಿತ್ರಗಳ ಸಂದರ್ಭದಲ್ಲಿ ಸೇವೆಯನ್ನು ಮಾಡುವಾಗ ೨೦೧೬ ರ ನಂತರ ತೆಗೆದ ಎಲ್ಲ ಛಾಯಾಚಿತ್ರಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮುಖವು ಛಾಯಾಚಿತ್ರದಲ್ಲಿನ ಇತರ ಸಾಧಕರ ತುಲನೆಯಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತದೆ ಎಂಬುದು ಗಮನಕ್ಕೆ ಬಂದಿತು. ವಿಶೇಷವಾಗಿ ಅವರ ದೇಹದ ಅಂಚು ಅಸ್ಪಷ್ಟವಾಗಿ ಕಾಣಿಸುತ್ತದೆ. ಕೆಲವು ಛಾಯಾಚಿತ್ರಗಳಲ್ಲಿ ಅವರ ಕೈಗಳು ಅವರ ಮುಖದ ತುಲನೆಯಲ್ಲಿ ಹೆಚ್ಚು ಅಸ್ಪಷ್ಟವಾಗಿ ಕಾಣಿಸುತ್ತವೆ, ಮತ್ತು ಕೆಲವು ಛಾಯಾಚಿತ್ರಗಳಲ್ಲಿ ಅವರ ಕಣ್ಣುಗಳು ಮುಖದ ತುಲನೆಯಲ್ಲಿ ಹೆಚ್ಚು ಅಸ್ಪಷ್ಟವಾಗಿ ಕಾಣಿಸುತ್ತವೆ.’ – ಕು. ಭಾವಿನಿ ಕಾಪಡಿಯಾ ಮತ್ತು ಸೌ. ಜಾಹ್ನವಿ ಶಿಂದೆ, ಫೋಂಡಾ, ಗೋವಾ. (೧೮.೭.೨೦೨೨)
೧ ಆ. ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ದೈನಿಕದಲ್ಲಿನ ಸಾಧಕರ ಛಾಯಾಚಿತ್ರಗಳನ್ನು ತೋರಿಸಿ ಅದೇ ದೈನಿಕದಲ್ಲಿನ ಅದೇ ಪುಟದ ಮೇಲಿನ ತಮ್ಮ ಛಾಯಾಚಿತ್ರ ಮಾತ್ರ ಅಸ್ಪಷ್ಟವಾಗಿರುವುದನ್ನು ಗಮನಕ್ಕೆ ತಂದು ಕೊಡುವುದು : `ವರ್ಷ ೨೦೧೯ ರಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ದೈನಿಕ `ಸನಾತನ ಪ್ರಭಾತ’ದಲ್ಲಿ ಮುದ್ರಣವಾಗಿ ಬಂದ ತಮ್ಮ ಛಾಯಾಚಿತ್ರ ಮತ್ತು ಅದೇ ಪುಟದ ಮೇಲಿನ ಇತರ ಸಾಧಕರ ಛಾಯಾಚಿತ್ರಗಳನ್ನು ತೋರಿಸಿ `ಆ ಸಾಧಕರಂತೆ ನನ್ನ ಛಾಯಾ ಚಿತ್ರವು ಸುಸ್ಪಷ್ಟ ಕಾಣಿಸುವುದಿಲ್ಲ’, ಎಂಬ ಸಂದೇಶವನ್ನು ನಮಗೆ ಕಳುಹಿಸುತ್ತಿದ್ದರು. ನಾವು `ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಛಾಯಾಚಿತ್ರದಲ್ಲಿ ಏನಾದರೂ ತಪ್ಪುಗಳಿವೇ ? ಎಂಬುದರ ಅಧ್ಯಯನವನ್ನು ಮಾಡುತ್ತಿದ್ದೆವು. ಛಾಯಾಚಿತ್ರಗಳು ಒಳ್ಳೆಯ ರೀತಿಯಿಂದ ಮತ್ತು ಸುಸ್ಪಷ್ಟವಾಗಿ ಮುದ್ರಣವಾಗಿ ಬರಲು ಅದರಲ್ಲಿ ಆವಶ್ಯಕವಾಗಿರುವ ಸುಧಾರಣೆಗಳನ್ನೂ ಮಾಡುತ್ತಿದ್ದೆವು; ಆದರೂ ಮೂಲ ಛಾಯಾಚಿತ್ರವು ಅಧಿಕ ಸುಸ್ಪಷ್ಟವಾಗುತ್ತಿರಲಿಲ್ಲ. ಈಗಲೂ ಆಗಾಗ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು `ನನ್ನ ಛಾಯಾಚಿತ್ರವು ಸುಸ್ಪಷ್ಟವಾಗಿ ಮುದ್ರಣವಾಗಿ ಬಂದಿಲ್ಲ’, ಎಂದು ತಿಳಿಸುತ್ತಾರೆ.’ – ಕು. ಪೂಜಾ ನಲಾವಡೆ (ಈಗಿನ ಸೌ. ಆನಂದಿ ಬಧಾಲೆ) ಮತ್ತು ಕು. ಸಾಯಲಿ ಡಿಂಗರೆ (೧೮.೭.೨೦೨೨)
೧ ಇ. ಚಿತ್ರೀಕರಣದಲ್ಲಿ, ಹಾಗೆಯೇ ಛಾಯಾಚಿತ್ರಗಳಲ್ಲಿ ತಮ್ಮ ದೇಹದ ಅಂಚು ಅಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳುವುದು ಮತ್ತು ತಾವೇ ಪ್ರಯೋಗವನ್ನು ಮಾಡಿಸಿಕೊಂಡು ಅದು ಹಾಗೆಯೇ ಇರುವುದರ ಬಗ್ಗೆ ಖಚಿತಪಡಿಸುವುದು : `ಕೆಲವು ವರ್ಷಗಳ ಹಿಂದೆ ನಾವು ಮಾಡಿದ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಚಿತ್ರೀಕರಣವನ್ನು ಪರಿಶೀಲಿಸು ವಾಗ ಅವರು `ನನ್ನ ಮುಖ ಚಿತ್ರೀಕರಣದಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತದೆ’, ಎಂದು ತಿಳಿಸುತ್ತಿದ್ದರು. ಈ ಕುರಿತು ನಾವು ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಕೂಲಂಕುಷವಾಗಿ ಆಯಾ ಸಮಯದಲ್ಲಿ ನೋಡುತ್ತಿದ್ದೆವು; ಆದರೆ ನಮಗೆ ಯಾವುದೇ ತಾಂತ್ರಿಕ ಅಡಚಣೆಗಳು ಗಮನಕ್ಕೆ ಬರುತ್ತಿರಲಿಲ್ಲ. `ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಮುಖವು ಅಸ್ಪಷ್ಟವಾಗಿ ಏಕೆ ಕಾಣಿಸುತ್ತದೆ ?’, ಎಂಬುದು ಜನವರಿ ೨೦೨೦ ರಲ್ಲಿ ಅವರ ಒಂದು ಚಿತ್ರೀಕರಣವನ್ನು ಮಾಡುತ್ತಿರುವಾಗ ತಿಳಿಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದ ಒಂದು ಚಿತ್ರೀಕರಣ ನಡೆದಿತ್ತು. ಆ ಸಮಯದಲ್ಲಿ ಅದರ ಕೆಲವು `ಶಾಟ್ಸ’ (ಭಾಗ) ಗಳನ್ನು ಅವರಿಂದ ಪರಿಶೀಲಿಸಿಕೊಳ್ಳುವಾಗ ಅವರೇ ಸ್ವತಃ ಚಿತ್ರೀಕರಣದಲ್ಲಿ ಮಸುಕಾಗಿ ಕಾಣಿಸುತ್ತಿದ್ದೇನೆ ಎಂದು ಹೇಳಿದರು. ಆ ಸಮಯದಲ್ಲಿ ನಾವು ವಿಡಿಯೋ ಕ್ಯಾಮೆರಾದ ಎಲ್ಲ ತಾಂತ್ರಿಕ ವಿಷಯಗಳನ್ನು ಪರಿಶೀಲಿಸಿದೆವು; ಆದರೆ ಆ ಕುರಿತು ಯಾವುದೇ ತಪ್ಪು ಆಗಿರಲಿಲ್ಲ. ಆ ಸಮಯದಲ್ಲಿ ಅವರು ಪ್ರಯೋಗವೆಂದು ಅಲ್ಲಿ ಸೇವೆಯನ್ನು ಮಾಡುತ್ತಿರುವ ಓರ್ವ ಸಾಧಕಿಯೊಂದಿಗೆ ತಮ್ಮ ಚಿತ್ರೀಕರಣವನ್ನು ಮಾಡಲು ಹೇಳಿದರು. ಆ ಸಮಯದಲ್ಲಿ ಚಿತ್ರೀಕರಣದಲ್ಲಿ ಸಾಧಕಿಯು ಸುಸ್ಪಷ್ಟವಾಗಿ ಕಾಣಿಸುತ್ತಿದ್ದಳು; ಆದರೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅಸ್ಪಷ್ಟವಾಗಿ ಕಾಣಿಸುತ್ತಿದ್ದರು. `ಚಿತ್ರೀಕರಣದಲ್ಲಿ ಅವರು ಅಸ್ಪಷ್ಟ ಕಾಣಿಸುತ್ತಾರೆ ಎಂದಾದರೆ, ಛಾಯಾಚಿತ್ರದಲ್ಲಿ ಅವರು ಹೇಗೆ ಕಾಣಿಸುತ್ತಾರೆ ?’, ಎಂದು ನಾವು ಅವರ ಪ್ರತ್ಯಕ್ಷ ಛಾಯಾಚಿತ್ರವನ್ನು ತೆಗೆದು ಪರಿಶೀಲಿಸಿ ನೋಡಿದೆವು. ಆಗ ಛಾಯಾಚಿತ್ರದಲ್ಲಿಯೂ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅಸ್ಪಷ್ಟವಾಗಿಯೇ ಕಾಣಿಸುತ್ತಿದ್ದರು. ಛಾಯಾಚಿತ್ರಕದಲ್ಲಿ (ಕ್ಯಾಮೆರಾದಲ್ಲಿ) ಯಾವ ಅಡಚಣೆಗಳೂ ಇಲ್ಲ, ಎಂಬುದನ್ನು ಖಚಿತಪಡಿಸಿದ ನಂತರ ಅವರು ಇನ್ನೂ ಕೆಲವು ಪ್ರಯೋಗಗಳನ್ನು ಮಾಡಿ ನೋಡಿದರು. `ಎಡಗೈ ಎಷ್ಟು ಅಸ್ಪಷ್ಟವಾಗಿ ಕಾಣಿಸುತ್ತದೆ ?’, `ಬಲಗೈ ಎಷ್ಟು ಪ್ರಮಾಣದಲ್ಲಿ ಅಸ್ಪಷ್ಟವಾಗಿ ಕಾಣಿಸುತ್ತದೆ ?’, ಎಂಬುದರ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಈ ರೀತಿ ಬೇರೆ ಬೇರೆ ಪ್ರಯೋಗಗಳನ್ನು ಮಾಡಿ ಅವರ ಶರೀರದ ಯಾವ ಯಾವ ಅವಯವಗಳು ಎಷ್ಟು ಪ್ರಮಾಣದಲ್ಲಿ ಅಸ್ಪಷ್ಟ ಕಾಣಿಸುತ್ತವೆ, ಎಂಬುದರ ಅಧ್ಯಯನವನ್ನು ಮಾಡಿದರು.
ಆ ಪ್ರಯೋಗಗಳಿಂದ, ಅವರ ಎಡಗೈ ಬಲಗೈನ ತುಲನೆಯಲ್ಲಿ ಹೆಚ್ಚು ಅಸ್ಪಷ್ಟ ಕಾಣಿಸುತ್ತದೆ ಎಂಬುದು ಗಮನಕ್ಕೆ ಬಂದಿತು. ವಿಶೇಷವೆಂದರೆ ಆ ಸಮಯದಲ್ಲಿ ನಡೆಯುತ್ತಿರುವ ತುರ್ತು ಚಿತ್ರೀಕರಣವನ್ನು ನಿಲ್ಲಿಸಿ ಅವರು ನಮ್ಮಿಂದ ಈ ಪ್ರಯೋಗಗಳನ್ನು ಮಾಡಿಸಿಕೊಂಡಿದ್ದರು.’ – ಶ್ರೀ. ಕೇದಾರ ನಾಯಿಕ ಮತ್ತು ಶ್ರೀ. ಅತುಲ ಬಧಾಲೆ, ಸನಾತನ ಆಶ್ರಮ, ಗೋವಾ. (೧೮.೭.೨೦೨೨
೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇಹದಲ್ಲಿನ ನಿರ್ಗುಣ ತತ್ತ್ವ ಹೆಚ್ಚುತ್ತಿರುವುದರಿಂದ ಅವರು ಅಸ್ಪಷ್ಟ ಕಾಣಿಸುತ್ತಿದ್ದಾರೆ ಎಂಬುದು ಗಮನಕ್ಕೆ ಬರುವುದು
ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಛಾಯಾಚಿತ್ರವು ಅಸ್ಪಷ್ಟ ಅಥವಾ ಮಸುಕು ಕಾಣಿಸುವುದರ ಸಂದರ್ಭದಲ್ಲಿ ಅವರೇ ಅಧ್ಯಯನವನ್ನು ಮಾಡಿಸಿಕೊಂಡ ನಂತರ `ಅದರ ಹಿಂದೆ ಆಧ್ಯಾತ್ಮಿಕ ಕಾರಣವಿರಬಹುದು’, ಎಂಬುದು ನಮ್ಮ ಗಮನಕ್ಕೆ ಬಂದಿತು. `ಕಾಲಕ್ಕನುಸಾರ ಮತ್ತು ಕಾರ್ಯದ ಆವಶ್ಯಕತೆಗನುಸಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಈಗ ವೇಗವಾಗಿ ನಿರ್ಗುಣದ ಕಡೆಗೆ ಮಾರ್ಗಕ್ರಮಣ ಮಾಡುತ್ತಿದ್ದಾರೆ. ಆದುದರಿಂದ ಅವರ ದೇಹ ಅಸ್ಪಷ್ಟ ಕಾಣಿಸುವುದು ಮತ್ತು ಅವರ ದೇಹದ ಅಂಚು ಮಸುಕಾಗಿ ಕಾಣಿಸುವುದು’, ಎಂಬಂತಹ ಬದಲಾವಣೆಗಳು ಕಂಡುಬರುತ್ತಿವೆ’, ಎಂಬುದು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಅಲೌಕಿಕ ಆಧ್ಯಾತ್ಮಿಕ ವೈಶಿಷ್ಟ್ಯ ಈ ಅಧ್ಯಯನದಿಂದ ಗಮನಕ್ಕೆ ಬಂದಿತು. ಕೆಲವು ಛಾಯಾಚಿತ್ರಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕಣ್ಣುಗಳು ಇತರ ಅವಯವಗಳ ತುಲನೆಯಲ್ಲಿ ಹೆಚ್ಚು ಅಸ್ಪಷ್ಟವಾಗಿ ಕಾಣಿಸುತ್ತವೆ ಮತ್ತು ಕೆಲವೊಂದು ಛಾಯಾಚಿತ್ರಗಳಲ್ಲಿ ಅವರ ಕೈಗಳು ಹೆಚ್ಚು ಮಸುಕಾಗಿ ಕಾಣಿಸುತ್ತವೆ. ಈ ಸಂದರ್ಭದಲ್ಲಿ ಸನಾತನದ ಸೂಕ್ಷ್ಮ ಜ್ಞಾನ ಪಡೆಯುವ ಸಾಧಕರಿಗೆ ಈಶ್ವರನಿಂದ ಲಭಿಸಿದ ಜ್ಞಾನದಲ್ಲಿಯೂ ಇದೇ ರೀತಿ ಉತ್ತರ ಬಂದಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಚಿತ್ರೀಕರಣದ ಸಾಧಕರಿಗೆ, `ಇತ್ತೀಚೆಗೆ ಚಿತ್ರೀಕರಣದಲ್ಲಿ ಮತ್ತು ಛಾಯಾಚಿತ್ರಗಳಲ್ಲಿ ನನ್ನ ಮುಖ ಅಸ್ಪಷ್ಟವಾಗಿ ಕಾಣಿಸುತ್ತದೆ, ಇದರಲ್ಲಿ ನಿಮ್ಮದೇನೂ ತಪ್ಪಿಲ್ಲ, ನನ್ನ ದೇಹ ನಿರ್ಗುಣದ ಕಡೆಗೆ ಮಾರ್ಗಕ್ರಮಣ ಮಾಡುತ್ತಿರುವುದರಿಂದ ನನ್ನಲ್ಲಿ ಈ ಆಧ್ಯಾತ್ಮಿಕ ಬದಲಾವಣೆಯಾಗುತ್ತಿದೆ,’ ಎಂದರು. ಸಂತರ ಕಣ್ಣುಗಳು, ಕೈಗಳು ಮತ್ತು ಚರಣಗಳಿಂದ ಅವರಲ್ಲಿ ಯಾವ ತತ್ತ್ವ ಹೆಚ್ಚು ಪ್ರಮಾಣದಲ್ಲಿ ಇರುತ್ತದೆಯೋ, ಅದು ದೊಡ್ಡ ಪ್ರಮಾಣದಲ್ಲಿ ಪ್ರಕ್ಷೇಪಿತವಾಗುತ್ತಿರುತ್ತದೆ. ಈಗ ಸಚ್ಚಿದಾನಂದ ಪರಬ್ರಹ್ಮ ಡಾ.ಆಠವಲೆಯವರ ದೇಹದಿಂದ ನಿರ್ಗುಣ ತತ್ತ್ವ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸುತ್ತಿರುವುದರಿಂದ ಅನೇಕ ಛಾಯಾಚಿತ್ರಗಳಲ್ಲಿ ಅವರ ಮುಖ, ಕೈಗಳು ಮತ್ತು ಚರಣಗಳು ಹೆಚ್ಚು ಅಸ್ಪಷ್ಟವಾಗಿರುವುದು ಅರಿವಾಗುತ್ತದೆ.
೩. ವಿವಿಧ ನಾಡಿಪಟ್ಟಿಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ನಿರ್ಗುಣ ಸ್ಥಿತಿಯ ಬಗ್ಗೆ ಬಂದಿರುವ ಉಲ್ಲೇಖ !
೩ ಅ. ಭೃಗು ಜೀವನಾಡಿ : ೨೦೧೯ ರಲ್ಲಿ ಚೆನ್ನೈ (ತಮಿಳನಾಡು) ಯಲ್ಲಿನ ಭೃಗು ಜೀವನಾಡಿವಾಚಕರಾದ ಶ್ರೀ. ಸೆಲ್ವಮ್ ಗುರೂಜಿಯವರ ಮಾಧ್ಯಮದಿಂದ ಮಹರ್ಷಿ ಭೃಗು ಇವರೂ `ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಜೀವನಮುಕ್ತರಾಗಿದ್ದಾರೆ, ಆದರೂ ಸಾಧಕರಿಗಾಗಿ ಅವರು ಕೊನೆಯ ಉಸಿರು ಇರುವವರೆಗೂ ಕಾರ್ಯನಿರತರಾಗಿರುವರು. ಮುಂದೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅತ್ಮದೊಂದಿಗೆ ಹೆಚ್ಚೆಚ್ಚು ಏಕರೂಪವಾಗಿ, ಅಂದರೆ ಹೆಚ್ಚೆಚ್ಚು ನಿರ್ಗುಣ ಸ್ಥಿತಿಯಲ್ಲಿ ಕಾರ್ಯವನ್ನು ಮಾಡಲಿದ್ದಾರೆ’, ಎಂದು ಹೇಳಿದ್ದಾರೆ.
೩ ಆ. ಸಪ್ತರ್ಷಿ ಜೀವನಾಡಿ : ಸಪ್ತರ್ಷಿಗಳು ಸಹ ೨೦೧೭ ರಲ್ಲಿಯೇ `ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಮುಂದೆ ಸಮಾಧಿ-ಅವಸ್ಥೆಯಲ್ಲಿರುವರು. ಆಗ ಅವರು ನಿರ್ಗುಣ ಸ್ಥಿತಿಯಲ್ಲಿ ಕಾರ್ಯವನ್ನು ಮಾಡುವರು. ಕಾರ್ಯದಂತೆ ಅವರ ಅವಸ್ಥೆ ಬದಲಾಗುವುದು’, ಎಂದು ಹೇಳಿದ್ದಾರೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಇತ್ತೀಚೆಗೆ ತೆಗೆದ ಛಾಯಾಚಿತ್ರಗಳನ್ನು ನೋಡಿದರೆ, ಮಹರ್ಷಿಗಳ ವಚನದ ಅನುಭವ ಬರುತ್ತದೆ. `ಉಚ್ಚ ಆಧ್ಯಾತ್ಮಿಕ ಮಟ್ಟವಿರುವ ಸಂತರ ದೇಹದಲ್ಲಿ ಯಾವ ರೀತಿ ಬುದ್ಧಿಅಗಮ್ಯ ಬದಲಾವಣೆಗಳಾಗುತ್ತವೆ’, ಎಂಬುದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾಧ್ಯಮದಿಂದ ಅಖಿಲ ಮನುಕುಲಕ್ಕೆ ತಿಳಿಯುತ್ತಿದೆ. ಅವರ ಮಾಧ್ಯಮದಿಂದ ಅಧ್ಯಾತ್ಮ ದಲ್ಲಿನ ಈ ಹೊಸ ಹೊಸ ಸಿದ್ಧಾಂತಗಳನ್ನು ನಾವು ಪ್ರತ್ಯಕ್ಷ ಅನು ಭವಿಸುತ್ತಿದ್ದೇವೆ. ಇದಕ್ಕಾಗಿ ನಾವೆಲ್ಲ ಸಾಧಕರು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇವೆ.’
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೭.೨೦೨೨)