ಸನಾತನದ ಸಾಧಕರು ಮೋಕ್ಷಕ್ಕೆ ಹೋಗುವವರೆಗೆ ಪರಾತ್ಪರ ಗುರು ಡಾ. ಆಠವಲೆಯವರು ಅವರೊಂದಿಗಿರುವರು ! – ಸಪ್ತರ್ಷಿ

ಸಪ್ತರ್ಷಿಗಳು ಸನಾತನದ ಮೂವರು ಗುರುಗಳ (ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ) ಬಗ್ಗೆ ಸಪ್ತರ್ಷಿ ಜೀವನಾಡಿಪಟ್ಟಿಯ ನಾಡಿವಾಚನದಲ್ಲಿ ಸಪ್ತರ್ಷಿಗಳು ವರ್ಣಿಸಿರುವ ಮಹಿಮೆಗಳ ಗುಣಗಾನ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

೧. ಶಿಷ್ಯನಿಗೆ ತನ್ನ ಜೀವನದಲ್ಲಿ ಆವಶ್ಯಕವಿರುವುದನ್ನೇ ಗುರುಗಳು ಕೊಡುತ್ತಾರೆ !

`ಗುರುಗಳು ಶಿಷ್ಯನಿಗೆ ಆವಶ್ಯಕವಿರುವುದನ್ನೇ ಕೊಡುತ್ತಾರೆ. ಅವರು ಶಿಷ್ಯನ ಇಚ್ಛೆಯಂತೆ ಮಾಡುವುದಿಲ್ಲ. ಯಾವುದಾದರೊಬ್ಬ ಶಿಷ್ಯನ ಜೀವನದಲ್ಲಿ ಪ್ರಾರಬ್ಧಕ್ಕನುಸಾರ ವಿವಾಹವಾಗುವುದಿದ್ದರೆ ಅಥವಾ ಮಕ್ಕಳು ಆಗಲಿದ್ದರೆ, ಗುರುಗಳು ಅದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಶಿಷ್ಯನ ಜೀವನದಲ್ಲಿ ವಿವಾಹದಿಂದ ಅಥವಾ ಮಕ್ಕಳು ಆಗುವುದರಿಂದ ಸಾಧನೆಯಲ್ಲಿ ಅಡಚಣೆ ನಿರ್ಮಾಣವಾಗುವುದಿದ್ದರೆ, ಗುರುಗಳು ಶಿಷ್ಯನನ್ನು ಎಚ್ಚರಿಸುತ್ತಾರೆ. ಮನುಷ್ಯನು ದೇವಸ್ಥಾನಕ್ಕೆ ಹೋಗಿ ದೇವರಿಗೆ ಹರಕೆ ಹೊರುತ್ತಾನೆ; ಆದರೆ ಹರಕೆ ಪೂರ್ಣವಾದ ನಂತರ ಅವನು ದೇವರನ್ನು ಮರೆಯುತ್ತಾನೆ. ಗುರು-ಶಿಷ್ಯರ ವಿಷಯದಲ್ಲಿ ಹೀಗಿರುವುದಿಲ್ಲ. ಶಿಷ್ಯನಿಗೆ ಜೀವನದಲ್ಲಿ ಏನು ಆವಶ್ಯಕವಿದೆಯೋ, ಅದನ್ನು ಗುರುಗಳು ಕೊಡುತ್ತಾರೆ ಮತ್ತು ಈಶ್ವರಪ್ರಾಪ್ತಿಯಾಗುವವರೆಗೆ ಗುರುಗಳು ಶಿಷ್ಯನನ್ನು ಬಿಡುವುದಿಲ್ಲ. ಅದೇ ರೀತಿ ಪರಾತ್ಪರ ಗುರು ಡಾ. ಆಠವಲೆಯವರು ಸನಾತನದ ಸಾಧಕರು ಮೋಕ್ಷಕ್ಕೆ ಹೋಗುವ ವರೆಗೂ ಅವರ ಜೊತೆಯಲ್ಲಿರುವರು.

೨. ಶ್ರೀರಾಮ ಮತ್ತು ಶ್ರೀಕೃಷ್ಣ ಈ ಎರಡೂ ತತ್ತ್ವಗಳು ಪರಾತ್ಪರ ಗುರು ಡಾ. ಆಠವಲೆಯವರಲ್ಲಿದೆ

ನಾವು ಸಪ್ತರ್ಷಿಗಳು ಸನಾತನ ಸಂಸ್ಥೆಯ ಆರಂಭದ ಕಾಲಾವಧಿಯಲ್ಲಿ ಗುರುದೇವರ (ಪರಾತ್ಪರ ಗುರು ಡಾ. ಆಠವಲೆಯವರ) ಕ್ಷಾತ್ರತೇಜ ವನ್ನು `ಅವರ ವಾಣಿ ಮತ್ತು ಅವರ ಬರವಣಿಗೆ’ ಇವುಗಳ ಮಾಧ್ಯಮದಿಂದ ನೋಡಿದ್ದೇವೆ. ಅವರು ರಾಷ್ಟ್ರ ಮತ್ತು ಧರ್ಮದ ಮೇಲಾಗುವ ಆಘಾತಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದರು. ರಾಷ್ಟ್ರ ಮತ್ತು ಧರ್ಮದ ದುರ್ದೆಶೆಗೆ ಕಾರಣರಾದ ಎಲ್ಲರಿಗೂ ದೈನಿಕ `ಸನಾತನ ಪ್ರಭಾತ’ದ ಮಾಧ್ಯಮದಿಂದ ಮನಃಪೂರ್ವಕವಾಗಿ (ಆಗ್ರಹದಿಂದ) ಪ್ರಶ್ನೆಗಳನ್ನು ಕೇಳುತ್ತಿದ್ದರು. ಗುರುದೇವರು ಸಾಧಕರನ್ನು ಕ್ಷಾತ್ರತೇಜದಿಂದ ಹಂತಹಂತವಾಗಿ ರಾಮರಾಜ್ಯದ ಕಡೆ ತಂದಿದ್ದಾರೆ. ಸಾಧಕರು ಗುರುದೇವರಲ್ಲಿ ಒಂದೇ ಸಮಯದಲ್ಲಿ ಚಕ್ರವರ್ತಿ ಶ್ರೀರಾಮ ಮತ್ತು ಚಾಣಾಕ್ಷ ಶ್ರೀಕೃಷ್ಣನನ್ನು ನೋಡಿದ್ದಾರೆ. ಗುರುದೇವರು ಹಿಂದೂ ರಾಷ್ಟ್ರದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಕೆಲವೊಮ್ಮೆ ಸಾಧಕರಿಂದಲೂ ಮತ್ತು ಧರ್ಮಪ್ರೇಮಿಗಳಿಂದಲೂ ಉತ್ತರಿಸಲು ಸಾಧ್ಯವಾಗುವುದಿಲ್ಲ. ಇವೆಲ್ಲವುಗಳಿಂದ `ತ್ರೇತಾಯುಗದಲ್ಲಿ ರಾಮರಾಜ್ಯವನ್ನು ಸ್ಥಾಪಿಸಿದ ಪ್ರಭು ಶ್ರೀರಾಮ ಮತ್ತು ದ್ವಾಪರ ಯುಗದಲ್ಲಿ ಧರ್ಮಸಂಸ್ಥಾಪನೆಯನ್ನು ಮಾಡುವ ಪೂರ್ಣಾವತಾರ ಶ್ರೀಕೃಷ್ಣನೇ ಈಗಿನ ಕಲಿಯುಗದಲ್ಲಿ ಸನಾತನ ಸಂಸ್ಥೆಯ ಪರಾತ್ಪರ ಗುರು ಡಾ. ಆಠವಲೆಯವರ ರೂಪದಲ್ಲಿ ಬಂದಿದ್ದಾರೆ, ಇದರಲ್ಲಿ ಯಾವ ಸಂದೇಹವೂ ಇಲ್ಲ.

೩. ಸನಾತನ ಸಂಸ್ಥೆಯ ಪ್ರತಿಯೊಬ್ಬ ಸಾಧಕನನ್ನು ಪರಾತ್ಪರ ಗುರು ಡಾ. ಆಠವಲೆಯವರು ಹುಡುಕಿ ತೆಗೆದು ಶ್ರಮಪಟ್ಟು ತಯಾರಿಸಿದ್ದಾರೆ !

ಸನಾತನ ಸಂಸ್ಥೆ ಇತರ ರಾಷ್ಟ್ರ ಸೇವೆಗಳನ್ನು ಮಾಡುವ ಸಂಘಟನೆ ಅಥವಾ ರಾಜಕೀಯ ಪಕ್ಷ ಗಳಂತೆ ಇಲ್ಲ. ರಾಜಕೀಯ ಪಕ್ಷಗಳು ಹಣ ನೀಡಿ ಅಥವಾ ಏನಾದರೂ ಆಮಿಷ ನೀಡಿ ಜನರನ್ನು ಒಟ್ಟುಗೂಡಿಸುತ್ತವೆ. ಕೆಲವು ರಾಷ್ಟ್ರ ಸೇವೆಯನ್ನು ಮಾಡುವ ಸಂಘಟನೆಗಳು ಪದವಿ ಮತ್ತು ಹಣದ ಆಮಿಷ ತೋರಿಸಿ ಕಾರ್ಯಕರ್ತರನ್ನು ತಯಾರಿಸುತ್ತವೆ; ಆದರೆ ಸನಾತನ ಸಂಸ್ಥೆಯಲ್ಲಿ ಸೇವೆಯನ್ನು ಮಾಡುವ ಪ್ರತಿಯೊಬ್ಬ ಸಾಧಕನನ್ನು ಪರಾತ್ಪರ ಗುರು ಡಾ. ಆಠವಲೆಯವರು ಹುಡುಕಿ ತೆಗೆದು ಪರಿಶ್ರಮ ಪಟ್ಟು ತಯಾರಿಸಿದ್ದಾರೆ. ಸನಾತನ ಸಂಸ್ಥೆ ಮತ್ತು ಇತರ ಸಂಘಟನೆಗಳಲ್ಲಿ ಭೂಮಿ-ಆಕಾಶದಷ್ಟು ಅಂತರವಿದೆ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ತಯಾರಾದ ಸನಾತನ ಸಂಸ್ಥೆಯ ಸಾಧಕರಂತಹ ಸಾಧಕರು ಬೇರೆ ಎಲ್ಲಿಯೂ ಇಲ್ಲ.

೪. ಸಪ್ತರ್ಷಿಗಳು ವರ್ಣಿಸಿದ ಗುರುದೇವರ ಮಹಿಮೆ !

ಕಲಿಯುಗದ ಸದ್ಯದ ಕಾಲದಲ್ಲಿ ಅಧ್ಯಾತ್ಮವನ್ನು ವಿರೋಧಿಸಲೆಂದೇ ಜನ್ಮಪಡೆದ ಕೆಲವು ಜನರು ಧರ್ಮಪ್ರೇಮಿಗಳನ್ನು ಪೀಡಿಸುವ (ತೊಂದರೆಗಳನ್ನು ಕೊಡುವ) ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಇಂತಹ ಘೋರ ಕಲಿಯುಗದಲ್ಲಿಯೂ ಪರಾತ್ಪರ ಗುರು ಡಾ. ಆಠವಲೆಯವರು ಧರ್ಮಪ್ರೇಮಿ ಮತ್ತು ಸಾಧಕರಿಗಾಗಿ ದೀಪಸ್ತಂಭದಂತೆ ದೃಢವಾಗಿ ಅವರೊಂದಿಗಿದ್ದಾರೆ. ಪರಾತ್ಪರ ಗುರುದೇವರು ಸನಾತನ ಸಂಸ್ಥೆಯ ಕೆಲವೊಂದು ಸಾವಿರ ಸಾಧಕರ ಮಾಧ್ಯಮದಿಂದ ಧರ್ಮಸಂಸ್ಥಾಪನೆಯ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ. ಸ್ವಯಂ ಕ್ಷಾತ್ರತೇಜದ ಶಿಖರವಾಗಿರುವ, ವಿವೇಕ ಮತ್ತು ವೈರಾಗ್ಯದ ಆಧಾರಸ್ತಂಭವಾಗಿರುವ, ಮತ್ತು ಸಾಕ್ಷಾತ್ ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಇಂತಹ ಮಹಾನ ಗುರುಗಳು ಲಭಿಸುವುದು ಸನಾತನದ ಸಾಧಕರ ಭಾಗ್ಯವೇ ಆಗಿದೆ !

೫. ಈಶ್ವರ ಮತ್ತು ಪರಾತ್ಪರ ಗುರು ಡಾ. ಆಠವಲೆಯವರಲ್ಲಿನ ಒಂದು ಹೋಲಿಕೆ !

ಈಶ್ವರನು ಮನುಷ್ಯನಿಗೆ ಕೆಲವು ವಿಷಯಗಳನ್ನು ಸಾಂಕೇತಿಕ ಸ್ವರೂಪದಲ್ಲಿ ಹೇಳುತ್ತಾನೆ. ಅವನು ಎಲ್ಲವನ್ನೂ ನೇರವಾಗಿ ಹೇಳುವುದಿಲ್ಲ. ಇದಕ್ಕೆ `ಈಶ್ವರೀ ಅಭಿನಯ’, ಎಂದು ಹೇಳಲಾಗುತ್ತದೆ. ಶಿವನು ತನ್ನ ನಟರಾಜನ ರೂಪದಲ್ಲಿ ಕೈಗಳ ವಿವಿಧ ಮುದ್ರೆಗಳ ಮತ್ತು ಮುಖದ ಮೇಲಿನ ವಿವಿಧ ಭಾವಗಳ ಮೂಲಕ ಸಂಕೇತಗಳನ್ನು ನೀಡುತ್ತಾನೆ. ಪರಾತ್ಪರ ಗುರು ಡಾ. ಆಠವಲೆಯವರೂ ಸಹ ಹಾಗೆಯೇ ಮಾಡುತ್ತಾರೆ. ಯಾವಾಗ ಸಾಧಕರ ಸಾಧನೆಯ ಬಗ್ಗೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗುರುದೇವರೊಂದಿಗೆ ಮಾತನಾಡುತ್ತಾರೆಯೋ, ಆಗ ಕೆಲವೊಮ್ಮೆ ಗುರು ದೇವರು ಕೈಗಳ ಮೂಲಕ ಸನ್ನೆ ಮಾಡಿ ಅಥವಾ ಮುಖದ ಮೇಲಿನ ಭಾವಗಳ ಮೂಲಕ ಉತ್ತರಿಸುತ್ತಾರೆ. `ಅವರು ಯಾವುದಕ್ಕೆ ಒಪ್ಪಿಗೆ ನೀಡುತ್ತಾರೆ ? ಮತ್ತು ಯಾವುದನ್ನು ನಿರಾಕರಿಸುತ್ತಾರೆ ?’, ಎಂಬುದು ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರಿಗೆ ಮಾತ್ರ ತಿಳಿಯುತ್ತದೆ.

೬. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದೈವೀ ವೈಶಿಷ್ಟ್ಯಗಳು !

ಆದಿಶಕ್ತಿ ಕಾರ್ಯಕ್ಕಾಗಿ ಮೂರು ರೂಪಗಳನ್ನು ಧರಿಸುತ್ತಾಳೆ. ಆದಿಶಕ್ತಿಯ ಮೂರು ರೂಪಗಳೆಂದರೆ, ಶ್ರೀ ಮಹಾಲಕ್ಷಿ, ಶ್ರೀ ಮಹಾಸರಸ್ವತಿ ಮತ್ತು ಶ್ರೀ ಮಹಾಕಾಲಿ. ಶಕ್ತಿಗೆ ಸಂಬಂಧಿಸಿದ `ಐಂ ಹ್ರೀಂ ಕ್ಲಿಂ ಚಾಮುಂಡಾಯೈ ವಿಚ್ಚೆ |’ ಈ ನವಾರ್ಣವ ಮಂತ್ರದಲ್ಲಿನ `ಐಂ’ ಶ್ರೀ ಮಹಾಸರಸ್ವತಿ ದೇವಿಯ ಬೀಜಮಂತ್ರವಾಗಿದೆ, `ಹ್ರಿಂ ಶ್ರೀ ಮಹಾಲಕ್ಷಿದೇವಿಯ ಬೀಜಮಂತ್ರವಾಗಿದೆ ಮತ್ತು `ಕ್ಲಿಂ’ ಇದು ಶ್ರೀ ಮಹಾಕಾಲಿ ದೇವಿಯ ಬೀಜಮಂತ್ರವಾಗಿದೆ. `ಚಾಮುಂಡಾಯೈ ವಿಚ್ಚೆ |’ ಎಂದರೆ `ಚಾಮುಂಡಾ ದೇವಿಗೆ ನಮಸ್ಕಾರವಿರಲಿ’ ಎಂದಾಗಿದೆ. ಗೋವಾದ, ರಾಮನಾಥಿಯ ಸನಾತನ ಸಂಸ್ಥೆಯ ಆಶ್ರಮದಲ್ಲಿ ಶ್ರೀ ಮಹಾಲಕ್ಷಿ, ಶ್ರೀ ಮಹಾಸರಸ್ವತಿ ಮತ್ತು ಶ್ರೀ ಮಹಾಕಾಲಿ ಈ ಮೂವರೂ ದೇವಿಯರ ವಾಸವಿದೆ. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಇವರ ರೂಪದಲ್ಲಿ ಶ್ರೀ ಮಹಾಲಕ್ಷಿದೇವಿ ವಾಸಿಸುತ್ತಾಳೆ, ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ರೂಪದಲ್ಲಿ ಶ್ರೀ ಮಹಾಸರಸ್ವತಿದೇವಿ ವಾಸಿಸುತ್ತಾಳೆ. ಸನಾತನದ ಆಶ್ರಮದಲ್ಲಿ ಶ್ರೀ ಮಹಾಕಾಲಿದೇವಿಯು `ಕ್ಲೀಂ’ ಬೀಜಮಂತ್ರದ ರೂಪದಲ್ಲಿ ಸುಪ್ತವಾಗಿದ್ದು ವಾಸಮಾಡುತ್ತಿದ್ದಾಳೆ.

೭. ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು  ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ದೈವೀ ಕಾರ್ಯವನ್ನು ಪೂರ್ಣಗೊಳಿಸಲು ಜನಿಸಿದ್ದು ಇದೆಲ್ಲವೂ ಈಶ್ವರೀ ನಿಯೋಜನೆಯೇ ಆಗಿದೆ !

ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಬ್ಬರೂ ದೈವೀ ಕಾರ್ಯವನ್ನು ಪೂರ್ಣಗೊಳಿಸಲಿಕ್ಕಾಗಿಯೇ ಜನಿಸಿದ್ದಾರೆ. ಇವರಿಬ್ಬರೂ ಪರಾತ್ಪರ ಗುರು ಡಾ. ಆಠವಲೆಯವರ ಆಶ್ರಮದಲ್ಲಿ ಸಹಜವಾಗಿ ಬಂದರು ಮತ್ತು ಎಲ್ಲ ಸಾಧಕರಂತೆ ಅವರೂ ಸಾಧನೆಯನ್ನು ಮಾಡಿದರು. ಗುರುದೇವರು ಎಂದಿಗೂ ಶ್ರೀಸತ್‌ಶಕ್ತಿ (ಸೌ.) ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರನ್ನು ಹುಡುಕುತ್ತಾ ಹೋಗಲಿಲ್ಲ ಅಥವಾ ಅವರಿಬ್ಬರೂ ಗುರುದೇವರನ್ನು ಹುಡುಕುತ್ತಾ ಬರಲಿಲ್ಲ. ಎಲ್ಲವೂ ಸಹಜವಾಗಿ ಘಟಿಸಿತು. ಇದೆಲ್ಲವೂ ಈಶ್ವರೀ ನಿಯೋಜನೆಯೇ ಆಗಿದೆ.’

– ಸಪ್ತರ್ಷಿಗಳು (ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ, ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೨೦೪ (೧೪.೬.೨೦೨೨)