ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯದ ಬಗ್ಗೆೆ ಗಣ್ಯರ ಉದ್ಗಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಪ.ಪೂ. ಡಾ. ಆಠವಲೆಯವರು ಪರಮೇಶ್ವರನ ಅಂಶಾವತಾರವಾಗಿದ್ದಾರೆ !

`ಈಶ್ವರನ ಅವತಾರವು ಯುಗದಲ್ಲಿ ಕೇವಲ ೧ ಬಾರಿ ಮಾತ್ರ ಆಗುತ್ತದೆ; ಅಂಶಾವತಾರ ಮಾತ್ರ ಪದೇಪದೇ ಆಗುತ್ತಿರುತ್ತದೆ. ಪ.ಪೂ. ಡಾ. ಆಠವಲೆಯವರು ಪರಮೇಶ್ವರನ ಅಂಶಾವತಾರವಾಗಿದ್ದಾರೆ. ಹೀಗೆ ಅಂಶಾವತಾರವಾಗಿದ್ದಾಗ ಅವರಲ್ಲಿರುವ ವಿವೇಕಶಕ್ತಿಯು ಅವರನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡುವುದಿಲ್ಲ. ಬ್ರಾಹ್ಮತೇಜ ಮತ್ತು ಕ್ಷಾತ್ರಧರ್ಮದ ಕಾರ್ಯವನ್ನು ಶ್ರೀರಾಮ, ಶ್ರೀಕೃಷ್ಣ ಮತ್ತು ಇತ್ತೀಚೆಗೆ ಶಂಕರಾಚಾರ್ಯರು ಮಾಡಿದರು, ಅದೇ ಕಾರ್ಯವನ್ನು ಈಗ ಪ.ಪೂ. ಡಾ. ಆಠವಲೆಯವರು ಮಾಡುತ್ತಿದ್ದಾರೆ.’ – ಭಾರತಾಚಾರ್ಯ ಪ್ರಾ. ಸು. ಗ. ಶೇವಡೆ, ಡೊಂಬಿವಿಲಿ, ಠಾಣೆ ಜಿಲ್ಲೆ (ದೈನಿಕ ಸನಾತನ ಪ್ರಭಾತ, ೨೧.೨.೨೦೦೬)

ಅ. ಕಲಿಯುಗದಲ್ಲಿ ಪೃಥ್ವಿಯ ಮೇಲೆ ಭಗವಂತನು ೨ ವಿಭೂತಿಗಳ ಮಾಧ್ಯಮದಿಂದ ಜನ್ಮ ತಾಳಿದ್ದಾನೆ. ಅವರಲ್ಲಿ ಒಬ್ಬರು ಪೂ. ರಾಮದೇವ ಬಾಬಾ ಮತ್ತು ಇನ್ನೊಬ್ಬರು ಪ.ಪೂ. ಡಾ. ಜಯಂತ ಆಠವಲೆ ! – ಭಾರತಾಚಾರ್ಯ ಪ್ರಾ. ಸು. ಗ. ಶೇವಡೆ, ಡೊಂಬಿವಿಲಿ, ಠಾಣೆ ಜಿಲ್ಲೆ (ದೈನಿಕ ಸನಾತನ ಪ್ರಭಾತ, ೧೨.೨.೨೦೧೧)

೨. ಪರಾತ್ಪರ ಗುರು ಡಾ. ಆಠವಲೆ ಇವರು ಒಂದು ದೊಡ್ಡ ಆಶಾಕಿರಣವಾಗಿದ್ದಾರೆ !

`ಅತ್ಯಂತ ನಿಸ್ಪೃಹವಾಗಿ (ನಿರ್ಲೋಭ), ಯಾವುದೇ ಅಪೇಕ್ಷೆ ಯಿಲ್ಲದೆ ಜನರಿಗೆ ಮತ್ತು ಸಾಧಕರಿಗೆ ಅಧ್ಯಾತ್ಮದ ಬಗ್ಗೆ ಮಾರ್ಗದರ್ಶನ ಮಾಡುವ ಪರಾತ್ಪರ ಗುರು ಡಾ. ಆಠವಲೆಯವರು ಬಹುದೊಡ್ಡ ಆಶಾಕಿರಣವಾಗಿದ್ದಾರೆ.’ – ಡಾ. ವಾಸುದೇವ ಪುರುಷೋತ್ತಮ ಗಿಂಡೆ, ಬೆಳಗಾವಿ. (ಕ್ರಿ.ಶ. ೨೦೧೨)