ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಛಾಯಾಚಿತ್ರಗಳಲ್ಲಿ ಕಾಣಿಸುವ ಅಸಾಮಾನ್ಯ ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಅವುಗಳ ಶಾಸ್ತ್ರ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
(ಪೂ.) ಶ್ರೀ. ಸಂದೀಪ ಆಳಶಿ,

೧. ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಗಳ ಸಮಾನ ಆಧ್ಯಾತ್ಮಿಕ ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ

೧ ಅ. ಛಾಯಾಚಿತ್ರಗಳಲ್ಲಿ ಜೀವಂತಿಕೆಯ ಅರಿವಾಗುವುದು : ಈ ಛಾಯಾಚಿತ್ರ ಗಳತ್ತ ಕೇವಲ ಎದುರಿನಿಂದ ಮಾತ್ರವಲ್ಲ, ಯಾವ ದಿಕ್ಕಿನಿಂದ ನೋಡಿದರೂ `ಪರಾತ್ಪರ ಗುರು ಡಾಕ್ಟರರು ನಮ್ಮನ್ನೇ ನೋಡುತ್ತಿದ್ದಾರೆ’, ಹಾಗೆಯೇ `ಅವರ ತಲೆ ಮತ್ತು ಭುಜಗಳೂ ನಾವಿರುವ ದಿಶೆಯತ್ತ ತಿರುಗುತ್ತಿವೆ’, ಎಂದು ಅರಿವಾಗುತ್ತದೆ.

೧ ಅ ೧. ಶಾಸ್ತ್ರ : ಛಾಯಾಚಿತ್ರಗಳಲ್ಲಿ ಜೀವಂತಿಕೆ ಅನಿಸುವುದು, ಎಂದರೆ ಪರಾತ್ಪರ ಗುರು ಡಾಕ್ಟರರಲ್ಲಿ ಚೈತನ್ಯವು ಹೆಚ್ಚಾದುದರ ದರ್ಶಕವಾಗಿದೆ.

ಕು. ಭಾವಿನಿ ಕಪಾಡಿಯಾ

೧ ಆ. ನಿಜವಾದ ವಯಸ್ಸಿಗಿಂತ ಕಿರಿಯವರಂತೆ ಅನಿಸುವುದು : ಸಾಮಾನ್ಯ ವ್ಯಕ್ತಿಯಲ್ಲಿ ವಯೋಗುಣಕ್ಕನುಸಾರ ಕಾಣಿಸುವ ಚರ್ಮದ ಸುಕ್ಕುಗಳು, ಕೆನ್ನೆಗಳ ಕೆಳಗೆ ಜೋತು ಬಿದ್ದ ಚರ್ಮ, ದೀರ್ಘಕಾಲೀನ ಅನಾರೋಗ್ಯದ ಅಥವಾ ಮುಖದ ಮೇಲೆ ಕಾಣಿಸುವ ದಣಿವಿನ ಛಾಯೆ, ವಯಸ್ಸಿಗನುಸಾರ ಕಣ್ಣುಗಳಲ್ಲಿ ಕಾಣಿಸುವ ನಿಸ್ತೇಜತನ, ಈ ಲಕ್ಷಣಗಳು ಪರಾತ್ಪರ ಗುರು ಡಾಕ್ಟರರಲ್ಲಿ ಅರಿವಾಗುವುದಿಲ್ಲ. (೨೦೨೨ ರಲ್ಲಿಯೂ ಮೇಲಿನ ಲಕ್ಷಣಗಳು ಪರಾತ್ಪರ ಗುರು ಡಾಕ್ಟರರಲ್ಲಿ ಅರಿವಾಗುತ್ತಿರಲಿಲ್ಲ. ತದ್ವಿರುದ್ಧ ದಿನೇ ದಿನೇ ಅವರ ಚರ್ಮವು ಅಧಿಕಾಧಿಕ ನುಣುಪಾಗುತ್ತಿರುವುದು ಛಾಯಾಚಿತ್ರಗಳಲ್ಲಿಯೂ ಕಾಣಿಸುತ್ತದೆ. ಅವರ ಮುಖ ಅಧಿಕಾಧಿಕ ತೇಜಸ್ವಿ ಮತ್ತು ಚೆನ್ನಾಗಿ(ತಾಜಾತನ) ಕಾಣಿಸುತ್ತದೆ. ಅವರು ತಮ್ಮ ನಿಜವಾದ ವಯಸ್ಸಿಗಿಂತ ಕಿರಿಯವರಂತೆ ಕಾಣಿಸುತ್ತಾರೆ.)

೧ ಆ ೧. ಶಾಸ್ತ್ರ : ಪರಾತ್ಪರ ಗುರು ಡಾಕ್ಟರರ ಮುಖದಲ್ಲಿನ ಬದಲಾವಣೆಯು ಅವರಲ್ಲಿ ತೇಜತತ್ತ್ವ ಹೆಚ್ಚಾದುದರ ದರ್ಶಕವಾಗಿದೆ.

೧ ಇ. ದೃಷ್ಟಿಯು ನಿರ್ಗುಣದಲ್ಲಿದ್ದಂತೆ ಅನಿಸುವುದು : ಛಾಯಾಚಿತ್ರ ಗಳನ್ನು ನೋಡುವಾಗ `ಪರಾತ್ಪರ ಗುರು ಡಾಕ್ಟರರು ಶೂನ್ಯದಲ್ಲಿ ನೋಡುತ್ತಿದ್ದಾರೆ’ ಅಥವಾ `ಅವರ ದೃಷ್ಟಿ ನಿರ್ಗುಣದಲ್ಲಿದೆ’, ಎಂದು ಅನಿಸುತ್ತದೆ. ೨೦೧೪ ರ ನಂತರದ ಛಾಯಾಚಿತ್ರಗಳಲ್ಲಿ ಈ ಪ್ರಮಾಣವು(ಅನುಪಾತ) ಹೆಚ್ಚಾಗುತ್ತಿದೆ ಎಂದು ಅರಿವಾಗುತ್ತದೆ.

೧ ಇ ೧. ಶಾಸ್ತ್ರ : ಇದು ಪರಾತ್ಪರ ಗುರು ಡಾಕ್ಟರರಲ್ಲಿ ನಿರ್ಗುಣ ತತ್ತ್ವವು ಹೆಚ್ಚಾದುದರ ದರ್ಶಕವಾಗಿದೆ.

೧ ಈ. ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ಅನಾರೋಗ್ಯದಲ್ಲಿದ್ದರೂ ಪರಾತ್ಪರ ಗುರು ಡಾಕ್ಟರರ ಮುಖದ ಮೇಲೆ ತೇಜದ ಅರಿವಾಗುವುದು : ಪರಾತ್ಪರ ಗುರು ಡಾಕ್ಟರರು ಸಮಷ್ಟಿಯ ಕಲ್ಯಾಣಕ್ಕಾಗಿ ಈಶ್ವರೀ ರಾಜ್ಯದ ಸ್ಥಾಪನೆಗಾಗಿ ಅವಿರತ ಕಾರ್ಯನಿರತರಾಗಿದ್ದಾರೆ. ತದ್ವಿರುದ್ಧ ಕೆಟ್ಟ ಶಕ್ತಿಗಳಿಗೆ ಪೃಥ್ವಿಯಲ್ಲಿ ಎಲ್ಲೆಡೆ `ಆಸುರಿ ರಾಜ್ಯ’ವನ್ನು ತರಲಿಕ್ಕಿದೆ. ಆದುದರಿಂದ ಕೆಟ್ಟ ಶಕ್ತಿಗಳು ಪರಾತ್ಪರ ಗುರು ಡಾಕ್ಟರರ ಕಾರ್ಯವನ್ನು ವಿರೋಧಿಸಲು ಅವರ ಮೇಲೆ ೨೦೦೦ ನೇ ಇಸವಿಯಿಂದ ವಿವಿಧ ಸ್ವರೂಪಗಳಲ್ಲಿ ಆಕ್ರಮಣಗಳನ್ನು ಮಾಡುತ್ತಿವೆ. ಕೆಟ್ಟ ಶಕ್ತಿಗಳು ೨೦೦೯ ರಿಂದ ಪರಾತ್ಪರ ಗುರು ಡಾಕ್ಟರರ ಮೇಲೆ ತೀವ್ರ ಸ್ವರೂಪಗಳಲ್ಲಿ ಆಕ್ರಮಣ ಮಾಡುತ್ತಿವೆ. ವರ್ಷ ೨೦೦೯ ರಲ್ಲಿ ಪರಾತ್ಪರ ಗುರು ಡಾಕ್ಟರರ ಮೇಲೆ ಕೆಟ್ಟ ಶಕ್ತಿಗಳು ಮಾಡಿದ ತೀವ್ರ ಸ್ವರೂಪದ ಆಕ್ರಮಣದಿಂದ ಅವರ ಮೇಲೆ ಮಹಾಮೃತ್ಯುಯೋಗದ ಸಂಕಟವು ಬಂದೆರಗಿತ್ತು. ಅನಂತರ ಅವರು ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೇ ಕಾಲದಲ್ಲಿ, ಅಂದರೆ ೨೦೧೦ ರಲ್ಲಿ ಅವರ ಪ್ರಾಣಶಕ್ತಿ ಅತ್ಯಂತ ಕಡಿಮೆಯಾಗಿತ್ತು. ಇದರಿಂದ ಅವರಿಗೆ ಯಾವಾಗಲೂ ಬಹಳ ದಣಿವಿರುತ್ತಿತ್ತು. ಆದರೂ ೨೦೧೦ ರಲ್ಲಿ ತೆಗೆದ ಛಾಯಾಚಿತ್ರದಲ್ಲಿ ಅವರ ಮುಖದ ಮೇಲೆ ಅಷ್ಟು ಅನಾರೋಗ್ಯವಿದೆ ಎಂದು ಅನಿಸುವುದಿಲ್ಲ. ಬದಲಾಗಿ ಅವರ ಮುಖವು ತೇಜಸ್ವಿಯಾಗಿದೆ ಎಂದು ಅನಿಸುತ್ತದೆ. ೨೦೧೨ ರ ನಂತರದ ಛಾಯಾಚಿತ್ರಗಳಿಂದ ಮುಂದಿನ ಛಾಯಾಚಿತ್ರಗಳಲ್ಲಿ ಅವರ ಮುಖದ ಮೇಲಿನ ಅನಾರೋಗ್ಯದ ಛಾಯೆಯು ಕಡಿಮೆಯಾಗುತ್ತಾ ಹೋಗಿರುವುದು ಕಾಣಿಸುತ್ತಿದ್ದು, ೨೦೨೧ ರಲ್ಲಿ ತೆಗೆದ ಛಾಯಾಚಿತ್ರದಲ್ಲಿ ಅದು ಕಾಣಿಸುವುದೇ ಇಲ್ಲ.

೧ ಈ ೧. ಶಾಸ್ತ್ರ : ಕೆಟ್ಟ ಶಕ್ತಿಗಳಿಂದ ಅವರ ಮೇಲಾದ ಆಕ್ರಮಣ ಗಳಿಂದಾದ ಅನಾರೋಗ್ಯದ ಪರಿಣಾಮವು ಪರಾತ್ಪರ ಗುರು ಡಾಕ್ಟರರ ಉಚ್ಚ ಆಧ್ಯಾತ್ಮಿಕ ಮಟ್ಟ ಮತ್ತು ಚೈತನ್ಯದಿಂದ ಅವರ ಮುಖದ ಮೇಲೆ ಅಷ್ಟು ಕಾಣಿಸುವುದಿಲ್ಲ. ೨೦೧೦ ರಿಂದ ಮುಂದಿನ ವರ್ಷಗಳಲ್ಲಿ ಅವರ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣಗಳು ಹೆಚ್ಚಾದರೂ ಅವರ ಚೈತನ್ಯ ಮತ್ತು ತೇಜವೂ ಹೆಚ್ಚಾಗಿದೆ. ಆದುದರಿಂದ ಮುಂದುಮುಂದಿನ ವರ್ಷಗಳಲ್ಲಿ ಅವರ ಛಾಯಾಚಿತ್ರಗಳಲ್ಲಿನ ತೇಜವು ೨೦೧೦ ರ ತುಲನೆಯಲ್ಲಿ ಹೆಚ್ಚು ಅರಿವಾಗುತ್ತದೆ, ಹಾಗೆಯೇ ಅವರ ಮುಖದ ಮೇಲೆ ಕಾಣಿಸುವ ಅನಾರೋಗ್ಯದ ಪರಿಣಾಮವೂ ಕಡಿಮೆಯಾಗುತ್ತಿರುವುದು ಕಾಣಿಸುತ್ತದೆ. ೨೦೧೭ ರಿಂದ ಪರಾತ್ಪರ ಗುರು ಡಾಕ್ಟರರಲ್ಲಿ ನಿರ್ಗುಣ ತತ್ತ್ವವು ಬಹಳ ಹೆಚ್ಚಾಗುತ್ತಿದೆ. ಹಾಗಾಗಿ ಪರಾತ್ಪರ ಗುರು ಡಾಕ್ಟರರ ಸ್ಥೂಲದೇಹದ ಮೇಲಿನ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದಾಗುವ ಪರಿಣಾಮದ ಪ್ರಮಾಣ ಕಡಿಮೆಯಾಗುತ್ತಿದ್ದು ೨೦೨೧ ರಲ್ಲಿನ ಛಾಯಾಚಿತ್ರದಲ್ಲಿ ಅದು ನಗಣ್ಯವೆಂದು(ಅತ್ಯಲ್ಪವಿದೆ) ಎಂದರಿವಾಗುತ್ತದೆ.

೧ ಉ. ೨೦೨೧ ರಲ್ಲಿನ ಛಾಯಾಚಿತ್ರದಲ್ಲಿ ಪರಾತ್ಪರ ಗುರು ಡಾಕ್ಟರರ ಚರ್ಮವು ಕೋಮಲ, ಮೃದು ಮತ್ತು ತಿಳಿ ಗುಲಾಬಿ, ಹಾಗೆಯೇ ಮುಖಚರ್ಯೆ ಮುಗ್ಧ ಕಾಣಿಸುವುದು.

೧ ಉ ೧. ಮುಖದ ಚರ್ಮ ಚಿಕ್ಕ ಮಗುವಿನಂತೆ ಕೋಮಲ ಮತ್ತು ಮೃದು ಅನಿಸುತ್ತದೆ.

೧ ಉ ೧ ಅ. ಶಾಸ್ತ್ರ: ವಾಯುತತ್ತ್ವ ಹೆಚ್ಚಾದುದರಿಂದ ಪರಾತ್ಪರ ಗುರು ಡಾಕ್ಟರರ ಅವರ ಚರ್ಮವು ಕೋಮಲ ಮತ್ತು ಮೃದುವಾಗಿದೆ.

೧ ಉ ೨. ಮುಖದ ಚರ್ಮ ತಿಳಿ ಗುಲಾಬಿ ಕಾಣಿಸುತ್ತದೆ.

೧ ಉ ೨ ಅ. ಶಾಸ್ತ್ರ : ಪರಾತ್ಪರ ಗುರು ಡಾಕ್ಟರರಲ್ಲಿನ ಪ್ರೀತಿಯಿಂದಾಗಿ ಈ ಬದಲಾವಣೆ ಕಂಡು ಬರುತ್ತದೆ.

೧ ಉ ೩. ಮುಖದ ಮೇಲಿನ ಭಾವವು ಚಿಕ್ಕ ಮಗುವಿನಂತೆ ಮುಗ್ಧವೆನಿಸುತ್ತದೆ.

೧ ಉ ೩ ಅ. ಶಾಸ್ತ್ರ : ಪರಾತ್ಪರ ಗುರು ಡಾಕ್ಟರರ ಅಹಂಶೂನ್ಯತೆಯಿಂದ ಅವರ ಮುಖಭಾವವು ಚಿಕ್ಕ ಮಗುವಿನಂತೆ ಮುಗ್ಧವೆನಿಸುತ್ತದೆ.

೨. ಪರಾತ್ಪರ ಗುರು ಡಾಕ್ಟರರಲ್ಲಿನ ದೈವೀ ಬದಲಾವಣೆಗಳ ಹಿಂದಿನ ಶಾಸ್ತ್ರವನ್ನು ಗಮನದಲ್ಲಿಟ್ಟು ಕೃತಜ್ಞತಾಭಾವವನ್ನು ಹೆಚ್ಚಿಸಿ

ಸಂತರಲ್ಲಿನ ಈಶ್ವರೀ ತತ್ತ್ವದ ಅನುಭೂತಿ ಉಪಾಸಕರು, ಸಾಧಕರು ಮತ್ತು ಭಕ್ತರಿಗೆ ಬಂದಿರುತ್ತದೆ. ಸಾಮಾನ್ಯ ಜನರಿಗೆ `ಸಂತರೆಂದರೆ ಈಶ್ವರನ ಸಗುಣ ರೂಪ’ ಎಂಬುದು ಕೇಳಿ ಅಥವಾ ಓದಿ ಗೊತ್ತಿರುತ್ತದೆ; ಆದರೆ ಅವರಿಗೆ ಈ ಬಗ್ಗೆ ಅನುಭವ ಬಂದಿರುವುದಿಲ್ಲ. ಸಂತರು ಈಶ್ವರನೊಂದಿಗೆ ಏಕರೂಪವಾಗುತ್ತಾರೆ, ಅಂದರೆ `ಸಂತರಲ್ಲಿನ ಈಶ್ವರೀ ತತ್ತ್ವ ಹೆಚ್ಚಾಗುತ್ತಾ ಹೋದಂತೆ ಅವರಲ್ಲಿ ಏನು ಬದಲಾವಣೆಯಾಗುತ್ತದೆ ?’, ಎಂಬುದು ಜನಸಾಮಾನ್ಯರಿಗೂ ತಿಳಿದರೆ ಅವರ ಅಧ್ಯಾತ್ಮದ ಮೇಲಿನ ಶ್ರದ್ಧೆಯು ಹೆಚ್ಚಾಗಿ ಅವರು ಸಾಧನೆಯತ್ತ ಹೊರಳುವರು. ಈ ದೃಷ್ಟಿಯಿಂದ ಪ್ರಸ್ತುತ ಲೇಖನ ಖಂಡಿತವಾಗಿಯೂ ಸಹಾಯಕವಾಗಲಿದೆ. ಅದರೊಂದಿಗೆ ಈ ಲೇಖನದಲ್ಲಿ ಸಾಧಕರಿಗೆ ಪರಾತ್ಪರ ಗುರು ಡಾಕ್ಟರರ ಅಸಾಮಾನ್ಯ ಆಧ್ಯಾತ್ಮಿಕ ವೈಶಿಷ್ಟ್ಯಗಳು ಗಮನಕ್ಕೆ ಬಂದು ಸಾಧಕರ ಅವರ ಬಗೆಗಿನ ಶ್ರದ್ಧೆ ಮತ್ತು ಭಕ್ತಿಯು ದೃಢವಾಗಲು ಸಹಾಯವಾಗುತ್ತದೆ.

– (ಪೂ.) ಶ್ರೀ. ಸಂದೀಪ ಆಳಶಿ, ಸನಾತನದ ಗ್ರಂಥಗಳ ಸಂಕಲನಕಾರರು ಮತ್ತು ಕು. ಭಾವಿನಿ ಕಪಾಡಿಯಾ (ಆಧ್ಯಾತ್ಮಿಕ ಮಟ್ಟ ಶೇ. ೬೬), ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೭.೨೦೨೨)

ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರಗಳ ವೈಶಿಷ್ಟ್ಯಗಳನ್ನು ಗುರುತಿಸಿ ಸಂಶೋಧನಾತ್ಮಕವಾಗಿ ಅಧ್ಯಯನ ಮಾಡುವ ಸನಾತನದ ಸಾಧಕಿಯರು !

ಕು. ಪೂನಮ್ ಸಾಳುಂಖೆ
ಸೌ. ಜಾನ್ಹವಿ ಶಿಂದೆ

`ವಿವಿಧ ಪ್ರಸಂಗಗಳಲ್ಲಿ ತೆಗೆದ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರಗಳನ್ನು ಸಂಗ್ರಹಿಸುವುದು, ಆ ಛಾಯಾಚಿತ್ರಗಳಿಂದ ಅರಿವಾಗುವ ಅವರ ಅಲೌಕಿಕತೆಯ ಅಧ್ಯಯನ ಮಾಡುವುದು, ಸಾಧಕರಿಗೆ ಭಾವಜಾಗೃತಿಗಾಗಿ ಉಪಯುಕ್ತವಾದ ಛಾಯಾಚಿತ್ರಗಳನ್ನು ಆಯ್ಕೆ ಮಾಡುವುದು ಇತ್ಯಾದಿ ಸೇವೆಗಳನ್ನು ಸನಾತನದ ರಾಮನಾಥಿ ಆಶ್ರಮದ ಸಾಧಕಿ ಕು. ಪೂನಮ್ ಧೋಂಡಿರಾಮ ಸಾಳುಂಖೆ (ಆಧ್ಯಾತ್ಮಿಕ ಮಟ್ಟ ಶೇ. ೬೪) ಮತ್ತು ಸೌ. ಜಾನ್ಹವಿ ರಮೇಶ ಶಿಂದೆ ಇವರು ಮಾಡುತ್ತಾರೆ. ಪ್ರಸ್ತುತ ಲೇಖನದಲ್ಲಿನ ವೈಶಿಷ್ಟ್ಯ ಪೂರ್ಣ ಛಾಯಾಚಿತ್ರಗಳನ್ನೂ ಇವರಿಬ್ಬರೂ ಆರಿಸಿದ್ದಾರೆ. ಈ ಮಾಧ್ಯಮದಿಂದ ಪರಾತ್ಪರ ಗುರು ಡಾಕ್ಟರರ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ಗಮನಕ್ಕೆ ತಂದ ಇವರಿಬ್ಬರಿಗೆ ನಾವು ಕೃತಜ್ಞರಾಗಿದ್ದೇವೆ.’ – ಸಂಕಲನಕಾರರು

*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.