ಪ್ರಭು ಶ್ರೀರಾಮಚಂದ್ರನ ಚರಣಗಳಲ್ಲಿ ಪ್ರಾರ್ಥನೆಯನ್ನು ಮಾಡುವಾಗ ಆ ಸ್ಥಳದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳು ಕಾಣಿಸುವುದು !

ಶ್ರೀ. ಸತ್ಯಕಾಮ ಕಣಗಲೇಕರ್

೧. ಬಿಳಿ ರೇಷ್ಮೆ ವಸ್ತ್ರದ ಪಂಚೆ ಉಟ್ಟಿದ ಪಾದಗಳನ್ನು ಗಟ್ಟಿ ಹಿಡಿದುಕೊಂಡು ತಳಮಳದಿಂದ ಪ್ರಾರ್ಥಿಸುವುದು ಮತ್ತು ಆ ಚರಣಗಳು ಪ್ರಭು ಶ್ರೀರಾಮನದ್ದೇ ಪಾದಗಳಾಗಿವೆ’ ಎಂದು ಅನುಭವಿಸುವುದು

`ಒಂದು ದಿನ ಬೆಳಗ್ಗೆ ೧೧.೪೫ ಕ್ಕೆ ಆಶ್ರಮದ ಸೇವೆ ಮುಗಿಸಿ ವಿಶ್ರಾಂತಿ ಪಡೆಯಲು ಕೋಣೆಗೆ ತೆರಳಿದ್ದೆ. ಮಧ್ಯಾಹ್ನ ೨ ಗಂಟೆಗೆ ಪುನಃ ಸೇವೆಗೆ ಹೋಗಬೇಕಾಗಿದ್ದರಿಂದ ನಾನು ಹಾಸಿಗೆಯ ಮೇಲೆ ಸುಮ್ಮನೆ ಅಡ್ಡ ಬಿದ್ದಿದ್ದೆ. ಮಧ್ಯಾಹ್ನ ೧ ಗಂಟೆಗೆ ನಾನು ಈ ಕೆಳಗಿನ ದೃಶ್ಯವನ್ನು ನೋಡಿದೆ – `ನಾನು ಬಿಳಿ ರೇಷ್ಮೆ ವಸ್ತ್ರದ ಪಂಚೆ ಉಟ್ಟಿದ ಪಾದಗಳನ್ನು ಗಟ್ಟಿ ಹಿಡಿದುಕೊಂಡು ತಳಮಳದಿಂದ ಪ್ರಾರ್ಥಿಸುತ್ತಿದ್ದೇನೆ. ಆ ಪಂಚೆಗೆ ಚಿನ್ನದ ಅಂಚು ಇತ್ತು. ನಾನು ಪ್ರಾರ್ಥಿಸುವಾಗ ಬಹಳ ಅಳುತ್ತಿದ್ದೇನೆ. ಆ ಸಮಯದಲ್ಲಿ ನನಗೆ ಪಾದಗಳು ಕಾಣಿಸಲಿಲ್ಲ ಆದರೆ ಮೊಣಕಾಲಿನ ಕೆಳಗಿನ ಭಾಗ ಮಾತ್ರ ಕಾಣಿಸಿತು. ಆಗ ನನಗೆ `ಈ ಪಾದಗಳು ಭಗವಾನ್ ಶ್ರೀರಾಮನದ್ದೇ ಆಗಿದೆ’ ಎಂದು ಸ್ಪಷ್ಟವಾಗಿ ಅರಿವಾಯಿತು. ಅವರ ಧನುಷ್ಯದ ಕೆಳಗಿನ ಭಾಗವು ಪಾದಗಳ ಬದಿಯಲ್ಲಿತ್ತು. ಬಿಲ್ಲು ಬಂಗಾರದ್ದಾಗಿದ್ದು ಕೆಂಪು ರೇಷ್ಮೆ ದಾರದಲ್ಲಿ ಮುತ್ತುಗಳಿಂದ ಪೋಣಿಸಿದ ಸುಂದರವಾದ ಗೊಂಡೆ ಇರುವುದು ನನಗೆ ಕಾಣಿಸಿತು.

೨. ಪಂಚೆಯ ಜಾಗದಲ್ಲಿ ಬಿಳಿಯ ಪೈಜಾಮವು ಕಾಣಿಸುವುದು ಮತ್ತು ಆ ಪಾದಗಳನ್ನು ಗಟ್ಟಿಯಾಗಿ ಹಿಡಿದು ದೇವರಲ್ಲಿ ಮನಃಪೂರ್ವಕವಾಗಿ ಪ್ರಾರ್ಥಿಸುವುದು

ಸ್ವಲ್ಪ ಹೊತ್ತಿನಲ್ಲಿಯೇ ನನಗೆ ಆ ಪಂಚೆಯ ಸ್ಥಳದಲ್ಲಿ ಬಿಳಿ ಪೈಜಾಮವು ಕಾಣಿಸುತ್ತಿತ್ತು. ದೃಶ್ಯ ನಿರಂತರವಾಗಿ ಬದಲಾಗುತ್ತಿತ್ತು. ನನಗೆ ಒಮ್ಮೆ ಪಂಚೆ ಮತ್ತು ಒಮ್ಮೆ ಬಿಳಿ ಪೈಜಾಮ ಕಾಣುತಿತ್ತು. ಇದು ಸ್ವಲ್ಪ ಸಮಯ ಹೀಗೆ ನಡೆಯುತ್ತಿತ್ತು. `ಇಷ್ಟೆಲ್ಲಾ ನಡೆಯುವಾಗ ನಾನು ಆ ಪಾದಗಳನ್ನು ಗಟ್ಟಿಯಾಗಿ ಹಿಡಿದಿದ್ದೇನೆ ಮತ್ತು ನನಗೆ ಪಾದಗಳಲ್ಲಿ ಇರಿಸಿಕೊಳ್ಳಲು ಕಳಕಳಿಯಿಂದ ಬಿಕ್ಕಿಬಿಕ್ಕಿ ಅಳುತ್ತಾ ದೇವರಲ್ಲಿ ಮನಃಪೂರ್ವಕವಾಗಿ ಪ್ರಾರ್ಥಿಸುತ್ತಿದ್ದೇನೆ’, ಎಂಬುದು ನನಗೆ ಅರಿವಾಗುತಿತ್ತು.

೩. ದೃಶ್ಯದಲ್ಲಿ ನೋಡಿದಂತೆ, ವಾಸ್ತವದಲ್ಲಿಯೂ ಬಿಕ್ಕಳಿಸುತ್ತಾ ಭಾವಾಶ್ರು ಸುರಿಯುವುದು

ಸ್ವಲ್ಪ ಹೊತ್ತಿನ ನಂತರ ಎಚ್ಚರಗೊಂಡು ತಲೆಯೆತ್ತಿ ನೋಡಿದಾಗ ಗಡಿಯಾರದಲ್ಲಿ ಮಧ್ಯಾಹ್ನ ೧.೪೫ ಆಗಿತ್ತು. ನಾನು ಅನುಭವಿಸುವ ಎಲ್ಲಾ ಪ್ರಕ್ರಿಯೆಗಳು ಮತ್ತು ನಾನು ನೋಡುವ ದೃಶ್ಯಗಳು ೪೫ ನಿಮಿಷಗಳ ವರೆಗೆ ನಡೆಯುತಿತ್ತು. ನಾನು ಸಂಪೂರ್ಣವಾಗಿ ಎಚ್ಚರವಾದ ನಂತರವೂ ನಾನು ಬಿಕ್ಕಳಿಸುತ್ತಿದೆ ಮತ್ತು ನನ್ನ ಕಣ್ಣುಗಳಿಂದ ಭಾವಾಶ್ರುಗಳು ಸುರಿಯುತ್ತಿದ್ದವು. ನಾನು ಅಂದಾಜು ೩೦ ನಿಮಿಷಗಳ ಕಾಲ ಇದೇ ಸ್ಥಿತಿಯಲ್ಲಿದ್ದೆ, ಎಂಬುದು ನನಗೆ ಅನಂತರ ಗಮನಕ್ಕೆ ಬಂದಿತು.

೪. ಪರಾತ್ಪರ ಗುರು ಡಾ. ಆಠವಲೆಯವರ ದೃಶ್ಯ ಕಂಡ ಮೇಲೆ `ಅನುಭೂತಿ ನೀಡಿದ ಪಾದಗಳು ಅವರದ್ದೇ’ ಎಂಬುದರ ಪ್ರಚೀತಿ ಬರುವುದು

ಮರುದಿನ ನನಗೆ ಪರಾತ್ಪರ ಗುರು ಡಾ. ಆಠವಲೆ ಅವರ ದರ್ಶನವಾಯಿತು. ಆ ಸಮಯದಲ್ಲಿ ಅವರು ತೊಟ್ಟಿದ್ದ ಬಿಳಿ ಪೈಜಾಮ ಮತ್ತು ಅವರ ಪಾದಗಳನ್ನು ನೋಡಿದಾಗ `ನಿನ್ನೆ ನನಗೆ ಅನುಭೂತಿ ನೀಡಿದ ಪಾದಗಳು ಇವೇ ಆಗಿದ್ದವು’, ಗುರು ದೇವರು(ಪರಾತ್ಪರ ಗುರು ಡಾಕ್ಟರ) ಅರಿವು ಮಾಡಿ ಕೊಟ್ಟರು’.

– ಶ್ರೀ. ಸತ್ಯಕಾಮ ಕಣಗಲೇಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೧.೨೦೨೨)