ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಇಬ್ಬರು ಆಧ್ಯಾತ್ಮಿಕ ಉತ್ತರಾಧಿಕಾರಿಗಳಿಗೆ ಅಧ್ಯಾತ್ಮದಲ್ಲಿನ ಉನ್ನತರು ಮಾಡಿದ ಸನ್ಮಾನ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರಿಗೆ ಗೋವಾದ ಪ.ಪೂ. ಸುಶೀಲಾ ಆಪ್ಟೆಅಜ್ಜಿಯವರು ಮಾಡಿದ ಪಾದಪೂಜೆ !

ಪ.ಪೂ. (ಶ್ರೀಮತಿ) ಸುಶೀಲಾ ಆಪ್ಟೆಅಜ್ಜಿ
ಶ್ರೀಸತ್‌ಶಕ್ತಿ ಸೌ. ಬಿಂದಾ ನೀಲೇಶ ಸಿಂಗಬಾಳರ ಚರಣಗಳ ಮೇಲೆ ಜಲಾರ್ಪಣೆ ಮಾಡುತ್ತಿರುವ ಪ.ಪೂ. (ಶ್ರೀಮತಿ) ಸುಶೀಲಾ ಆಪ್ಟೆಅಜ್ಜಿ

`೨೦೨೦ ರಲ್ಲಿ ನಾನು ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಗೋವಾದ ಮ್ಹಾಪ್ಸಾದಲ್ಲಿನ ಸಂತರಾದ ಪ.ಪೂ. (ಶ್ರೀಮತಿ) ಸುಶೀಲಾ ಆಪ್ಟೆಅಜ್ಜಿಯರ‍್ನು ಭೇಟಿಯಾಗಲು ಅವರ ಮನೆಗೆ ಹೋಗಿದ್ದೆವು. ಆಗ ಪ.ಪೂ. ಆಪ್ಟೆಅಜ್ಜಿಯವರು ನಮ್ಮಿಬ್ಬರನ್ನೂ ಕುರ್ಚಿಯ ಮೇಲೆ ಕೂರಿಸಿ, ತಾವು ಕೆಳಗೆ ನೆಲದ ಮೇಲೆ ಕುಳಿತರು. ನಾವು ಅವರಿಗೆ ತುಂಬಾ ವಿನಂತಿಯನ್ನು ಮಾಡಿದ ಮೇಲೆ ಅವರು ಕುರ್ಚಿಯ ಮೇಲೆ ಕುಳಿತರು. ಅವರು, “ಇಂದು ನೀವಿಬ್ಬರು ದೇವಿಯರೆ ನಮ್ಮ ಮನೆಗೆ ಬಂದಿದ್ದೀರಿ ಹಾಗೂ ನಿಮ್ಮ ಮಾಧ್ಯಮದಿಂದ ಪರಮಪೂಜ್ಯರೇ ನಮ್ಮ ಮನೆಗೆ ಬಂದಿದ್ದಾರೆ; ಆದ್ದರಿಂದ ನಾನು ಕೆಳಗೆ ಪರಮಪೂಜ್ಯರ ಚರಣಗಳಲ್ಲಿ ಕುಳಿತುಕೊಂಡೆನು ! ನಿಮ್ಮನ್ನು ನೋಡಿ ನನಗೆ ತುಂಬಾ ಆನಂದವಾಯಿತು’’, ಎಂದು ಹೇಳಿದರು.

ಪ.ಪೂ. ಅಜ್ಜಿಯವರು ಅತ್ಯಂತ ಭಾವಪೂರ್ಣವಾಗಿ ನಮ್ಮಿಬ್ಬರ ಪಾದ್ಯಪೂಜೆಯನ್ನು ಮಾಡಿದರು. ಆಗ ಅವರಿಗೆ ನನ್ನ ಕಾಲುಗಳ ಜಾಗದಲ್ಲಿ ಪರಾತ್ಪರ ಗುರು ಡಾಕ್ಟರರ ಚರಣಗಳು ಕಾಣಿಸುತ್ತಿದ್ದವು ಎಂದು ಅವರು ನಮಗೆ ಹೇಳಿದರು.’ – ಶ್ರೀಸತ್‌ಶಕ್ತಿ ಸೌ. ಬಿಂದಾ ನೀಲೇಶ ಸಿಂಗಬಾಳ (೨೦೨೦)

ಕಾಂಚೀಪುರಮ್‌ನ ಕಾಂಚೀಪೀಠದ ಶಂಕರಾಚಾರ್ಯರ ಭಕ್ತರಾದ ಶ್ರೀ. ರಾಜಗೋಪಾಲನ್ ಅವರ ತಾಯಿಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ಪಾದಪೂಜೆ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಆರತಿಯನ್ನು ಬೆಳಗುತ್ತಿರುವಾಗ ಶ್ರೀ. ರಾಜಗೋಪಾಲನ್ ಇವರ ತಾಯಿ ಹಾಗೂ ಪಕ್ಕದಲ್ಲಿ ಶ್ರೀ. ರಾಜಗೋಪಾಲನ

‘೧೨.೨.೨೦೨೧ ರಂದು ನಾವು ಕಾಂಚೀಪುರಮ್‌ನ (ತಮಿಳುನಾಡು) ಕಾಂಚೀಪೀಠದ ಶಂಕರಾಚಾರ್ಯರ ಭಕ್ತರು ಹಾಗೂ ಲೆಕ್ಕಪರಿಶೋಧಕರಾದ (ಆಡಿಟರ್) ಶ್ರೀ. ರಾಜಗೋಪಾಲನ್ ಇವರ ಮನೆಗೆ ಹೋಗಿದ್ದೆವು. `ನಾನು ಸದ್ಗುರು ಆಗಿದ್ದೇನೆ’, ಎಂಬುದು ಅವರ ಪರಿಚಯದವರಿಂದ ಅವರಿಗೆ ಮೊದಲೇ ತಿಳಿದಿದ್ದರಿಂದ ಅವರು ನನ್ನ ಪಾದ್ಯಪೂಜೆಯ ಸಿದ್ದತೆಯನ್ನು ಮಾಡಿಟ್ಟಿದ್ದರು. ನಾನು ಅವರಿಗೆ “ನಾನು ಆಶ್ರಮದಲ್ಲಿನ ಓರ್ವ ಸೇವಕಿಯಾಗಿದ್ದೇನೆ. ನನ್ನ ಪಾದ್ಯಪೂಜೆ ಮಾಡಬೇಡಿ’’ ಎಂದು ಹೇಳಿದರೂ ಅವರು ಕೇಳಲಿಲ್ಲ. ಅವರು, “ಪಾದ್ಯಪೂಜೆಯನ್ನು ನಿರಾಕರಿಸಬೇಡಿ, ಅದು ನಮ್ಮ ಪರಂಪರೆಯಾಗಿದೆ’’ ಎಂದು ಹೇಳುತ್ತಾ ನನ್ನ ಪಾದ್ಯಪೂಜೆ ಮಾಡಿದರು.

ನಾನು ಪಾದ್ಯಪೂಜೆಯ ಸಮಯದಲ್ಲಿ ಮನಸ್ಸಿನಲ್ಲಿ ಗುರುದೇವರ ಸ್ಮರಣೆಯನ್ನು ಮಾಡುತ್ತಿದ್ದೆನು ಹಾಗೂ ಅದರ ಕಡೆಗೆ ಸಾಕ್ಷೀಭಾವದಿಂದ ನೋಡುತ್ತಿದ್ದೆನು. ಗುರುದೇವರು ನಮಗೆ ಎಲ್ಲ ಸ್ಥಿತಿಯಲ್ಲಿಯೂ ಸಹಜಭಾವದಲ್ಲಿರಬೇಕೆಂದು ಕಲಿಸಿರುವುದರಿಂದ ನನಗೆ ಏನೂ ಅನಿಸಲಿಲ್ಲ. `ಅವರ ಪರಂಪರೆಯಲ್ಲಿ ಪಾದ್ಯಪೂಜೆಯನ್ನು ಹೇಗೆ ಮಾಡುತ್ತಾರೆ ?’, ಎಂಬುದು ನನಗೆ ಕಲಿಯಲು ಸಿಕ್ಕಿದುದರಿಂದ ಆಗ ನನಗೂ ಶಿಷ್ಯಭಾವದಲ್ಲಿರಲು ಸಾಧ್ಯವಾಯಿತು. ಗುರುದೇವರು (ಪರಾತ್ಪರ ಗುರು ಡಾ. ಆಠವಲೆ), “ನಾವು ಯಾವಾಗಲೂ ಶಿಷ್ಯಭಾವದಲ್ಲಿರಬೇಕು, ಅದರಿಂದ ನಮಗೆ ಯಾವುದೇ ವಿಷಯದ ಅಹಂಕಾರ ಆಗುವುದಿಲ್ಲ’’ ಎಂದು ಹೇಳುತ್ತಾರೆ. – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಚೆನ್ನೈ . (೧೭.೩.೨೦೨೧)

ಸಂತರು ವ್ಯಕ್ತಪಡಿಸಿರುವ ಭಾವ ! 

೧. `ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರು ಗಂಗಾ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ನರ್ಮದಾ ನದಿಯ ಸಮಾನರಾಗಿದ್ದಾರೆ. ಗಂಗಾ ಮತ್ತು ನರ್ಮದಾ ಈ ನದಿಗಳು ಕೊನೆಗೆ ಸಮುದ್ರವನ್ನು ಸೇರುತ್ತವೆ. ಆ ಸಮುದ್ರ ದಂತೆಯೇ ಸನಾತನದ ಕಾರ್ಯವಾಗಲಿದೆ.’ – ಪ.ಪೂ. ನರಸಿಂಹ (ಆಬಾ) ಉಪಾಧ್ಯೆ ಪುಣೆ, (೫.೭.೨೦೧೯)

೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಮೇಲೆ ಪರಾತ್ಪರ ಗುರು ಡಾ. ಆಠವಲೆಯವರ ಬಹಳ ದೊಡ್ಡ ಕೃಪೆಯಿದೆ. ಸಾಮಾನ್ಯ ಮನುಷ್ಯನು ೨-೩ ದಿನ ಸತತ ಪ್ರವಾಸ ಮಾಡಿ ಬಂದರೆ ಕಾಯಿಲೆ ಬೀಳುತ್ತಾನೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ; ಆದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ವಿಷಯದಲ್ಲಿ ಹಾಗಿರಲ್ಲ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಸ್ವತಃ ಒಂದು ಚಮತ್ಕಾರವಾಗಿದ್ದಾರೆ !’’

– ಪ.ಪೂ. ರಾಮಭಾವೂ ಸ್ವಾಮಿ, ತಂಜಾವೂರು, ತಮಿಳುನಾಡು.