ಆಸ್ಟ್ರೇಲಿಯಾದಲ್ಲಿ ಖಲಿಸ್ತಾನವಾದಿಗಳಿಂದ ಹಿಂದೂ ದೇವಸ್ಥಾನ ಧ್ವಂಸ

  • ದೇವಸ್ಥಾನದ ಗೋಡೆಯ ಮೇಲೆ `ಮೋದಿಯವರನ್ನು ಭಯೋತ್ಪಾದಕನೆಂದು ಘೋಷಿಸಿ’ ಎನ್ನುವ ಬರಹ

  • ಆಸ್ಟ್ರೇಲಿಯಾ ಸರಕಾರ ಹಿಂದೂಗಳ ದೇವಸ್ಥಾನಗಳನ್ನು ರಕ್ಷಿಸುವಲ್ಲಿ ಪುನಃ ವಿಫಲ

ಸಿಡ್ನಿ(ಆಸ್ಟ್ರೇಲಿಯಾ)- ಇಲ್ಲಿಯ ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ಖಲಿಸ್ತಾನವಾದಿಗಳು ಆಕ್ರಮಣ ನಡೆಸಿ ಧ್ವಂಸಗೊಳಿಸಿದರು. ಅಲ್ಲಿಯ ಗೋಡೆಯ ಮೇಲೆ `ಮೋದಿಯವರನ್ನು ಭಯೋತ್ಪಾದಕನೆಂದು ಘೋಷಿಸಿರಿ’ ಎಂದು ಬರೆದರು. ಹಾಗೆಯೇ ದೇವಸ್ಥಾನದ ಬಾಗಿಲಿಗೆ ಖಲಿಸ್ತಾನದ ಬಾವುಟವನ್ನು ಹಾರಿಸಿದರು. ಈ ಘಟನೆ ಮೇ 5 ರಂದು ಮುಂಜಾನೆ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ. ಪೊಲೀಸರು ಈ ಘಟನೆಯ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಈ ಹಿಂದೆಯೂ ಆಸ್ಟ್ರೇಲಿಯಾದಲ್ಲಿ ಅನೇಕ ಬಾರಿ ಹಿಂದೂಗಳ ದೇವಸ್ಥಾನಗಳ ಮೇಲೆ ಖಲಿಸ್ತಾನಿಗಳಿಂದ ಆಕ್ರಮಣ ನಡೆದಿದೆ. ಈ ವಿಷಯದಲ್ಲಿ ಮಾರ್ಚನಲ್ಲಿ ಪ್ರಧಾನಮಂತ್ರಿ ಮೋದಿಯವರು ಆಸ್ಟ್ರೇಲಿಯಾ ಪ್ರಧಾನಮಂತ್ರಿ ಆಂಥನಿ ಅಲ್ಬಾನಿಜ್ ಇವರೊಂದಿಗೆ ಚರ್ಚಿಸಿದ್ದರು. ಆಗ ಅಲ್ಬಾನಿಜ್ ಇವರು ` ಭಾರತೀಯರನ್ನು ರಕ್ಷಿಸಲಾಗುವುದು’ ಎಂದು ಆಶ್ವಾಸನೆ ನೀಡಿದ್ದರು; ಆದರೆ ಪ್ರತ್ಯಕ್ಷದಲ್ಲಿ ಅವರ ಸರಕಾರ ವಿಫಲವಾಗಿದೆಯೆಂದು ಈ ಪ್ರಕರಣದಿಂದ ಕಂಡು ಬಂದಿದೆ.

ಸಂಪಾದಕರ ನಿಲುವು

ಆಸ್ಟ್ರೇಲಿಯಾ, ಕೆನಡಾ ಮತ್ತು ಬ್ರಿಟನ್ ಈ ದೇಶಗಳಲ್ಲಿ ಖಲಿಸ್ತಾನವಾದಿ ಸಿಖ್ಖರು ಹಿಂದೂಗಳ ದೇವಸ್ಥಾನಗಳನ್ನು ಮತ್ತು ರಾಯಭಾರಿ ಕಚೇರಿಗಳ ಮೇಲೆ ನೇರವಾಗಿ ಆಕ್ರಮಣ ನಡೆಸುತ್ತಾರೆ ಮತ್ತು ಅಲ್ಲಿಯ ಪೊಲೀಸರು, ಸರಕಾರ ನಿಷ್ಕ್ರಿಯರಾಗಿರುತ್ತಾರೆ. ಆಕ್ರಮಣಕಾರರ ಮೇಲೆ ಕ್ರಮವನ್ನು ಕೈಕೊಳ್ಳುವುದಿಲ್ಲ. ಇದರಿಂದ ಖಲಿಸ್ತಾನವಾದಿಗಳಿಗೆ ಅವರ ಬೆಂಬಲವಿದೆಯೆನ್ನುವುದು ಗಮನಕ್ಕೆ ಬರುತ್ತದೆ. ಭಾರತವು ಇಂತಹ ದೇಶಗಳನ್ನು ಈ ವಿಷಯದಲ್ಲಿ ಪ್ರಶ್ನಿಸುವುದು ಆವಶ್ಯಕವಾಗಿದೆ.