‘ವಿಶ್ವಾಸಘಾತಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ !

‘ತಂತ್ರಜ್ಞಾನ ಹಾಗೂ ಗುಲಾಮಗಿರಿ ನಡುವಿನ ಏಕೈಕ ವ್ಯತ್ಯಾಸವೆಂದರೆ, ಗುಲಾಮರಿಗೆ ಅವರು ಸ್ವತಂತ್ರರಲ್ಲ ಎಂಬುದು ಸಂಪೂರ್ಣ ತಿಳಿದಿರುತ್ತದೆ ! ಲೆಬೆನಾನ್ ಮೂಲದ ಪ್ರಸಿದ್ಧ ಅಮೇರಿಕನ್ ಗಣಿತಜ್ಞ ನಸ್ಸೀಮ್ ನಿಕೋಲಸ್ ತಲೇಬ್ ಇವರ ಈ ಹೇಳಿಕೆಯಲ್ಲಿ ಬಹಳಷ್ಟು ರಹಸ್ಯ ಅಡಗಿದೆ. ಈ ದೃಷ್ಟಿಕೋನದಿಂದ ಕೇವಲ ಭಾರತದ ವಿಚಾರ ಮಾಡಿದರೂ ಇತರ ತಂತ್ರಜ್ಞಾನದ ಆವಿಷ್ಕಾರಗಳನ್ನು ಬದಿಗಿಡಬಹುದು; ಆದರೆ ಸುಮಾರು ೬ ವರ್ಷಗಳ ಹಿಂದೆ ಭಾರತಕ್ಕೆ ಬಂದಿರುವ ‘ಫೋರ್ ಜೀ ತಂತ್ರಜ್ಞಾನ ಹಾಗೂ ಅದಕ್ಕೂ ಮೊದಲು ಬಂದಿರುವ ‘ವಾಟ್ಸ್‌ಆಪ್ ಈ ಸಾಮಾಜಿಕ ಮಾಧ್ಯಮಗಳೇ ಭಾರತೀಯರ ವಿಚಾರಶೈಲಿ, ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯ ಮಾಡುವ ಅವರ ಪದ್ಧತಿ ಮಾತ್ರವಲ್ಲ, ಸಂಪೂರ್ಣ ಜಗತ್ತನ್ನು ಅಕ್ಷರಶಃ ತಿರುವುಮುರುವು ಮಾಡಿದವು. ೨೦೧೬ ರ ಭಾರತ ಮತ್ತು ಇಂದಿನ ಭಾರತದಲ್ಲಿ ಆಕಾಶಪಾತಾಳದಷ್ಟು ವ್ಯತ್ಯಾಸವಿದೆ. ಇದು ತಂತ್ರಜ್ಞಾನದ್ದೇ ಫಲಿತಾಂಶವಾಗಿದೆ. ಭಾರತೀಯರ ಶೈಕ್ಷಣಿಕ, ಸಾಮಾಜಿಕ, ಕಾನೂನು, ನೈತಿಕತೆ, ಧಾರ್ಮಿಕ, ಸಾಂಸ್ಕೃತಿಕ ಹೀಗೆ ಪ್ರತಿಯೊಂದು ಸ್ತರದಲ್ಲಿ ಇದರಿಂದ ನೇರ ಪರಿಣಾಮವಾಗಿದೆ. ಇದರಲ್ಲಿ ನಾವು ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದರೆ ಕೃತ್ರಿಕ ಬುದ್ಧಿಶಕ್ತಿಯ ಬಗ್ಗೆ ಇನ್ನೂ ಉಲ್ಲೇಖ ಮಾಡಿಲ್ಲ ! ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ನ ತಂತ್ರಜ್ಞಾನವು ಸುಮಾರು ಒಂದು ದಶಕದ ಹಿಂದೆ ರೂಢಿಗೆ ಬಂದಿತ್ತು. ‘ಯೂ ಟ್ಯೂಬ್, ಫೇಸ್‌ಬುಕ್, ನೆಟ್‌ಫ್ಲಿಕ್ಸ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ನಮ್ಮ ಇಷ್ಟಕ್ಕನುಸಾರವೆ ಕಾಣಿಸುವ ವಿಡಿಯೋ, ಜಾಹೀರಾತು, ಹಾಡುಗಳು (ರೆಕಮಂಡೇಶನ್ ಸಿಸ್ಟಮ್), ‘ಗೂಗಲ್ ಹಾಗೂ ಅದರಂತಹ ಶೋಧ ಜಾಲತಾಣಗಳಲ್ಲಿನ ಅತ್ಯಾಧುನಿಕ ಪದ್ಧತಿಗಳನ್ನು ಉಪಯೋಗಿಸಿ ಯಾವುದೇ ವಿಷಯವನ್ನು ಶೋಧಿಸುವುದು, ‘ಅಲೆಕ್ಸಾ ಅಥವಾ ‘ಸಿರಿಯಂತಹ ಮಾನವ ಧ್ವನಿಯನ್ನು ಗುರುತಿಸುವ ತಂತ್ರಜ್ಞಾನವು ಸಮಾಜದಲ್ಲಿ ರೂಢಿಯಾಗಿರುವ ಕೆಲವು ಆವಿಷ್ಕಾರಗಳಾಗಿವೆ. ‘ವಿವಿಧ ಸಮಸ್ಯೆಗಳನ್ನು ಸ್ವಯಂಚಾಲಿತ ಪದ್ಧತಿಯಿಂದ ಪರಿಹರಿಸುವುದು ಅಂದರೆ ‘ಆಟೋಮೇಟೆಡ್ ಡಿಶಿಶನ್ ಮೇಕಿಂಗ್ ಈ ಪದ್ಧತಿಯು ವಾಣಿಜ್ಯ ವಲಯದಲ್ಲಿ ರೂಢಿಯಾಗಿದೆ. ಇವೆಲ್ಲದರಲ್ಲಿಯೂ ಸುಮಾರು ೬ ತಿಂಗಳ ಹಿಂದೆ ಉದಯವಾಗಿರುವ ‘ಚಾಟ್‌ಜಿಪಿಟಿ ಹಾಗೂ ಅದರೊಂದಿಗೆ ಸ್ಪರ್ಧೆ ಮಾಡುವ ಗೂಗಲ್‌ನ ‘ಬಾರ್ಡ್ ಈ ತಂತ್ರಜ್ಞಾನವನ್ನು ಕೃತ್ರಿಕ ಬುದ್ಧಿಶಕ್ತಿಯಲ್ಲಿನ ಇಂದಿನ ವರೆಗಿನ ಅತಿ ದೊಡ್ಡ ಸಂಶೋಧನೆಯೆಂದು ಪರಿಗಣಿಸಲಾಗುತ್ತಿದೆ.

‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದಲ್ಲಿ ಮಾನವನು ಹಾಕುತ್ತಿರುವ ದಾಪುಗಾಲು ಭವಿಷ್ಯದಲ್ಲಿನ ಭಯಾನಕತೆಯನ್ನು ತೋರಿಸುತ್ತಿದೆ. ಗೂಗಲ್‌ನ ಮುಖ್ಯ ಕಾರ್ಯಕಾರಿ ಅಧಿಕಾರಿ ಸುಂದರ ಪಿಚೈ ಇವರು ಇತ್ತೀಚೆಗಷ್ಟೆ ಈ ವಿಷಯದಲ್ಲಿ ಮಹತ್ವದ ಅಂಶ ಮಾತನಾಡಿದ್ದಾರೆ. ಅವರು ಈ ತಂತ್ರಜ್ಞಾನದ ಭವಿಷ್ಯವು ನನ್ನ ಕಣ್ಣೆದುರು ಬಂದು ನನ್ನ ನಿದ್ರೆ ಕೆಡಿಸಿದೆ, ಎಂದಿದ್ದಾರೆ. ವೇಗದಿಂದ ಆಗುತ್ತಿರುವ ತಂತ್ರಜ್ಞಾನದ ಪ್ರಗತಿಯನ್ನು ನಿಯಂತ್ರಿಸುವುದು ಅತ್ಯಂತ ಆವಶ್ಯಕವಾಗಿದೆ. ಇಲ್ಲದಿದ್ದರೆ, ಅದರ ದುರುಪಯೋಗದಿಂದ ಮಾನವನ ವಿನಾಶವಾಗಬಹುದು, ಎಂಬ ಭೀತಿಯನ್ನೂ ಪಿಚೈಯವರು ವ್ಯಕ್ತಪಡಿಸಿದ್ದಾರೆ. ಅಲ್ಲಿಯೇ ನೈತಿಕತೆ ಮತ್ತು ಅಧ್ಯಾತ್ಮದ ಮಹತ್ವ ಅರಿವಾಗುತ್ತದೆ. ‘ಅಧ್ಯಾತ್ಮದ ಹೊರತು ವಿಜ್ಞಾನದ ವೈಭವೀಕರಣ ಹಾಗೂ ಅದರಲ್ಲಿನ ಪ್ರಗತಿಯು ಜಾಗತಿಕ ಮಾನವಸಮೂಹದ ವಿನಾಶಕ್ಕೆ ಕಾರಣವಾಗಬಹುದು, ಎಂಬುದು ಪಿಚೈಯವರ ಹೇಳಿಕೆಯಿಂದ ಗಮನದಲ್ಲಿಡಬೇಕಾಗಿದೆ. ಧರ್ಮಾಧಾರಿತ ಸಮಾಜವೇ ವೈಜ್ಞಾನಿಕ ಪ್ರಗತಿಯನ್ನು ನಿಯಂತ್ರಿಸಲು ಸಾಧ್ಯ. ಅದಕ್ಕಾಗಿಯೆ ತಂತ್ರಜ್ಞಾನ ಸಹಿತ ಮಾನವಸಮೂಹವನ್ನು ಸಾಧನಾನಿರತಗೊಳಿಸಿ ಜಾಗತಿಕ ಸ್ತರದಲ್ಲಿ ಕ್ರಾಂತಿಕಾರಿ ಪ್ರಯತ್ನಗಳಾಗುವುದು ಅತ್ಯಂತ ಆವಶ್ಯಕವಾಗಿದೆ. ಇಲ್ಲದಿದ್ದರೆ ಮಾನವವಿಶ್ವ ದಾರಿತಪ್ಪಿ ತನ್ನನ್ನೇ ನಾಶಗೊಳಿಸುವುದು, ಎಂಬುದರಲ್ಲಿ ಎಳ್ಳಷ್ಟೂ ಸಂದೇಹವಿಲ್ಲ !