ಭಾರತದ ವೈಚಾರಿಕ ವಿಧ್ವಂಸದ ಸತ್ಯ ಇತಿಹಾಸ !

‘೧೯೭೦ ರ ದಶಕದಲ್ಲಿ ಸೋವಿಯೆತ್ ಸಂಘದ ವ್ಯವಸಾಯಿಕ ಪ್ರಚಾರವನ್ನು (ಪ್ರೊಪಗಂಡಾ) ಮಾಡುವ ‘ಯುರೀ ಬೆಝ್‌ಮೆನೋವ್ ಇವನು ಅಮೇರಿಕಾಗೆ ಶರಣಾದನು. ಸೋವಿಯೆತ್ ಯುನಿಯನ್‌ನ ಗೂಢಚಾರ ಸಂಸ್ಥೆ ‘ಕೆಜಿಬಿ ಸಂಪೂರ್ಣ ಜಗತ್ತಿನಲ್ಲಿ ಸಾಮ್ಯವಾದಿ ವಿಚಾರಶೈಲಿಯನ್ನು ಪಸರಿಸಲು ಮಹಾಭಯಂಕರ ಪದ್ಧತಿಗಳನ್ನು ಉಪಯೋಗಿಸಿತ್ತು. ಬೆಝ್‌ಮೆನೋವ್ ಇವನು ಆ ಎಲ್ಲ ರಹಸ್ಯಗಳನ್ನು ಜಗತ್ತಿನ ಮುಂದೆ ಬಹಿರಂಗಪಡಿಸಿದನು.

ಆ ಪ್ರಕ್ರಿಯೆಯ ಹೆಸರು ‘ಐಡಿಯಾಲಾಜಿಕಲ್ ಸಬ್‌ವರ್ಜನ್! ಆಗಿತ್ತು. (ಯಾವುದಾದರೊಂದು ಸರಕಾರಿ ಅಥವಾ ಸಾಮಾಜಿಕ ವ್ಯವಸ್ಥೆಯನ್ನು ಅಪ್ರತ್ಯಕ್ಷ ರೀತಿಯಲ್ಲಿ ಅಥವಾ ರಹಸ್ಯವಾಗಿ ನಾಶಮಾಡಲು ಹಮ್ಮಿಕೊಂಡಿರುವ ವೈಚಾರಿಕ ಸ್ತರದ ಷಡ್ಯಂತ್ರ) ‘ಸಬ್‌ವರ್ಜನ್ನ ವಿಷಯವು ೧೯೭೦ ರಲ್ಲಿ ಜಗತ್ತಿನ ಮುಂದೆ ಬಂದಿದ್ದರೂ, ಆ ತಂತ್ರವನ್ನು ಜಗತ್ತಿನ ಅನೇಕ ಸಾಮ್ರಾಜ್ಯಗಳು ಸಾವಿರಾರು ವರ್ಷಗಳಿಂದ ಉಪಯೋಗಿಸುತ್ತಾ ಬಂದಿವೆ. ಬ್ರಿಟಿಷ ಸಾಮ್ರಾಜ್ಯವೂ ಅದರಲ್ಲಿ ಒಂದಾಗಿತ್ತು.

ಬ್ರಿಟಿಷರು ಇಸ್ಲಾಮೀ ದರೋಡೆಕೋರರಿಗಿಂತ ಎಷ್ಟೋಪಟ್ಟು ಹೆಚ್ಚು ಚತುರರಾಗಿದ್ದರು. ಅವರು ೨೦೦ ವರ್ಷ ಭಾರತೀಯರನ್ನೇ ತಮ್ಮ ದಲಾಲರನ್ನಾಗಿ ಮಾಡಿ ಭಾರತದ ಮೇಲೆ ರಾಜ್ಯವನ್ನು ಮಾಡಿದರು. ದರೋಡೆಕೋರರ ಉದ್ದೇಶಗಳು ಗಮನಕ್ಕೆ ಬರುತ್ತವೆ; ಆದರೆ ಆಂಗ್ಲರಿಗೆ ಸಹಾಯ ಮಾಡಿದ ಈ ಭಾರತೀಯರು ಯಾರಾಗಿದ್ದರು ?  ಹಾಗೆಯೇ ಅವರು ಹೀಗೇಕೆ ಮಾಡಿದರು? ‘ಸೋನೇಕಿ ಚಿಡಿಯಾ ಎಂದು ಕರೆಯಲ್ಪಡುವ ಭಾರತದಲ್ಲಿ ಇಷ್ಟೊಂದು ಜ್ಞಾನ ಮತ್ತು ವೈಭವವಿರುವಾಗ ನಾವು ಹೀಗೆ ಅನಿರೀಕ್ಷಿತವಾಗಿ ಹೇಗೆ ದುರ್ಬಲರಾದೆವು ?

ನಾವು ಹೊರಗಿನವರಿಂದ ಅಲ್ಲ, ಸ್ವಕೀಯರಿಂದಲೇ ಸೋತೆವು. ಯಾವ ಇತಿಹಾಸವನ್ನು ನಾವು ಕಲಿತಿರುವೆವೋ ಆ ವಿಷಯ ಈ ಲೇಖನದಲ್ಲಿಲ್ಲ. ಇದರಲ್ಲಿ ಭಾರತದ ಸತ್ಯ ಇತಿಹಾಸವಿದೆ, ಇದು ಭಾರತದ ವೈಚಾರಿಕ ವಿಧ್ವಂಸದ ಇತಿಹಾಸವಾಗಿದೆ. (ಐಡಿಯಾಲಾಜಿಕಲ್ ಸಬ್‌ವರ್ಜನ್) ! ಈ ವಿಷಯದ ಮೇಲೆ ಬೆಳಕು ಚೆಲ್ಲುವ ಒಂದು ವೀಡಿಯೋವನ್ನು ‘ಪ್ರಾಚ್ಯಮ್ ಎಂಬ ರಾಷ್ಟ್ರನಿಷ್ಠ ‘ಯೂ ಟ್ಯೂಬ್ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿದೆ. ಇಷ್ಟರವರೆಗೆ ೧೫ ಲಕ್ಷ ಜನರು ನೋಡಿರುವ ಈ ವಿಡಿಯೋದಲ್ಲಿನ ಅಭ್ಯಾಸಪೂರ್ಣ ಮತ್ತು ಜಾಗೃತಿಪರ ಮಾಹಿತಿಯನ್ನು ನಮ್ಮ ವಾಚಕರಿಗಾಗಿ ಇಲ್ಲಿ ಮುದ್ರಿಸುತ್ತಿದ್ದೇವೆ.

(ಪೂರ್ವಾರ್ಧ)

೧. ಸ್ವಾತಂತ್ರ್ಯದ ನಂತರ ಆಂಗ್ಲರು ಭಾರತವನ್ನು ಬಿಟ್ಟುಹೋಗದೆ ಇಲ್ಲಿಯೆ ‘ನಸುಗಪ್ಪು (ಭಾರತೀಯರು) ಸಾಹೇಬ’ರ ರೂಪದಲ್ಲಿ ಉಳಿದರು

೧೯೪೭ ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ನಿಜವಾಗಿಯೂ ೨೦೦ ವರ್ಷಗಳ ಆ ಕರಾಳರಾತ್ರಿ ಮುಗಿದಿತ್ತು ? ಆಂಗ್ಲರು ದೊಡ್ಡ ದೊಡ್ಡ ಹಡಗುಗಳಲ್ಲಿ ಇಂಗ್ಲೆಂಡ್‌ಗೆ ಹೋಗುತ್ತಿದ್ದರು. ನಮ್ಮ ಮುಖಗಳು ಆನಂದದಿಂದ ತುಂಬಿದ್ದವು. ಯಾವುದಕ್ಕಾಗಿ ಲಕ್ಷಗಟ್ಟಲೆ ಕ್ರಾಂತಿಕಾರಿಗಳು ಹೋರಾಡಿದರೊ, ಅದರ ಉದಯ ಕಾಲ ನಾಳೆ ನೋಡಲಿಕ್ಕಿದ್ದೇವೆ, ಎಂದು ಭಾರತೀಯರಿಗೆ ಅನಿಸುತ್ತಿತ್ತು. ಈಗ ಎಲ್ಲ ಕ್ರಾಂತಿಕಾರಿಗಳಿಗೆ ಮತ್ತು ರಾಷ್ಟ್ರವಾದಿ ಭಾರತೀಯರಿಗೆ ದೆಹಲಿಯಿಂದ ಆಮಂತ್ರಣ ಬರುವುದು. ಎಲ್ಲರೂ ಒಟ್ಟಾಗಿ ಭಾರತದ ಒಂದು ದೊಡ್ಡ ಕಥೆಯನ್ನು ಬರೆಯುವರು. ನಮ್ಮ ದೇಶ ಈಗ ಸ್ವತಂತ್ರವಾಗಿದೆ. ಈಗ ಏನೂ ಚಿಂತೆಯಿಲ್ಲ ?’, ಆದರೆ ಆ ಆಮಂತ್ರಣ ಎಂದಿಗೂ ಬರಲೇ ಇಲ್ಲ. ಮುಚ್ಚಿದ ಬಾಗಿಲುಗಳ ಹಿಂದೆ ಯಾವ್ಯಾವ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತೋ ಅದು ನಮಗೆ ಗೊತ್ತೇ ಇರಲಿಲ್ಲ.

ಅನಂತರ ಒಂದು ದಿನ ಅನಿರೀಕ್ಷಿತವಾಗಿ ಗೊಂದಲ ಪ್ರಾರಂಭವಾಯಿತು. ‘೧೦ ವಾರಗಳಲ್ಲಿ ಈ ದೇಶವನ್ನು ಹಿಂದೂ ಮತ್ತು ಮುಸಲ್ಮಾನರಲ್ಲಿ ವಿಭಜನೆ ಮಾಡಲಾಗುವುದು’, ಎಂದು ಘೋಷಿಸಲಾಯಿತು. ನಮಗೆ ೧೯೪೭ ರಲ್ಲಿ ಬಿಳಿ ಸಾಹೇಬರು ಹೊರಟು ಹೋಗುವರು, ಎಂದು ಅನಿಸುತ್ತಿತ್ತು, ಆದರೆ ಇದು ನಮ್ಮ ತಪ್ಪಾಗಿತ್ತು. ಕೆಲವು ‘ಸಾಹೇಬರು ಹೋಗಲೇ ಇಲ್ಲ, ಇಲ್ಲಿಯೆ ಉಳಿದುಕೊಂಡರು.

೨. ಇಸ್ಲಾಮೀ ಆಕ್ರಮಣಕಾರರ ಗುಲಾಮಗಿರಿಯಲ್ಲಿ ಭಾರತೀಯರು ನೂರಾರು ವರ್ಷಗಳ ಕಾಲ ಅತ್ಯಾಚಾರಗಳನ್ನು ಸಹಿಸಿಕೊಂಡರು

ಈ ವಿಷಯ ೧ ಸಾವಿರ ವರ್ಷಗಳ ಹಿಂದಿನದಾಗಿದೆ ! ಆಗ ಭಾರತವು ಇಸ್ಲಾಮೀ ದರೋಡೆಕೋರರೊಂದಿಗೆ ಹೋರಾಡುತ್ತಿತ್ತು. ಜನರಿಂದ ಹಣ ಸುಲಿಗೆ ಮಾಡಲಾಗುತ್ತಿತ್ತು; ಆದರೆ ಅದಕ್ಕೆ ಬಹಳಷ್ಟು ಒತ್ತಡವನ್ನು ಹೇರಬೇಕಾಗುತ್ತಿತ್ತು. ದರೋಡೆಕೋರರು ಮುಷ್ಟಿಯಷ್ಟೇ ಬಂದಿದ್ದರು; ಕೋಟಿಗಟ್ಟಲೆ ಅಜ್ಞಾನಿ ಜನರನ್ನು ಯಾರು ಸಂಭಾಳಿಸುವುದು ? ಕೊನೆಗೆ ಎಷ್ಟು ತಲೆಗಳನ್ನು ಕಡಿಯಬಹುದಾಗಿತ್ತು ? ಶೇರ್‌ಶಾಹನಂತಹ ಅಫ್ಗಾನಿಗಳು ಇಲ್ಲಿನ ಜನರನ್ನೇ ತೆಗೆದುಕೊಂಡು ಸರದಾರರ ಸೈನ್ಯವನ್ನು ನಿರ್ಮಿಸಿದರು. ಪ್ರತಿಯೊಬ್ಬ ಸರದಾರನ ಕೈ ಕೆಳಗೆ ನೂರಾರು ಸೈನಿಕರಿದ್ದರು. ಅಕ್ಬರನ ಸಮಯದಲ್ಲಿ ಇಂತಹ ಸೈನಿಕರು ಸುಮಾರು ೪೪ ಲಕ್ಷದಷ್ಟಿದ್ದರು. ‘ಬಡವರ ಮನಸ್ಸಿನಲ್ಲಿ ಸರಕಾರದ ಬಗ್ಗೆ ಭಯವನ್ನು ಮೂಡಿಸುವುದೇ’, ಅವರ ಕೆಲಸವಾಗಿತ್ತು. ಇದೇ ಸೈನ್ಯದಲ್ಲಿ ‘ದರೋಗಾಸಾಹೇಬ’ (ಫೌಜದಾರ) ಇರುತ್ತಿದ್ದರು. ಅವರ ಕಾಲಿನ ಸಪ್ಪಳವಾದರೂ ಬಡಜನರು ಥರ ಥರ ನಡುಗುತ್ತಿದ್ದರು. ಈ ಸಂದರ್ಭದಲ್ಲಿ  ಪ್ರಸಿದ್ಧ ಇತಿಹಾಸತಜ್ಞ  ಶ್ರೀ. ನೀರಜ ಅತ್ರಿ ಹೇಳುತ್ತಾರೆ, “ಈ ‘ಸಾಹೇಬ’ ಶಬ್ದ ಎಲ್ಲಿಂದ ಬಂದಿತು ? ಮಹಮ್ಮದ ಪೈಗಂಬರನ ಜೊತೆಗೆ ಯಾವ ಜನರಿದ್ದರೋ, ಅಂದರೆ ಯಾರು ಅವರನ್ನು ಪ್ರತ್ಯಕ್ಷ ನೋಡಿದ್ದಾರೆಯೋ, ಅವರಿಗೆ ‘ಸಾಹೇಬ’ ಎನ್ನುತ್ತಿದ್ದರು. ಅವರನ್ನು ಬಹಳ ಮಹಾನ ಅಥವಾ ಶ್ರೇಷ್ಠರೆಂದು ತಿಳಿಯಲಾಗುತ್ತಿತ್ತು. ಸಾಹೇಬ ಶಬ್ದ ಇಂದಿಗೂ ಪ್ರಚಲಿತವಿದೆ !”

ಆ ಸಮಯದಲ್ಲಿ ಜನರಿಗೆ ಕೇವಲ ೩ ಮಾರ್ಗಗಳಿದ್ದವು. ಒಂದು ‘ಮತಾಂತರವಾಗಿ  ಒಪ್ಪಂದ ಮಾಡಿಕೊಳ್ಳಿರಿ !’, ‘ಜಿಮ್ಮಿ (ಟಿಪ್ಪಣಿ *) ಆಗಿರಿ !’ ಅಥವಾ ‘ತಲೆಯನ್ನು ಕತ್ತರಿಸಿಕೊಳ್ಳಿರಿ !’ ಬಹಳಷ್ಟು ಜನರು ಜಿಮ್ಮಿಗಳಾಗಿ ಉಳಿದುಕೊಂಡರು.

(ಟಿಪ್ಪಣಿ * : ‘ಜಿಮ್ಮಿ ಎಂದರೆ ‘ಸಂರಕ್ಷಿತ ವ್ಯಕ್ತಿ, ಅಂದರೆ ಅವನು ಇಸ್ಲಾಮೀ ಆಡಳಿತದಲ್ಲಿ ತನ್ನ ಧರ್ಮವನ್ನು ಬಿಡದೇ ಇರಲು ಜಿಝಿಯಾ ತೆರಿಗೆಯನ್ನು ತುಂಬಿಸುವುದರೊಂದಿಗೆ ರಾಜ್ಯದೊಂದಿಗೆ ಏಕನಿಷ್ಠನಾಗಿರುವುದು.’) ‘ಜಿಮ್ಮಿ ಆಗಿ ಉಳಿದರೆ ಅವಮಾನವನ್ನು ಸಹಿಸಿಕೊಂಡು ಬದುಕಿ ಉಳಿಯಬಹುದು. ಸ್ವಲ್ಪ ಒತ್ತಡದಲ್ಲಿ ಉಳಿಯುವುದು, ‘ಜಿಝಿಯಾ ತೆರಿಗೆಯನ್ನು ಕೊಡುವುದು, ಹೀಗೆ ಜೀವಂತವಾದರೂ ಉಳಿಯಬಹುದು. ನೂರಾರು ವರ್ಷಗಳ ವರೆಗೆ ಭಾರವನ್ನು ಸಹಿಸಿಕೊಂಡು ಸಾಹೇಬರ ಭಯ ನಮ್ಮ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಿತು. ಯಾವಾಗ ಇತರ ಜಗತ್ತು ಶೀಘ್ರಗತಿಯಲ್ಲಿ ಮುಂದೆ ಹೋಗುತ್ತಿತ್ತೋ, ಆಗ ನಮ್ಮ ಸಭ್ಯತೆಯ ಆತ್ಮವಿಶ್ವಾಸ ಕುಸಿಯುತ್ತಾ ಹೋಗುತ್ತಿತ್ತು. ರಾಮರಾಜ್ಯದ ವಿಶಾಲ ಸಾಮ್ರಾಜ್ಯ ಈಗ ಜನರ ಮನಸ್ಸಿನಲ್ಲಿ ಕೇವಲ ಒಂದು ನೆನಪಾಗಿ ಉಳಿದಿತ್ತು. ಈಗ ಯಾವ ದರೋಡೆಕೋರರು ಹೋಗುತ್ತಿದ್ದಾರೆ ? ಮತ್ತು ಯಾವ ದರೋಡೆಕೋರರು ಬರುತ್ತಿದ್ದಾರೆ ? ಎಂಬುದನ್ನು ನೋಡುವುದಷ್ಟೇ ಬಾಕಿ ಉಳಿದಿತ್ತು.

೩. ಆಂಗ್ಲರು ಮುಸಲ್ಮಾನ ಆಡಳಿತದಿಂದ ಪೀಡಿತ ಜನರ ಲಾಭ ಪಡೆದರು

೧೭೫೭ ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಬಂಗಾಲವನ್ನು ಸಹಜವಾಗಿ ಗೆದ್ದುಕೊಂಡಿತು. ಭಾರತದಲ್ಲಿ ಅಬ್ಜಾವಧಿ ಸಂಪತ್ತಿರುವ ಅಸಂಖ್ಯ ರಾಜ್ಯಗಳಿದ್ದವು. ತಮಗಿಂತ ನೂರಾರು ಪಟ್ಟು ಹೆಚ್ಚು ಜನಸಂಖ್ಯೆಯನ್ನು ನಿಯಂತ್ರಣದಲ್ಲಿಡುವುದು, ಆಂಗ್ಲರ ಮುಂದಿನ ನಿಜವಾದ ಸವಾಲಾಗಿತ್ತು. ಆಗ ಭಾರತೀಯರು ಹೆದರಿದ್ದರು ಮತ್ತು ಅವರು ಇಸ್ಲಾಮೀ ಆಡಳಿತದ ಗುಲಾಮಗಿರಿಯಲ್ಲಿ ನೌಕರಿಯನ್ನು ಹುಡುಕುತ್ತಿದ್ದರು.

ಬೆಝ್‌ಮೆನೋವ್ ‘ಐಡಿಯಾಲಾಜಿಕಲ್ ಸಬ್ ವರ್ಜನ್’ನ ಸಂದರ್ಭದಲ್ಲಿ ಏನು ಹೇಳುತ್ತಾನೆಂದರೆ, ‘ಯುದ್ಧವನ್ನು ಮಾಡದಿರುವುದೇ’ ಸರ್ವಶ್ರೇಷ್ಠ ಯುದ್ಧವಾಗಿದೆ ! ಇದರಲ್ಲಿ ಶತ್ರು ರಾಷ್ಟ್ರದಲ್ಲಿನ ಮೌಲ್ಯಭರಿತ ವಿಷಯಗಳನ್ನು ಮರೆತು ಹೋಗುವಂತೆ ಮಾಡಲಿಕ್ಕಿರುತ್ತದೆ. ಭಾರತದ ಸಾಮಾಜಿಕ ವ್ಯವಸ್ಥೆ, ಶಿಕ್ಷಣ, ಧರ್ಮ ಇವು ನಮ್ಮ ಸಭ್ಯತೆಯ ವೈಶಿಷ್ಟ್ಯ ಗಳಾಗಿದ್ದವು; ಆದರೆ ಪ್ರತಿಯೊಂದು ಸಮಾಜದಂತೆಯೇ ನೂರಾರು ವರ್ಷಗಳ ಬಡತನ ಮತ್ತು ಉಪವಾಸ ಬೀಳುವುದರಿಂದ ಕೆಲವು ಸಮಸ್ಯೆಗಳೂ ಉದ್ಭವಿಸಿದ್ದವು. ಈ ಸಮಸ್ಯೆಗಳನ್ನು ಗುರುತಿಸಿ ಬ್ರಿಟಿಷರ ನೀಲಿ ಕಣ್ಣುಗಳು ಮಿಂಚಿದವು. ಬೆಝ್‌ಮೆನೋವ್ಹಾ ಮುಂದಿನಂತೆ ಹೇಳುತ್ತಾನೆ, ‘ಸೋವಿಯತ್ ಜನರು ‘ಐಡಿಯಾಲಾಜಿಕಲ್ ಸಬವರ್ಜನ್’ ಈ ಸಂಜ್ಞೆಯನ್ನು ಉಪಯೋಗಿಸುತ್ತಾರೆ. ಇದರ ಅರ್ಥ, ವಾಸ್ತವಿಕತೆಯತ್ತ ನೋಡುವ ದೃಷ್ಟಿಕೋನವನ್ನು ಬದಲಾಯಿಸುವುದು. ಅಂದರೆ ತುಂಬಾ ಜ್ಞಾನವಿದ್ದರೂ ಯಾರೂ ಕೂಡ ಅಂತಿಮ ನಿಷ್ಕರ್ಷದ ವರೆಗೆ ತಲುಪಲಾರರು. ಇದು ‘ದೊಡ್ಡ ಬ್ರೇನ್‌ವಾಶಿಂಗ್’ ಪ್ರಕ್ರಿಯೆಯಾಗಿದೆ. ಅದನ್ನು ಮೂಲತಃ ೪ ಹಂತಗಳಲ್ಲಿ ವಿಭಜಿಸಲಾಗಿದೆ.

ಮೊದಲ ಹಂತ – ನೈತಿಕತೆಯ ವಿರುದ್ಧದ ಕಾರ್ಯ, ಅಂದರೆ ‘ಡಿಮೋರಲೈಸೇಶನ್’ ಮಾಡುವುದು ! ಇದರ ಅಂತರ್ಗತ ಧರ್ಮ (ಸನಾತನ ಹಿಂದೂ ಧರ್ಮವನ್ನು) ನಾಶ ಮಾಡುವುದು, ಅದನ್ನು ಅಪಮಾನಿಸುವುದು, ಅದರ ಬದಲು ವಿವಿಧ ಪಂಥ, (ಹೆಚ್ಚಾಗಿ ಅಯೋಗ್ಯ, ಅಂದರೆ ಮೂಲ ಧರ್ಮವಿರೋಧಿ) ರೂಢಿಗಳನ್ನು ರೂಢಿ ಮಾಡುವುದು ಆದಷ್ಟು ಧರ್ಮದ ಸರ್ವೋಚ್ಚ ಉದ್ದೇಶದಿಂದ (ಅಂದರೆ ಈಶ್ವರಪ್ರಾಪ್ತಿಯ ಉದ್ದೇಶದಿಂದ) ಸಮಾಜವನ್ನು ದೂರ ಒಯ್ಯವುದು, ಈ ವಿಷಯಗಳಿರುತ್ತವೆ.’

೪. ಆಂಗ್ಲರು ಆಧುನಿಕ ಮುದ್ರಣ ತಂತ್ರಜ್ಞಾನದ ಮೂಲಕ ಗೂಢ ಹಿಂದೂ ಗ್ರಂಥಗಳ ಅಯೋಗ್ಯ ಅನುವಾದ ಮಾಡಿ ಪ್ರಕಾಶಿಸುವುದು

ಭಾರತದಲ್ಲಿ ಅತ್ಯಂತ ಆಳವಾಗಿ ಮೂಡಿದ ಸಂಸ್ಕಾರವೆಂದರೆ – ಹಿಂದೂ ಧರ್ಮ ! ಕಂಪನಿಯ ಅಧಿಕಾರಿಗಳು ಇದನ್ನು ಗುರುತಿಸಿ ಭಾರತದ ಮೂಲೆ ಮೂಲೆಗಳಿಂದ ‘ಅಪರಾಧ ಮತ್ತು ‘ಸ್ಥಳೀಯ ಅಯೋಗ್ಯ ರೂಢಿ-ಪರಂಪರೆಗಳನ್ನು ಶೋಧಿಸಿ, ಇವು  ‘ಸಂಪೂರ್ಣ ಭಾರತದಲ್ಲಿ ಸ್ವೀಕರಿಸಿದ ಹಿಂದೂ ರೂಢಿ-ಪರಂಪರೆಗಳಾಗಿವೆ ಎಂದು ಹೇಳುತ್ತಾ ಅವುಗಳನ್ನು ಒಟ್ಟು ಮಾಡಿ ಪ್ರದರ್ಶನ ಮಾಡಿದರು. ನೀರಜ ಅತ್ರಿಯವರು ಈ ವಿಷಯದಲ್ಲಿ ಅಧ್ಯಯನಪೂರ್ಣ ದಾಖಲೆಗಳನ್ನು ನೀಡಿ ಹೇಳುತ್ತಾರೆ, ‘ನಮಗೆ ಸಿಗುವ ಎಲ್ಲಕ್ಕಿಂತ ಹಳೆಯ ಐತಿಹಾಸಿಕ ದಾಖಲೆ ಎಂದರೆ ೨ ಸಾವಿರದ ೩೦೦ ವರ್ಷಗಳ ಹಿಂದಿನ ಮ್ಯಾಗಸ್ಥಿನಿಜ್ ಬರೆದಿರುವ ‘ಇಂಡಿಕಾ’ ಎಂಬ ಗ್ರಂಥ ! ಅದರಲ್ಲಿ ಹೀಗೆ ಹೇಳಲಾಗಿದೆ, “ಇಲ್ಲಿ ಸಮಾಜವನ್ನು ಶ್ರೇಣಿಯ ರೂಪದಲ್ಲಿ (ದರ್ಜೆಗಳಿಗನುಸಾರ) ವಿಭಜಿಸಲಾಗಿದೆ. ಇದರಲ್ಲಿ ಎಲ್ಲಕ್ಕಿಂತ ಹೆಚ್ಚು ಆದರ್ಶವೆಂದರೆ ಇಲ್ಲಿನ ಬ್ರಾಹ್ಮಣರಾಗಿದ್ದಾರೆ. ಅವರನ್ನು ಅವರು ‘ಸೋಫಿಸ್ಟ್’ ಎಂದು ಬರೆಯು ತ್ತಾರೆ;  ಅದರಲ್ಲಿ ಅವರು ಸಮಾಜದಲ್ಲಿನ ಯಾರು ಬೇಕಾದರೂ ಬ್ರಾಹ್ಮಣರಾಗಬಹುದು; ಏಕೆಂದರೆ ಬ್ರಾಹ್ಮಣರ ಜೀವನ ಎಲ್ಲಕ್ಕಿಂತ ಕಠಿಣವಾಗಿದೆ !’ ಎಂದು ಸ್ಪಷ್ಟವಾಗಿ ಬರೆದಿದ್ದಾರೆ.

ಇಸ್ಲಾಮೀ ಆಡಳಿತದ ಶತ್ರುಗಳಾಗಿರುವ ಹಿಂದೂಗಳು ಕ್ರೈಸ್ತ ಆಂಗ್ಲರಿಗೆ ಬಲಿಯಾದರು. ನೂರಾರು ಪುಸ್ತಕಗಳನ್ನು ಬರೆಯಲಾಯಿತು. ಅವುಗಳಿಗೆ ‘ಇಂಡಾಲಾಜಿ ಎಕ್ಸಪರ್ಟ್’ (‘ಇಂಡಾಲಾಜಿ ಎಕ್ಸಪರ್ಟ್’, ಇದು ಪಾಶ್ಚಿಮಾತ್ಯ ಜಗತ್ತಿನಲ್ಲಿ ಭಾರತದ ಕಥಿತ ಅಧ್ಯಯನಕಾರರಿಗೆ ಉಪಯೋಗಿಸಲಾಗುವ ಸಂಜ್ಞೆಯಾಗಿದೆ) ಇದನ್ನು ‘ಹಿಂದೂಗಳು ಮಾಡಿದ ಅತ್ಯಾಚಾರಗಳ ಸಾಹಿತ್ಯ’ ಎಂದು ಸಂಬೋಧಿಸುತ್ತಾರೆ. ‘ಸತಿ’, ದೇವದಾಸಿ’, ‘ಡಾಂಭಿಕ ಗುರು’ ಮತ್ತು ‘ಬ್ರಾಹ್ಮಣ್ಯರ ಪಿತೃಸತ್ಯ’ದಂತಹ ವಿಷಯಗಳು ಈ ಯೋಜನೆಯ ನಿರ್ಮಿತಿಯಾಗಿದ್ದವು.

ಪಾಕಿಸ್ತಾನಿ ಹಿಂದೂಗಳಿಗಾಗಿ ಹೋರಾಡುವ ಮತ್ತು ಲೇಖಕ ಶ್ರೀ. ಓಮೇಂದ್ರ ರತ್ನೂ ಈ ವಿಷಯದಲ್ಲಿ ಮುಂದಿನಂತೆ ಹೇಳಿದ್ದಾರೆ, “ಇಸ್ಲಾಮ್ ಮತ್ತು ಕ್ರೈಸ್ತ ಈ ಪಂಥಗಳಲ್ಲಿನ ಮಹಿಳೆಯರ ಅವಸ್ಥೆಯ ಬಗ್ಗೆ ನಾನೇನು ಹೇಳುವ ಆವಶ್ಯಕತೆ ಇಲ್ಲ. ನಮ್ಮದಂತೂ ಸ್ತ್ರೀಪ್ರಧಾನ ಸಮಾಜವಾಗಿತ್ತು. ಬ್ರಾಹ್ಮಣರ ಯೋಗದಾನವು ಈ ದೇಶದ ಸ್ವಾಭಿಮಾನವಾಗಿದೆ. ಈ ದೇಶದ ಪ್ರಜ್ಞೆ ಮತ್ತು ವೈದಿಕ ಸಂಸ್ಕೃತಿಯ ಸ್ಪಂದನಗಳ ಹೊರತು ಹಿಂದೂ ಸಮಾಜ ಪೂರ್ಣವಾಗಲಾರದು. ಬ್ರಾಹ್ಮಣ ಸಮಾಜವು ಹಿಂದುತ್ವದ ಮೆದುಳಿನ ಹಾಗಿತ್ತು. ಆ ಮೆದುಳನ್ನೇ ಎಡಪಂಥೀಯರು ಕಲುಷಿತಗೊಳಿಸಿದರು ಮತ್ತು ನಾವು ಹಾಗಾಗಲು ಬಿಟ್ಟೆವು. ಉಪನಿಷತ್ತು ಮತ್ತು ಗೀತೆಯಲ್ಲಿನ ಜ್ಞಾನ ವನ್ನು ನೋಡಿರಿ. ಬ್ರಾಹ್ಮಣರು ಶೃತಿಗಳ ಮಾಧ್ಯಮದಿಂದ ನಮ್ಮ ಪುರಾಣ, ರಾಮಾಯಣ, ಮಹಾಭಾರತ ಈ ಜ್ಞಾನಭಂಡಾರ ವನ್ನು ಉಳಿಸಿದರು. ಔರಂಗಜೇಬನು ಪ್ರತಿದಿನ ಒಂದೊಂದು ಜನಿವಾರವನ್ನು ಇಳಿಸುತ್ತಿದ್ದನು. ಈ ದೇಶದಲ್ಲಿ ಬ್ರಾಹ್ಮಣರು ಮತಾಂತರ ಮಾಡುತ್ತಿದ್ದರೆ ಹಿಂದೂ ಧರ್ಮ ಉಳಿಯುತ್ತಿತ್ತೇ ? ರಜಪೂತರು ಯಾರಿಗಾಗಿ ಯುದ್ಧ ಮಾಡಬಹುದಾಗಿತ್ತು ?”

ಲ್ಯಾಟಿನ್ ಮತ್ತು ಆಂಗ್ಲ ಭಾಷೆಯನ್ನು ಮಾತನಾಡುವವರು ಹಿಂದೂ ಗ್ರಂಥಗಳನ್ನು ತಪ್ಪಾಗಿ ಅನುವಾದಿಸಿದರು. ಕಂಪನಿಯ ಸಾಹೇಬರು ಭಾರತೀಯ ಸಭ್ಯತೆಯನ್ನು ಒಂದು ಆಟಿಕೆಯಂತೆ ಅಕ್ಷರಶಃ ತಿರುವುಮುರುವು ಮಾಡಿ ಅದನ್ನು ಚಿಂದಿಚಿಂದಿಯಾಗಿ ಮಾಡಿದರು. ಅವರು ಭಾರತೀಯ ಸಂಸ್ಕೃತಿ ಮತ್ತು ಸಭ್ಯತೆಯನ್ನು ತಿಳಿದುಕೊಳ್ಳುವ ನಾಟಕ ಮಾಡಿದರು. ಅನಂತರ ಆಧುನಿಕ ಮುದ್ರಣಯಂತ್ರದ ಮೂಲಕ ದೊಡ್ಡ ಪ್ರಮಾಣದಲ್ಲಿ ಗ್ರಂಥಗಳನ್ನು ಮುದ್ರಿಸಿದರು ಮತ್ತು ಅವುಗಳ ಮೂಲಕ ಹಿಂದೂ ಧರ್ಮದ ಬಗ್ಗೆ ಭ್ರಮೆಯನ್ನು ಹರಡುವ ದೊಡ್ಡ ಅಪ ಪ್ರಚಾರವನ್ನು ಆರಂಭಿಸಿದರು.

ಬೆಝ್‌ಮೆನೋವ್ ಮುಂದೆ ಹೇಳುತ್ತಾನೆ, ‘ಸಮಾಜದ ಗಮನವನ್ನು ನಿಜವಾದ ಧಾರ್ಮಿಕ ಘಟನೆಗಳಿಂದ ದೂರ ಮಾಡಿ ಸುಳ್ಳು ಘಟನೆಗಳ ಕಡೆಗೆ ಒಯ್ಯಿರಿ !

೫. ಆಂಗ್ಲರು ರಾಮಮೋಹನ ರಾಯ್ ಇವರನ್ನು ಉಪಯೋಗಿಸಿಕೊಳ್ಳುವುದು

ಅಮೇರಿಕಾದಲ್ಲಿನ ಹಿಂದೂ ಅಧ್ಯಯನಕಾರ ಮತ್ತು ಪ್ರಸಿದ್ಧ ಲೇಖಕ ರಾಜೀವ ಮಲ್ಹೋತ್ರಾ ಹೀಗೆ ಹೇಳುತ್ತಾರೆ, “ಇದು ರಾಮಮೋಹನ ರಾಯ್ ಇವರಿಂದ ಆರಂಭವಾಯಿತು. ಅವರನ್ನು ಹೊಸ ಹಿಂದುತ್ವದ ಜನಕರೆಂದು ತಿಳಿಯಲಾಗುತ್ತದೆ. ರಾಜಾ ರಾಮಮೋಹನ ರಾಯ್ ಇವರು ಕೋಲಕಾತಾದಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದರು. ಭಾರತವನ್ನು ಧ್ವಂಸ ಮಾಡುವ ಯೋಜನೆಗಾಗಿ ಈಸ್ಟ್ ಇಂಡಿಯಾ ಕಂಪನಿಗೆ ರಾಜಾರಾಮಮೋಹನ ರಾಯ್ ಇವರಂತಹ ಅನೇಕ ಉತ್ಸಾಹೀ ‘ನಸುಕಪ್ಪು (ಭಾರತೀಯರು) ಸಾಹೇಬರು’ ಸಿಕ್ಕರು. ಆಂಗ್ಲರು ಅವರಿಗೆ ಸನ್ಮಾನ ಮತ್ತು ಪ್ರತಿಷ್ಠೆಯ ಪ್ರಲೋಭನೆಯನ್ನು ನೀಡಿ ಅವರನ್ನು ಉಪಯೋಗಿಸಿಕೊಂಡರು. ೧೮೩೩ ರಲ್ಲಿ ರಾಜಾ ರಾಮಮೋಹನ ರಾಯ್ ಇವರ ನಿಧನದ ನಂತರ ಅವರನ್ನು ಇಂಗ್ಲೆಂಡ್‌ನಲ್ಲಿ ಕ್ರೈಸ್ತ ಪದ್ಧತಿಯಂತೆ ಹೂಳಲಾಯಿತು. ಅವರು ಭಾರತದ ಮೂಲ ಸಂಸ್ಕೃತಿಯನ್ನು ಸಂಪೂರ್ಣ ತಿರುವುಮುರುವು ಮಾಡಿ ಪ್ರಸಾರ ಮಾಡಿದರು. ಬ್ರಿಟಿಷರಿಗೆ ರಾಯ್ ಇವರ ರೂಪದಲ್ಲಿ ಒಬ್ಬ ‘ಪ್ರಾಮಾಣಿಕ ತಪಕಿರಿ ಸಾಹೇಬ’ ಸಿಕ್ಕಿದ್ದರು.

ಬೆಝ್‌ಮೆನೋವ್ ಮುಂದೆ ಹೇಳುತ್ತಾನೆ, “ಪ್ರತಿಯೊಂದು ಸಮಾಜದಲ್ಲಿ ಕೆಲವು ಸಮಾಜ ವಿರೋಧಿಗಳಿರುತ್ತಾರೆ. ಯಾವಾಗ ಇಂತಹ ಎಲ್ಲ ಶಕ್ತಿಗಳು ಒಟ್ಟಾಗುತ್ತವೆಯೋ, ಆಗ ಆ ಕ್ಷಣವನ್ನು ಉಪಯೋಗಿಸಿ ಸಂಪೂರ್ಣ ಸಮಾಜ ವಿನಾಶವಾಗುವವರೆಗೆ ಆ ಚಳುವಳಿಯನ್ನು ಮುಂದುವರಿಸಲು ಪ್ರಯತ್ನಿಸಬೇಕಾಗುತ್ತದೆ !”

೬. ಆಂಗ್ಲರು ಆದರ್ಶ ವರ್ಣವ್ಯವಸ್ಥೆಯನ್ನು ಅಳಿಸಿ ಭಾರತದ ಮೇಲೆ ಜಾತಿವ್ಯವಸ್ಥೆಯನ್ನು ಹೇರುವುದು 

ಮುಂದಿನ ಗುರಿ ಭಾರತದಲ್ಲಿ ಸಾವಿರಾರು ವರ್ಷಗಳಿಂದ ನಡೆದು ಬಂದಿರುವ ಜಾತಿ ಮತ್ತು ವರ್ಣವ್ಯವಸ್ಥೆ ! ಯಾವಾಗ ಆಂಗ್ಲರು ಭಾರತಕ್ಕೆ ಬಂದರೋ, ಆಗ ಇಲ್ಲಿ ೫೦೦ ರಲ್ಲಿನ ೪೦೦ ಸಂಸ್ಥಾನಗಳು ಶೂದ್ರ ರಾಜರಗಳದ್ದಾಗಿದ್ದವು. ‘ಸಬ್‌ವರ್ಜನ್ ಮಾಡಲು ಈ ಭೇದಗಳನ್ನು ಹೆಚ್ಚು ವಿಸ್ತೀರ್ಣಗೊಳಿಸುವುದು ಆವಶ್ಯಕವಾಗಿತ್ತು. ಬಿಳಿಯರು ವರ್ಣ ಮತ್ತು ಜಾತಿ ವ್ಯವಸ್ಥೆಯನ್ನು ಕೇವಲ ವಿವಿಧ ಜಾತಿಗಳಲ್ಲಿ ಪರಿವರ್ತನೆ ಮಾಡಿದರು; ಆದರೆ ‘ಜಾತಿಯು ಮೂಲತಃ ಪೋರ್ಚುಗೀಜ್ ಅಥವಾ ಸ್ಪ್ಯಾನಿಶ್ ಸಂಕಲ್ಪನೆಯಾಗಿತ್ತು. ಅದಕ್ಕೆ ಈ ದೇಶದೊಂದಿಗೆ ಏನೂ ಸಂಬಂಧವಿರಲಿಲ್ಲ.

ಈ ಸಂರ್ಭದಲ್ಲಿ ಅತ್ರಿ, ಜನಗಣನೆ ಆಯುಕ್ತರಿಗೆ ಅವರು ಎಲ್ಲರನ್ನೂ ‘ಜಾತಿ ಈ ಒಂದೇ ಶ್ರೇಣಿಯಲ್ಲಿಯೆ ಬರೆಯಬೇಕೆಂದು ಆದೇಶವಿತ್ತು ! ಎಂದು ಹೇಳುತ್ತಾರೆ. “೧೮೭೧ ರ ಜನಗಣನೆಯನ್ನು ಅಭ್ಯಾಸ ಮಾಡಿದರೆ ಇದು ತಿಳಿಯುತ್ತದೆ. ಪ್ರತ್ಯಕ್ಷ ಜನಗಣನೆ ಮಾಡುವವರು ‘ಇಲ್ಲಿನ ಜನರು ಈ ಜಾತಿಯನ್ನು ಸ್ವೀಕರಿಸಲು ಸಿದ್ಧರಿಲ್ಲ, ಎಂದು ಅವರ ಮೇಲಧಿಕಾರಿಗಳಿಗೆ ವರದಿಯನ್ನು ಕಳಿಸುತ್ತಿದ್ದರು, ಆದರೆ ಮೇಲಿನ ಆದೇಶಕ್ಕನುಸಾರ ವರ್ಣ, ಜಾತಿ, ಕುಲ ಪರಂಪರೆ ಎಲ್ಲವನ್ನೂ ‘ಜಾತಿ ಈ ಒಂದೇ ಶಬ್ದದಲ್ಲಿ ಮಂಡಿಸಲಾಯಿತು.

ಇಂದು ನಾವು ಅದರ ಗುಲಾಮರಾಗಿದ್ದೇವೆ. ನಮಗೆ ಭಾರತ ಮೂಲತಃ ಜಾತಿ ವ್ಯವಸ್ಥೆ ಇರುವ ಸಮಾಜವಾಗಿದೆ ಎಂದು ಅನಿಸುತ್ತದೆ, ಅದರಿಂದಾಗಿ ನಮ್ಮಲ್ಲಿ ನಾವು ಕೀಳರೆಂಬ ಭಾವನೆ ನಿರ್ಮಾಣವಾಗಿದೆ !

ರೋಮನ್ ಜನರ ‘ಡಿವೈಡ್ ಎಟ್ ಇಂಪೇರಾ (ಒಡೆಯಿರಿ ಮತ್ತು ಆಳಿರಿ !) ಈ ನೀತಿಯನ್ನು ಬ್ರಿಟಿಷರು ಭಾರತದಲ್ಲಿ ಚೆನ್ನಾಗಿ ಉಪಯೋಗಿಸಿಕೊಂಡರು. ಆಂಗ್ಲರು ಬ್ರಾಹ್ಮಣ ಮತ್ತು ಕ್ಷತ್ರೀಯರನ್ನು ಅತ್ಯಾಚಾರಿಗಳು ‘ಆರ್ಯ ಆಕ್ರಮಣಕಾರಿಗಳು ಎಂದು ನಿರ್ಧರಿಸಿ ಆ ಕಾಲದ ಸಮಸ್ಯೆಗಳ ದೋಷವನ್ನು ಅವರ ತಲೆಯ ಮೇಲೆ ಹಾಕಿದರು. ನಿಜವಾಗಿ ನೋಡಿದರೆ ಸಮಸ್ಯೆಗಳ ಮೂಲ ಕಾರಣ ‘ಈಸ್ಟ್ ಇಂಡಿಯಾ ಕಂಪನಿಯ ದರೋಡೆ ಮತ್ತು ‘ಇಸ್ಲಾಮೀ ಕಾಲದಲ್ಲಿನ ಕೆಟ್ಟ ರೂಢಿಗಳಾಗಿದ್ದವು. ಆಂಗ್ಲರು ಸಮಾಜದಲ್ಲಿನ ಭೇದವನ್ನು ಹೆಚ್ಚೆಚ್ಚು ವಿಸ್ತೀರ್ಣಗೊಳಿಸುವಾಗ ಮುಸಲ್ಮಾನರಿಗೆ ಇನ್ನೂ ಹೆಚ್ಚು ಗೋಹತ್ಯೆಗಳನ್ನು ಮಾಡಲು ಹೇಳಿದರು. ವರ್ಷ ೧೮೭೧ ರ ‘ಅಪರಾಧ ಗುಂಪು ಕಾನೂನಿನಿಂದ ಅನೇಕ ಜಾತಿಗಳನ್ನು ಜನ್ಮಜಾತ ಅಪರಾಧಿಗಳು (ಹುಟ್ಟಿನಿಂದಲೇ ಅಪರಾಧಿಗಳು) ಎಂದು ಘೋಷಣೆಯನ್ನು ಮಾಡಲಾಯಿತು. ಈ ರೀತಿಯ ನಿಲುವು ಮತ್ತು ಶೀಘ್ರಗತಿಯಲ್ಲಿ ಕಡಿಮೆಯಾಗುವ ಸಂಸಾಧನಗಳಿಂದ ಭಾರತದ ಪ್ರಾಚೀನ ಸಾಮಾಜಿಕ ಕಟ್ಟಡ ಕುಸಿಯುತ್ತಾ ಹೋಯಿತು.

ಬೆಝ್‌ಮೆನೋವ್ ಹೇಳುತ್ತಾರೆ, “ಶಿಕ್ಷಣವನ್ನು ಸಮಾಜ ರಚನಾತ್ಮಕ, ಪ್ರಾಯೋಗಿಕ ಮತ್ತು ಕಾರ್ಯಕ್ಷಮತೆಯ ವಿಷಯಗಳನ್ನು ಕಲಿಯದಂತೆ ಮಾಡಿರಿ ! ವ್ಯಕ್ತಿ, ಸಮೂಹ ಮತ್ತು ಸಮಾಜದಲ್ಲಿನ ನೈಸರ್ಗಿಕ ಸಂಬಂಧವನ್ನು ಮುರಿದು ಕೃತ್ರಿಮ ಮತ್ತು ಸರಕಾರಿ ಸ್ತರದಲ್ಲಿನ ಸಂಸ್ಥೆಗಳು ಅವುಗಳ ಸ್ಥಾನವನ್ನು ಪಡೆಯಲಿ !

೭. ವಿಲಿಯಮ್ ಬೇಟಿಂಕ್ ಇವನು ‘ಶಿಕ್ಷಣ ಕಾನೂನನ್ನು ಅನ್ವಯಗೊಳಿಸಿ ಭಾರತೀಯ ಗುರು-ಶಿಷ್ಯ ಪರಂಪರೆಯನ್ನು ನಾಶ ಮಾಡುವುದು

ವರ್ಷ ೧೮೩೫ ರಲ್ಲಿ ವಿಲಿಯಮ್ ಬೇಟಿಂಕ್ ಇವನು ‘ಆಂಗ್ಲ ಶಿಕ್ಷಣ ಕಾನೂನು ತಂದು ಭಾರತೀಯ ಗುರು-ಶಿಷ್ಯ ಪರಂಪರೆಯನ್ನು ನಾಶ ಮಾಡಿದನು. ಮೆಕಾಲೆಯಿಂದ ಈಗ ಭಾರತೀಯರಿಗೆ ಯಾರ್ಕಶಾಯರ್‌ನಲ್ಲಿನ ಗುಡಿಸಲಿನಲ್ಲಿನ ಶಿಕ್ಷಣವನ್ನು ಕೊಡಲಿಕ್ಕಿತ್ತು. ಮೈದಾನದಲ್ಲಿ ಯುದ್ಧಕಲೆಯನ್ನು ಕಲಿಸುವುದಕ್ಕಿಂತ ‘ಕ್ಲಾಸ್ ರೂಮ್ನಲ್ಲಿ ಹತಾಶರನ್ನಾಗಿಸುವುದು ತುಂಬಾ ಹಿತಕಾರಿಯಾಗಿತ್ತು. ಹೀಗಿರುವಾಗ ಲೂಟಿಯಿಂದ ಕಂಗಾಲಾಗಿದ್ದ ಸಮಾಜ ಪಾರಂಪರಿಕ ಶಾಲೆಗಳಿಗೆ ಹಣ ಎಲ್ಲಿಂದ ಕೊಡುವುದು ? ಒಂದೊಂದಾಗಿ ಶಾಲೆ ಮತ್ತು ಗುರುಕುಲಗಳು ಮುಚ್ಚಿದವು. ಇದರಿಂದ ಈಗ ಶಿಕ್ಷಣವಿಲ್ಲದ ಜನರು ‘ಅಶಿಕ್ಷಿತ ಕಾರ್ಮಿಕರು ಮತ್ತು ‘ಕೃಷಿಕರಾಗಿ ಉಳಿದುಕೊಂಡರು. ನಮ್ಮನ್ನು ‘ವ್ಹೈಟ್ ಮೆನ್ಸ್ ಬರ್ಡನ್ (ಬಿಳಿಯರ ಮೇಲಿನ ಭಾರ) ಎಂದು ಸಂಬೋಧಿಸಲಾಗುತ್ತಿತ್ತು. ಆಂಗ್ಲ ಮಿಶನರಿಗಳು ಭಾರತದಲ್ಲಿನ ಬಡವರ ಮಕ್ಕಳನ್ನು ಮನೆಯಿಂದ ಕರೆದುಕೊಂಡು ಹೋಗುತ್ತಿದ್ದರು ಮತ್ತು ಅವರನ್ನು ಕಾನ್ವೆಂಟ್‌ನಲ್ಲಿಟ್ಟು ಆಂಗ್ಲ ಪದ್ಧತಿಯ ಶಿಕ್ಷಣವನ್ನು ಕೊಡುತ್ತಿದ್ದರು. ಇಂತಹ ಶಿಕ್ಷಣ ಪಡೆದು ಕಾನ್ವೆಂಟ್‌ನಿಂದ ಹೊರಗೆ ಬರುವ ಮಕ್ಕಳಿಗೆ ತಮ್ಮ ತಾಯಿ-ತಂದೆ ಮತ್ತು ಸಮಾಜ ಪರಕೀಯ ಎಂದು ಅನಿಸತೊಡಗಿತು. ಯಾವ ದೇಶವನ್ನು ಯುರೋಪ್ ಸಂಪೂರ್ಣ ಲೂಟಿ ಮಾಡಿತೋ, ಆ ದೇಶದ ಮಕ್ಕಳಿಗೆ ಅವರ ಸಂಸ್ಕೃತಿ ಹಿಂದುಳಿದಿದ್ದಾಗಿದ್ದು, ಆಕ್ರಮಣ ಮಾಡಿದ ದರೋಡೆಕೋರರ ‘ಪದ್ಧತಿಯೆ ಆಧುನಿಕವಾಗಿದೆ, ಎಂದು ಬಿಂಬಿಸಲಾಯಿತು. ಈ ರೀತಿ ಧರ್ಮ, ಜಾತಿ, ಸಮಾಜ ಮತ್ತು ಶಿಕ್ಷಣ ಹೀಗೆ ಪ್ರತಿಯೊಂದು ಸ್ತರದಲ್ಲಿ ಭಾರತದ ಮುಗ್ದ ಜನರನ್ನು ಆಚಾರಭ್ರಷ್ಟರನ್ನಾಗಿ ಮಾಡಲಾಯಿತು. ಇದರಿಂದಲೆ ಭಾರತೀಯ ಸಮಾಜದ ‘ಎಕ್ಟಿವ್ ಡಿಮೋರಲೈಸೇಶನ್ ಆಯಿತು.

ಎರಡನೆಯ ಹಂತ : ‘ಡಿಸ್ಟೆಬಿಲೈಝೇಶನ್ ಅಂದರೆ ಅಸ್ಥಿರತೆಯನ್ನು ನಿರ್ಮಾಣ ಮಾಡುವುದು !

ಬೇಝ್‌ಮೆನೋವ್ಹಾ ಹೇಳುತ್ತಾನೆ, “ಅರ್ಧದಲ್ಲಿಯೆ ಶಿಕ್ಷಣವನ್ನು ಬಿಡುವ ಅಥವಾ ಕಡಿಮೆ ಬುದ್ಧಿಶಕ್ತಿ ಇರುವವರನ್ನು ಸರಕಾರ, ಆಡಳಿತ, ವ್ಯಾಪಾರ, ಪತ್ರಕಾರಿತೆ, ಶೈಕ್ಷಣಿಕ ಸಂಸ್ಥೆ ಈ ಶಕ್ತಿಕೇಂದ್ರಗಳಲ್ಲಿ ಸೇರಿಸಲಾಯಿತು. ನಿಮಗೆ ಅಲ್ಲಿಂದ ಓಡಿಹೋಗಲು ಬರುವುದಿಲ್ಲ. ಅವರನ್ನು ಯಾವುದೇ ಘಟನೆಗೆ ವಿಶಿಷ್ಟ ಪದ್ಧತಿಯಿಂದ (ಪ್ರೋಗ್ರಾಮ್ಡ) ಪ್ರತಿಕ್ರಿಯೆಯನ್ನು ನೀಡಲು ಸಿದ್ಧಪಡಿಸಲಾಗಿರುತ್ತಿತ್ತು.

ಆಧಾರ : ‘ಪ್ರಾಚ್ಯಮ್ ಯೂ ಟ್ಯೂಬ್ ವಾಹಿನಿ (ಉತ್ತರಾರ್ಧ ಶೀಘ್ರದಲ್ಲಿಯೇ ಮುದ್ರಿಸಲಾಗುವುದು)