ಕಣ್ಣುಗಳ ಆರೋಗ್ಯ ಮತ್ತು ಹೆಚ್ಚಾಗುತ್ತಿರುವ ‘ಸ್ಕ್ರೀನ್ ಟೈಮ್

(ಟಿಪ್ಪಣಿ : ‘ಸ್ಕ್ರೀನ್ ಟೈಮ್’ ಎಂದರೆ ಸಂಚಾರವಾಣಿ, ಗಣಕಯಂತ್ರ, ದೂರದರ್ಶನಯಂತ್ರ ಮುಂತಾದವುಗಳನ್ನು ನೋಡುವ ಅವಧಿ) 

‘ಆಧುನಿಕ ಕಾಲದಲ್ಲಿ ನಮ್ಮಿಂದ ಸಂಚಾರವಾಣಿ, ಗಣಕಯಂತ್ರ, ದೂರದರ್ಶನ ಮುಂತಾದವುಗಳ ವೀಕ್ಷಣೆ ಜಾಸ್ತಿಯಾಗಿದೆ. ಆದ್ದರಿಂದ ಅನೇಕ ಯುವಕರಿಗೆ ಈ ಉಪಕರಣಗಳನ್ನು ಮಿತವಾಗಿ ಉಪಯೋಗಿಸಲು ದಿನೇದಿನೇ ಕಠಿಣವಾಗುತ್ತಿದೆ. ನಾವು ವೈದ್ಯರು ಅವರಿಗೆ ಸಾಧ್ಯವಾದಷ್ಟು ಅದನ್ನು ಮಿತವಾಗಿ ಬಳಸುವಂತೆ ಸಲಹೆಯನ್ನು ಕೊಡುತ್ತಿರುತ್ತೇವೆ. ಹಾಗೆಯೇ ಬಹಳಷ್ಟು ಜನರಿಗೆ ಸಂಚಾರವಾಣಿ, ಗಣಕಯಂತ್ರ ಇವುಗಳ ಬಳಕೆಯನ್ನು ಕಡಿಮೆ ಮಾಡಬೇಕೆಂದು ಎನಿಸಿದರೂ, ಅವರ ಉದ್ಯೋಗ ವ್ಯವಸಾಯ ಈ ಉಪಕರಣಗಳ ಮೇಲೆ ಅವಲಂಬಿಸಿರುತ್ತದೆ. ಆದ್ದರಿಂದ ಕೃತಿಯ ಸ್ತರದಲ್ಲಿ ಅವರಿಗೆ ಸ್ಕ್ರಿನ್‌ನ ಉಪಯೋಗವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಹಗಲು-ರಾತ್ರಿ ಸ್ಕ್ರೀನ್‌ನ ಅಂದರೇ ಕಣ್ಣುಕುಕ್ಕುವ ಪ್ರಕಾಶದೆದುರು ಇರುವುದರಿಂದ ಅವರ ಕಣ್ಣುಗಳಿಗೆ ತೊಂದರೆಯಾಗುತ್ತದೆ. ಈ ಕೃತಕ, ಆದರೆ ಹಾನಿಕರವಾಗಿರುವ ವಿಕಿರಣಗಳ ಉಷ್ಣತೆಯಿಂದ ರಕ್ಷಣೆಯಾಗುವುದು ಆವಶ್ಯಕವಾಗಿದೆ.

ವೈದ್ಯ ಸಮೀರ ಮುಕುಂದ ಪರಾಂಜಪೆ

ಕಣ್ಣುಗಳ ಆರೋಗ್ಯಕ್ಕಾಗಿ ಮುಂದಿನ ಕೃತಿಗಳನ್ನು ಮಾಡಬೇಕು !

೧. ಅಂಗಾಲುಗಳಿಗೆ ಎಣ್ಣೆ ಅಥವಾ ತುಪ್ಪವನ್ನು ಹಚ್ಚಬೇಕು.

೨. ಅನೇಕ ಜನರು ನಮ್ಮ ಪ್ರಾಚೀನ ಸಂಸ್ಕೃತಿಯನ್ನು ಮರೆಯುತ್ತಾರೆ; ಆದರೆ ಅದರ ಹಿಂದಿನ ಕೆಲವು ಕಾರಣಗಳಿರುತ್ತವೆ. ಕಣ್ಣುಗಳಲ್ಲಿ ಕಾಡಿಗೆ ಹಚ್ಚುವುದು ಇದೂ ಅದರಲ್ಲಿನ ಒಂದು ಮಹತ್ವಪೂರ್ಣ ಕೃತಿಯಾಗಿದೆ. ಸಾದಾ ತುಪ್ಪದ ಕಾಡಿಗೆಯನ್ನು ಕಣ್ಣುಗಳಿಗೆ ಹಚ್ಚುವುದರಿಂದ ತುಂಬಾ ಲಾಭವಾಗುತ್ತದೆ.

೩. ಕಣ್ಣುಗಳ ಮೇಲೆ ಹಸಿ ಹಾಲಿನ ಬಟ್ಟೆಯನ್ನು ಇಡಬೇಕು. ಹೀಗೆ ಮಾಡಲು ಸಾಧ್ಯವಿಲ್ಲದಿದ್ದರೆ ಕುದಿಸಿದ ಹಾಲು ತಣ್ಣಗಾದ ನಂತರ ಹಾಲಿನಲ್ಲಿ ಹತ್ತಿಯನ್ನು ತೋಯಿಸಿ ಅದನ್ನು ಕಣ್ಣುಗಳ ಮೇಲಿಡಬೇಕು. ಹಾಲು ಲಭ್ಯವಿಲ್ಲದಿದ್ದರೆ ಅದರ ಬದಲಾಗಿ ಗುಲಾಬಿ ಹೂವಿನ (ಪನ್ನೀರು) ನೀರಿನಲ್ಲಿ ಬಟ್ಟೆಯನ್ನು ಮುಳುಗಿಸಿ ಅದನ್ನು ಕಣ್ಣುಗಳ ಮೇಲಿಡಬೇಕು

೪. ಕಣ್ಣುಗಳಿಗೆ ಹೊರಗಿನಿಂದ ಎಲ್ಲ ಬದಿಗೆ ತುಪ್ಪವನ್ನು ಹಚ್ಚಬೇಕು. ಇದರಿಂದ ಕಣ್ಣುಗಳ ಸ್ನಾಯುಗಳ ಮೇಲಿನ ಒತ್ತಡ ಕಡಿಮೆಯಾಗಲು ಸಹಾಯವಾಗುತ್ತದೆ.

೫. ಆಹಾರದ ಪದಾರ್ಥಗಳಲ್ಲಿ ನೆಲ್ಲೆಕಾಯಿಯು ಕಣ್ಣುಗಳ ಆರೋಗ್ಯಕ್ಕಾಗಿ ಹಿತಕರವಾಗಿದೆ.

೬. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ ಸತತವಾಗಿ ಸ್ಕ್ರೀನ್ ಕಡೆಗೆ ನೋಡದೇ ‘ಸ್ಕ್ರೀನ್ ಟೈಮ್’ಅನ್ನು ಹೆಚ್ಚಿಸದೇ ಮಧ್ಯ ಮಧ್ಯದಲ್ಲಿ ಸ್ವಲ್ಪ ನಿಗದಿತ ಅಂತರವಿಟ್ಟು ನಿಂತು ಕಣ್ಣುಗಳಿಗೆ ಕೆಲವು ಕ್ಷಣಗಳ ವಿಶ್ರಾಂತಿಯನ್ನು ಕೊಡಬೇಕು. ವಾಹನ ನಡೆಸುತ್ತಿರುವಾಗಲೂ ಇದೇ ಕೃತಿಯು ಮಹತ್ವದ್ದಾಗಿದೆ.

೭. ಕಣ್ಣುಗಳಿಗಾಗಿ ವಿಶಿಷ್ಟ ಪ್ರಕಾರದ ವ್ಯಾಯಾಮಗಳಿರುತ್ತವೆ. ಅವುಗಳನ್ನು ಕಲಿತುಕೊಂಡು ನಿಯಮಿತವಾಗಿ ಮಾಡಿದರೆ ದೃಷ್ಟಿ ಸುಧಾರಿಸುತ್ತದೆ.

೮. ಶರೀರ ಮತ್ತು ತಲೆ ಇವುಗಳಿಗೆ ನಿಯಮಿತ ಅಭ್ಯಂಗ (ಎಣ್ಣೆಯನ್ನು ಹಚ್ಚುವುದು) ಮಾಡುವುದರಿಂದ ಮತ್ತು ಮೂಗಿನಲ್ಲಿ ತುಪ್ಪವನ್ನು ಹಾಕಿದರೆ ಕಣ್ಣುಗಳು ಆರೋಗ್ಯಶಾಲಿಯಾಗುತ್ತವೆ.’

– ವೈದ್ಯ ಸಮೀರ ಮುಕುಂದ ಪರಾಂಜಪೆ, ಖೇರ್ಡಿ, ದಾಪೋಲಿ, ರತ್ನಾಗಿರಿ. (೩.೨.೨೦೨೩)

ಸಂಪರ್ಕಕ್ಕಾಗಿ ವಿ-ಅಂಚೆ : [email protected]