ಅಮೇರಿಕಾದಲ್ಲಿ ಗರ್ಭಪಾತ ಔಷಧಕ್ಕೆ ಅನುಮತಿ ಮುಂದುವರಿಕೆ !

ಸರ್ವೋಚ್ಚ ನ್ಯಾಯಾಲಯದಿಂದ ಕನಿಷ್ಠ ನ್ಯಾಯಾಲಯದ ಆದೇಶ ರದ್ದು !

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿ ಕನಿಷ್ಠ ನ್ಯಾಯಾಲಯದ ಆದೇಶದಿಂದ ಸಾಮಾನ್ಯವಾಗಿ ಬಳಸುವ ಗರ್ಭಪಾತ ಔಷಧಗಳ ಅನುಮೋದನೆಯನ್ನು ರದ್ದುಗೊಳಿಸಲಾಗಿತ್ತು. ಈ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಂತರ, ನ್ಯಾಯಾಲಯವು ಕನಿಷ್ಠ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಈ ಔಷಧಿಗಳ ಅನುಮತಿಯನ್ನು ಶಾಶ್ವತಗೊಳಿಸಿದೆ. ಇದು ಮಹಿಳೆಯರ ಹಕ್ಕಾಗಿದ್ದೂ ಮತ್ತು ನಾವು ಅದನ್ನು ರಕ್ಷಿಸುತ್ತಿದ್ದೇವೆ’, ಎಂದು ನ್ಯಾಯಾಲಯ ಹೇಳಿದೆ.‘ಇನ್ಕೋ ಲ್ಯಾಬೋರೇಟರೀಸ್’ ಈ ಕಂಪನಿಯು ಮೈಫೆಪ್ರಿಸ್ಟೋನ್” ಔಷಧವನ್ನು ತಯಾರಿಸುತ್ತದೆ ಮತು ಈ ಔಷಧಿಯು ಅಮೇರಿಕಾದಲ್ಲಿ ಗರ್ಭಪಾತಕ್ಕೆ ಬಳಸಲಾಗುತ್ತದೆ. ೨೦೦೦ ರಿಂದ ಗರ್ಭಪಾತಕ್ಕೆ ಔಷಧವನ್ನು ಅನುಮೋದಿಸಲಾಗಿತ್ತು ಮತ್ತು ೫0 ಲಕ್ಷಕ್ಕೂ ಹೆಚ್ಚು ಜನರು ಬಳಸಿದ್ದಾರೆ. ಅಮೇರಿಕಾದಲ್ಲಿ ಅರ್ಧಕ್ಕಿಂತ ಹೆಚ್ಚು ಗರ್ಭಪಾತಗಳಲ್ಲಿ ಈ ಔಷಧವನ್ನು ಬಳಸುತ್ತಾರೆ.