ಕಾನೂನಿಗೇ ಅಣಕ !

ಪ್ರತಿ ವರ್ಷ ಶ್ರೀರಾಮನವಮಿಯಂದು ಹಲವೆಡೆ ಅದರಲ್ಲೂ ಬಂಗಾಲ, ಬಿಹಾರ, ಉತ್ತರಪ್ರದೇಶ ಮುಂತಾದ ರಾಜ್ಯಗಳಲ್ಲಿ ಮತಾಂಧರು ಗಲಭೆಗಳನ್ನು ಮಾಡುತ್ತಾರೆ. ಈ ಗಲಭೆಗಳ ಪದ್ಧತಿಯನ್ನು ನೋಡಿದರೆ ‘ಅವರು ಬಹಳ ಆಯೋಜನಾಬದ್ಧವಾಗಿ ಮಾಡಿದ್ದಾರೆ, ಎಂದು ಯಾವ ತಜ್ಞರೂ ಹೇಳಬೇಕಿಲ್ಲ. ಈ ವರ್ಷ, ಶ್ರೀರಾಮನವಮಿಯಂದು ಭಾರತದ ಒಂದೆರಡಲ್ಲ ೭ ರಾಜ್ಯಗಳಲ್ಲಿ ಯೋಜಿತವಾಗಿ ಗಲಭೆಗಳನ್ನು ಮಾಡಲಾಯಿತು. ಅದರಲ್ಲಿ ಗುಜರಾತ, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ ಮತ್ತು ಬಂಗಾಲ ಈ ರಾಜ್ಯಗಳು ಒಳಗೊಂಡಿವೆ. ಬಿಹಾರದ ಸಾಸಾರಾಮ್, ಭಾಗಲ್ಪುರ್ ಮತ್ತು ಬಿಹಾರಶರೀಫ್‌ನಲ್ಲಿ ಶ್ರೀರಾಮನವಮಿಯ ಶೋಭಾಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರು ದಾಳಿ ಮಾಡಿದರು. ಗಲಭೆಗಳು ಕಲ್ಲು ತೂರಾಟ ಮತ್ತು ಹಲ್ಲೆಗೆ ಸೀಮಿತವಾಗಿರದೇ ಮತಾಂಧರು ಬಾಂಬ್‌ಗಳನ್ನು ಸಹ ಬಳಸಿದರು. ಹಿಂದೂಗಳ ವಿರುದ್ಧ ಜಿಹಾದಿ ಭಯೋತ್ಪಾದಕರು ಮಾತ್ರ ಬಳಸುತ್ತಿದ್ದ ಬಾಂಬ್‌ಗಳನ್ನು ಈಗ ಮತಾಂಧ ಮುಸಲ್ಮಾನರೂ ಬಳಸುತ್ತಿದ್ದಾರೆ. ಇದರಿಂದ ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ತೂಗುಕತ್ತಿಯಾಗಿದ್ದಾರೆ ಎಂಬುದು ತಿಳಿಯುವುದು.

ಬಿಹಾರದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಕೆಲವು ಮತಾಂಧ ಮುಸಲ್ಮಾನರು ಒಂದು ಮಸೀದಿಯ ಬಳಿ ಬಾಂಬ್ ತಯಾರಿಸುವಾಗ, ಅದು ಸ್ಫೋಟಿಸಿತು. ಅದರಲ್ಲಿ ೬ ಮತಾಂಧ ಮುಸಲ್ಮಾನರು ಗಾಯಗೊಂಡರು; ಆದರೆ ತನಿಖಾ ಸಂಸ್ಥೆಗಳಾಗಲಿ ಅಥವಾ ಬಿಹಾರ ಸರಕಾರವಾಗಲಿ ಈ ಮತಾಂಧರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲಿಲ್ಲ ! ಮುಸಲ್ಮಾನರು ಬಾಂಬ್ ತಯಾರಿಸುತ್ತಿರುವುದು ಇದೇ ಮೊದಲಲ್ಲ. ಬಂಗಾಲ ದಲ್ಲಿ ಇಂತಹ ಘಟನೆಗಳು ನಿತ್ಯ ನಡೆಯುತ್ತಿವೆ. ಇದರಲ್ಲಿ ತೃಣಮೂಲ ಕಾಂಗ್ರೆಸ್‌ನ ಹಲವು ಮತಾಂಧ ಕಾರ್ಯಕರ್ತರು ಹತರಾಗಿದ್ದಾರೆ. ಆದರೂ ಇಂದು ಆ ಪಕ್ಷವು ಬಂಗಾಲದಲ್ಲಿ ಭಾರಿ ಬಹುಮತದೊಂದಿಗೆ ಆಯ್ಕೆಯಾಗುತ್ತದೆ. ಹಾಗಾಗಿ ತಮ್ಮ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಬಿಡಿ ಅವರ ಸಣ್ಣ ವಿಚಾರಣೆಯಾದರೂ ಆಗುತ್ತದೆಯೇ ?

ಎಂಬುದು ಪ್ರಶ್ನೆಯಾಗಿದೆ. ಅದರಿಂದ ಬಂಗಾಲದಲ್ಲಿ ಬಾಂಬ್ ಗಳ ತಯಾರಿಕೆ ಮತ್ತು ಅವುಗಳ ಸ್ಫೋಟಗಳು ಸಣ್ಣಪುಟ್ಟ ಪಟಾಕಿಗಳು ಸುಟ್ಟಂತಾಗಿವೆ. ಇದೀಗ ಬಿಹಾರದಲ್ಲಿಯೂ ಇದೇ ರೀತಿ ಬಾಂಬ್ ತಯಾರಿಸುತ್ತಿದ್ದಾಗ ಸ್ಫೋಟಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಮಾತುಗಳು ಕೇಳಿ ಬಂದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಬಿಹಾರದ ಆಡಳಿತಾರೂಢ ರಾಷ್ಟ್ರೀಯ ಜನತಾ ದಳದ ಶಾಸಕ ನೆಹಾಲುದ್ದೀನ್, ‘ಸಾಯುವುದಕ್ಕಿಂತ ಏನಾದರೂ ಮಾಡುವುದು ಮೇಲು ಎಂದಿದ್ದಾರೆ. ‘ಮುಸಲ್ಮಾನ ಯುವಕರು ಆತ್ಮರಕ್ಷಣೆಗಾಗಿ ಬಾಂಬ್ ತಯಾರಿಸುತ್ತಿದ್ದರು, ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದರು, ಇದು ಯಾವುದೇ ಸಾಮಾನ್ಯ ನಾಗರಿಕರ ಮಾತಲ್ಲ, ವಿಧಾನಪರಿಷತ್ ಸದಸ್ಯರಾಗಿರುವ ಶಾಸಕರದ್ದಾಗಿದೆ. ಇದಕ್ಕೆ ‘ಕಳ್ಳನಿಗೊಂದು ಪಿಳ್ಳೆ ನೆವ ಎಂದು ಕರೆಯುತ್ತಾರೆ ! ಕಾನೂನುಗಳನ್ನು ರಚಿಸುವವರು, ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವವರು, ಇಂತಹ ಸುಳ್ಳುಗಳನ್ನು ಹೇಳಬಹುದು. ಈ ಲೇಖನದ ಆರಂಭದಿಂದ ಇಲ್ಲಿಯ ವರೆಗೆ ನಾವು ನೋಡಿದ ಎಲ್ಲಾ ಉದಾಹರಣೆಗಳಲ್ಲಿ ಒಂದು ಸಾಮಾನ್ಯ ಅಂಶವಿದೆ, ಅದೆಂದರೆ ಮತಾಂಧರು ಮತ್ತು ಅವರ ಮತಾಂಧ ನಾಯಕರು ಯಾವಾಗ ಮತ್ತು ಎಲ್ಲಿ ಬೇಕಾದರೂ ಕಾನೂನನ್ನು ಬದಲಾಯಿಸುತ್ತಾರೆ. ಮಾತ್ರವಲ್ಲ, ಮೇಲಿನ ಯಾವುದೇ ಪ್ರಕರಣಗಳಲ್ಲಿ ಮತಾಂಧರಿಗೆ ಕಠಿಣ ಶಿಕ್ಷೆ ಆದುದನ್ನು ನಾವು ಕೇಳಿಲ್ಲ, ಇದು ಮೇಲಿನ ಪ್ರಕರಣಗಳಲ್ಲಿ ಮತ್ತೊಂದು ಸಾಮಾನ್ಯ ಸಂಗತಿಯಾಗಿದೆ.

ಧರ್ಮ ನೋಡಿ ಕ್ರಮ ತೆಗೆದುಕೊಳ್ಳುತ್ತದೆಯೇ ?

ಹಿಂದೂಗಳಿಗೆ ಸಂಬಂಧಿಸಿದಂತೆ ೨೦೦೬ ರಲ್ಲಿ ಇದೇ ರೀತಿಯ ಪ್ರಕರಣ ಸಂಭವಿಸಿತ್ತು. ಮಹಾರಾಷ್ಟ್ರದ ನಾಂದೇಡ್ ನಲ್ಲಿ ಬಾಂಬ್‌ಗಳನ್ನು ತಯಾರಿಸುವಾಗ ಇಬ್ಬರು ಸಾವನ್ನಪ್ಪಿದ್ದರು. ಈ ಇಬ್ಬರು ವ್ಯಕ್ತಿಗಳು ಸಂಘಪರಿವಾರದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಆಗ ಕಾಂಗ್ರೆಸ್ಸಿ ಗರು, ಕಮ್ಯುನಿಸ್ಟರು, ಹಿಂದೂದ್ವೇಷಿ ಮಾಧ್ಯಮಗಳು, ಪ್ರಗತಿ(ಅಧೋ)ಪರರು ಆಕಾಶ-ಪಾತಾಳವನ್ನು ಒಂದು ಮಾಡಿದ್ದರು. ಇವೆಲ್ಲವೂ ಸೇರಿ ‘ಹಿಂದೂ ಭಯೋತ್ಪಾದನೆ ಎಂಬ ಪದವನ್ನು ಹುಟ್ಟು ಹಾಕಿದರು. ನಾಂದೇಡ್ ಪ್ರಕರಣದಲ್ಲಿ ತಕ್ಷಣ ಹಸ್ತಕ್ಷೇಪ ಮಾಡಿ ತನಿಖೆ ಆರಂಭಿಸಿದರು. ಆರಂಭದಲ್ಲಿ ಭಯೋತ್ಪಾದನಾ ನಿಗ್ರಹ ದಳ, ಕೇಂದ್ರ ತನಿಖಾ ಇಲಾಖೆ ಮತ್ತು ನಂತರ ನೇರವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲಾಯಿತು. ಇಂತಹ ಘಟನೆಗಳಲ್ಲಿ, ಕಾನೂನಿನ ಪ್ರಕಾರ ಎಲ್ಲವನ್ನೂ ಮಾಡಬೇಕು; ಆದರೆ ಮತಾಂಧರ ವಿಷಯದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ಇದನ್ನು ‘ಸೆಕ್ಯುಲರಿಸಂ ಎನ್ನಬೇಕೆ ? ತನಿಖಾ ಸಂಸ್ಥೆಗಳಿಗೆ ‘ನಾಂದೇಡ್‌ನಲ್ಲಿ ಬಾಂಬ್‌ಸ್ಫೋಟಗೊಂಡಿದೆ ಮತ್ತು ಬಿಹಾರದಲ್ಲಿ ಪಟಾಕಿ ಸಿಡಿದಿದೆ ಎಂದೆನಿಸುತ್ತಿದೆಯೇ ? ಯಾವುದೇ ಪ್ರಕರಣದಲ್ಲಿ ವ್ಯವಸ್ಥೆಯು ಯಾರ ಒತ್ತಡಕ್ಕೂ ಮಣಿಯದೆ ಕಾನೂನು ಪ್ರಕಾರ ಸರಿಯಾಗಿ ಕೆಲಸ ನಿರ್ವಹಿಸಬೇಕು. ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ದುರದೃಷ್ಟವಶಾತ್ ಅದು ಹಾಗಾಗುತ್ತಿಲ್ಲ. ಇದರಿಂದ ಪೊಲೀಸ್ ವ್ಯವಸ್ಥೆಯು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ಅನೇಕ ಬಾರಿ ಹಿಂದೂಗಳ ದಸರಾದ ಮೆರವಣಿಗೆಯಲ್ಲಿ ಕೈಯಲ್ಲಿ ಕೋಲು ಹಿಡಿದರೂ, ಕಾಂಗ್ರೆಸ್ಸಿಗರು, ಪ್ರಗತಿಪರರಂತಹ ಹಿಂದೂದ್ವೇಷಿ ಗುಂಪುಗಳು ‘ಅಲ್ಪಸಂಖ್ಯಾತ ಸಮಾಜ ಅಸುರಕ್ಷಿತವಾಗಿದೆ, ‘ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ, ಎಂದು ಕೂಗುತ್ತಾರೆ. ಈಗ ಗಮನಿಸಬೇಕಾದ ಸಂಗತಿಯೆಂದರೆ, ಬಿಹಾರದಲ್ಲಿ ಮತಾಂಧ ಮುಸಲ್ಮಾನರು ಪ್ರತ್ಯಕ್ಷವಾಗಿ ಬಾಂಬ್ ಗಳನ್ನು ತಯಾರಿಸುವಾಗ ಅವರು ಖಂಡಿಸುವುದಿಲ್ಲ.

ಹಿಂದೂಗಳಿಗೆ ನಿಜವಾಗಿ ಆತ್ಮರಕ್ಷಣೆಯ ಅಗತ್ಯವಿದೆ !

ಗಲಭೆ, ಬಾಂಬ್ ಸ್ಫೋಟ, ಲವ್‌ಜಿಹಾದ್, ಲ್ಯಾಂಡ್‌ಜಿಹಾದ್, ಮತಾಂತರ, ಕೊಲೆ ಇತ್ಯಾದಿ ಅಪರಾಧಗಳನ್ನು ಮಾಡುವಲ್ಲಿ ಮತಾಂಧರೇ ಮಂಚೂಣಿಯಲ್ಲಿರುತ್ತಾರೆ. ಹಾಗಾಗಿ ಹಿಂದೂಗಳಿಗೆ ನಿಜವಾದ ಆತ್ಮರಕ್ಷಣೆ ಅವಶ್ಯಕತೆ ಇದೆ. ಹೀಗಿರುವಾಗ ಮುಸಲ್ಮಾನ ಯುವಕರು ಆತ್ಮರಕ್ಷಣೆಗಾಗಿ ಬಾಂಬ್ ತಯಾರಿಸುತ್ತಿದ್ದರು ಎಂಬ ನೆಹಾಲುದ್ದೀನ್ ಹೇಳಿಕೆ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿದಂತಾಗಿದೆ. ಅಪರಾಧಿಗಳನ್ನು ಬೆಂಬಲಿಸುವ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಮತ್ತು ಅವರ ಶಾಸಕ ಹುದ್ದೆಯನ್ನು ರದ್ದುಗೊಳಿಸಬೇಕು. ಮತಾಂಧರಿಗೆ ಭಾರತದಲ್ಲಿ ಇಷ್ಟು ಭಯ ಅಥವಾ ಅಸುರಕ್ಷಿತ ಭಾವನೆ ಇದ್ದರೆ, ಅವರಿಗೆ ಸುರಕ್ಷಿತವೆಂದು ಅನಿಸುವ ದೇಶವನ್ನು ತೊಲಗಬೇಕು; ಆದರೆ ಯಾವುದೇ ಕಾರಣಕ್ಕೂ ಹಿಂದೂಗಳ ಮಾನಹಾನಿ ಮಾಡಬಾರದು !