ಅಕ್ಷಯ ತೃತೀಯಾ (ಏಪ್ರಿಲ್ ೨೨)

ಅ. ತಿಥಿ : ‘ವೈಶಾಖ ಶುಕ್ಲ ತೃತೀಯಾ

ಆ. ಮಹತ್ವ

೧. ಅಕ್ಷಯ ತೃತೀಯಾ ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ.

೨. ಅಕ್ಷಯ ತೃತೀಯಾದಂದು ಎಲ್ಲ ಸಮಯವು ಶುಭ ಮುಹೂರ್ತವೇ ಆಗಿರುತ್ತದೆ; ಆದ್ದರಿಂದ ಈ ತಿಥಿಯಂದು ಧಾರ್ಮಿಕ ಕೃತಿಗಳನ್ನು ಮಾಡುವಾಗ ಮುಹೂರ್ತವನ್ನು ನೋಡಬೇಕಾಗುವುದಿಲ್ಲ.

೩. ಈ ದಿನದಂದು ಹಯಗ್ರೀವ ಅವತಾರ, ನರ ನಾರಾಯಣ ಪ್ರಕಟೀಕರಣ ಮತ್ತು ಪರಶುರಾಮನ ಅವತಾರವಾಗಿದೆ.

೪. ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಗೆ ಬರುತ್ತವೆ. ಆದುದರಿಂದ ಪೃಥ್ವಿಯ ಸಾತ್ತ್ವಿಕತೆಯು ಶೇ. ೧೦ ರಷ್ಟು ಹೆಚ್ಚಾಗುತ್ತದೆ. ಈ ಕಾಲ ಮಹಾತ್ಮೆಯಿಂದ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮ ಕಾರ್ಯಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.

೫. ಈ ತಿಥಿಯಂದು ದೇವತೆಗಳನ್ನು ಮತ್ತು ಪಿತೃಗಳನ್ನು ಉದ್ದೇಶಿಸಿ ಮಾಡಿದ ಎಲ್ಲ ಕರ್ಮಗಳೂ ಅಕ್ಷಯ (ಅವಿನಾಶಿ)ವಾಗುತ್ತವೆ. (ಆಧಾರ : ‘ಮದನರತ್ನ’)

ಇ. ಅಕ್ಷಯ ತೃತೀಯಾದಂದು ಮಾಡಬೇಕಾದ ಕೃತಿಗಳು

ಇ ೧. ಪವಿತ್ರ ಜಲದಲ್ಲಿ ಸ್ನಾನ :ಈ ದಿನ ತೀರ್ಥಕ್ಷೇತ್ರದಲ್ಲಿ ಸ್ನಾನ ಮಾಡಬೇಕು, ಸಾಧ್ಯವಿಲ್ಲದಿದ್ದರೆ ಹರಿಯುವ ನೀರಿನಲ್ಲಿ ಸ್ನಾನ ಮಾಡಬೇಕು.

ಇ ೨. ಶ್ರೀವಿಷ್ಣುಪೂಜೆ, ಜಪ ಮತ್ತು ಹೋಮ : ಅಕ್ಷಯ ತೃತೀಯಾದಂದು ಸತತವಾಗಿ ಸುಖ ಸಮೃದ್ಧಿಯನ್ನು ಪ್ರಾಪ್ತಮಾಡಿಕೊಡುವ ದೇವತೆಯ ಬಗ್ಗೆ ಕೃತಜ್ಞತಾಭಾವವನ್ನಿಟ್ಟು ಉಪಾಸನೆ ಮಾಡಿದರೆ ನಮ್ಮ ಮೇಲಾಗುವ ಆ ದೇವತೆಯ ಕೃಪಾದೃಷ್ಟಿ ಯಾವತ್ತೂ ಕ್ಷಯವಾಗುವುದಿಲ್ಲ. ಈ ದಿನ ಶ್ರೀವಿಷ್ಣು ಸಹಿತ ವೈಭವಲಕ್ಷ್ಮೀಯ ಪ್ರತಿಮೆಯನ್ನು ಕೃತಜ್ಞತಾಭಾವವಿಟ್ಟು ಭಕ್ತಿಭಾವದಿಂದ ಪೂಜಿಸಬೇಕು. ಈ ದಿನವನ್ನು ಹೋಮ ಹವನ, ಜಪ ಮಾಡುತ್ತ ಕಳೆಯಬೇಕು.

ಇ ೨ ಅ. ಅಕ್ಷಯ ತೃತೀಯಾದಂದು ಶ್ರೀವಿಷ್ಣುವಿನ ತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಸಾತ್ತ್ವಿಕ ರಂಗೋಲಿಗಳನ್ನು ಬಿಡಿಸಬೇಕು.

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ)