೧. ಉತ್ತರಭಾರತ
ಈ ಪ್ರದೇಶದಲ್ಲಿ ಈ ದಿನ ಪೂಜೆ ಮತ್ತು ಪ್ರಾರ್ಥನೆಯನ್ನು ಮಾಡಲಾಗುತ್ತದೆ. ಪರಶುರಾಮನ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಗಂಗಾ ನದಿಯಲ್ಲಿ ಸ್ನಾನ ಮಾಡುವುದು, ತೀರ್ಥಯಾತ್ರೆಗಳನ್ನು ಮಾಡುವುದು, ಯಜ್ಞಗಳನ್ನು ಮಾಡುವುದು, ಹಾಗೆಯೇ ಆಹಾರ ಮತ್ತು ಧನದ ದಾನವನ್ನು ಮಾಡುವುದು, ಬ್ರಾಹ್ಮಣರಿಗೆ ಜವೆಗೋದಿ (ಬಾರ್ಲಿ) ಮತ್ತು ಸಮಿಧೆಗಳನ್ನು ಕೊಡುವುದು, ಈ ರೀತಿಯ ಧಾರ್ಮಿಕ ಆಚಾರಗಳನ್ನು ಈ ದಿನ ಮಾಡಲಾಗುತ್ತದೆ. ಈ ದಿನ ಉತ್ತರಾಖಂಡ ರಾಜ್ಯದಲ್ಲಿನ ಬದ್ರಿನಾರಾಯಣ ದೇವಸ್ಥಾನದ ಮುಚ್ಚಿದ ಬಾಗಿಲನ್ನು ತೆರೆಯುತ್ತಾರೆ. ಈ ದೇವಸ್ಥಾನವನ್ನು ಅಕ್ಷಯ ತದಿಗೆಯಂದು ತೆರೆದ ನಂತರ ದೀಪಾವಳಿಯ ಸಹೋದರ ಬಿದಿಗೆಯ ದಿನ ಮುಚ್ಚಲಾಗುತ್ತದೆ. ವೃಂದಾವನದ ಶ್ರೀ ಬಾಂಕೆ ಬಿಹಾರಿಯ ದೇವಸ್ಥಾನದಲ್ಲಿ ಕೇವಲ ಇದೇ ದಿನ ಶ್ರೀವಿಗ್ರಹದ (ಮೂರ್ತಿಯ) ಚರಣಗಳ ದರ್ಶನವಾಗುತ್ತದೆ ಮತ್ತು ನಂತರ ಸಂಪೂರ್ಣ ವರ್ಷ ಚರಣಗಳನ್ನು ವಸ್ತ್ರದಿಂದ ಮುಚ್ಚಿರುತ್ತಾರೆ. ಈ ದಿನ ಯಾರು ಗಂಗಾ ಸ್ನಾನವನ್ನು ಮಾಡುತ್ತಾರೆಯೋ, ಅವರು ಪಾಪಗಳಿಂದ ಮುಕ್ತರಾಗುತ್ತಾರೆ, ಎಂದು ಭಾರತೀಯ ಸಂಸ್ಕೃತಿಯಲ್ಲಿ ನಂಬಲಾಗಿದೆ. ಈ ದಿನ ಗಂಗೆಯು ಸ್ವರ್ಗದಿಂದ ಪೃಥ್ವಿಯ ಮೇಲೆ ಅವತರಿಸಿದಳು ಎಂಬ ಕಥೆಯೂ ಇದೆ.
೨. ಓಡಿಶಾ
ಓಡಿಶಾ ರಾಜ್ಯದಲ್ಲಿ ರೈತರಿಗೆ ಈ ದಿನ ವಿಶೇಷ ಮಹತ್ವ ದ್ದಾಗಿರುತ್ತದೆ. ಈ ದಿನ ಶ್ರೀ ಲಕ್ಷ್ಮಿದೇವಿಯ ಪೂಜೆಯನ್ನು ಮಾಡಿ ಹೊಸ ಧಾನ್ಯಗಳನ್ನು ಬಿತ್ತಲಾಗುತ್ತದೆ. ಈ ಹಬ್ಬಕ್ಕೆ ‘ಮುಠಿ ಚುಹಾಣಾ’ ಎಂದು ಕರೆಯಲಾಗುತ್ತದೆ. ಈ ದಿನ ತರಕಾರಿ ಸೊಪ್ಪುಗಳನ್ನು ಮತ್ತು ಮಾಂಸಹಾರವನ್ನು ಸೇವಿಸುವುದಿಲ್ಲ. ಈ ದಿನವೇ ಪ್ರಸಿದ್ಧ ಜಗನ್ನಾಥ ರಥಯಾತ್ರೆ ಪ್ರಾರಂಭವಾಗುತ್ತದೆ.
೩. ಬಂಗಾಲ
ಬಂಗಾಲದಲ್ಲಿ ವ್ಯಾಪಾರ ಮಾಡುವ ಜನರು ಅಕ್ಷಯ ತದಿಗೆಯನ್ನು ಮಹತ್ವದ ದಿನವೆಂದು ನಂಬುತ್ತಾರೆ. ಈ ದಿನ ‘ಹಾಲಕಟಾ’ ಎಂಬ ಹೆಸರಿನಿಂದ ಗಣಪತಿಯ ಮತ್ತು ಲಕ್ಷ್ಮಿಯ ವಿಶೇಷ ಪೂಜೆಯನ್ನು ಮಾಡುತ್ತಾರೆ.
೪. ದಕ್ಷಿಣ ಭಾರತ
ಈ ದಿನ ಶ್ರೀ ಮಹಾವಿಷ್ಣು ಮತ್ತು ಶ್ರೀ ಲಕ್ಷ್ಮೀ ಹಾಗೂ ಶ್ರೀ ಕುಬೇರ ಇವರ ಪೂಜೆಗೆ ಮಹತ್ವವಿರುತ್ತದೆ. ದೇವಸ್ಥಾನಕ್ಕೆ ದರ್ಶನಕ್ಕೆ ಹೋಗುವುದು, ಅನ್ನದಾನ ಮಾಡುವುದು ಇಂತಹ ಆಚಾರಗಳನ್ನು ಮಾಡಲಾಗುತ್ತದೆ.
೫. ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿನ ಕಾನ್ಹಾದೇಶದಲ್ಲಿ (ಖಾನ್ದೇಶ) ಅಕ್ಷಯ ತದಿಗೆಯ ಹಬ್ಬಕ್ಕೆ ‘ಆಖಜಿ’ ಎಂದು ಹೇಳಲಾಗುತ್ತದೆ. ಇಲ್ಲಿ ಆಖಜಿ ಹಬ್ಬಕ್ಕೆ ದೀಪಾವಳಿ ಹಬ್ಬದಂತೆಯೇ ಮಹತ್ವವನ್ನು ಕೊಡ ಲಾಗುತ್ತದೆ. ಹಳ್ಳಿಯ ಕೆಲವು ಉದ್ದಿಮೆದಾರರು (ಬಡಿಗರು, ಕಜಾಮ ಮುಂತಾದವರು) ಅಕ್ಷಯ ತದಿಗೆಯಂದು ಹೊಸ ವರ್ಷವನ್ನು ಪ್ರಾರಂಭಿಸುತ್ತಾರೆ.
೬. ರಾಜಸ್ಥಾನ
ರಾಜಸ್ಥಾನದಲ್ಲಿಯೂ ಈ ದಿನವನ್ನು ಶುಭ ಮುಹೂರ್ತದ ದಿನವೆಂದು ನಂಬುತ್ತಾರೆ. ಇಲ್ಲಿ ಈ ದಿನಕ್ಕೆ ‘ಆಖಾ ತೀಜ’ ಎನ್ನುತ್ತಾರೆ. ರಾಜಸ್ಥಾನದಲ್ಲಿನ ನಗರ ಮತ್ತು ಗ್ರಾಮಗಳಲ್ಲಿ ಈ ದಿನ ವಿವಾಹ ಮಾಡುವ ಪದ್ಧತಿಯಿದೆ.
(ಆಧಾರ : ವಿಕಿಪಿಡಿಯಾ ಜಾಲತಾಣ)