ಅತಿಕ್ ಅಹ್ಮದ್ ಸಹಿತ ಉತ್ತರ ಪ್ರದೇಶದಲ್ಲಿ ನಡೆದ ೧೮೩ ಎನ್‌ಕೌಂಟರ್‌ಗಳ ತನಿಖೆಗಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲು !

ಸರ್ವೋಚ್ಚ ನ್ಯಾಯಾಲಯ

ನವ ದೆಹಲಿ – ಉತ್ತರ ಪ್ರದೇಶದ ಕುಖ್ಯಾತ ಗೂಂಡಾ ಅತಿಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯವಾದಿ ವಿಶಾಲ್ ತಿವಾರಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಇದರೊಂದಿಗೆ ೨೦೧೭ ರಿಂದ ಉತ್ತರ ಪ್ರದೇಶದಲ್ಲಿ ನಡೆದ ೧೮೩ ಎನ್‌ಕೌಂಟರ್‌ಗಳ ತನಿಖೆಗೂ ಅರ್ಜಿ ಸಲ್ಲಿಸಲಾಗಿದೆ. ಇದರೊಂದಿಗೆ ಗ್ಯಾಂಗ್‌ಸ್ಟರ್ ವಿಕಾಸ್ ದುಬೆಯ ಎನ್‌ಕೌಂಟರ್ ಬಗ್ಗೆ ಕೇಂದ್ರ ತನಿಖಾ ದಳದಿಂದ ತನಿಖೆ ಆಗಬೇಕೆಂದು ಅರ್ಜಿಯ ಮೂಲಕ ಒತ್ತಾಯಿಸಲಾಗಿದೆ.

ನ್ಯಾಯವಾದಿ ತಿವಾರಿ ಇವರು, ಇಂತಹ ಚಟುವಟಿಕೆಗಳು ಪ್ರಜಾಪ್ರಭುತ್ವ ಮತ್ತು ಆಡಳಿತಕ್ಕೆ ಗಂಭೀರ ಅಪಾಯವಿದೆ. ಇಂತಹ ಕೃತ್ಯಗಳು ಅರಾಜಕತೆವಾಗಿವೆ. ಕಾನೂನು ಬಾಹಿರ ಹತ್ಯೆಗಳು ಅಥವಾ ನಕಲಿ ಪೊಲೀಸ್ ಎನ್‌ಕೌಂಟರ್‌ಗಳನ್ನು ಕಾನೂನಿನಡಿಯಲ್ಲಿ ವ್ಯಾಪಕವಾಗಿ ಖಂಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಪೋಲೀಸರನ್ನು ಅಂತಿಮ ನ್ಯಾಯಾಧೀಶರು ಅಥವಾ ಶಿಕ್ಷೆ ನೀಡುವ ಅಧಿಕಾರಿಯೆಂದು ಅವಕಾಶ ನೀಡಲಾಗುವುದಿಲ್ಲ. ಶಿಕ್ಷೆ ನೀಡುವ ಅಧಿಕಾರ ನ್ಯಾಯಾಂಗಕ್ಕೆ ಮಾತ್ರ ಇದೆ. ಪೊಲೀಸರು ಯಾವಾಗ ಧೈರ್ಯ ತೋರಿಸುತ್ತಾರೆ, ಆಗ ಇಡೀ ಕಾನೂನಿನ ನಿಯಮವು ಕುಸಿಯುತ್ತದೆ ಮತ್ತು ಜನರು ಪೊಲೀಸರಿಗೆ ಭಯಪಡುತ್ತಾರೆ, ಇದು ಪ್ರಜಾಪ್ರಭುತ್ವಕ್ಕೆ ತುಂಬಾ ಅಪಾಯಕಾರಿ ಮತ್ತು ಹೆಚ್ಚಿನ ಅಪರಾಧಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.