ಇಟಲಿಯಲ್ಲಿ ನೀರಿನ ಅಡಿಯಲ್ಲಿ ನಬಾಟಿಯನ್ ಸಂಸ್ಕೃತಿಗೆ ಸಂಬಂಧಿಸಿದ ಪುರಾತನ ದೇವಾಲಯ ಪತ್ತೆ !

ರೋಮ್ (ಇಟಲಿ) – ಇಟಲಿಯ ಪೊಝುವೊಲಿ ಬಂದರು ಪ್ರದೇಶದಲ್ಲಿ ನೀರಿನ ಅಡಿಯಲ್ಲಿ ನಬಾಟಿಯನ್ ನಾಗರಿಕತೆಗೆ ಸೇರಿದ ಪುರಾತನ ದೇವಾಲಯದ ಅವಶೇಷಗಳು ಪತ್ತೆಯಾಗಿವೆ. ನಬಾಟಿಯನ್ ಸಂಸ್ಕೃತಿಯ ಜನರು ‘ದಸಹರಾ’ ದೇವರನ್ನು ಪೂಜಿಸುತ್ತಿದ್ದರು. ನಬಾಟಿಯನ್ ಸಂಸ್ಕೃತಿಯಲ್ಲಿ ದಸರಾವನ್ನು ‘ಪರ್ವತಗಳ ದೇವತೆ’ ಎಂದೂ ಕರೆಯಲಾಗುತ್ತದೆ. ದೇವಸ್ಥಾನದ ಅವಶೇಷಗಳು ಪತ್ತೆಯಾದ ನಂತರ, ಹೆಚ್ಚಿನ ಶೋಧ ಕಾರ್ಯವನ್ನು ಪ್ರಾರಂಭಿಸಲಾಗಿದೆ. ದೇವಸ್ಥಾನದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಇದು ಇಟಲಿಯ ಪ್ರಾಚೀನ ನಗರದ ಇತಿಹಾಸ ಮತ್ತು ಅದರ ಇತರ ಕೆಲವು ಅಂಶಗಳು ಬೆಳಕಿಗೆ ಬರಬಹುದು.
ಸಂಶೋಧನೆಯ ಬಗ್ಗೆ ಇಟಲಿಯ ಸಂಸ್ಕೃತಿಕ ಸಂತಸ ವ್ಯಕ್ತಪಡಿಸಿದ್ದಾರೆ. ಪುರಾತನ ಪೊಜ್ಜುವೊಲಿಯಲ್ಲಿ ಹೆಚ್ಚಿನ ನಿಧಿಗಳು ಪತ್ತೆಯಾಗಿವೆ. ಹಾಗಾಗಿ ಈ ಭಾಗದ ಸಾಂಸ್ಕೃತಿಕ, ಧಾರ್ಮಿಕ ಮತ್ತು ವಾಣಿಜ್ಯ ಪ್ರಾಮುಖ್ಯತೆ ಮತ್ತೊಮ್ಮೆ ಸ್ಪಷ್ಟವಾಗಿದೆ ಎಂದು ಸಚಿವರು ಹೇಳಿದರು.