ಅತಿಕ್ ಅಹಮದ್ ನ ಒಂದೂವರೆ ಸಾವಿರ ಕೋಟಿ ರೂಪಾಯಿಗಳ ಆಸ್ತಿ ವಶ !

ಪ್ರಯಾಗರಾರಾಜ್ (ಉತ್ತರ ಪ್ರದೇಶ) – ಇತ್ತೀಚೆಗೆ ಹತ್ಯೆಗೀಡಾದ ಉತ್ತರ ಪ್ರದೇಶದ ಕುಖ್ಯಾತ ಗೂಂಡಾ ಅತಿಕ್ ಅಹಮದ್ ನ ಒಂದುವರೆ ಸಾವಿರ ಕೋಟಿ ರೂಪಾಯಿಯ ಆಸ್ತಿಯನ್ನು ಕೇಂದ್ರೀಯ ವ್ಯವಸ್ಥೆಯು ವಶಪಡಿಸಿದೆ. ಇವುಗಳಲ್ಲಿ ಕೆಲವು ಆಸ್ತಿ ಅತೀಕ್ ಹೆಸರಿನಲ್ಲಿದ್ದರೆ ಇನ್ನು ಕೆಲವು ಆತನ ನಿಕಟವರ್ತಿಗಳ ಹೆಸರಲ್ಲಿದ್ದವು. ಈ ಆಸ್ತಿಗಳಲ್ಲಿ ನಗದು, ಆಭರಣಗಳು, ಭೂಮಿ ಮತ್ತು ಕಟ್ಟಡಗಳು ಸೇರಿವೆ. ಅತಿಕ್ ಕೇವಲ ೨೦ ವರ್ಷಗಳಲ್ಲಿ ಗೂಂಡಾಗಿರಿ ಮಾಡಿ ಈ ಆಸ್ತಿಯನ್ನು ಗಳಿಸಿದ್ದ.

ಸಂಪಾದಕರ ನಿಲುವು

ಗೂಂಡಾಗಿರಿಯ ಮೂಲಕ ಇಷ್ಟು ಸಂಪತ್ತನ್ನು ಗಳಿಸುವ ತನಕ ಆತನನ್ನು ಬೆಂಬಲಿಸುತ್ತಿರುವ ಭ್ರಷ್ಟ ಪೊಲೀಸ್, ಆಡಳಿತ, ಮಂತ್ರಿಗಳು ಮತ್ತು ರಾಜಕೀಯ ಪಕ್ಷಗಳ ವಿರುದ್ಧವೂ ಕ್ರಮಕೈಗೊಳ್ಳಬೇಕು !