‘ಹೆಚ್.೩ ಎನ್.೨’ ಈ ವಿಷಾಣುಗಳ ಸೋಂಕು ಹೆಚ್ಚಾಗುತ್ತಿರುವಾಗ ವಹಿಸಬೇಕಾದ ಎಚ್ಚರಿಕೆ 

ಪ್ರಸ್ತುತ ‘ಹೆಚ್.೩ ಎನ್.೨’ ಈ ವಿಷಾಣುವಿನ ಸೋಂಕು ಹೆಚ್ಚಾಗುತ್ತಿದೆ. ಇದರಲ್ಲಿ ವೃದ್ಧ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಹಿನ್ನಲೆಯಲ್ಲಿ ಜನಸಾಮಾನ್ಯರು ಹೇಗೆ ಕಾಳಜಿ ವಹಿಸಬೇಕು ? ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ವಸಂತ ಋತು ಮತ್ತು ಮಳೆ, ಮೋಡ ಕವಿದ ವಾತಾವರಣದಿಂದಾಗಿ ನೆಗಡಿ, ಕೆಮ್ಮು, ಜ್ವರ, ಅಸ್ತಮಾ ಮೊದಲಾದ ಸಮಸ್ಯೆಗಳು ಹೆಚ್ಚಾಗಿರುವುದು ಕಂಡು ಬರುತ್ತಿದೆ. ಈ ಅನಾರೋಗ್ಯವು ಗಂಭೀರವಲ್ಲ; ಆದರೆ ‘ಫ್ಲೂ ಅಥವಾ ‘ವೈರಲ್ ಡಿಸಾರ್ಡರ್ ಆಗಿರುವುದರಿಂದ’ ‘ಪ್ರತಿಜೀವಿಕೆ (ಆಂಟಿಬಯೋಟಿಕ್)’ಗಳ ಅಗತ್ಯ ವಿಲ್ಲ ಎಂದು ತಜ್ಞರು ಹೇಳುತ್ತಾರೆ. ಆದರೂ ರೋಗಿಗಳು ಆಂಟಿ ಬಯೋಟಿಕ್ ತೆಗೆದುಕೊಂಡರು ‘ವ್ಯತ್ಯಾಸ ಕಂಡುಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ.

ಮೊದಲನೆದಾಗಿ ಅನಾವಶ್ಯಕ ಆಂಟಿಬಯೋಟಿಕ್‌ಗಳನ್ನು ನೀಡಲಾಗುತ್ತಿದೆ, ಎರಡನೇಯದಾಗಿ ಸಾಧಾರಣ ಚಿಕಿತ್ಸೆಗಳು ವ್ಯತ್ಯಾಸವನ್ನು ಉಂಟು ಮಾಡುವುದಿಲ್ಲವಾದ್ದರಿಂದ ಪ್ರತಿಜೀವಿಕೆ (ಆಂಟಿಬಯೋಟಿಕ್)ಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಇದರ ದುಷ್ಪರಿಣಾಮವು ದೂರಿಗೆ ಪುಷ್ಠಿ ನೀಡುವ ಅಂಶವಾಗಿದೆ. ಪ್ರಸ್ತುತ ಸೋಂಕಿನ ವ್ಯಾಪ್ತಿ ಹೆಚ್ಚುತ್ತಿದೆ. ಆದ್ದರಿಂದ ಸೋಂಕು ಗಂಭೀರವಾಗಿ ಹರಡುವ ಮೊದಲೇ ಪ್ರತಿಯೊಬ್ಬರು ಮುಂದಿನಂತೆ ಕಾಳಜಿ ವಹಿಸಬೇಕು.

೧. ಬಿಸಿ ಅಥವಾ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ.

೨. ತಣ್ಣನೆಯ ಆಹಾರವನ್ನು ತಿನ್ನುವುದು ಮತ್ತು ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

೩. ಮೊಸರು, ಲಸ್ಸಿ, ಮಜ್ಜಿಗೆ, ವಿವಿಧ ಪಾನಕಗಳು, ಮಾವಿನಕಾಯಿ, ಉಪ್ಪಿನಕಾಯಿ, ಮೇಯನೇಸ್ ಚೀಸ್, ಬ್ರೆಡ್, ಘನ ಆಹಾರಗಳು, ಬಲಿಯದ ಹಣ್ಣುಗಳು, ಸಿಹಿತಿಂಡಿಗಳು ಇತ್ಯಾದಿಗಳನ್ನು ದೂರವಿಡಬೇಕು.

೪. ಹಗಲಿನಲ್ಲಿ ಮಲಗುವುದು ರಾತ್ರಿಯಲ್ಲಿ ಎಚ್ಚರವಿರುವುದು ತಪ್ಪಿಸಿ ಮತ್ತು ನಿಮಗೆ ಹಸಿವಾದಾಗ ಮಾತ್ರ ನಿಮ್ಮ ಜೀರ್ಣದ ಸಾಮರ್ಥ್ಯಕ್ಕೆ ಅನುಗುಣವಾಗಿ ತಿನ್ನಿರಿ.

೫. ಆಹಾರ ಕ್ರಮವನ್ನು ಕಾಪಾಡಿಕೊಳ್ಳಬೇಕು.

೬. ಪ್ರಾಣಾಯಾಮ, ಸೂರ್ಯನಮಸ್ಕಾರ ಇತ್ಯಾದಿ ಮನೆಯಲ್ಲಿ ಮಾಡಬಹುದಾದ ವ್ಯಾಯಾಮ ಮಾಡಬೇಕು.

೭. ಯಾವುದೇ ರೀತಿಯಲ್ಲಿ ಅಸ್ವಸ್ಥತೆ ಅನಿಸುತ್ತಿದ್ದಲ್ಲಿ ಆರೋಗ್ಯ ಹದಗೆಡದಂತೆ ತಡೆಯಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಇದು ಹೆಚ್ಚು ಪ್ರಯೋಜನಕಾರಿಯಾಗುವುದು.

– ಡಾ. ತನುಜಾ ಗೋಖಲೆ, ಪುಣೆ. (೧೬.೩.೨೦೨೩)

(ಆಭಾರ : ಸಾಮಾಜಿಕ ಮಾಧ್ಯಮ)