ಸಾಧಕರೇ, ಮನಸ್ಸಿನಲ್ಲಿ ಬರುವ ಅಹಂಯುಕ್ತ ವಿಚಾರಗಳಿಂದ ಸಾಧನೆಯಲ್ಲಿ ಆಗುವ ಹಾನಿಯನ್ನು ಗಮನದಲ್ಲಿ ತೆಗೆದುಕೊಂಡು, ಅವುಗಳನ್ನು ದೂರಗೊಳಿಸಲು ಅಂತರ್ಮುಖತೆಯಿಂದ ಕಠೋರವಾಗಿ ಪ್ರಯತ್ನಿಸಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಕೆಲವು ಸಾಧಕರಿಗೆ, ಒಳ್ಳೆಯ ಸಾಧನೆ ಮಾಡುವ, ಹಾಗೆಯೇ ಜವಾಬ್ದಾರಿ ವಹಿಸಿ ಸೇವೆಯನ್ನು ಮಾಡುವ ಸಾಧಕರೊಂದಿಗೆ ಮಾತ್ರ ಮಾರ್ಗದರ್ಶಕ ಸಾಧಕರು ಪ್ರೀತಿಯಿಂದ ಮತ್ತು ಸಹಜವಾಗಿ ಮಾತನಾಡುತ್ತಾರೆ. ಅವರು ನನ್ನೊಂದಿಗೆ ಹಾಗೆ ಮಾತ ನಾಡುವುದಿಲ್ಲ. ಮಾರ್ಗದರ್ಶಕ ಸಾಧಕರು ಪ್ರೀತಿಯಿಂದ ಮತ್ತು ಸಹಜವಾಗಿ ಮಾತನಾಡಬೇಕು, ಎಂದೆಲ್ಲ ಅನಿಸುತ್ತದೆ. ಈ ಅಪೇಕ್ಷೆ ಪೂರ್ತಿಯಾಗದಿರುವುದರಿಂದ ಸಾಧಕರ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುವುದು, ಪೂರ್ವಗ್ರಹ ಉಂಟಾಗಿ ಮನಸ್ಸಿನಲ್ಲಿ ಸಂಘರ್ಷವಾಗುವುದು, ಬಹಿರ್ಮುಖತೆ ಹೆಚ್ಚಾಗುವುದು ಇತ್ಯಾದಿ ಪರಿಣಾಮಗಳಾಗುತ್ತಿರುವುದು ಗಮನಕ್ಕೆ ಬಂದಿದೆ.

ಸಾಧನೆಯಲ್ಲಿ ಬರುವ ಅಡಚಣೆಗಳನ್ನು ದೂರಗೊಳಿಸಲು ಅಂತರ್ಮುಖರಾಗಿ ಮಾರ್ಗದರ್ಶಕ ಸಾಧಕರ ಸಹಾಯವನ್ನು ಪಡೆದರೆ ಆಧ್ಯಾತ್ಮಿಕ ಪ್ರಗತಿ ಶೀಘ್ರಗತಿಯಲ್ಲಿ ಆಗುತ್ತದೆ. ಮಾರ್ಗದರ್ಶಕ ಸಾಧಕರ ಮಾಧ್ಯಮದಿಂದ ಗುರುತತ್ತ್ವವೇ ನಮ್ಮ ಸಾಧನೆಗಾಗಿ ಆವಶ್ಯಕವಿರುವ ದಿಶೆಯನ್ನು ತೋರಿಸುತ್ತಿರುತ್ತದೆ, ಇದರ ಪ್ರಚೀತಿಯನ್ನು ಪಡೆಯಲು ತಾವಾಗಿ ಮಾರ್ಗದರ್ಶಕ (ಜವಾಬ್ದಾರ) ಸಾಧಕರೊಂದಿಗೆ ಮನಮುಕ್ತತೆಯಿಂದ ಮಾತನಾಡುವುದು, ಹಾಗೆಯೇ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ತಮ್ಮ ತಪ್ಪುಗಳನ್ನು ಹೇಳಿ ಅದರ ಬಗ್ಗೆ ಅವರ ಮಾರ್ಗದರ್ಶನವನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿರುತ್ತದೆ. ಅಧ್ಯಾತ್ಮದಲ್ಲಿ ವ್ಯಕ್ತಿಗೆ ಮಹತ್ವವಿಲ್ಲ, ಆ ಮಾಧ್ಯಮದಿಂದ ಕಾರ್ಯವನ್ನು ಮಾಡುವ ಈಶ್ವರನ ಅನುಭೂತಿಯನ್ನು ಪಡೆಯುವುದು ಮಹತ್ವದ್ದಾಗಿದೆ.

ಸಾಧಕರ ಮನಸ್ಸಿನಲ್ಲಿ ಮೇಲಿನಂತೆ ಅಪೇಕ್ಷೆಯ ವಿಚಾರಗಳು ಪುನಃ ಪುನಃ ಬರುತ್ತಿದ್ದರೆ ಅವರು ಅವುಗಳ ಬಗ್ಗೆ ಸ್ವಯಂಸೂಚನೆಗಳನ್ನು ಕೊಟ್ಟು ಕೃತಿಯ ಮತ್ತು ಭಾವದ ಸ್ತರದಲ್ಲಿ ಪ್ರಯತ್ನಿಸಬೇಕು.

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧.೩.೨೦೨೩)