ಕಳೆದ ೯ ತಿಂಗಳಲ್ಲಿನ ಇದು ೫ ನೇ ಘಟನೆ !
ಒಂಟಾರಿಯೋ (ಕೆನಡಾ) – ಕೆನಡಾದಲ್ಲಿ ಮತ್ತೊಮ್ಮೆ ಹಿಂದೂ ದೇವಸ್ಥಾನದ ಮೇಲೆ ದಾಳಿ ಮಾಡಿ ಮತ್ತು ಹಿಂದೂ ವಿರೋಧಿ ಘೋಷಣೆ ಬರೆದಿರುವ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಈ ಘಟನೆ ಸೆರೆಯಾಗಿದ್ದು ಅದರ ಆಧಾರದಲ್ಲಿ ಪೊಲೀಸರು ೨ ಆರೋಪಿಗಳನ್ನು ಹುಡುಕುತ್ತಿದ್ದಾರೆ. ಒಂಟಾರಿಯೋದ ವಿಂಡಸರ್ ನ ಶ್ರೀಸ್ವಾಮಿ ನಾರಾಯಣ ದೇವಸ್ಥಾನದಲ್ಲಿ ಏಪ್ರಿಲ್ ೫ ರ ರಾತ್ರಿ ಈ ಘಟನೆ ನಡೆದಿದೆ. ಕಳೆದ ವರ್ಷ ಜುಲೈ ತಿಂಗಳಿಂದ ಕೆನಡಾದಲ್ಲಿ ಘಟಿಸಿರುವ ಇದು ೫ ನೇ ಘಟನೆ ಆಗಿದೆ.
WINDSOR POLICE NEWS RELEASE
Two suspects wanted for hate-motivated graffitihttps://t.co/yOvlYU4ykn@CStoppers with information pic.twitter.com/5bT4ukynSq— Windsor Police (@WindsorPolice) April 5, 2023
ದೇವಸ್ಥಾನದಲ್ಲಿ ಕೆಲಸ ಮಾಡುವ ಹರ್ಷಲ್ ಪಟೇಲ್ ಇವರು, ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆ ಬರೆದಿರುವುದು ನೋಡಿ ನಮಗೆ ಆಘಾತವಾಯಿತು. ೨೦ ವರ್ಷಗಳಲ್ಲಿ ಇದೇ ಮೊದಲ ಬಾರಿ ಇಲ್ಲಿ ಈ ರೀತಿ ನಡೆದಿದೆ. ಇದರ ಬಗ್ಗೆ ನಾವು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದೆವು. ಈ ಘಟನೆಯಿಂದ ನಗರದಲ್ಲಿನ ಹಿಂದೂ ಸಮಾಜ ಅಸಮಾಧಾನಗೊಂಡಿದೆ ಎಂದು ಹೇಳಿದರು.
VHP Spokesperson Vinod Bansal condemned the attack and said Hindu community is disheartened by the incident. #Canada #Temple #Hinduphobia https://t.co/njI2FgOQjI
— Republic (@republic) April 6, 2023
ಸಂಪಾದಕರ ನಿಲುವುಈ ಘಟನೆಯ ಹಿಂದೆ ಖಲಿಸ್ತಾನಿಗಳು ಇರುವ ಸಾಧ್ಯತೆ ಇದೆ ಮತ್ತು ಅವರಿಗೆ ಅಲ್ಲಿಯ ಸರಕಾರದ ಬೆಂಬಲ ಇರುವುದರಿಂದಲೇ ಈ ರೀತಿಯ ಘಟನೆ ನಿಲ್ಲುವ ಬದಲು ನಿರಂತರವಾಗಿ ಘಟಿಸುತ್ತವೆ, ಇದನ್ನು ನೋಡಿದರೆ ಭಾರತ ಸರಕಾರ ಕೆನಡಾ ಸರಕಾರಕ್ಕೆ ಅರ್ಥವಾಗುವ ಭಾಷೆಯಲ್ಲಿ ಹೇಳಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅನಿವಾರ್ಯಗೊಳಿಸಬೇಕು ! |