ಹನುಮಾನ ಜಯಂತಿಯ (ಎಪ್ರಿಲ್ ೬) ನಿಮಿತ್ತ ಹನುಮಂತನ ವ್ಯಕ್ತಿತ್ವದ ಒಂದು ಚಿಂತನೆ

ಆದರ್ಶ ವ್ಯಕ್ತಿತ್ವ ಶ್ರೀರಾಮಭಕ್ತ ಹನುಮಂತ !

ವೀರ ಹನುಮಂತನು ಸಪ್ತಚಿರಂಜೀವಿಗಳ ಪೈಕಿ ಒಬ್ಬನಾಗಿದ್ದಾನೆ ! ವಾಸ್ತವದಲ್ಲಿ ಮಹಾಬಲಿ, ಅತುಲ ಪರಾಕ್ರಮಿ ಮತ್ತು ಆಜೀವನ ಬ್ರಹ್ಮಚಾರಿಯಾಗಿರುವ ಶ್ರೀರಾಮಭಕ್ತ ಅಂಜನೇಯ ಹನುಮಂತನ ಚರಿತ್ರೆ ನಮಗೆಲ್ಲರಿಗೆ ಗೊತ್ತೇ ಇದೆ, ಆದರೂ ಆ ನರಶ್ರೇಷ್ಠನ ವ್ಯಕ್ತಿತ್ವ ನಿಜವಾಗಿಯೂ ಹೇಗಿತ್ತು, ಈ ವಿಷಯದಲ್ಲಿ ರಾಮಾಯಣದಲ್ಲಿ ಬಹಳ ವಿಲೋಭನೀಯ, ವಿಲಕ್ಷಣ ಮತ್ತು ಚಿಂತನೀಯ ವರ್ಣನೆಯನ್ನು ಮಾಡಲಾಗಿದೆ. ಸದ್ಯ ‘ವ್ಯಕ್ತಿತ್ವ ವಿಕಾಸ’ ಎಂಬುದು ಶಾಲಾಮಕ್ಕಳಿಗೂ ಬಹಳ ಇಷ್ಟವಾಗುವ ವಿಷಯವಾಗಿದೆ, ಎಂದು ಹೇಳಿದರೆ ಅಯೋಗ್ಯವಾಗಲಿಕ್ಕಿಲ್ಲ. ಈ ವ್ಯಕ್ತಿತ್ವ ವಿಕಾಸಕ್ಕಾಗಿ ಸಾವಿರಾರು ರೂಪಾಯಿಗಳ ಶುಲ್ಕ ಕೊಟ್ಟು ಕಲಿಯುವುದಕ್ಕಿಂತ ಹನುಮಂತನ ಚರಿತ್ರೆಯನ್ನು ಓದಿದರೂ ನಮಗೆ ಬಹಳಷ್ಟು ಕಲಿಯಲು ಸಿಗುತ್ತದೆ. ಅದೇ ರೀತಿ ವ್ಯಕ್ತಿತ್ವ ಹೇಗಿರಬೇಕು, ಎಂಬುದರ ಉತ್ತಮ ಉದಾಹರಣೆಯು ಶ್ರೀರಾಮಚಂದ್ರ ಮತ್ತು ಹನುಮಂತನ ಕಾರ್ಯದಿಂದ ನಮಗೆ ನೋಡಲು ಸಿಗಬಹುದು. ಅದಕ್ಕಾಗಿ ಈ ಲೇಖನ !

ಹಿಂದೂ ಧರ್ಮದಲ್ಲಿ ವೇದಾಧ್ಯಯನವನ್ನು ಕೇವಲ ವಿಶಿಷ್ಟ ಜಾತಿಯವರಷ್ಟೇ  ಮಾಡುತ್ತಾರೆಂಬುದು ಅಪ್ಪಟ ಸುಳ್ಳು !

ಪ್ರತ್ಯಕ್ಷ ಶ್ರೀರಾಮಚಂದ್ರರ ಬಾಯಿಯಿಂದ ಮೊದಲ ಭೇಟಿಯಲ್ಲಿಯೇ ಹನುಮಂತನ ಚಿಂತನೆಯನ್ನು ಕೇಳಿದಾಗ ಹನುಮಂತನ ವ್ಯಕ್ತಿತ್ವ ಎಷ್ಟು ವಿಲಕ್ಷಣ ಪ್ರಭಾವಶಾಲಿ ಆಗಿರಬಹುದು, ಎಂಬುದರ ಕಲ್ಪನೆಯನ್ನೇ ಮಾಡಬಹುದು. ಮೊದಲ ಭೇಟಿಯಲ್ಲೇ ಶ್ರೀರಾಮಚಂದ್ರರು ಹನುಮಂತನ ಗುಣಗಾನ ಮಾಡುತ್ತಾರೆ, ಏನಾಶ್ಚರ್ಯ ! ‘ಬುದ್ಧಿಮತಾಂ ವರಿಷ್ಠಂ’ ನಾದಂತಹ ಹನುಮಂತನು ಎಲ್ಲ ವೇದಗಳನ್ನು ಸೂಕ್ಷ್ಮರೀತಿಯಲ್ಲಿ ಅಭ್ಯಾಸ ಮಾಡಿದ್ದನು ಮತ್ತು ಅವನ ಆಚರಣೆಯೂ ಹಾಗೆಯೇ ಇತ್ತು. ವ್ಯಾಕರಣದ ಬಗ್ಗೆಯೂ ಅವನ ಅಭ್ಯಾಸವಿದೆ. ಇದರರ್ಥ ಆ ಕಾಲದಲ್ಲಿ ವಾನರರೂ ವೇದಗಳ ಅಭ್ಯಾಸವನ್ನು ಮಾಡುತ್ತಿದ್ದರು. ಹೀಗಿರುವಾಗ ತಥಾಕಥಿತ ಸ್ತ್ರೀ-ಕ್ಷುದ್ರರಿಗೆ ಹಾಗೂ ತಥಾಕಥಿತ ಬಹುಜನ ಸಮಾಜಕ್ಕೆ ವೇದವನ್ನು ನಿರಾಕರಿಸುವ ಪ್ರಶ್ನೆ ಎಲ್ಲಿ ಬರುತ್ತದೆ ?

ಇನ್ನೆಷ್ಟು ದಿನ ನಾವು ಹಿಂದೂ ಧರ್ಮದಲ್ಲಿ ವೇದಗಳ ಅಭ್ಯಾಸ ಕೇವಲ ವಿಶಿಷ್ಟ ಜಾತಿಯವರು ಮಾತ್ರ ಮಾಡುತ್ತಿದ್ದರು ಹಾಗೂ ಮಾಡುತ್ತಾರೆ ಎನ್ನುವ ಸುಳ್ಳು ಧಾರಣೆಯನ್ನು ಇಟ್ಟುಕೊಳ್ಳುವವರಿದ್ದೇವೆ ?

ರಾಮಚಂದ್ರರಿಗೂ ವೇದಗಳ ಹಾಗೂ ಸಂಸ್ಕೃತ ವ್ಯಾಕರಣದ ಅಧ್ಯಯನವಿತ್ತು ಹಾಗೂ ಅವರು ಕೂಡ ಅದರಲ್ಲಿ ಪಾರಂಗತರಾಗಿದ್ದು ರತ್ನಪರೀಕ್ಷಕರಾಗಿದ್ದರು, ಇದು ಎಷ್ಟು ವಿಲಕ್ಷಣವಾಗಿದೆ ! ಇದಕ್ಕಿಂತ ಉತ್ತಮ ವ್ಯಕ್ತಿತ್ವದ ಉದಾಹರಣೆಯನ್ನು ಹುಡುಕುವ ಅವಶ್ಯಕತೆಯಿದೆಯೇ ? ವಾನರರು ಸಹ ವೇದ ಹಾಗೂ ಸಂಸ್ಕೃತ ವ್ಯಾಕರಣದ ಅಧ್ಯಯನ ಮಾಡುತ್ತಿದ್ದರು ಎಂದರೆ, ಇಂದು ನಮ್ಮಂತಹ ಮನುಷ್ಯರಿಗೆ ಇಷ್ಟು ಅಸ್ಪೃಶ್ಯ ಆಗಿದೆಯೆ ? ನಾವು ಭಾರತೀಯರು ಎಷ್ಟು ದುರ್ದೈವಿಗಳಾಗಿದ್ದೇವೆ ? ಇದಕ್ಕಿಂತ ದುರ್ದೈವ ಇನ್ನೇನಿದೆ ?

ಅಶ್ವತ್ಥಾಮಾ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ |

ಕೃಪಃ ಪರಶುರಾಮಶ್ಚ ಸಪ್ತೈತೆ ಚಿರಂಜೀವಿನಃ ||

– ಪುಣ್ಯಜನಸ್ತುತೀ, ಶ್ಲೋಕ ೨

ಅರ್ಥ : ದ್ರೋಣಾಚಾರ್ಯರ ಪುತ್ರ ಅಶ್ವತ್ಥಾಮ, ದಾನಶೂರ ಬಲಿರಾಜ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ಪರಶುರಾಮ ಈ ೭ ಜನ ಚಿರಂಜೀವಿ ಗಳನ್ನು ನಾನು ಸ್ಮರಿಸುತ್ತೇನೆ.

ಒಬ್ಬ ದೂತನೆಂದು ಹೇಗೆ ಮಾತನಾಡಬೇಕು ? ಎಂಬುದರ ಆದರ್ಶವೆಂದರೆ ಹನುಮಂತ !

‘ರಾಮಾಯಣದ ಕಿಷ್ಕಿಂಧಕಾಂಡವು ಮುಂದಿನಂತೆ ಹೇಳುತ್ತದೆ, ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರರು ಸೀತಾಹರಣದ ನಂತರ ಕಬಂಧನ ಸೂಚನೆಗನುಸಾರ ಸುಗ್ರೀವನನ್ನು ಹುಡುಕುತ್ತಾ ಋಷ್ಯಮುಖ ಪರ್ವತದ ಬಳಿ ಬಂದರು. ಆಗ ವಾಲಿಯ ಭಯದಿಂದ ರಾಜ್ಯ ದಿಂದ ದೂರವಿರುತ್ತಿದ್ದ ಸುಗ್ರೀವನು ರಾಮ-ಲಕ್ಷ್ಮಣರಂತಹ ಇಬ್ಬರು ನರಶ್ರೇಷ್ಠರನ್ನು ನೋಡಿ ಸ್ವಲ್ಪ ಆಶ್ಚರ್ಯಚಕಿತ ಮತ್ತು ಸಂಶಯಕ್ಕೊಳಗಾದನು; ಆದರೆ ಸ್ವಲ್ಪ ಭಯವಾದರೂ ತನ್ನ ಸಚಿವನಾದ ಹನುಮಂತನನ್ನು ಈ ಇಬ್ಬರು ರಾಜಕುಮಾರರನ್ನು ಪರೀಕ್ಷಿಸಲು ಕಳುಹಿಸುತ್ತಾನೆ. ಹನುಮಂತನು ಓರ್ವ ಬ್ರಾಹ್ಮಣನ ರೂಪವನ್ನು ಧರಿಸಿ ರಾಮ-ಲಕ್ಷ್ಮಣರನ್ನು ಭೇಟಿಯಾಗಲು ಬರುತ್ತಾನೆ ಮತ್ತು ಅವರಿಗೆ ಆತ್ಮಪರಿಚಯವನ್ನು ನೀಡಿ ಅವರ ಪರಿಚಯವನ್ನೂ ಮಾಡಿಕೊಳ್ಳುತ್ತಾನೆ. ಹನುಮಂತನ ಶ್ರೀರಾಮರ ಜೊತೆಗಿನ ಆ ಸಂಭಾಷಣೆಯನ್ನು ಓದಿದರೂ ನಮಗೆ ಹನುಮಂತನ ಬುದ್ಧಿವಂತಿಕೆಯ  ದರ್ಶನವಾಗುತ್ತದೆ; ಆದರೆ ಅದಕ್ಕಿಂತ ಹೆಚ್ಚು ಒಬ್ಬ ದೂತನೆಂದು ಹೇಗೆ ಮಾತನಾಡಬೇಕು, ಎಂಬುದರ ಒಂದು ಆದರ್ಶವೂ ತಿಳಿಯುತ್ತದೆ.

ಪ್ರಭು ಶ್ರೀರಾಮಚಂದ್ರರು ಲಕ್ಷ್ಮಣನಿಗೆ ಹನುಮಂತನ ವಿಷಯದಲ್ಲಿ ಹೇಳಿದ ಗುಣವೈಶಿಷ್ಟ್ಯಗಳು

ಹನುಮಂತನ ಆ ಸುಮಧುರ ಮಾತುಗಳನ್ನು ಕೇಳಿದ ನಂತರ, ಶ್ರೀರಾಮಚಂದ್ರರು ಲಕ್ಷ್ಮಣನಿಗೆ ಹನುಮಂತನನ್ನು ವರ್ಣಿಸುತ್ತಾರೆ, ಅದು ಕೆಳಗಿನಂತಿದೆ.

ನಾನೃಗ್ವೇದನೀತಸ್ಯ ನಾಯಜುರ್ವೇದಧಾರಿಣಮ್ |

ನಾಸಾಮವೇದವಿದುಷಃ ಶಕ್ಯಮೇವಂ ವಿಭಾಷಿತುಮ್ ||

– ವಾಲ್ಮೀಕಿ ರಾಮಾಯಣ, ಕಾಂಡ ೪, ಸರ್ಗ ೩, ಶ್ಲೋಕ ೨೮

ಅರ್ಥ : ಯಾವನಿಗೆ ಋಗ್ವೇದದ ಶಿಕ್ಷಣ ಸಿಕ್ಕಿಲ್ಲವೋ, ಯಾವನು ಯಜುರ್ವೇದದ ಅಧ್ಯಯನವನ್ನು ಮಾಡಿಲ್ಲವೋ, ಯಾವನು ಸಾಮವೇದದ ವಿದ್ವಾಂಸನಾಗಿಲ್ಲವೋ, ಅವನು ಇಂತಹ ಸುಂದರ ಭಾಷೆಯಲ್ಲಿ ಮಾತನಾಡಲು ಸಾಧ್ಯವಿಲ್ಲ !

ನೂನಂ ವ್ಯಾಕರಣಂ ಕೃತ್ಸ್ನಮನೇನ ಬಹುಧಾ ಶ್ರುತಮ್ |

ಬಹು ವ್ಯಾಹರತಾನೇನ ನ ಕಿಞ್ಚಿದಪಶಬ್ದಿತಮ್ ||

– ವಾಲ್ಮೀಕಿ ರಾಮಾಯಣ, ಕಾಂಡ ೪, ಸರ್ಗ ೩, ಶ್ಲೋಕ ೨೯

ಅರ್ಥ : ನಿಶ್ಚಿತವಾಗಿ ಈ ಹನುಮಂತನು ವ್ಯಾಕರಣವನ್ನು ಅನೇಕ ಬಾರಿ ಅಧ್ಯಯನ ಮಾಡಿದ್ದಾನೆ; ಏಕೆಂದರೆ ಇಷ್ಟು ಹೊತ್ತು ಮಾತನಾಡುತ್ತಿದ್ದರೂ ಅವನ ಬಾಯಿಯಿಂದ ಒಂದೇ ಒಂದು ಅಶುದ್ಧ ಶಬ್ದ ಹೊರ ಬರಲಿಲ್ಲ !

ನ ಮುಖೆ ನೇತ್ರಯೋಶ್ಚಾಪಿ ಲಲಾಟೆ ಚ ಭುವೋಸ್ತಥಾ |

ಅನ್ಯೇಷ್ವಪಿ ಚ ಗಾತ್ರೇಷು ದೋಷಃ ಸಂವಿದಿತಃ ಕ್ವಚಿತ್ ||

– ವಾಲ್ಮೀಕಿ ರಾಮಾಯಣ,ಕಾಂಡ ೪, ಸರ್ಗ ೩, ಶ್ಲೋಕ ೩೦

ಅರ್ಥ : ಸಂಭಾಷಣೆಯ ಸಮಯದಲ್ಲಿ ಅವನ ಮುಖ, ಕಣ್ಣು, ಹಣೆ, ಹುಬ್ಬು ಮತ್ತು ಇತರ ಯಾವುದೇ ಅಂಗಗಳಿಂದ ಯಾವುದೇ ದೋಷ ಪ್ರಕಟವಾಗಿರುವುದು ನನಗೆ ಕಾಣಿಸಲಿಲ್ಲ !

ಅವಿಸ್ತರಮಸಂದಿಗ್ಧಮವಿಲಮ್ಬಿತಮವ್ಯಯಮ್ |

ಉರಃಸ್ಥಂ ಕಣ್ಠಗಂ ವಾಕ್ಯಂ ವರ್ತತೆ ಮಧ್ಯಮಸ್ವರಮ್ ||

– ವಾಲ್ಮೀಕಿ ರಾಮಾಯಣ, ಕಾಂಡ ೪, ಸರ್ಗ ೩, ಶ್ಲೋಕ ೩೧

ಅರ್ಥ : ಹನುಮಂತನು ಸ್ವಲ್ಪದರಲ್ಲಿ, ಆದರೆ ಅತ್ಯಂತ ಸ್ಪಷ್ಟವಾಗಿ ತನ್ನ ಹೇಳಿಕೆಯನ್ನು ಮಂಡಿಸಿದ್ದಾನೆ. ಅದನ್ನು ಸ್ಪಷ್ಟವಾಗಿ ತಿಳಿದು ಕೊಳ್ಳಬಹುದಾಗಿದೆ. ಅವನು ನಿಂತು ನಿಂತು ಅಥವಾ ಶಬ್ದ ಮತ್ತು ಅಕ್ಷರ ತುಂಡರಿಸಿ ವಾಕ್ಯವನ್ನು ಉಚ್ಚರಿಸಲಿಲ್ಲ. ಯಾವುದೇ ವಾಕ್ಯ ಕಿವಿಗೆ ತೊಂದರೆಯಾಗುವಂತಿರಲಿಲ್ಲ.

ಅವನ ವಾಣಿ ಹೃದಯದಲ್ಲಿ ಮಧ್ಯಮಾ ರೂಪದಲ್ಲಿ ಸ್ಥಿರವಾಗಿದೆ ಮತ್ತು ಕಂಠದಿಂದ ವೈಖರಿ ರೂಪದಲ್ಲಿ ಪ್ರಕಟವಾಗಿದೆ !

ಸಂಸ್ಕಾರಕ್ರಮಸಂಪನ್ನಾಮದ್ಧುತಾಮವಿಲಂಬಿತಾಮ್ |

ಉಚ್ಚಾರಯತಿ ಕಲ್ಯಾಣೀಂ ವಾಚಂ ಹೃದಯಹಾರಿಣೀಮ್ ||

– ವಾಲ್ಮೀಕಿ ರಾಮಾಯಣ, ಕಾಂಡ ೪, ಸರ್ಗ ೩, ಶ್ಲೋಕ ೩೨

ಅರ್ಥ : ಮಾತನಾಡುವಾಗ ಅವನ ಧ್ವನಿ ತುಂಬಾ ಮಂದವೂ ಇರಲಿಲ್ಲ ಅಥವಾ ಉಚ್ಚವಾಗಿಯೂ ಇರಲಿಲ್ಲ. ಮಧ್ಯಮ ಧ್ವನಿ ಯಲ್ಲಿ ಎಲ್ಲವನ್ನೂ ಹೇಳಿದ್ದಾನೆ. ಹೃದಯಕ್ಕೆ ಆನಂದ ಪ್ರದಾನಿಸುವ ಕಲ್ಯಾಣಮಯ ವಾಣಿಯನ್ನು ಅವನು ಉಚ್ಚರಿಸಿದ್ದಾನೆ.

ಅನಯಾ ಚಿತ್ರಯಾ ವಾಚಾ ತ್ರಿಸ್ಥಾನವ್ಯಞ್ಜನಸ್ಥಯಾ |

ಕಸ್ಯ ನಾರಾಧ್ಯತೇ ಚಿತ್ತಮುದ್ಯತಾಸೇರರೇರಪಿ ||

– ವಾಲ್ಮೀಕಿ ರಾಮಾಯಣ, ಕಾಂಡ ೪, ಸರ್ಗ ೩, ಶ್ಲೋಕ ೩೩

ಅರ್ಥ : ಹೃದಯ, ಕಂಠ ಮತ್ತು ಬಾಯಿ ಈ ಮೂರು ಸ್ಥಾನ ಗಳಿಂದ ಸ್ಪಷ್ಟ ರೂಪದಲ್ಲಿ ವ್ಯಕ್ತವಾಗುವ ಅವನ ಈ ಚಿತ್ರವತ್ ವಾಣಿಯು ಎಲ್ಲರ ಚಿತ್ತವನ್ನು ಪ್ರಸನ್ನಗೊಳಿಸುವಂತಹದ್ದಾಗಿದೆ !

ಹತ್ಯೆ ಮಾಡಲು ಖಡ್ಗವನ್ನೆತ್ತಿದ ಶತ್ರುವಿನ ಹೃದಯವೂ ಈ ವಾಣಿಯಿಂದ ಬದಲಾಗಬಹುದು !

ಎವಂವಿಧೋ ಯಸ್ಯ ದುತೋ ನ ಭವೇತ್ಪಾರ್ಥಿವಸ್ಯ ತು |

ಸಿದ್ಧಧ್ಯಾನ್ತಿ ಹಿ ಕಥಂ ತಸ್ಯ ಕಾರ್ಯಾಣಾಂ ಗತಯೋನಘ ||

– ವಾಲ್ಮೀಕಿ ರಾಮಾಯಣ, ಕಾಂಡ ೪, ಸರ್ಗ ೩, ಶ್ಲೋಕ ೩೪

ಅರ್ಥ : ಹೇ ಮುಗ್ಧ ಲಕ್ಷ್ಮಣಾ, ಇವನಂತಹ ದೂತರಿಲ್ಲದ ರಾಜರ ಕಾರ್ಯ ಸಾಧ್ಯವೇ ಇಲ್ಲ !

ಹನುಮಂತನ ಬ್ರಹ್ಮಚರ್ಯದ ವಿಷಯದಲ್ಲಿ ಸಮರ್ಥ ರಾಮದಾಸಸ್ವಾಮಿಗಳು ಮಾಡಿದ ವರ್ಣನೆ

ಸಮರ್ಥ ರಾಮದಾಸಸ್ವಾಮಿಗಳ ಮೂಲ ವಾಲ್ಮೀಕಿ ರಾಮಾಯಣದಲ್ಲಿರುವ ಹನುಮಂತನ ವರ್ಣನೆಯನ್ನು ಓದಿದರೆ ಮನಸ್ಸು ಅಕ್ಷರಶಃ ಸ್ತಬ್ಧವಾಗುತ್ತದೆ.  ಅವರು ‘ಬುದ್ಧಿಮತಾಂ ವರಿಷ್ಠಂ’ರಂತೂ ಆಗಿದ್ದಾರೆ; ಆದರೆ ಅದ ಕ್ಕಿಂತಲೂ ಅವನ ಪ್ರಖರ ಇಂದ್ರಿಯ ಸಂಯಮ, ಅಂದರೆ ತುಂಬಾ ಕಠೋರ ಆಜೀವನ ಅಖಂಡ ಬ್ರಹ್ಮಚರ್ಯೆ ! ಬ್ರಹ್ಮಚರ್ಯದ ಸಾಮರ್ಥ್ಯವು ಹನುಮಂತನ ಹೊರತು ಬೇರೆ ಎಲ್ಲಿಯೂ ಪ್ರಕಟವಾಗಿಲ್ಲ. ಮಹಾಭಾರತದಲ್ಲಿನ ಭೀಷ್ಮಾಚಾರ್ಯರ ಉದಾಹರಣೆ ಇದ್ದರೂ ಹನುಮಂತನ ಉದಾಹರಣೆಯು ವಿಲಕ್ಷಣ ಪ್ರೇರಣಾದಾಯಕವಾಗಿದೆ.

ಸಮರ್ಥ ರಾಮದಾಸಸ್ವಾಮಿಗಳು ಮನಾಚೆ ಶ್ಲೋಕದಲ್ಲಿ ಹೇಳುತ್ತಾರೆ, ‘ಅವನ (ಹನುಮಂತನ) ಬಾಯಿಯಲ್ಲಿ ಹಗಲೂರಾತ್ರಿ ಪರಮೇಶ್ವರನ ನಾಮವಿದೆ, ಆದ್ದರಿಂದ ಅವನಿಗೆ ಕಾಮ (ಕಾಮವಾಸನೆ) ತೊಂದರೆ ಕೊಡುವುದಿಲ್ಲ. ಅವನಿಗೆ ದೈವೀ ಗುಣಗಳು ಏರಿಕೆಯ ಕ್ರಮದಲ್ಲಿ ಸಹಜವಾಗಿ ಲಭಿಸಿವೆ. ಹರಿಭಕ್ತಿಯ ಬಲದಿಂದ ಅವನು ‘ಶಕ್ತ’ ಅಂದರೆ, ಸಮರ್ಥನಾಗಿ ಕಾಮದ ಮೇಲೆ ವಿಜಯವನ್ನು ಪ್ರಾಪ್ತ ಮಾಡಿಕೊಳ್ಳುತ್ತಾನೆ. ಇಂತಹ ಬ್ರಹ್ಮಚಾರಿ ಮಾರುತಿ ಧನ್ಯ !’

ಮಾರುತಿಯ ವೇಗದ ಬಗ್ಗೆ ಮಹರ್ಷಿ ವಾಲ್ಮೀಕಿಯವರ್ಣನೆ

ಮಹರ್ಷಿ ವಾಲ್ಮೀಕಿಯವರು ಸ್ಪಷ್ಟವಾಗಿ ಹೇಳುತ್ತಾರೆ,

ನ ಭೂಮೌ ನಾನ್ತರಿಕ್ಷೆ ವಾ ನಾಮ್ಬರೆ ನಾಮರಾಲಯೆ |

ನಾಪ್ಸು ವಾ ಗತಿಸಂಙ್ಗಂ ತೇ ಪಶ್ಯಮಿ ಹರೀಪುಙ್ಗವ ||

– ವಾಲ್ಮೀಕಿ ರಾಮಾಯಣ, ಕಾಂಡ ೪, ಸರ್ಗ ೪೪, ಶ್ಲೋಕ ೩

ಅರ್ಥ : ಹೇ ಕಪಿಶ್ರೇಷ್ಠ ! ಪೃಥ್ವಿ, ಅಂತರಿಕ್ಷ, ಆಕಾಶ, ದೇವಲೋಕ ಅಥವಾ ಜಲದಲ್ಲಿಯೂ ನಿಮ್ಮ ವೇಗಕ್ಕೆ ವಿರೋಧ’ವಾದುದನ್ನು ನಾನು ಯಾವತ್ತೂ ನೋಡಿಲ್ಲ.

ಸುಗ್ರೀವನು ಸೀತೆಯನ್ನು ಹುಡುಕುವಾಗ ಹನುಮಂತನನ್ನು ಉದ್ದೇಶಿಸಿ ಹೇಳುತ್ತಾನೆ, ‘ಹನುಮಂತಾ, ನಿನಗೆ ಅಸುರ, ಗಂಧರ್ವ, ನಾಗ, ಮನುಷ್ಯ ಮತ್ತು ರಾಜರ ಜ್ಞಾನವಿದೆ. ನಿನಗೆ ಲೋಕಪಾಲ ಸಹಿತ ೧೪ ಭುವನ ಮತ್ತು ೨೧ ಸ್ವರ್ಗಗಳ ಜ್ಞಾನವಿದೆ. ನಿನಗೆ ಸಾಗರದೊದಿಗೆ ಪರ್ವತದ ಜ್ಞಾನವೂ ಇದೆ. ಹೇ ಮಾರುತಿ, ನಿನ್ನ ಅಕುಂಠಿತ (ಕಡಿಮೆಯಾಗದ) ವೇಗ, ನಿನ್ನ ತೇಜ ಮತ್ತು ಸ್ಫೂರ್ತಿ ಈ ಎಲ್ಲ ಸದ್ಗುಣಗಳು ನಿನ್ನಲ್ಲಿ ಪರಿ ಪೂರ್ಣವಾಗಿವೆ. ಈ ಭೂಮಂಡಲದಲ್ಲಿ ನಿನ್ನಂತಹ ತೇಜಸ್ವೀ ಬೇರೆ ಯಾರೂ ಇಲ್ಲ.”’

ಇಂತಹ ಈ ನರಶ್ರೇಷ್ಠನಿಗೆ ಕೋಟಿ ಕೋಟಿ ಪ್ರಣಾಮ !

– ತುಕಾರಾಮ ಚಿಂಚಣೀಕರ (ಆಧಾರ : ಸಾಮಾಜಿಕ ಜಾಲತಾಣ)