ವಿಜ್ಞಾನವು ಒಂದಾದರೂ ಕ್ಷೇತ್ರದಲ್ಲಿ ಧರ್ಮಶಾಸ್ತ್ರಕ್ಕಿಂತ ಮುಂದಿದೆಯೇ ?
ಪ್ರಾಣಿಶಾಸ್ತ್ರ
‘ವಿಜ್ಞಾನ ಪ್ರಾಣಿಗಳ ಸ್ಥೂಲದೇಹದ ಬಗ್ಗೆ ತಿಳಿಸುತ್ತದೆ. ಆದರೆ, ಅಧ್ಯಾತ್ಮಶಾಸ್ತ್ರ ಯಾವ ಪ್ರಾಣಿಯಲ್ಲಿ ಯಾವ ದೇವತೆಯ ತತ್ತ್ವವಿದೆ ಮುಂತಾದ ಮಾಹಿತಿಯನ್ನು ತಿಳಿಸುತ್ತದೆ.’
ನ್ಯಾಯಾಂಗ
‘ಅಧ್ಯಾತ್ಮದಲ್ಲಿ ಪ್ರಗತಿ ಸಾಧಿಸಿದ ಸಾಧಕರು ಮಾತ್ರ ಒಬ್ಬ ವ್ಯಕ್ತಿಯನ್ನು ನೋಡಿಯೇ ಆತನು ಅಪರಾಧಿಯೇ ಅಥವಾ ಅಲ್ಲವೇ ಎಂಬುದನ್ನು ತಿಳಿದುಕೊಳ್ಳುತ್ತಾರೆ. ತದ್ವಿರುದ್ಧವಾಗಿ, ಪೊಲೀಸರು, ವಕೀಲರು ಮತ್ತು ನ್ಯಾಯಾಧೀಶರು ಮುಂತಾದವರಿಗೆ ಇದನ್ನು ತಿಳಿದುಕೊಳ್ಳ ಲಾಗುವುದಿಲ್ಲ. ಹಾಗಾಗಿಯೇ ಹಲವು ವರ್ಷಗಳಿಂದ ಕೋಟ್ಯಂತರ ದಾವೆಗಳು ಬಾಕಿ ಉಳಿದಿವೆ’
ವೈದ್ಯಕೀಯ ಕ್ಷೇತ್ರ
‘ಒಂದೇ ರೋಗದಿಂದ ಪೀಡಿತ ಎಲ್ಲಾ ರೋಗಿಗಳಿಗೂ ಉಪಚಾರ ಮಾಡುವ ಸಮಯದಲ್ಲಿ ಡಾಕ್ಟರರು ಕೇವಲ ರೋಗವನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಸಮಾನ ಔಷಧಿ ನೀಡುತ್ತಾರೆ. ತದ್ವಿರುದ್ಧವಾಗಿ ವೈದ್ಯರು ರೋಗಿಯ ರೋಗದ ಜೊತೆಗೆ ಆತನ ಆರೋಗ್ಯದಲ್ಲಿ ವಾತ-ಪಿತ್ತ-ಕಫ ಮುಂತಾದವುಗಳಿಂದ ಯಾವ ದೋಷದ ಪ್ರಬಲತೆ ಹೆಚ್ಚು ಇದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಔಷಧಿಯನ್ನು ನೀಡುತ್ತಾರೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ