‘ನಾವು ವಾಹನದಿಂದ ಹೋಗುವಾಗ ದಾರಿಯಲ್ಲಿ ವಾಹನಗಳ ದಟ್ಟಣೆ ಇರದಿದ್ದರೆ, ಪ್ರವಾಸವು ಸುಖಕರವಾಗುತ್ತದೆ. ತದ್ವಿರುದ್ಧ ಸಾರಿಗೆಗಳ ದಟ್ಟಣೆಯಾದರೆ, ಪ್ರವಾಸವು ಬೇಸರವಾಗುತ್ತದೆ’, ಪ್ರತಿಯೊಬ್ಬರಿಗೂ ಈ ಅನುಭವ ಬಂದಿರುತ್ತದೆ. ಆಹಾರದ ಸಂದರ್ಭದಲ್ಲಿಯೂ ಹೀಗೆಯೇ ಇರುತ್ತದೆ. ಬೆಳಗಿನ ಮೊದಲನೇ ಆಹಾರವನ್ನು ಸೇವಿಸುವ ಮೊದಲು ಬಾಯಿಯಿಂದ ಗುದದವರೆಗಿನ ಎಲ್ಲ ‘ಮಾರ್ಗಗಳು’ ಮುಕ್ತವಾಗಿರಬೇಕು. ಹೀಗಾದರೆ ಮಾತ್ರ ಆಹಾರವು ಉತ್ತಮ ರೀತಿಯಲ್ಲಿ ಜೀರ್ಣವಾಗುತ್ತದೆ ಮತ್ತು ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಬೆಳಗ್ಗೆ ಶೌಚ, ಹಾಗೆಯೇ ಮೂತ್ರ ಸ್ವಚ್ಛವಾಗುವುದು, ಕೆಳಗಿನಿಂದ (ಗುದದ್ವಾರದಿಂದ) ವಾತ ಚಲನೆ, ತೇಗು ಬಂದರೆ ಅದಕ್ಕೆ ಆಹಾರದ ವಾಸನೆ ಇರದಿರುವುದು, ಶರೀರವು ಹಗುರವಾಗಿರುವುದು, ಗಂಟಲು ಸ್ವಚ್ಛವಾಗಿರುವುದು ಮತ್ತು ತೀವ್ರ ಹಸಿವಾಗುವುದು, ಇವುಗಳು ಹೊಟ್ಟೆಯಲ್ಲಿನ ‘ಮಾರ್ಗವು ಖಾಲಿ ಆಗಿರುವ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡುಬಂದರೆ ಮಾತ್ರ ಆಹಾರವನ್ನು ಸೇವಿಸಬೇಕು.
ಸಾರಿಗೆಯ ದಟ್ಟಣೆಯಿದ್ದಾಗ ಹತ್ತಿರದ ಪ್ರವಾಸಕ್ಕಾಗಿ ಚತುಶ್ಚಕ್ರಕ್ಕಿಂತ ದ್ವಿಚಕ್ರ ಅಥವಾ ಸೈಕಲ್ ಒಳ್ಳೆಯದು. ಈ ತತ್ತ್ವಕ್ಕನುಸಾರ ಹೊಟ್ಟೆಯ ಮಾರ್ಗವು ಮುಕ್ತ ಇಲ್ಲದಿರುವಾಗ ತಿನ್ನುವ ಪ್ರಸಂಗ ಬಂದರೆ, ರಾಜಗಿರಿ ಉಂಡೆ, ಅರಳು, ಹುರಿದ ಅವಲಕ್ಕಿ, ಹೆಸರುಕಾಳಿನ ಸಾರು (ಹೆಸರುಬೇಳೆಯನ್ನು ಬೇಯಿಸಿ ಅದರಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲವನ್ನು ಹಾಕಿ ಮಾಡಿದ ಪದಾರ್ಥ) ಇಂತಹ ಜೀರ್ಣವಾಗುವ ಪದಾರ್ಥಗಳನ್ನು ತಿನ್ನಬೇಕು. ಇದರಿಂದ ತಾತ್ಕಾಲಿಕವಾಗಿ ಕೆಲಸ ಮಾಡುತ್ತದೆ; ಆದರೆ ದೀರ್ಘಕಾಲಿನ ಆರೋಗ್ಯಪ್ರಾಪ್ತಿಗಾಗಿ, ಹಾಗೆಯೇ ಮೇಲೆ ಕೊಟ್ಟಿದ ಹೊಟ್ಟೆಯ ಮಾರ್ಗಗಳು ಮುಕ್ತವಾಗಿರುವ ಲಕ್ಷಣಗಳನ್ನು ನಿರ್ಮಾಣವಾಗಲು ಪ್ರತಿದಿನ ಆಯುರ್ವೇದದ ನಿಯಮಗಳನ್ನು ಪಾಲಿಸಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೦.೩.೨೦೨೩)