ಸಾಧಕರೇ, ಸಾಧನೆಯಲ್ಲಿನ ಆನಂದವು ಯಾವುದೇ ಬಾಹ್ಯ ಸುಖದೊಂದಿಗೆ ತುಲನೆಯಾಗದಿರುವುದರಿಂದ ತಳಮಳದಿಂದ ಸಾಧನೆಯ ಪ್ರಯತ್ನವನ್ನು ಮಾಡಿರಿ ಮತ್ತು ನಿಜವಾದ ಆನಂದವನ್ನು ಅನುಭವಿಸಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

‘ಸೇವೆಯನ್ನು ಮಾಡುತ್ತಿರುವಾಗ ಮಧ್ಯದಲ್ಲಿಯೇ ಕೆಲವು ಸಾಧಕರ ಮನಸ್ಸಿನಲ್ಲಿ ‘ಈಗ ಕೆಲವು ದಿನ ಸೇವೆಯಿಂದ ವಿಶ್ರಾಂತಿ ಪಡೆದು, ಎಲ್ಲಿಯಾದರೂ ಹೊರಗೆ ತಿರುಗಾಡಲು ಹೋಗೋಣ’, ಎಂಬ ಮಾಯೆಯ ವಿಚಾರಗಳು ಬರುತ್ತವೆ. ಈ ವಿಚಾರಗಳು ಅವರವರ ಪ್ರಕೃತಿಗನುಸಾರ ಬರುತ್ತಿರುತ್ತವೆ ಅಥವಾ ಸಾಧನೆಯಲ್ಲಿನ ಅಡಚಣೆಗಳನ್ನು ದೂರ ಮಾಡಲು ಸಾಧ್ಯವಾಗದಿರುವುದು, ಒತ್ತಡ ಮಾಡಿಕೊಳ್ಳುವುದು, ಹಾಗೆಯೇ ಯಾವುದಾದರೂ ವಿಷಯ ಮನಸ್ಸಿನಂತೆ ಆಗದಿದ್ದರೆ ಅದನ್ನು ಸ್ವೀಕರಿಸಲು ಸಾಧ್ಯವಾಗದಿರುವುದು, ಇವುಗಳಿಂದಾಗಿಯೂ ಬರುತ್ತವೆ. ಸ್ವಭಾವದೋಷಗಳು ಮತ್ತು ಅಹಂನ ಇಂತಹ ಲಕ್ಷಣಗಳಿಂದಾಗಿ ಸಾಧಕರಿಗೆ ಸಾಧನೆಯ ಪ್ರಯತ್ನಗಳಲ್ಲಿನ ಆನಂದವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಕೆಟ್ಟ ಶಕ್ತಿಗಳ ತೊಂದರೆಗಳಿಂದಾಗಿಯೂ ಸಾಧಕರ ಮನಸ್ಸಿನಲ್ಲಿನ ವಿಚಾರಗಳ ತೀವ್ರತೆ ಹೆಚ್ಚಾಗುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಮನುಷ್ಯನನ್ನು ಬಿಟ್ಟು ಯಾವುದೇ ಪ್ರಾಣಿ ಅಥವಾ ವನಸ್ಪತಿ ರಜೆಯನ್ನು ತೆಗೆದುಕೊಳ್ಳುವುದಿಲ್ಲ. ಮನುಷ್ಯ ಮಾತ್ರ ಶನಿವಾರ ಮತ್ತು ರವಿವಾರದಂದು ರಜೆ ತೆಗೆದುಕೊಳ್ಳುತ್ತಾನೆ. ಅಷ್ಟೇ ಅಲ್ಲದೇ, ವರ್ಷದಲ್ಲಿಯೂ ಕೆಲವು ದಿನ ಹಕ್ಕಿನಿಂದ ರಜೆಯನ್ನು ತೆಗೆದುಕೊಳ್ಳುತ್ತಾನೆ. ಹೀಗಿರುವಾಗ ‘ಈ ಪ್ರಸಂಗದಲ್ಲಿ ಮನುಷ್ಯನು ಶ್ರೇಷ್ಠನೋ ಅಥವಾ ಪ್ರಾಣಿ ಮತ್ತು ವನಸ್ಪತಿಯೋ ?’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಇಂತಹ ಪ್ರಸಂಗಗಳಲ್ಲಿ ಸೇವೆಯಿಂದ ರಜೆ ಪಡೆದು ತಾತ್ಕಾಲಿಕ ಸುಖದ ಬಗ್ಗೆ ಯೋಚಿಸುವುದಕ್ಕಿಂತ ಸಾಧಕರು ವ್ಯಷ್ಟಿ ಮತ್ತು ಸಮಷ್ಟಿ ಸ್ತರಗಳಲ್ಲಿನ ಅಡಚಣೆಗಳನ್ನು ದೂರ ಮಾಡಲು ಪ್ರಯತ್ನಿಸಬೇಕು. ಸಾಧನೆಯಲ್ಲಿನ ಅಡಚಣೆಗಳು ದೂರವಾಗಿ ಸಾಧಕರ ಪ್ರಯತ್ನಗಳು ನಿಯಮಿತವಾಗಿ ಆಗತೊಡಗಿದರೆ ಅವರ ಸಾತ್ತ್ವಿಕತೆ ಹೆಚ್ಚಾಗತೊಡಗುತ್ತದೆ ಮತ್ತು ರಜ-ತಮ ಗುಣಗಳು ಕಡಿಮೆಯಾಗುವುದರಿಂದ ಅವರ ಮನಸ್ಸಿನಲ್ಲಿನ ಬಾಹ್ಯ ಆಕರ್ಷಣೆಯ ವಿಚಾರಗಳೂ ಕಡಿಮೆಯಾಗ ತೊಡಗುತ್ತವೆ. ಈ ರೀತಿ ಸಾಧಕರು ಸಾಧನೆಯ ಆನಂದವನ್ನು ಅನುಭವಿಸತೊಡಗುತ್ತಾರೆ. ಈ ಆನಂದವನ್ನು ಯಾವುದೇ ಬಾಹ್ಯಸುಖದೊಂದಿಗೆ ತುಲನೆ ಮಾಡಲು ಸಾಧ್ಯವಿಲ್ಲ. ಆದುದರಿಂದ ಸಾಧನೆಯ ಪ್ರಯತ್ನವು ನಿಯಮಿತವಾಗಿ ಆಗಲು ಸಾಧಕರು ತಳಮಳದಿಂದ ಪ್ರಯತ್ನಿಸಬೇಕು. ಇದಕ್ಕಾಗಿ ಅವರು ಜವಾಬ್ದಾರ ಸಾಧಕರ ಸಹಾಯವನ್ನೂ ಪಡೆಯಬೇಕು.

ಸಾಧಕರ ಮನಸ್ಸಿನಲ್ಲಿ ಮಾಯೆಯ ವಿಚಾರಗಳ ತೀವ್ರತೆ ಮತ್ತು ಪುನರಾವರ್ತನೆ ಹೆಚ್ಚಿದ್ದರೆ, ಅವರು ಇದಕ್ಕಾಗಿ ಸ್ವಯಂಸೂಚನೆಯನ್ನು ತೆಗೆದುಕೊಳ್ಳಬೇಕು. ಕೆಟ್ಟ ಶಕ್ತಿಗಳ ತೊಂದರೆಯಿಂದಾಗಿ ಇಂತಹ ವಿಚಾರಗಳು ಹೆಚ್ಚಾಗಿದ್ದರೆ ನಾಮಜಪ ಇತ್ಯಾದಿ ಉಪಾಯಗಳನ್ನು ಹೆಚ್ಚಿಸಬೇಕು.

ಸಾಧಕರೇ, ಮಾಯೆಯ ವಿಷಯಗಳಿಂದ ಸಿಗುವ ಕ್ಷಣಿಕ ಸುಖಕ್ಕಿಂತ ಸೇವೆಯಲ್ಲಿನ ಆನಂದವು ಅನಂತಪಟ್ಟು ಶ್ರೇಷ್ಠವಾಗಿರುವುದರಿಂದ ತಮ್ಮನ್ನು ಗುರುಸೇವೆಯಲ್ಲಿ ಸಮರ್ಪಿಸಿಕೊಳ್ಳಿ !’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೨.೨೦೨೩)