ಭಾರತದ ಗಡಿಯಲ್ಲಿ ಚೀನಾದ ಪ್ರಚೋದನಕಾರಿ ಕೃತ್ಯಗಳಿರುವುದರಿಂದ ಭಾರತವನ್ನು ಬೆಂಬಲಿಸಬೇಕು !

ಅಮೆರಿಕಾದ ಅಧ್ಯಕ್ಷರ ಉಪ ಸಹಾಯಕರಿಂದ ಕರೆ !

ಭಾರತ-ಚೀನಾ ಗಡಿ ವಿವಾದ

 

ವಾಷಿಂಗ್ಟನ್ (ಅಮೇರಿಕಾ) – ಚೀನಾದ ಅತಿಕ್ರಮಣದಿಂದ ಭಾರತ-ಚೀನಾ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುಗೊಂಡಿದೆ. ಇದರಿಂದ ದೊಡ್ಡ ಸಂಘರ್ಷ ಎದುರಾಗುವ ಭೀತಿ ವ್ಯಕ್ತವಾಗಿದೆ. ಹೀಗಾಗಿ ಅಮೆರಿಕ ಭಾರತವನ್ನು ಬೆಂಬಲಿಸಬೇಕು ಎಂದು ಅಮೆರಿಕ ರಾಷ್ಟ್ರಾಧ್ಯಕ್ಷರ ಉಪ ಸಹಾಯಕ ಹಾಗೂ ಸಂಯೋಜಕ ಕರ್ಟ್ ಕ್ಯಾಂಪ್‌ಬೆಲ್ ಹೇಳಿದ್ದಾರೆ. ಅವರು ಒಂದು ಪರಿಸಂವಾದದಲ್ಲಿ ಮಾತನಾಡುತ್ತಿದ್ದರು.

೨೦೨೦ ರಿಂದ ಪೂರ್ವ ಲಡಾಖ್‌ನಲ್ಲಿ ನೈಜ ನಿಯಂತ್ರಣ ರೇಖೆಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಚೀನಾ ಪ್ರಯತ್ನಿಸುತ್ತಿದೆ. ಇದರ ಈ ಕೃತ್ಯ ಶಾಂತಿಗಾಗಿ ಗಂಭೀರ ಅಪಾಯ ತಂದೊಡ್ಡಿದೆ. ಭಾರತದ ಮಿತ್ರ ರಾಷ್ಟ್ರಗಳು ಮತ್ತು ಪಾಲುದಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ, ಎಂದು ಅವರು ಹೇಳಿದರು.