ಅಮೆರಿಕದ ಜಾರ್ಜಿಯಾ ರಾಜ್ಯದ ವಿಧಾನಸಭೆಯಲ್ಲಿ ಹಿಂದೂದ್ವೇಷವನ್ನು ನಿಂದಿಸುವ ಪ್ರಸ್ತಾವನೆ ಅಂಗೀಕಾರ !

ಅಮೆರಿಕದ ಜಾರ್ಜಿಯಾ ಅಸೆಂಬ್ಲಿ

ನವ ದೆಹಲಿ – ಅಮೇರಿಕಾದ ಜಾರ್ಜಿಯಾ ರಾಜ್ಯದ ವಿಧಾನಸಭೆಯಲ್ಲಿ ಹಿಂದೂದ್ವೇಷವನ್ನು ನಿಂದಿಸುವ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ. ಜಾರ್ಜಿಯಾ ಹೀಗೆ ಮಾಡಿದ ಅಮೇರಿಕಾದ ಮೊದಲ ರಾಜ್ಯವಾಗಿದೆ. ಈ ಪ್ರಸ್ತಾವನೆನ್ನು ವಿಧಾನಸಭೆಯ ಸದಸ್ಯರಾದ ಲೋರೆನ್ ಮೆಕ್‌ಡೊನಾಲ್ಡ್ ಮತ್ತು ಟಾಡ್ ಜೋನ್ಸ್ ಅವರು ಮಂಡಿಸಿದ್ದರು . ಈ ಪ್ರಸ್ತಾಪನೆಯಲ್ಲಿ ಹಿಂದೂ ಧರ್ಮವು ವಿಶ್ವದ ಅತಿದೊಡ್ಡ ಮತ್ತು ಎಲ್ಲಕ್ಕಿಂತ ಪ್ರಾಚೀನ ಧರ್ಮಗಳಲ್ಲಿ ಒಂದಾಗಿದೆ. ೧೨೦ ಕೋಟಿಕ್ಕಿಂತ ಹೆಚ್ಚು ಅನುಯಾಯಿಗಳು ೧೦೦ ಕ್ಕೂ ಹೆಚ್ಚು ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಮೆರಿಕದಲ್ಲಿ ವೈದ್ಯಕೀಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಮಾಹಿತಿ ಮತ್ತು ತಂತ್ರಜ್ಞಾನ, ಆತಿಥ್ಯ, ಹಣಕಾಸು, ಶಿಕ್ಷಣ, ಇಂಧನ, ವ್ಯಾಪಾರಗಳಂತಹ ಕ್ಷೇತ್ರಗಳಿಗೆ ಅಮೇರಿಕಾದ ಹಿಂದೂಗಳು ಮುಖ್ಯ ಯೋಗದಾನ ನೀಡಿದ್ದಾರೆ ಅಲ್ಲದೆ ಯೋಗ, ಆಯುರ್ವೇದ, ಧ್ಯಾನ, ಆಹಾರ, ಸಂಗೀತ, ಕಲೆ ಇವುಗಳ ಕೊಡುಗೆಯು ಸಂಸ್ಕೃತಿಯನ್ನು ಸಮೃದ್ಧಗೊಳಿಸಿದೆ. ಇದನ್ನು ಅಮೆರಿಕಾದ ಸಮಾಜವು ವ್ಯಾಪಕವಾಗಿ ಒಪ್ಪಿಕೊಂಡಿದೆ. ಕೆಲವು ಶಿಕ್ಷಣತಜ್ಞರು ಹಿಂದೂದ್ವೇಷವ ವಿಭಿನ್ನ ಸ್ವರೂಪವನ್ನು ನೀಡಿದರು. ಅವರ ಕೃತಿಗಳು ಹಿಂದೂ ಧರ್ಮವನ್ನು ನಾಶ ಮಾಡಲು ಬೆಂಬಲಿಸಿದ್ದವು ಮತ್ತು ಹಿಂದೂಗಳ ಪವಿತ್ರ ಗ್ರಂಥಗಳನ್ನು ಸಹ ಅವರು ಟೀಕಿಸಿದ್ದರು.

ಸಂಪಾದಕರ ನಿಲುವು

ಹಿಂದೂಗಳಿಂದ ಜಾರ್ಜಿಯಾ ರಾಜ್ಯದ ವಿಧಾನಸಭೆಗೆ ಧನ್ಯವಾದ ! ಷಡ್ಯಂತ್ರದ ಮೂಲಕ ಹಿಂದೂಗಳನ್ನು ದ್ವೇಷಿಸುವ ಪ್ರಯತ್ನ ಎಲ್ಲಿ ನಡೆಯುತ್ತದೆಯೋ, ಅಲ್ಲಿ ಇಂತಹ ಪ್ರಯತ್ನವನ್ನು ಎಲ್ಲರೂ ಮಾಡಬೇಕಾಗಿದೆ !