’ರಾಹುಲ ಗಾಂಧಿ ಪ್ರಕರಣದಲ್ಲಿ ನಾವು ಭಾರತ ಸರಕಾರದ ಸಂಪರ್ಕದಲ್ಲಿದ್ದೇವೆ’ ! (ಅಂತೆ) – ಅಮೇರಿಕಾ

ವಾಶಿಂಗ್ಟನ್ (ಅಮೇರಿಕಾ) – ಅಭಿವ್ಯಕ್ತಿ ಸ್ವಾತಂತ್ರ್ಯದೊಂದಿಗೆ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ನಾವು ಭಾರತ ಸರಕಾರದ ನಿರಂತರ ಸಂಪರ್ಕದಲ್ಲಿದ್ದೇವೆ. ಕಾಯ್ದೆಯ ಸರಕಾರ ಮತ್ತು ನ್ಯಾಯಾಲಯದ ಸ್ವಾತಂತ್ರ್ಯದ ಗೌರವ ಇದು ಎಲ್ಲ ದೇಶದ ಪ್ರಜಾಪ್ರಭುತ್ವದ ಮುಖ್ಯ ಆಧಾರಸ್ತಂಭವಾಗಿದೆ ಮತ್ತು ನಾವು ಭಾರತೀಯ ನ್ಯಾಯಾಲಯದಲ್ಲಿ ನಡೆದಿರುವ ರಾಹುಲ ಗಾಂಧಿಯವರ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಅಮೇರಿಕಾದ ವಿದೇಶಾಂಗ ಇಲಾಖೆಯ ವಕ್ತಾರ ವೇದಾಂತ ಪಟೇಲರು ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

ಪಟೇಲರು ತಮ್ಮ ಮಾತನ್ನು ಮುಂದುವರಿಸಿ, ಪ್ರಜಾಪ್ರಭುತ್ವಗಳ ತತ್ವಗಳು ಮತ್ತು ಮಾನವ ಹಕ್ಕುಗಳ ಸಂರಕ್ಷಣೆಯ ಮಹತ್ವವನ್ನು ನಾವು ಭಾರತದ ಎದುರಿಗೆ ಮಂಡಿಸುತ್ತಿದ್ದೇವೆ. ಇದರಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಇದೆ. ಇದು ಎರಡೂ ದೇಶಗಳ ಪ್ರಜಾಪ್ರಭುತ್ವವನ್ನು ದೃಢಪಡಿಸುವ ಗುರುಮಂತ್ರವಾಗಿದೆ ಎಂದು ಹೇಳಿದರು.

`ರಾಹುಲ ಗಾಂಧಿಯವರ ಮೇಲೆ ಕೈಕೊಂಡಿರುವ ಕ್ರಮ ಅಯೋಗ್ಯವಾಗಿದೆ’ ! (ಅಂತೆ) – ಅಮೇರಿಕಾದ ಶಾಸಕ ರೋ ಖನ್ನಾ

ರೋ ಖನ್ನಾ

ರಾಹುಲ ಗಾಂಧಿಯವರ ಮೇಲೆ ಕೈಕೊಂಡಿರುವ ಕ್ರಮ ಭಾರತೀಯ ಸಂವಿಧಾನದ ನಿಯಮಾನುಸಾರ ನಡೆದಿದೆ. ಇದರ ಅಧ್ಯಯನವನ್ನು ಮಾಡದೇ ಈ ರೀತಿಯ ಹೇಳಿಕೆಯನ್ನು ನೀಡಲು ಬೇರೆ ದೇಶದ ಯಾವುದೇ ನಾಗರಿಕನಿಗೆ ಅಧಿಕಾರವಿಲ್ಲವೆಂದು ಭಾರತ ಕಿವಿ ಹಿಂಡಬೇಕು !

ಭಾರತೀಯ ವಂಶದ ಅಮೇರಿಕಾದ ಶಾಸಕ ರೋ ಖನ್ನಾ ಇವರು ಮಾತನಾಡುತ್ತಾ, ರಾಹುಲ ಗಾಂಧಿಯವರ ಲೋಕಸಭೆಯ ಸದಸ್ಯತ್ವಅನರ್ಹಗೊಳಿಸಿರುವುದು ಗಾಂಧಿವಾದಿ ವಿಚಾರಸರಣಿಗೆ ದೊಡ್ಡ ವಿಶ್ವಾಸಘಾತವಾಗಿದೆ. `ಮೋದಿ’ ಈ ಉಪನಾಮದ ಕುರಿತು ನಡೆಸಿದ ಟೀಕೆಯ ಬಗ್ಗೆ ರಾಹುಲ ಗಾಂಧಿಯವರ ಮೇಲೆ ಕ್ರಮ ಕೈಕೊಂಡಿರುವುದು ಅಯೋಗ್ಯವಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಲೋಕಸಭೆಯಿಂದ ರಾಹುಲ ಗಾಂಧಿಯವರ ಅನರ್ಹತೆಗೊಂಡಿರುವ ವಿಷಯ ಭಾರತದ ಆಂತರಿಕ ವಿಷಯವಾಗಿದೆ. ಆ ವಿಷಯದಲ್ಲಿ ಅಮೇರಿಕಾವು ಭಾರತದ ಸಂಪರ್ಕದಲ್ಲಿರುವ ಯಾವುದೇ ಆವಶ್ಯಕತೆ ಇಲ್ಲ. ಭಾರತವು ಎಂದಿಗೂ ಅಮೇರಿಕಾದ `ಬ್ಲ್ಯಾಕ್ ಲಿವ್ ಮ್ಯಾಟರ್ಸ’ (ಕಪ್ಪುಬಣ್ಣದವರೊಂದಿಗೆ ನಡೆದುಕೊಳ್ಳುವ ವಿರುದ್ಧ ಚಳುವಳಿ) ಪ್ರಕರಣದಲ್ಲಿ ಅಮೇರಿಕಾದ ಸಂಪರ್ಕದಲ್ಲಿರಲು ಪ್ರಯತ್ನಿಸಿಲ್ಲವೆಂದು ಭಾರತವು ಹೇಳುವ ಅಪೇಕ್ಷಿತವಿದೆ !