ಅಮೇರಿಕಾದ ಶಾಲೆಯಲ್ಲಿ ಮಹಿಳೆಯಿಂದ ಗುಂಡಿನ ದಾಳಿ, 3 ವಿದ್ಯಾರ್ಥಿಗಳೊಂದಿಗೆ 6 ಜನರ ಸಾವು

ಆಡ್ರೆ ಎಲಿಜಬೆತ್ ಹೇಲ್ ಮಾಜಿ ವಿದ್ಯಾರ್ಥಿ

ನ್ಯಾಶವಿಲೆ (ಅಮೇರಿಕಾ) – ಅಮೇರಿಕಾದ ಟೆನೆಸಿ ರಾಜ್ಯದಲ್ಲಿನ ನ್ಯಾಶವಿಲ್ ನಗರದ `ದಿ ಕಾನ್ವೆಂಟ ಸ್ಕೂಲ’ ಹೆಸರಿನ ಕ್ರೈಸ್ತರ ಶಾಲೆಯಲ್ಲಿ ಆಂಡ್ರೆ ಹೆಲ್ (ವಯಸ್ಸು 28 ವರ್ಷ) ಹೆಸರಿನ ಮಹಿಳೆಯು ನಡೆಸಿದ ಗುಂಡಿನ ದಾಳಿಯಲ್ಲಿ 6 ಜನರು ಸೇರಿದಂತೆ 3 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಈ ಘಟನೆಯ ಬಳಿಕ ತಕ್ಷಣವೇ ಪೊಲೀಸರು ಘಟನಾ ಸ್ಥಳವನ್ನು ತಲುಪಿದರು ಮತ್ತು ಅವರು ದಾಳಿ ಮಾಡಿದ ಮಹಿಳೆಯನ್ನು ಹತ್ಯೆ ಗೈದರು. ಈ ಮಹಿಳೆಯ ಬಳಿ 2 ರೈಫಲ್ ಮತ್ತು ಒಂದು ಹ್ಯಾಂಡಗನ್ ಇತ್ತು. `ಈ ಮಹಿಳೆಯು ಏಕೆ ಗುಂಡಿನ ದಾಳಿ ನಡೆಸಿದಳು ?’ ಇದರ ಕಾರಣ ಇದುವರೆಗೂ ಸ್ಪಷ್ಟವಾಗಿಲ್ಲ. ಈ ಮಹಿಳೆ ಈ ಶಾಲೆಯ ಮಾಜಿ ವಿದ್ಯಾರ್ಥಿಯಾಗಿದ್ದಳು ಎಂದು ಹೇಳಲಾಗುತ್ತಿದೆ.