‘ನಾ ಟೂ ನಾಟೂ ಹಾಡಿಗೆ ಆಸ್ಕರ್ ! ಅಮೇರಿಕಾದ ಲಾಸ್‌ಎಂಜಲೀಸ್ ನಗರದ ಒಂದು ಸಭಾಗೃಹದಲ್ಲಿ ೯೫ ನೇ ಆಸ್ಕರ್ ಪ್ರಶಸ್ತಿ ಸಮಾರಂಭ ನೆರವೇರಿತು ಹಾಗೂ ಅದರಲ್ಲಿ ‘ಆರ್.ಆರ್.ಆರ್ ಚಲನಚಿತ್ರದ ‘ನಾಟೂ ನಾಟೂ ಹಾಡಿಗೆ ‘ಒರಿಜಿನಲ್ ಸಾಂಗ್ ಶ್ರೇಣಿಯಲ್ಲಿ ‘ಸರ್ವೋತ್ಕೃಷ್ಟ ಹಾಡು ಎಂದು ಪ್ರಶಸ್ತಿ ಲಭಿಸಿದರೆ ‘ದ ಎಲಿಫಂಟ್ ವಿಸ್ಪರರ್ಸ್ ಈ ಗುನಿತಾ ಮೋಂಗಾ ಇವರು ನಿರ್ಮಿಸಿದ ಸಾಕ್ಷ್ಯಚಿತ್ರಕ್ಕೆ ‘ಸರ್ವೋತ್ಕೃಷ್ಟ ಸಾಕ್ಷ್ಯಚಿತ್ರದ ಪ್ರಶಸ್ತಿ ಲಭಿಸಿತು. ಒಂದು ಭಾರತೀಯ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿ ಲಭಿಸುವುದು, ಇದು ಎರಡನೆಯ ಬಾರಿ ಆಗಿದೆ. ಭಾರತೀಯರಿಗೆ ಇದರಿಂದ ಬಹಳ ಆನಂದವಾಗಬೇಕು. ‘ನಾಟೂ ನಾಟೂ ಹಾಡಿಗೆ ಪ್ರಶಸ್ತಿ ಸಿಗುವುದೆಂದು ಅನಿಸುತ್ತಿತ್ತು. ಈ ಹಿಂದೆಯೇ ಈ ಹಾಡಿಗೆ ‘ಗೋಲ್ಡನ್ ಗ್ಲೋಬ್ನಿಂದಲೂ ‘ಒರಿಜಿನಲ್ ಸಾಂಗ್ ಈ ಶ್ರೇಣಿಯಲ್ಲಿ ಸರ್ವೋತ್ಕೃಷ್ಟ ಹಾಡು ಎಂದು ಪ್ರಶಸ್ತಿ ಲಭಿಸಿತ್ತು. ಈ ಹಿಂದೆ ‘ಸ್ಲಮ್‌ಡಾಗ್ ಮಿಲೇನಿಯರ್ ಚಲನಚಿತ್ರದ ‘ಜಯ ಹೋ ಈ ಹಾಡಿಗೆ ಎ.ಆರ್. ರೆಹಮಾನ ಇವರಿಗೆ ಈ ಪ್ರಶಸ್ತಿ ಸಿಕ್ಕಿತ್ತು; ಆದರೆ ಇದು ವಿದೇಶಿ ನಿರ್ಮಾಪಕರ ಚಲನಚಿತ್ರವಾಗಿತ್ತು.
‘ನಾಟೂ ನಾಟೂ ಇದು ಸಂಪೂರ್ಣ ಭಾರತೀಯ ಚಲನಚಿತ್ರದ ಭಾರತೀಯ ಹಾಡಾಗಿದೆ, ಎಂಬುದನ್ನು ಗಮನಿಸಬೇಕು. ಭಾರತೀಯರಿಗೆ ‘ಆಸ್ಕರ್ ಪ್ರಶಸ್ತಿ ಸಿಗುವುದು ಹೊಸತೇನಲ್ಲ. ಈ ಹಿಂದೆ ಭಾನೂ ಅಥಯ್ಯಾ, ಸತ್ಯಜಿತ್ ರಾಯ್, ಎ.ಆರ್.ರೆಹಮಾನ್, ಗುಲ್ಜಾರ್, ರೆಸುಲ ಪೋಕುಟ್ಟೀ ಇವರಿಗೆ ವಿವಿಧ ಶ್ರೇಣಿಗಳಲ್ಲಿ ಪ್ರಶಸ್ತಿಗಳು ಲಭಿಸಿವೆ. ಆದರೂ ಭಾರತೀಯ ಚಲನಚಿತ್ರ ಕ್ಷೇತ್ರದಲ್ಲಿ ಸುಮಾರು ೧೦೦ ವರ್ಷಗಳ ಇತಿಹಾಸದಲ್ಲಿ ಇದುವರೆಗೆ ಯಾವುದೇ ಒಂದು ಭಾರತೀಯ ಚಲನಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿಲ್ಲವೆಂಬುದು ವಾಸ್ತವಿಕತೆಯಾಗಿದೆ.
ಭಾರತದ ಚಲನಚಿತ್ರಗಳಿಗೆ ಆಸ್ಕರ್ ಏಕೆ ಸಿಗುವುದಿಲ್ಲ ?
ಇದುವರೆಗೆ ಭಾರತೀಯ ಅನೇಕ ಚಲನಚಿತ್ರಗಳನ್ನು ಆಸ್ಕರ್ ಪ್ರಶಸ್ತಿಕ್ಕಾಗಿ ಕಳುಹಿಸಲಾಗಿದೆ, ಆದರೆ ಅವುಗಳಿಗೆ ನಾಮನಿರ್ದೇಶನವೂ ಸಿಗುವುದಿಲ್ಲ, ಎಂಬುದು ಅರಿವಾಗುತ್ತಿದೆ. ಇತರ ದೇಶಗಳ ತುಲನೆಯಲ್ಲಿ ಭಾರತೀಯ ಚಲನಚಿತ್ರಗಳು ಹಿಂದುಳಿದಿವೆ, ಅವುಗಳ ತಂತ್ರಜ್ಞಾನದಲ್ಲಿ ಕೊರತೆಯಿದೆ, ಎಂದು ಇಂದಿನ ಸ್ಥಿತಿಯಿಂದ ಹೇಳುವ ಹಾಗಿಲ್ಲ. ಆದರೂ ‘ಭಾರತೀಯ ಚಲನಚಿತ್ರಗಳಿಗೆ ಪ್ರಶಸ್ತಿ ಏಕೆ ಸಿಗುವುದಿಲ್ಲ ?, ಎಂಬುದರ ಬಗ್ಗೆ ಚಲನಚಿತ್ರ ಕ್ಷೇತ್ರ ವಿಚಾರ ಮಾಡುವ ಅವಶ್ಯಕತೆಯಿದೆ. ‘ಆಸ್ಕರ್ ಪ್ರಶಸ್ತಿ ಸಿಕ್ಕಿದರೆ ಆ ಚಲನಚಿತ್ರ ಒಳ್ಳೆಯದಾಗಿದೆ, ಎಂದು ಕೂಡ ಹೇಳುವ ಹಾಗಿಲ್ಲ ಹಾಗೂ ಅದು ಚಲನಚಿತ್ರದ ಗುಣಮಟ್ಟವನ್ನು ನಿರ್ಧರಿಸುವ ಮಾನದಂಡ ಆಗಲೂ ಸಾಧ್ಯವಿಲ್ಲ. ಭಾರತೀಯ ಚಲನಚಿತ್ರಗಳ ಇತಿಹಾಸದಲ್ಲಿ ಭಾರತೀಯರು ಮಾತ್ರವಲ್ಲ, ವಿದೇಶೀಯರು ಕೂಡ ಪ್ರಶಂಸೆ ಮಾಡಿದ ಅನೇಕ ಚಲನಚಿತ್ರಗಳು ಪ್ರದರ್ಶನವಾಗಿವೆ. ಚೀನಾದಂತಹ ದೇಶದಲ್ಲಿ ಕೂಡ ಭಾರತೀಯ ಚಲನಚಿತ್ರದ ಪ್ರಶಂಸೆಯಾಗಿದೆ, ಎಂಬುದು ವಿಶೇಷ !
ಈ ಹಿಂದೆ ‘ಸ್ಲಮ್‌ಡಾಗ್ ಮಿಲೇನಿಯರ್ ಚಲನಚಿತ್ರಕ್ಕೆ ಸರ್ವೋತ್ಕೃಷ್ಟ ಚಲನಚಿತ್ರದ ಪ್ರಶಸ್ತಿ ಲಭಿಸಿತು; ಆದರೆ ಇದರಲ್ಲಿ ‘ಭಾರತದ ಬಡತನದ, ಗುಡಿಸಲುಗಳ ಪ್ರದರ್ಶನ ಮಾಡಿ ಅದರ ಆಧಾರದಲ್ಲಿ ಭಾರತವನ್ನು ಅವಮಾನಿಸಲು ಅದನ್ನು ಉಪಯೋಗಿಸಲಾಯಿತೇ ?, ಎನ್ನುವ ಸಂದೇಹ ಅನೇಕರಿಗೆ ಬಂದಿತ್ತು. ಈ ಚಲನಚಿತ್ರವನ್ನು ವಿದೇಶಿ ನಿರ್ಮಾಪಕರು ಮಾಡಿದ್ದರು. ಭಾರತವೆಂದರೆ, ಬಡತನ ಹಾಗೂ ಗುಡಿಸಲುಗಳು ಎಂಬ ಚಿತ್ರಣವನ್ನು ವಿದೇಶದಲ್ಲಿ ಬಣ್ಣಿಸಲಾಗಿದೆ. ‘ನಾಟೂ ನಾಟೂ ಈ ಹಾಡು ಇರುವ ‘ಆರ್‌ಆರ್‌ಆರ್ ಚಲನಚಿತ್ರದ ನಿರ್ದೇಶಕರು ರಾಜಮೌಲಿ ಆಗಿದ್ದು ಅವರ ‘ಬಾಹುಬಲಿ ಹಾಗೂ ‘ಬಾಹುಬಲಿ ೨ ಈ ಚಲನಚಿತ್ರಗಳಿಗೆ ಅತ್ಯುತ್ತಮ ಸ್ಪಂದನ ಲಭಿಸಿತ್ತು. ಭಾರತದಿಂದ ‘ಬಾಹುಬಲಿ ೨ ಆಸ್ಕರ್‌ಗೆ ಕಳುಹಿಸಲಾಗಿತ್ತು. ಆದರೆ ಅದಕ್ಕೆ ನಾಮನಿರ್ದೇಶನ ಸಿಗಲಿಲ್ಲ. ಈ ಹಿಂದೆ ‘ಮದರ್ ಇಂಡಿಯಾ, ‘ಸಲಾಮ್ ಬಾಂಬೆ ಮತ್ತು ‘ಲಗಾನ್ ಚಲನಚಿತ್ರಗಳಿಗೆ ನಾಮನಿರ್ದೇಶನ ಲಭಿಸಿತ್ತು; ಆದರೆ ಪ್ರಶಸ್ತಿಗಳಿಸಲು ಸಾಧ್ಯವಾಗಲಿಲ್ಲ. ‘ಮದರ್ ಇಂಡಿಯಾ ಹಾಗೂ ‘ಲಗಾನ್ ಇವು ಭಾರತೀಯ ಚಲನಚಿತ್ರರಂಗದಲ್ಲಿನ ಮೈಲುಗಲ್ಲಾಗಿವೆ. ಇವುಗಳಿಗೆ ಆಸ್ಕರ್ ಲಭಿಸುತ್ತಿದ್ದರೆ ಮಾತ್ರ ಇವುಗಳು ಹೆಸರು ಗಳಿಸುತ್ತಿದ್ದವು, ಎಂದು ಭಾರತೀಯರಿಗೆ ಸ್ವಲ್ಪವೂ ಅನಿಸುವುದಿಲ್ಲ. ‘ಭಾರತೀಯ ಚಲನಚಿತ್ರಗಳಿಗೆ ಆಸ್ಕರ್ ಸಿಗಲೇಬೇಕು, ಎನ್ನುವ ಅಟ್ಟಹಾಸವೂ ಭಾರತೀಯರಲ್ಲಿಲ್ಲ. ಆದರೂ ‘ಭಾರತೀಯರಿಗೆ ಈ ಪ್ರಶಸ್ತಿ ಏಕೆ ಸಿಗುವುದಿಲ್ಲ ?, ಎಂಬುದರ ಚಿಂತನೆಯಾಗಬೇಕು. ಭಾರತೀಯ ಚಲನಚಿತ್ರ ವೆಂದರೆ ಕೇವಲ ಹಿಂದಿ ಚಲನಚಿತ್ರವೆಂದು ಯಾರು ಕೂಡ ಭಾವಿಸಬಾರದು. ಕನ್ನಡ, ಮರಾಠಿ, ಬಂಗಾಲಿ, ತಮಿಳು, ತೆಲುಗು, ಮಲ್ಯಾಳಮ್ ಈ ಭಾಷೆಗಳಲ್ಲಿ ಅರ್ಥಗರ್ಭಿತ ಚಲನಚಿತ್ರಗಳನ್ನು ಮಾಡಲಾಗುತ್ತದೆ. ಸತ್ಯಜಿತ್ ರೇ ಇವರ ಬಂಗಾಲಿ ಚಲನಚಿತ್ರಗಳಿಗೆ ವಿದೇಶಿ ಪ್ರಶಸ್ತಿಗಳು ಲಭಿಸಿವೆ. ೧೯೩೬ ನೇ ಇಸವಿಯ ‘ಸಂತ ತುಕಾರಾಮ ಈ ಮರಾಠಿ ಚಲನಚಿತ್ರಕ್ಕೂ ೫ ನೇ ವೆನಿಸ್ ಚಲನಚಿತ್ರ ಮಹೋತ್ಸವದಲ್ಲಿ ಪ್ರಶಸ್ತಿ ಲಭಿಸಿತ್ತು. ‘ಶ್ವಾಸ ಈ ಮರಾಠಿ ಚಲನಚಿತ್ರವನ್ನು ಆಸ್ಕರ್‌ಗೆ ಕಳುಹಿಸಲಾಗಿತ್ತು.
ಚಲನಚಿತ್ರಗಳಿಂದ ಜಾಗೃತಿ ಮೂಡಬೇಕಾಗಿದೆ !
ಚಲನಚಿತ್ರಗಳು ಜಾಗೃತಿಯ ಉತ್ಕೃಷ್ಟ ಮಾಧ್ಯಮವಾಗಿವೆ. ಅದನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸುವ ಕಲೆ ಹಾಗೂ ಬುದ್ಧಿಯೂ ಇರಬೇಕು. ಯಾವುದೇ ಒಳ್ಳೆಯ ವಿಚಾರಗಳ ಚಲನಚಿತ್ರಗಳಿಗೆ ಜನರು ಪ್ರೋತ್ಸಾಹ ನೀಡುತ್ತಾರೆ ಎಂಬುದನ್ನು ಗಮನಿಸಬೇಕು. ‘ಜಯ ಸಂತೋಷಿ ಮಾತಾ ಈ ಚಲನಚಿತ್ರಕ್ಕೆ ಅಪಾರ ಪ್ರೋತ್ಸಾಹ ಸಿಕ್ಕಿತ್ತು. ಜನರು ಸಂತೋಷಿಮಾತೆಯ ಸಾಧನೆಯನ್ನೂ ಮಾಡಲಾರಂಭಿಸಿದ್ದರು, ಎಂಬುದನ್ನು ಗಮನಿಸಬೇಕು. ಆಧ್ಯಾತ್ಮಿಕ, ರಾಷ್ಟ್ರೀಯ, ಸಾಮಾಜಿಕ ಇತ್ಯಾದಿ ವಿವಿಧ ವಿಷಯಗಳನ್ನು ಒಳಗೊಂಡು ಅದರಿಂದ ಜನರಿಗೆ ಒಳ್ಳೆಯ ಸಂಸ್ಕಾರ ಮಾಡಲು ಪ್ರಯತ್ನಿಸುವ ಅವಶ್ಯಕತೆಯಿದೆ. ಇದಕ್ಕಾಗಿ ಕೇಂದ್ರೀಯ ಪರಿವೀಕ್ಷಣ ಮಂಡಳ ನಿಮಾವಳಿಯನ್ನು ತಯಾರಿಸುವ ಅವಶ್ಯಕತೆಯಿದೆ. ಅಶ್ಲೀಲತೆ, ಬೀಭತ್ಸ, ಹಿಂಸಾಚಾರ, ಹತ್ಯೆ, ಬಲಾತ್ಕಾರ ಇತ್ಯಾದಿ ಸಮಾಜಕ್ಕೆ ಹಾನಿಕಾರಿ ಯಾಗಿರುವ ವಿಷಯಗಳನ್ನು ಹೆಚ್ಚೆಚ್ಚು ಪ್ರದರ್ಶನ ಮಾಡಿ ಚಲನಚಿತ್ರದ ಕೊನೆಗೆ ಒಂದು ಸಣ್ಣ ವಿಚಾರವನ್ನು ನೀಡಿದರೆ ಸಮಾಜದಲ್ಲಿ ಜಾಗೃತಿ ಆಗುವುದಿಲ್ಲ, ಚಲನಚಿತ್ರಗಳಿಂದ ಹೆಚ್ಚೆಚ್ಚು ಒಳ್ಳೆಯ ವಿಚಾರಗಳನ್ನು ವೀಕ್ಷಕರ ಮುಂದಿಡುವ ಅವಶ್ಯಕತೆಯಿದೆ. ದೂರದರ್ಶನದಲ್ಲಿ ‘ರಾಮಾಯಣ ಮತ್ತು ‘ಮಹಾಭಾರತ ಆರಂಭಿಸಿದಾಗ ಅದಕ್ಕೆ ಅಪಾರ ಬೆಂಬಲ ಸಿಕ್ಕಿತ್ತು. ‘ತಾನಾಜಿ, ‘ದ ಕಶ್ಮೀರ್ ಫೈಲ್ಸ್ ಇಂತಹ ಚಲನಚಿತ್ರಗಳಿಗೂ ಅಪೂರ್ವ ಪ್ರೋತ್ಸಾಹ ಸಿಕ್ಕಿತು. ಇದರಿಂದ ನಿಜವಾದ ಇತಿಹಾಸ ಜನರ ಮುಂದೆ ಬಂದು ರಾಷ್ಟ್ರಜಾಗೃತಿಯಾಯಿತು. ಇವುಗಳಿಗೆ ಪ್ರೋತ್ಸಾಹ ಸಿಗುವ ಅವಶ್ಯಕತೆಯಿದೆ. ಇವುಗಳಿಗೆ ಕೇಂದ್ರ ಸರಕಾರದಿಂದಲೂ ಪ್ರಶಸ್ತಿ ನೀಡಲಾಗುತ್ತಿದೆ, ಎಂಬುದನ್ನೂ ಗಮನಿಸಬೇಕು. ಆಸ್ಕರ್ ಸಿಗುವುದಕ್ಕಿಂತ ‘ದೇಶದ ಜನರಿಗೆ ನಾವೇನಾದರೂ ಸಂದೇಶವನ್ನು ನೀಡುತ್ತಿದ್ದೇವೆ, ಎಂಬುದು ಹೆಚ್ಚು ಮಹತ್ವದ್ದಾಗಿದೆ. ಇಂದು ಇಂತಹ ಕೆಲವು ಚಲನಚಿತ್ರಗಳು ಬರಲು ಆರಂಭವಾಗಿವೆ, ಇದು ಒಳ್ಳೆಯ ಲಕ್ಷಣವಾಗಿದೆ. ಕೇವಲ ಆರ್ಥಿಕ ಲಾಭಗಳಿಸುವುದೇ ಚಲನಚಿತ್ರ ನಿರ್ಮಾಣದ ಉದ್ದೇಶವಾಗಿರಬಾರದು. ಕ್ಷೇತ್ರಪಾಲ ದೇವತೆಗಳನ್ನು ಆಧರಿಸಿದ ‘ಕಾಂತಾರದಂತಹ ಚಲನಚಿತ್ರ ಜನರಿಗೆ ಇಷ್ಟವಾಗುತ್ತದೆ. ಚಲನಚಿತ್ರ ಕೇವಲ ಎರಡು ಗಂಟೆಯ ಮನೋರಂಜನೆಯಲ್ಲ, ಎಂಬುದನ್ನು ಈಗ ಜನರು ಗಮನದಲ್ಲಿಡಬೇಕು. ಇಂತಹ ಪ್ರಾಮಾಣಿಕ ವಿಚಾರದಿಂದ ಚಲನಚಿತ್ರ ತಯಾರಿಸಿದರೆ ಇಂತಹ ವರಿಗೆ ‘ಆಸ್ಕರ್ ಲಭಿಸದೆ ಇರುವುದಿಲ್ಲ !