ಶ್ರೀರಾಮ ನವಮಿ (ಚೈತ್ರ ಶುಕ್ಲ ನವಮಿ)

ಇತಿಹಾಸ : ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಚೈತ್ರ ಶುಕ್ಲ ನವಮಿಯಂದು ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ. ಈ ದಿನ ಪುನರ್ವಸು ನಕ್ಷತ್ರದಲ್ಲಿ, ಮಧ್ಯಾಹ್ನದಲ್ಲಿ, ಕರ್ಕ ಲಗ್ನದಲ್ಲಿ ಸೂರ್ಯಾದಿ ಐದು ಗ್ರಹಗಳಿದ್ದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಜನ್ಮವಾಯಿತು.

ಮಹತ್ವ : ದೇವತೆಗಳು ಮತ್ತು ಅವತಾರಗಳ ಜನ್ಮತಿಥಿಯಂದು ಭೂಮಿಯ ಮೇಲೆ ಅವರ ತತ್ತ್ವವು ಹೆಚ್ಚು ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಯಂದು ಶ್ರೀರಾಮತತ್ತ್ವವು ಎಂದಿಗಿಂತ ಒಂದು ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಯಂದು ‘ಶ್ರೀರಾಮ ಜಯ ರಾಮ ಜಯ ಜಯ ರಾಮ | ಎಂಬ ನಾಮಜಪ, ಹಾಗೆಯೇ ಶ್ರೀರಾಮನ ಇತರ ಉಪಾಸನೆಗಳನ್ನು ಭಾವಪೂರ್ಣವಾಗಿ ಮಾಡುವುದರಿಂದ ಶ್ರೀರಾಮತತ್ತ್ವದ ಲಾಭವನ್ನು ಆದಷ್ಟು ಹೆಚ್ಚು ಪಡೆಯಲು ಸಹಾಯವಾಗುತ್ತದೆ.

(ಶ್ರೀರಾಮನ ಬಗೆಗಿನ ಅಧ್ಯಾತ್ಮಶಾಸ್ತ್ರೀಯ ಮಾಹಿತಿಯನ್ನು ಸನಾತನದ ‘ಶ್ರೀರಾಮ ಎಂಬ ಕಿರುಗ್ರಂಥದಲ್ಲಿ ಕೊಡಲಾಗಿದೆ.)

ದೇವತೆಗಳ ಉಪಾಸನೆಯನ್ನು ಕಲಿಸುವ ಸನಾತನ ನಿರ್ಮಿತ ಗ್ರಂಥ

* ‘ರಾಮಾಯಣ’ ಶಬ್ದದ ವ್ಯುತ್ಪತ್ತಿ ಮತ್ತು ಅದರ ಅರ್ಥ

* ಶ್ರೀರಾಮನ ಕೆಲವು ಹೆಸರುಗಳು

* ರಾಮಾಯಣದ ಕೆಲವು ಪ್ರಸಂಗಗಳ ಭಾವಾರ್ಥ

ಶ್ರೀರಾಮರಕ್ಷಾಸ್ತೋತ್ರ ಮತ್ತು ಮಾರುತಿಸ್ತೋತ್ರ (ಅರ್ಥಸಹಿತ) (ಕಿರುಗ್ರಂಥ)

ಸಂಪರ್ಕ ಕ್ರಮಾಂಕ : ೯೩೪೨೫೯೯೨೯೯

‘ಆನ್‌ಲೈನ್ ಖರೀದಿಗಾಗಿ : www.sanatanshop.com

ಶ್ರೀರಾಮ ಈ  ಹೆಸರು ರಾಮನ ಜನನಕ್ಕಿಂತಲೂ ಮುಂಚೆಯೇ ಪ್ರಚಲಿತವಾಗಿತ್ತು. ರಮ್ + ರಮತೆ ಅಂದರೆ (ಆನಂದದಲ್ಲಿ) ಮಗ್ನ ವಾಗಿರುವುದು, ಇದರಿಂದ ‘ರಾಮ ಎಂಬ ಶಬ್ದ ತಯಾರಾಗಿದೆ. ರಾಮ ಎಂದರೆ ಸ್ವತಃ ಆನಂದದಲ್ಲಿ ಮಗ್ನನಾಗಿರುವುದು ಮತ್ತು ಇತರರನ್ನೂ ಆನಂದದಲ್ಲಿ ಮಗ್ನನಾಗಿಸುವವನು.

(ಆಧಾರ : ಸನಾತನ ನಿರ್ಮಿತ ಕಿರುಗ್ರಂಥ ‘ಶ್ರೀರಾಮ)