ಪ್ರಭು ಶ್ರೀರಾಮರ ಜನ್ಮವಾಗುವುದರ ಹಿಂದೆ ಅನೇಕ ಉದ್ದೇಶಗಳು !

೩೦ ಮಾರ್ಚ್ ೨೦೨೩ ಈ ದಿನದಂದು ಶ್ರೀರಾಮನವಮಿ ಇದೆ. ಆ ನಿಮಿತ್ತ …

‘ರಾಮಚರಿತಮಾನಸಕ್ಕನುಸಾರ, ‘ಹರಿಯ ಅವತಾರ ಯಾವ ಕಾರಣದಿಂದ ಆಗುತ್ತದೆಯೋ, ಆಗ ಅದು ಒಂದೇ ಕಾರಣವಾಗಿದೆ ಎಂದು ಹೇಳಲು ಆಗುವುದಿಲ್ಲ. ಶ್ರೀಹರಿಯ ರಾಮಾವತಾರದಲ್ಲಿ ಇಂತಹ ಜ್ಞಾತ-ಅಜ್ಞಾತ ಅನೇಕ ಕಾರಣಗಳಿವೆ, ಅವುಗಳನ್ನು ವಿವಿಧ ಕಲ್ಪ-ವಿವಿಧ ಯುಗಗಳಲ್ಲಿ ಪ್ರಭು ಶ್ರೀರಾಮರ ಜನ್ಮವಾಗಲು ನಿಶ್ಚಿತ ಪಡಿಸಲಾಗಿರುತ್ತದೆ.

೧. ಜಯ ಮತ್ತು ವಿಜಯ ಇವರಿಗೆ ಶಾಪದಿಂದ ಸಿಕ್ಕಿದ ತಾಮಸಿಕ ಶರೀರದ, ಅಂದರೆ ರಾವಣ ಮತ್ತು ಕುಂಭಕರ್ಣ ಇವರ ಸಂಹಾರಕ್ಕಾಗಿ ಶ್ರೀರಾಮಚಂದ್ರನ ಜನ್ಮವಾಗುವುದು 

ಶ್ರೀಹರಿಯ ಜಯ ಮತ್ತು ವಿಜಯ ಈ ಇಬ್ಬರು ಪ್ರಿಯ ದ್ವಾರಪಾಲಕರ ಬಗ್ಗೆ ನಮಗೆಲ್ಲರಿಗೂ ಗೊತ್ತಿದೆ. ಆ ಇಬ್ಬರು ಸಹೋದರರಿಗೆ ಬ್ರಾಹ್ಮಣರ (ಸನಕ ಇತ್ಯಾದಿ) ಶಾಪದಿಂದಾಗಿ ಅಸುರರ ತಾಮಸಿಕ ಶರೀರ ಸಿಕ್ಕಿತ್ತು. ಒಂದು ಜನ್ಮದಲ್ಲಿ ಅವರು ಪೃಥ್ವಿಯ ಮೇಲೆ ಹೋಗಿ ದೇವತೆಗಳ ಮೇಲೆ ಜಯಪಡುವ ರಾವಣ ಮತ್ತು ಕುಂಭಕರ್ಣರೆಂಬ ಅತ್ಯಂತ ಬಲಾಢ್ಯ ಮತ್ತು ಮಹಾವೀರ ರಾಕ್ಷಸರಾದರು, ಇದು ಎಲ್ಲರಿಗೂ ಗೊತ್ತಿದೆ. ಅವರನ್ನು ಸಂಹರಿಸಲು ಶ್ರೀರಾಮಚಂದ್ರನ ಜನ್ಮವಾಯಿತು.

೨. ಶ್ರೀರಾಮನು ಯುದ್ಧದಲ್ಲಿ ಜಾಲಂಧರನೆಂಬ ರಾಕ್ಷಸನನ್ನು ಕೊಂದು ಅವನಿಗೆ ಪರಮಪದವನ್ನು ನೀಡುವುದು

ಒಂದು ಕಲ್ಪದಲ್ಲಿ ಜಾಲಂಧರ ಎಂಬ ಹೆಸರಿನ ಪರಾಕ್ರಮಿ ರಾಕ್ಷಸನು ಎಲ್ಲ ದೇವತೆಗಳನ್ನು ಯುದ್ಧದಲ್ಲಿ ಸೋಲಿಸಿದನು. ದೇವತೆಗಳ ದುಃಖವನ್ನು ನೋಡಿ ಶಿವನು ಜಾಲಂಧರನೊಂದಿಗೆ  ಮಹಾ ಭಯಂಕರ ಯುದ್ಧವನ್ನು ಮಾಡಿದನು; ಆದರೆ ಆ ಮಹಾ ಬಲಿ ರಾಕ್ಷಸನು ಏನು ಮಾಡಿದರೂ ಸಾಯುತ್ತಿರಲಿಲ್ಲ. ಆ ದೈತ್ಯರಾಜನ ಪತ್ನಿ ವೃಂದಾ ಮಹಾಪತಿವ್ರತೆಯಾಗಿದ್ದಳು, ಅವಳಿಂದಾಗಿ ತ್ರಿಪುರಾಸುರನಂತಹ ಅಜೇಯ ಶತ್ರುವನ್ನು ನಾಶ ಮಾಡಿದ ಶಿವನಿಗೂ ಆ ಜಾಲಂಧರ ರಾಕ್ಷಸನನ್ನು ಜಯಿಸಲು ಸಾಧ್ಯವಾಗಲಿಲ್ಲ. ಆಗ ಪ್ರಭು ಶ್ರೀಹರಿ ವಿಷ್ಣುವು ಮೋಸದಿಂದ ಆ ಪತಿವ್ರತೆ ವೃಂದಾಳ ವ್ರತವನ್ನು ಭಂಗ ಮಾಡಿ ದೇವತೆ ಗಳ ದುಃಖವನ್ನು ದೂರಗೊಳಿಸುವ ಕಾರ್ಯವನ್ನು ಮಾಡಿದನು. ಯಾವಾಗ ವೃಂದಾಳಿಗೆ ಈ ರಹಸ್ಯದ ಅರಿವಾಯಿತೋ, ಆಗ ಅವಳು ಕೋಪದಿಂದ ಭಗವಾನ ಶ್ರೀಹರಿಗೆ ಶಾಪ ಕೊಟ್ಟಳು. ಆಗ ಲೀಲಾಸಾಗರ ಕೃಪಾಳು ಹರಿಯು ಆ ಸ್ತ್ರೀಯ ಶಾಪವನ್ನು  ಸ್ವೀಕರಿಸಿದನು. ಆ ಜಾಲಂಧರನೇ ಆ ಕಲ್ಪದಲ್ಲಿ ರಾವಣನಾದನು, ಮತ್ತು ಶ್ರೀರಾಮನು ಅವನನ್ನು ಯುದ್ಧದಲ್ಲಿ ಕೊಂದು ಅವನಿಗೆ ಪರಮಪದವನ್ನು ನೀಡಿದನು.

೩. ಒಂದು ಕಲ್ಪದಲ್ಲಿ ದೇವರ್ಷಿ ನಾರದರ ಶಾಪವನ್ನು ಶ್ರೀಹರಿಯು ತಲೆಬಾಗಿ ಸ್ವೀಕರಿಸಿ ಶ್ರೀರಾಮನ ರೂಪದಲ್ಲಿ ಮನುಜಾವತಾರ ತಾಳುವುದು

ನಾರದರ ಅಭಿಮಾನ ಮತ್ತು ಮೋಹ ಇವುಗಳಿಗೆ ಸಂಬಂಧಿಸಿದ ಈ ಪ್ರಸಂಗವು ಅತ್ಯಂತ ರೋಚಕವಾಗಿದೆ. ಇದರಲ್ಲಿ ಸಾಕ್ಷಿದಾರರಾಗಿರುವ ಶಿವನ ಇಬ್ಬರು ಗಣಗಳಿಗೂ ಶಾಪ ಸಿಗುತ್ತದೆ ಮತ್ತು ಶ್ರೀಹರಿ ವಿಷ್ಣುವಿಗೂ ಬ್ರಹ್ಮಶ್ರೀ ನಾರದರು ಶಾಪವನ್ನು ಕೊಡುತ್ತಾರೆ. ಲಕ್ಷ್ಮೀನಿವಾಸ ಶ್ರೀಹರಿಯು ಮದುವೆಯನ್ನು ಮಾಡಿಕೊಂಡು ವಧುವನ್ನು ಕರೆದುಕೊಂಡು ಹೋದನು. ವಿಫಲ ರಾಜಮಂಡಳಿ ನಿರಾಶರಾಗಿ ಹಿಂದಿರುಗಿದರು. ಮೋಹದಿಂದ ನಾರದಮುನಿಗಳ ಬುದ್ಧಿಯು ಭ್ರಷ್ಟವಾಗಿತ್ತು, ಆದುದರಿಂದ ರಾಜಕುಮಾರಿ ಪ್ರಾಪ್ತವಾಗಲಿಲ್ಲವೆಂದು ಅವರು ಅತ್ಯಂತ ವ್ಯಾಕುಲರಾಗಿದ್ದರು. ಆಗ ಭಗವಾನ ಶಿವನ ಇಬ್ಬರು ಗಣಗಳು ನಗುತ್ತಾ, ‘ಹೇ ಮುನಿಗಳೇ ! ಒಮ್ಮೆ ಹೋಗಿ ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳಿರಿ’, ಎಂದು ಹೇಳಿ ಅವರಿಬ್ಬರು ಬಹಳ ಭಯಭೀತರಾಗಿ ಓಡಿ ಹೋದರು. ನಾರದಮುನಿಗಳು ಬಗ್ಗಿ ನೀರಿನಲ್ಲಿ ತಮ್ಮ ಮುಖವನ್ನು ನೋಡಿದರು. ತಮ್ಮ ರೂಪವನ್ನು ನೋಡಿ ಅವರಿಗೆ ಬಹಳ ಕೋಪ ಬಂದಿತು. ಆಗ ಅವರು ಭಗವಾನ ಶಿವನ ಆ ಗಣಗಳಿಗೆ ಅತ್ಯಂತ  ಕಠೋರ ಶಾಪ ಕೊಟ್ಟರು. “ನೀವಿಬ್ಬರೂ ಕಪಟಿ-ಪಾಪಿ ರಾಕ್ಷಸರಾಗುವಿರಿ, ನೀವು ನನ್ನನ್ನು ಅಪಹಾಸ್ಯ ಮಾಡಿದಿರಿ, ಈಗ ಅದರ ಫಲವನ್ನು ಭೋಗಿಸಿರಿ. ನಂತರ ಇತರ ಯಾವುದೇ ಮುನಿಗಳ ಅಪಹಾಸ್ಯ ಮಾಡದಿರಿ’, ಎಂದು ಹೇಳಿದರು.

ಮುಂದೆ ಆ ಶಿವಗಣರು ದೇವರ್ಷಿ ನಾರದರ ಶಾಪದಿಂದ ಉಃಶಾಪವನ್ನು ಪಡೆಯಲು ಪ್ರಾರ್ಥಿಸಿದರು, ಆಗ ನಾರದರಿಗೆ ಅವರ ಮೇಲೆ ದಯೆ ಬಂದಿತು. ಅವರು, “ನೀವಿಬ್ಬರೂ ರಾಕ್ಷಸರು (ರಾವಣ ಮತ್ತು ಕುಂಭಕರ್ಣ)ರಾಗುವಿರಿ. ನಿಮಗೆ ಬಹಳ ಐಶ್ವರ್ಯ, ತೇಜ ಮತ್ತು ಬಲ ಪ್ರಾಪ್ತವಾಗುವುದು. ಯಾವಾಗ ನೀವು ಬಾಹುಬಲದಿಂದ ಸಂಪೂರ್ಣ ಜಗತ್ತನ್ನು ಜಯಸುವಿರಿ, ಆಗ ಭಗವಾನ ಶ್ರೀವಿಷ್ಣುವು ಮನುಷ್ಯ ಶರೀರವನ್ನು (ಶ್ರೀರಾಮಾವತಾರ) ಧರಿಸುವರು ಮತ್ತು ಶ್ರೀಹರಿಯ ಕೈಯಿಂದ ನಿಮಗೆ ಮೃತ್ಯು ಬರುವುದು. ಇದರಿಂದ ನೀವು ಮುಕ್ತರಾಗುವಿ ಮತ್ತು ಪುನಃ ಪೃಥ್ವಿಯ ಮೇಲೆ ಜನ್ಮ ಪಡೆಯುವುದಿಲ್ಲ”, ಎಂದರು.

ಮುಂದೆ ನಾರದಮುನಿಗಳು ಶ್ರೀಹರಿಗೆ, ‘ಯಾವ ಶರೀರವನ್ನು ಧರಿಸಿ ನೀವು ನನ್ನನ್ನು ಮೋಸಗೊಳಿಸಿದಿರೋ, ನೀವು ಸಹ ಅದೇ ಶರೀರವನ್ನು ಧರಿಸುವಿರಿ, ಎಂದು ನನ್ನ ಶಾಪವಿದೆ. ನೀವು ನನ್ನ ದೇಹವನ್ನು ಕೋತಿಯ ದೇಹವನ್ನಾಗಿ ಮಾಡಿದ್ದೀರಿ, ಆದುದರಿಂದ ಕೋತಿಗಳೇ (ಮಂಗಗಳು) ನಿಮಗೆ ಸಹಾಯ ಮಾಡುವವು. ನಾನು ಯಾವ ಸ್ತ್ರೀಯನ್ನು ಬಯಸುತ್ತಿದ್ದೆನೋ, ಆ ಸ್ತ್ರೀಯನ್ನು ನನ್ನಿಂದ ಬೇರ್ಪಡಿಸಿ ನೀವು ನನ್ನ ಬಹಳ ಅಹಿತವನ್ನು ಮಾಡಿರುವಿರಿ. ಆದುದರಿಂದ ನೀವು ಸಹ ನಿಮ್ಮ ಸ್ತ್ರೀಯ ವಿಯೋಗದಿಂದ ದುಃಖಿಯಾಗುವಿರಿ’, ಎನ್ನುತ್ತಾರೆ. ಈ ರೀತಿ ಒಂದು ಕಲ್ಪದ ತ್ರೇತಾಯುಗದ ಶ್ರೀರಾಮನ ಕಥೆ ಅದಕ್ಕೆ ಅನುರೂವಾಗಿದ್ದು ಆ ಕಲ್ಪದಲ್ಲಿ ದೇವರ್ಷಿ ನಾರದರ ಶಾಪವು ಶ್ರೀರಾಮಜನ್ಮವಾಗಲು ಕಾರಣವಾಗಿತ್ತು.

೪. ರಾಜಾ ಪ್ರತಾಪಭಾನು ಮುನಿಗಳನ್ನು ಪೀಡಿಸಿದ್ದರಿಂದ ಅವನಿಗೆ ರಾಕ್ಷಸನಾಗುವ ಶಾಪ ಸಿಗುವುದು ಮತ್ತು ಆ ರಾಕ್ಷಸನ ಅತ್ಯಾಚಾರಗಳಿಂದ ಮುಕ್ತಿಯನ್ನು ನೀಡಲು ಶ್ರೀರಾಮಾವತಾರವಾಗುವುದು

 ಶ್ರೀರಾಮನ ಅವತಾರ ಪಡೆಯುವ ಇನ್ನೊಂದು ಕಾರಣದ ಬಗ್ಗೆ ಹೇಳುವಾಗ ಮಹರ್ಷಿ ಯಜ್ಞವಲ್ಕ್ಯರು ಮತ್ತು ಭಾರದ್ವಾಜ ಮುನಿಗಳು ಚಕ್ರವರ್ತಿ ರಾಜಾ ಪ್ರತಾಪಭಾನುವಿನ ಕಥೆ ಯನ್ನು ಹೇಳುತ್ತಾರೆ. ರಾಜ ಪ್ರತಾಪಭಾನು ಮೋಸದಿಂದ ಮುನಿಗಳಿಗೆ ತೊಂದರೆಗಳನ್ನು  ಕೊಟ್ಟಿದ್ದರಿಂದಾಗಿಯೇ ಬ್ರಾಹ್ಮಣರು ರಾಜ ನಿಗೆ ಶಾಪವನ್ನು ನೀಡುತ್ತಾ, “ಅರೆ ಮೂರ್ಖ ರಾಜಾ !

ನೀನು ಪರಿವಾರದೊಂದಿಗೆ ರಾಕ್ಷಸನಾಗುವಿ”, ಎಂದು ಹೇಳಿ ದ್ದರು. ಯೋಗ್ಯ ಸಮಯದಲ್ಲಿ ಆ ರಾಜ ಪ್ರತಾಪಭಾನು ಪರಿವಾರ ದೊಂದಿಗೆ ರಾವಣ ಎಂಬ ಹೆಸರಿನ ರಾಕ್ಷಸನಾದನು. ಅವನಿಗೆ ೧೦ ತಲೆಗಳು ಮತ್ತು ೨೦ ಬಾಹುಗಳಿದ್ದವು. ಅವನು ಬಹಳ ಶೂರವೀರನಾಗಿದ್ದನು. ಯಾವನು ಅರಿಮರ್ದನ ಎಂಬ ಹೆಸರಿನ ರಾಜನ ಕಿರಿಯ ಸಹೋದರನಾಗಿದ್ದನೋ, ಅವನು ಬಲಶಾಲಿ ಕುಂಭಕರ್ಣನಾದನು. ಅವನ ಮಂತ್ರಿಯಾದ ಧರ್ಮರುಚಿಯು ರಾವಣನ ಚಿಕ್ಕ ಮಲತಮ್ಮ ಅಂದರೆ ಅವನು ವಿಭೀಷಣನಾಗಿದ್ದನು, ಸಂಪೂರ್ಣ ಜಗತ್ತಿಗೆ ಅವನು ಪರಿಚಿತನಾಗಿದ್ದಾನೆ. ಅವನು ವಿಷ್ಣುಭಕ್ತ ಮತ್ತು ಜ್ಞಾನ-ವಿಜ್ಞಾನದ ಭಂಡಾರವಾಗಿದ್ದನು. ರಾಜನ ಪುತ್ರರು ಮತ್ತು ಸೇವಕರೆಲ್ಲರೂ ದೊಡ್ಡ  ಭಯಾನಕ ರಾಕ್ಷಸರಾದರು. ಅವರ ಅತ್ಯಾಚಾರಗಳಿಂದ ಮುಕ್ತಿಯನ್ನು ನೀಡಲು ಆ ಕಲ್ಪದಲ್ಲಿ ಶ್ರೀರಾಮಾವತಾರವಾಯಿತು.

೫. ಭಗವಾನ ವಿಷ್ಣುವು ಅತಿ ಕೋಪದಿಂದ ಭೃಗುಪತ್ನಿಯ ಶಿರಚ್ಛೇದ ಮಾಡುವುದು ಮತ್ತು ಭೃಗು ಋಷಿಗಳು ವಿಷ್ಣುವಿಗೆ ಮನುಷ್ಯ ಲೋಕದಲ್ಲಿ ಜನ್ಮತಾಳುವ ಶಾಪ ಕೊಡುವುದು

ವಾಲ್ಮೀಕಿ-ರಾಮಾಯಣದ ಉತ್ತರಕಾಂಡದ ೯೧ ನೇ ಅಧ್ಯಾಯದಲ್ಲಿನ ಕಥೆಯಲ್ಲಿ ಮುಂದಿನಂತೆ ಬಂದಿದೆ, ಇದು ‘ಪ್ರಾಚೀನ ಕಾಲದ ಕಥೆ. ಒಂದು ಸಲ ದೇವಾಸುರರ ಯುದ್ಧದಲ್ಲಿ ದೇವತೆಗಳಿಂದ ಪೀಡಿತರಾದ ದೈತ್ಯರು ಮಹರ್ಷಿ ಭೃಗುಗಳ ಪತ್ನಿಯ ಬಳಿ ಆಶ್ರಯವನ್ನು ಕೇಳಿದರು. ಭೃಗುಪತ್ನಿಯು ಆ ಸಮಯ ದಲ್ಲಿ ದೈತ್ಯರಿಗೆ ಅಭಯ ನೀಡಿದಳು ಮತ್ತು ಅವರು ಅವಳ ಆಶ್ರಮದಲ್ಲಿ ನಿರ್ಭಯದಿಂದ ಇರತೊಡಗಿದರು. ‘ಭೃಗುಪತ್ನಿಯು ದೈತ್ಯರಿಗೆ ಆಶ್ರಯ ನೀಡಿದ್ದನ್ನು ನೋಡಿ ಕೋಪಗೊಂಡ ಭಗವಾನ ವಿಷ್ಣುವು ತೀಕ್ಷ್ಣ ಸುದರ್ಶನಚಕ್ರದಿಂದ ಅವಳ ತಲೆ ಕತ್ತರಿಸಿದನು. ತನ್ನ ಪತ್ನಿಯ ವಧೆಯಾಗಿರುವುದನ್ನು ನೋಡಿ ಭಾರ್ಗವ ವಂಶದ ಪ್ರವರ್ತಕ ಭೃಗುಗಳಿಗೆ ಕೋಪ ಬಂತು. ಆದುದರಿಂದ ನಿಮಗೆ ಮನುಷ್ಯ ಲೋಕದಲ್ಲಿ ಜನ್ಮ ಪಡೆಯಬೇಕಾಗುವುದು ಮತ್ತು ಅಲ್ಲಿ ಬಹಳಷ್ಟು ವರ್ಷಗಳ ಕಾಲ ನಿಮಗೆ ಪತ್ನಿ ವಿಯೋಗದ ದುಃಖವನ್ನು ಸಹಿಸಬೇಕಾಗುವುದು, ಎಂದರು. ಅನಂತರ ಈ ರೀತಿ ಶಾಪ ನೀಡಿದ ಬಗ್ಗೆ ಭೃಗು ಋಷಿಗಳಿಗೆ ಬಹಳ ಪಶ್ಚಾತ್ತಾಪ ವಾಗಿತ್ತು. – ಡಾ. ರಮೇಶ ಮಂಗಲಜಿ ವಾಜಪೇಯಿ

ಶ್ರೀರಾಮಪ್ರಭುವಿನ ಅರಿವಾಗದ ಸ್ವರೂಪಕ್ಕೆ ಶತಶಃ ನಮನಗಳು !

‘ಶ್ರೀರಾಮಪ್ರಭುಗಳೇ, ತಾವು ‘ಅಧೋಕ್ಷಜ, ಅಂದರೆ ಇಂದ್ರಿಯಗಳಿಂದಾಗುವ ಜ್ಞಾನದ ಆಚೆಗಿರುವುದರಿಂದ ಮತ್ತು ವಿಶೇಷವೆಂದರೆ ‘ಅವ್ಯಯ ಅಂದರೆ, ಅವಿನಾಶಿ ಯಾಗಿರುವುದರಿಂದ ನಮಗೆ ಇಂದಿನವರೆಗೆ ತಮ್ಮ ನಿಜ ಸ್ವರೂಪ ತಿಳಿಯಲೇ ಇಲ್ಲ. ಆ ನಿಮ್ಮ ಸ್ವರೂಪಕ್ಕೆ ಶತಶಃ ನಮನಗಳು !- ಗುರುದೇವ ಡಾ. ಕಾಟೇಸ್ವಾಮಿ (ಆಧಾರ – ಮಾಸಿಕ ‘ಘನಗರ್ಜಿತ ಫೆಬ್ರುವರಿ ೨೦೧೮)

ಸರ್ವೋತ್ತಮ ಆದರ್ಶ ಶ್ರೀರಾಮ !

‘ಶ್ರೀರಾಮರಂತಹ ಆದರ್ಶ ಪತಿ ಇನ್ನೊಬ್ಬರಿಲ್ಲ, ಪುತ್ರನಿಲ್ಲ, ರಾಜನಿಲ್ಲ, ಮಾನವನಿಲ್ಲ ಮತ್ತು ಶತ್ರುವೂ ಇಲ್ಲ. ಇಂತಹ ಆದರ್ಶ ಇಂದಿನವರೆಗೆ ಯಾರೂ ಆಗಿಲ್ಲ ಮತ್ತು ಮುಂದೆ ಆಗುವುದೂ ಇಲ್ಲ. – ಗುರುದೇವ ಡಾ. ಕಾಟೇಸ್ವಾಮಿ (ಆಧಾರ – ಮಾಸಿಕ ‘ಘನಗರ್ಜಿತ ಫೆಬ್ರುವರಿ ೨೦೧೮)